Wednesday, August 19, 2015

Daily Crime Reports As on 19/08/2015 at 17:00 Hrs

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 19/08/2015 ರಂದು ಸಮಯ ಸುಮಾರು  ಬೆಳಿಗ್ಗೆ 6:45   ಗಂಟೆಗೆ  ಕುಂದಾಪುರ ತಾಲೂಕು ವಡೇರಹೋಬಳಿ  ಗ್ರಾಮದ ಬಿ.ಸಿ ರಸ್ತೆಯ ಸುರೇಶ  ಶೆಟ್ಟಿ ಎಂಬವರ ಮನೆಯ ಬಳಿ ರಸ್ತೆಯಲ್ಲಿ  ಪಿರ್ಯಾದಿ ಸಂತೋಷ ಪೂಜಾರಿ ಇವರು  KA20-C-5353 ನೇ ಲಾರಿಯ ಮೇಲೆ ಹತ್ತಿ  ಮೀನು ಲೋಡ್‌‌  ಗೆ ಕಟ್ಟಿದ   ಹಗ್ಗ ಬಿಗಿ ಗೊಳಿಸುತ್ತಿರುವ ಸಮಯ  ಆಪಾದಿತ ಸುರೇಶ ಶೆಟ್ಟಿ ಎಂಬವರು   KA20-C-5353ನೇ ಲಾರಿಯನ್ನು  ಒಮ್ಮಲೆ  ಅತೀವೇಗ  ಹಾಗೂ ಅಜಾಗರುಕತೆಯಿಂದ ಮುಂದಕ್ಕೆ ಚಲಾಯಿಸಿದಾಗ  ಪಿರ್ಯಾದಿದಾರರು ಲಾರಿಯಿಂದ ಕೆಳಗೆ ಬಿದ್ದು  ಪಿರ್ಯಾದಿದಾರರ ಸೊಂಟದ ಬಲಬದಿಗೆ  ಹಾಗೂ ಬಲ ಕೈಗೆ ಒಳ ನೋವು  ಹಾಗೂ ರಕ್ತಗಾಯವಾಗಿ ಕುಂದಾಪುರ ಚಿನ್ಮಯಿ  ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ  ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 98/2015  ಕಲಂ 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ದಿನಾಂಕ 19/08/2015 ರಂದು 09:45 ಗಂಟೆಯಿಂದ 10:00 ಗಂಟೆಯ ಅವಧಿಯಲ್ಲಿ ಸಂತೆಕಟ್ಟೆ LVT ಶಾಲೆಯ ಎದುರುಗಡೆ KA 20 X 0440 ನೇ ಹೊಂಡಾ ಅಕ್ಟೀವ್ ಗೆ ಹಿಂದಿನಿಂದ ಬರುತಿದ್ದ ಲಾರಿ ತರಹದ ಯಾವುದೋ ಘನ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದಾಗ ಆ ವಾಹನವು ಸವಾರನ ಮೇಲೆ ಹರಿದು ಸ್ಥಳದಲ್ಲೇ ಮೃತ ಪಟ್ಟದ್ದಾಗಿರುತ್ತದೆ. ಆತನ ಹೆಸರು ಸುಪ್ರೀತ್ ಶೆಟ್ಟಿ ಎಂಬುದಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 86/2015 ಕಲಂ. 279,304(ಎ),  ಐಪಿಸಿ ಮತ್ತು 134 (ಎ&ಬಿ) ಐಎಂವಿ ಕಾಯ್ದೆ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ದಿನಾಂಕ 18/05/2015 ರಂದು 16:30 ಗಂಟೆಗೆ ಪಿರ್ಯಾದಿದಾರರಾದ ಕೇತನ್ ಎಸ್ ಪೂಜಾರಿ (40), ತಂದೆ:ಸಂಜೀವ ಪೂಜಾರಿ, ವಾಸ: ವೈಷ್ಣವಿ ಕೃಪಾ ವಾಜಪೇಯಿ ಬಡಾವಣೆ ಬೆಳಪು ಗ್ರಾಮ ಉಡುಪಿ ಇವರು ಮಣಿಪಾಲದಿಂದ ಅಂಬಲ್ಪಾಡಿಗೆ ಹೋಗಲು ಅವಿನಾಶ್ ಅಚಾರ್ಯ ಎಂಬುವವರು ಸವಾರಿ ಮಾಡುತಿದ್ದ ಕೆಎ 20 ಎಸ್ 4919 ನೇ ಆಕ್ಟೀವಾದಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಸಾಯಿರಾಂ ಟೆಕ್ಸ್‌ಟೈಲ್ಸ್ ಎದುರುಗಡೆ ತಲಪುವಾಗ ಕೃಷ್ಣಮಠ ಕಡೆಯಿಂದ KA 20 N 3495 ನೇ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅವಿನಾಶ್ ಅಚಾರ್ಯ ಸವಾರಿಮಾಡಿಕೊಂಡು ಹೋಗುತಿದ್ದು ಆಕ್ಟೀವಾಗೆ ಡಿಕ್ಕಿ ಹೊಡೆದ ಪರಿಣಾಮ ಅವಿನಾಶ್ ಅಚಾರ್ಯ ರಸ್ತೆಗೆ ಬಿದ್ದು ಎಡ ಕಾಲಿನ ಮಣಿಗಂಟಿನ ಮೇಲ್ಬಾಗಕ್ಕೆ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 87/2015 ಕಲಂ: 279,337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಲಿಗೆ ಪ್ರಕರಣ
  • ಕುಂದಾಪುರ: ದಿನಾಂಕ 19.08.2015 ರಂದು ಪಿರ್ಯಾದಿ ಶ್ರೀಮತಿ ಸೀತಾ ಗಾಣಿಗ ಇವರು ಕುಂದಾಪುರಕ್ಕೆ ಬರಲು ಕುಂದಾಪುರ ತಾಲೂಕು ತಲ್ಲೂರು ಗ್ರಾಮದ ತಲ್ಲೂರು ಜಂಕ್ಷನ್‌ ಬಸ್‌ ನಿಲ್ದಾಣದ ಬಳಿ ತನ್ನ ಗಂಡನೊಂದಿಗೆ ಮಧ್ಯಾಹ್ನ 12:00 ಗಂಟೆಗೆ ಬಸ್ಸಿಗಾಗಿ ಕಾಯುತ್ತಾ ನಿಂತುಕೊಂಡಿದ್ದಾಗ, ಸುಮಾರು 25 ರಿಂದ 35 ವರ್ಷ ಪ್ರಾಯದ ಇಬ್ಬರು ಯುವಕರು ನೇರಳಕಟ್ಟೆ ರಸ್ತೆ ಕಡೆಯಿಂದ ಒಂದು ಮೋಟಾರ್‌ ಸೈಕಲ್‌ನಲ್ಲಿ ಬಂದು ಪಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಸುಮಾರು 8 ಪವನ್‌ ತೂಕದ ಚಿನ್ನದ ಕರಿಮಣಿ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು, ಸುಲಿಗೆಯಾದ ಕರಿಮಣಿ ಸರದ ಮೌಲ್ಯ ರೂ. 1,50,000/- ಆಗಬಹುದು. ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 290/2015  ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಬೈಂದೂರು: ಪಿರ್ಯಾದಿ ಹರಿಶ್ಚಂದ್ರ ನಾಯ್ಕ್  ಇವರು ಕೆ.ಎ 19 ಎಫ್‌ 2862 ನೇ  ಕೆಎಸ್‌ಅರ್‌ಟಿಸಿ ಬಸ್‌ ನಿರ್ವಾಹಕರಾಗಿದ್ದು ದಿನಾಂಕ 18/08/2015 ರಂದು ಮದ್ಯಾಹ್ನ 02:30 ಗಂಟೆಗೆ ಭಟ್ಕಳದಿಂದ ಕುಂದಾಪುರಕ್ಕೆ  ಸದ್ರಿ ಬಸ್ಸಿನಲ್ಲಿ ಹೊರಟಿದ್ದು ಆರೋಪಿ ಹನೀಫನು ಭಟ್ಕಳದಲ್ಲಿ ಸದ್ರಿ ಬಸ್ಸಿಗೆ ಹತ್ತಿರುತ್ತಾನೆ. ಆತನು ಬೈಂದೂರಿಗೆ ಟಿಕೇಟ್‌ ಮಾಡಿದ್ದು ಆತನಿಗೆ ಟಿಕೇಟ್‌ ಹಾಗೂ ಚಿಲ್ಲರೆ ಹಣವನ್ನು ಪಿರ್ಯಾಧಿದಾರರು ನೀಡಿರುವುದಾಗಿದೆ. ಹನೀಫನು ಬೈಂದೂರಿನಲ್ಲಿ ಬಸ್ಸನ್ನು ಇಳಿದು ಹೋಗಿದ್ದು ಬಸ್ಸು  ಮದ್ಯಾಹ್ನ 03:10 ಗಂಟೆಗೆ ಉಪ್ಪುಂದ ಗ್ರಾಮದ ಅಂಬಾಗಿಲು ಬಸ್‌ ನಿಲ್ದಾಣಕ್ಕೆ ಬಂದಾಗ ಆರೋಪಿ ಹನೀಫನು ಒಂದು ರಿಕ್ಷಾದಲ್ಲಿ ಬಂದು ಇಳಿದು  ಏಕಾಏಕಿ ಬಸ್ಸಿನ ಒಳಗಡೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಇನ್ನೇನಾದರು ಈ ರೂಟಲ್ಲಿ ಕಂಡರೆ ಕಡಿದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಪಿರ್ಯಾದಿದಾರರ ಶರ್ಟಿನ ಬಲಬದಿಯ ಕೋಲರ್‌ ಹಾಗೂ ಕಿಸೆಯನ್ನು ಹರಿದು ಹಾಕಿ ಕೈಯಿಂದ ಹೊಡೆದು ದೂಡಿಹಾಕಿರುತ್ತಾನೆ, ಘಟನೆಯ  ಸಮಯ ಪಿರ್ಯಾಧಿದಾರರ ಕಿಸೆಯಲ್ಲಿದ್ದ 6900 ರೂಪಾಯಿ ಹಣ ಎಲ್ಲಿಯೋ ಬಿದ್ದು ಹೋಗಿರುತ್ತದೆ. ಆರೋಪಿಯು ಪಿರ್ಯಾದಿದಾರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 222/2015 ಕಲಂ  504, 506, 323, 427, 353 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ದಿನಾಂಕ 18/08/2015 ರಂದು ಮದ್ಯಾಹ್ನ 20:30 ಗಂಟೆಗೆ  ಪಿರ್ಯಾದಿ ಮಹಮ್ಮದ್ ಹನೀಫ್ ಇವರ ಹೆಂಡತಿ ಹಲೀಮಾ ಮತ್ತು ಅಕ್ಕ ಇಶ್ರತ್‌ ರವರು ಭಟ್ಕಳ –ಕುಂದಾಪುರ ಕೆ.ಎಸ್‌.ಅರ್‌.ಟಿ.ಸಿ ಬಸ್‌ನಲ್ಲಿ ಭಟ್ಕಳದಿಂದ ಬೈಂದೂರಿಗೆ ಬರುವುದಾಗಿ ಪಿರ್ಯಾಧಿದಾರರಿಗೆ ತಿಳಿಸಿದ್ದು  ಅದರಂತೆ ಅವರನ್ನು ಕರೆದುಕೊಂಡು ಹೋಗಲು ಪಿರ್ಯಾಧಿದಾರರು ಬೈಂದೂರು ಬಸ್ಸು ನಿಲ್ದಾಣದಲ್ಲಿ ಕಾಯುತ್ತಿರುವ ಸಮಯ ಮದ್ಯಾಹ್ನ 03:10 ಗಂಟೆಗೆ ಪಿರ್ಯಾಧಿದಾರರ ಹೆಂಡತಿ ಮತ್ತು ಅಕ್ಕ  ಬಸ್ಸು ಇಳಿದು ಬಂದು ಹಲೀಮಾ ರವರು ಪಿರ್ಯಾಧಿದಾರರಲ್ಲಿ ಬಸ್ಸಿನ ಕಂಡಕ್ಟರ್‌ ಟಿಕೇಟ್‌ ಕೊಡುವ ಸಮಯ ತನಗೆ ತೊಂದರೆ ನೀಡಿರುತ್ತಾನೆ ಎಂದು ಹೇಳಿದ್ದು ಅದಕ್ಕೆ ಪಿರ್ಯಾಧಿದಾರರು ಕಂಡಕ್ಟರನನ್ನು ವಿಚಾರಿಸಲು ಒಂದು ಅಟೋ ರಿಕ್ಷಾದಲ್ಲಿ ಕೆ.ಎಸ್‌ಅರ್‌,ಟಿ,ಸಿ ಬಸ್‌ನ್ನು ಹಿಂಬಾಲಿಸಿಕೊಂಡು ಹೋಗಿ ಉಪ್ಪುಂದ ಅಂಬಾಗಿಲು ಬಸ್‌ ನಿಲ್ದಾಣದ ಬಳಿ ಬಸ್‌ಗೆ ಕೈ ಮಾಡಿ  ಬಸ್‌ನ್ನು ನಿಲ್ಲಿಸುವಂತೆ ಸೂಚಿಸಿದ್ದು ಬಸ್‌ನ್ನು ನಿಲ್ಲಿಸಿದ್ದು  ಪಿರ್ಯಾಧಿದಾರರು  ಬಸ್‌ ಕಂಡಕ್ಟರ್‌ ಬಳಿ ಯಾಕೆ ನೀವು ನನ್ನ ಹೆಂಡತಿಗೆ ಮತ್ತು ಅಕ್ಕನಿಗೆ ತೊಂದರೆ ನೀಡಿದ್ದು ಎಂದು ಕೇಳಿದಾಗ ಆತನು ಪಿರ್ಯಾಧಿದಾರರನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಪಿರ್ಯಾಧಿದಾರರ ಎದೆಗೆ ಕೈಹಾಕಿ ದೂಡಿ ಕೈಯಿಂದ ಕೆನ್ನೆಗೆ ಹೊಡೆದಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 221/2015 ಕಲಂ: 341, 323,504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ಪಿರ್ಯಾದಿ ಸುಜಿದಾರ್ ರಿಜ್ವಾನ್ ಇವರು ಕಿರಿಮಂಜೇಶ್ವರ ಗ್ರಾಮದ ಸರ್ವೇ ನಂಬ್ರ 155/10 ರಲ್ಲಿ 0.48.50 ಎಕ್ರೆ ಜಾಗವನ್ನು 7 ವರ್ಷಗಳ ಹಿಂದೆ ದೇವಿ ಪೂಜಾರ್ತಿ ಹಾಗೂ ಅವರ ಮಕ್ಕಳಿಂದ ಖರೀದಿ ಮಾಡಿ ಅನುಭವಿಸಿಕೊಂಡು ಬಂದಿದ್ದು ಸದ್ರಿ ಜಾಗಕ್ಕೆ  ಸರಿಗೆ ಬೇಲಿ ಹಾಕಿರುವುದಾಗಿದೆ ಪಿರ್ಯಾಧಿದಾರರ ಜಾಗದ ಪಕ್ಕದ ಜಾಗದ ಶೇಖರ ಪೂಜಾರಿ, ಕಮಲ, ಶಾರದ ಪುಟ್ಟು ಪೂಜಾರಿ  ಯವರು ಸೇರಿಕೊಂಡು ಪಿರ್ಯಾಧಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾಧಿದಾರರು ಹಾಕಿದ  ಬೇಲಿಯನ್ನು ಕಿತ್ತು ಹಾಕಿ ಪಿರ್ಯಾಧಿದಾರರ ಬಾಬ್ತು ಜಾಗದಲ್ಲಿ  2 ಸೆಂಟ್ಸ ಜಾಗವನ್ನು ಆರೋಪಿತರು ಒತ್ತುವರಿ ಮಾಡಿಕೊಂಡು ಬೇಲಿ ಹಾಕಿರುತ್ತಾರೆ. ಪಿರ್ಯಾಧಿದಾರರು ಈ ಬಗ್ಗೆ ಆರೋಪಿತರಲ್ಲಿ ವಿಚಾರಿಸಿದ್ದಕ್ಕೆ ದಿನಾಂಕ 06/08/2015 ರಂದು ಸಂಜೆ 05:00 ಗಂಟೆಯ ಸಮಯಕ್ಕೆ ಆರೋಪಿತರು ಸೊಂಟೆ ಮತ್ತು ಕತ್ತಿಯನ್ನು ಹಿಡಿದುಕೊಂಡು ಪಿರ್ಯಾಧಿದಾರರ ಜಾಗಕ್ಕೆ ಅಕ್ರಮ ಪ್ರವೇಶಮಾಡಿ ಪಿರ್ಯಾಧಿದಾರರನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ನಿಮ್ಮನ್ನು ಕಡಿದು ಹಾಕುತ್ತೇನೆ, ಕೈಕಾಲು ಮುರಿಯುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 223/2015 ಕಲಂ 341,447, 504, 506,34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಉಡುಪಿ: ಶ್ರೀಮತಿ ಶಾರದ ಕರ್ಕೆರ್‌  (53) ಶ್ರೀ ಲಕ್ಷ್ಮೀ  4-79ಸಿ11 ಉಡುಪ ಕಂಪೌಂಡ್‌‌, ಬೈಲೂರು, 76 ಬಡಗುಬೆಟ್ಟು ಗ್ರಾಮ ಉಡುಪಿ ಇವರಿಗೆ ಸುಮಾರು ಎರಡು ದಿನಗಳಿಂದ ತಲೆನೋವು ಇದ್ದು ದಿನಾಂಕ: 18/08/2015ರಂದು ರಾತ್ರಿ 9:30ಗಂಟೆಗೆ ಸ್ವಲ್ಪ ತಲೆನೋವು ಎಂದು ಹೇಳುತ್ತಿದ್ದು  ರಾತ್ರಿ ಸುಮಾರು 10:00 ಗಂಟೆಗೆ ಊಟ ಮಾಡಿ ಅವರ ಕೋಣೆಯಲ್ಲಿ ಮಲಗಿದ್ದು ದಿನಾಂಕ: 19/08/2015ರಂದು ಬೆಳಿಗ್ಗೆ ಸುಮಾರು 5 ಗಂಟೆಗೆ ಎಬ್ಬಿಸಲು ಹೋದಾಗ ಅವರ ಏಳದೇ ಇದ್ದಾಗ ಟಿಎಂಎ ಪೈ ಆಸ್ಪತ್ರೆಗೆ ಸುಮಾರು ಬೆಳಿಗ್ಗೆ 6:10 ಗಂಟೆಗೆ  ಚಿಕಿತ್ಸೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣೆ ಯು.ಡಿ.ಆರ್‌ ನಂಬ್ರ 41/2015 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
     

No comments: