Sunday, August 09, 2015

Daily Crime Reports As On 09/08/2015 At 07:00 Hrsಅಫಘಾತ ಪ್ರಕರಣಗಳು
  • ಬೈಂದೂರು: ಪಿರ್ಯಾದಿ ನಾಗರಾಜ ಭಟ್  (40) ತಂದೆ:ಚಂದ್ರ ಶೇಖರ ಭಟ್ ವಾಸ: ತ್ರಾಸಿ ಚರ್ಚ್ ನ ಎದುರು ರಸ್ತೆ ಅರಂಗಳ,  ತ್ರಾಸಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 04/08/2015 ರಂದು ಕೆ.ಎ 20 ಆರ್ 8744 ನೇ ಮೋಟಾರು ಸೈಕಲ್ ನಲ್ಲಿ ಪ್ರಮೋದ್ ನನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಹಳಗೇರಿಯಿಂದ ನಾಗೂರಿಗೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 7:30 ಗಂಟೆಗೆ ಗುಂಜಾನುಗುಡ್ಡೆ  ಎಂಬಲ್ಲಿ  ಎದುರುಗಡೆಯಿಂದ ಓರ್ವ ಮೋಟಾರು ಸೈಕಲ್  ಸವಾರನು ಕೆ ಎ 15 ಯು 2451 ನೇ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ನಾಗರಾಜ ಭಟ್‌ರವರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾಲಿಗೆ ಹಾಗು ಹೊಟ್ಟೆಗೆ ಗುದ್ದಿದ ಗಾಯವಾಗಿದ್ದು ಸಹ ಸವಾರರಾದ ಪ್ರಮೋದ್ ರವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು  ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ, ಈ ಬಗ್ಗೆ ಬೈಂದೂರು ಠಾಣೆ ಅಪರಾಧ ಕ್ರಮಾಂಕ 215/2015 ಕಲಂ  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಪಡುಬಿದ್ರಿ: ದಿನಾಂಕ: 07/08/2015 ರಂದು 09:00  ಗಂಟೆಗೆ ಎರ್ಮಾಳ್ ಬಡಾ ಗ್ರಾಮದ ಎರ್ಮಾಳ್ ಕಲ್ಯಾಣಿ ಬಾರ್ ಬಳಿ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿ ಗಣೇಶ ತಂದೆ:-ಗೋಪಾಲ ಪುತ್ರನ್, ವಾಸ:ಓಂಕಾರ್, ಅಣ್ಣವರ್, ಎರ್ಮಾಳ್ ಬಡಾ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆರವರ ತಾಯಿ ವಾರಿಜ (65) ಎಂಬವರು ರಸ್ತೆಯ ಎಡಬದಿಯಲ್ಲಿ ಮನೆಗೆ ಹೋಗಲು ನಿಂತಿದ್ದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆಎ 19 ಎಂಡಿ 6922 ನೇ ಕಾರಿನ ಚಾಲಕ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಾರಿಜರವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಲಕಾಲಿಗೆ,  ಎಡ ಕೈ ಮುಂಗಾಯಿಗೆ, ಎಡ ಹಣೆಗೆ ಗಾಯವಾಗಿ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ, ಈ ಬಗ್ಗೆ ಪಡುಬಿದ್ರಿ ಠಾಣೆ ಅಪರಾಧ ಕ್ರಮಾಂಕ 104/2015 ಕಲಂ; 279, 337ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ: ಕಾರ್ಕಳ ತಾಲೂಕಿನ ನೀರೆ ಗ್ರಾಮದ, ನೀರೆ ದರ್ಖಾಸು ಮನೆ ನಿವಾಸಿ 38 ವರ್ಷ ಪ್ರಾಯದ ಚಂದ್ರ ಶೇಖರ ಶೆಟ್ಟಿ ಎಂಬವರು ತನ್ನ ಪತ್ನಿ ಹಾಗೂ ಮಗ ತನ್ನನ್ನು ತೊರೆದು ಹೋಗಿರುವ ಕಾರಣದಿಂದ ಬೇಸತ್ತು, ಜೀವನದಲ್ಲಿ ಜುಗುಪ್ಸೆಗೊಂಡು ಈ ದಿನ ದಿನಾಂಕ 08/08/2015 ರಂದು 14:30 ಗಂಟೆಗೆ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬುದಾಗಿ ಸತೀಶ್ ಶೆಟ್ಟಿ, ವಾಸ: ಶ್ರೀ ವಿಘ್ನೇಶ್ ನಿಲಯ, ನೀರೆ ದರ್ಖಾಸು ಮನೆ, ನೀರೆ ಗ್ರಾಮ, ಕಾರ್ಕಳ ತಾಲೂಕು ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆ ಯು.ಡಿ.ಆರ್‌ ನಂಬ್ರ 25/2015 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕ ರಣ ದಾಖಲಾಗಿರುತ್ತದೆ.

No comments: