Saturday, August 08, 2015

Daily Crime Reports As On 08/08/2015 At 17:00 Hrs


ವಂಚನೆ ಪ್ರಕರಣ 
  • ಮಣಿಪಾಲ ದಿನಾಂಕ 07/08/2015 ರಂದು ಪಿರ್ಯಾದಿದಾರರಾದ ಅಮೃತ್‌‌ ವೆಂಕಟಾಯ್ಯರ್‌, ಎಮ್‌ಐಟಿ ಹಾಸ್ಟೆಲ್‌, ಮಣಿಪಾಲ ಉಡುಪಿ ಇವರ ಬ್ಯಾಂಕ್‌ ಖಾತೆ ನಂಬ್ರ 20138706113 ನೇದನ್ನು Hack ಮಾಡಿ ಅಮೃತ್‌‌ ವೆಂಕಟಾಯ್ಯರ್‌ ರವರ ಖಾತೆಯಿಂದ ರೂಪಾಯಿ 45,000/- ನ್ನು ತೆಗೆದಿರುವುದಾಗಿದೆ. ಈ ಬಗ್ಗೆ ಮಣಿಪಾಲ  ಪೋಲಿಸ್ ಠಾಣೆ ಅಪರಾಧ ಕ್ರಮಾಂಕ:169/2015 ಕಲಂ 66(ಸಿ) ಮತ್ತು 66(ಡಿ) ಐ.ಟಿ ಆಕ್ಟ್‌ ಹಾಗೂ ಕಲಂ:420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ

  • ಕುಂದಾಪುರ : ಪಿರ್ಯಾದಿದಾರರಾದ ಎಂ.ಗೋವಿಂದರಾಯ ಪೈ (53) ತಂದೆ: ದಿ.ರಂಗನಾಥ ಪೈ ವಾಸ: ಕೆನರಾ ಗೂಡ್ಸ್‌ ಟ್ರಾನ್ಸ್‌ಪೋರ್ಟ್‌, ಫೆರ್ನಾಂಡಿಸ್‌ ಬಿಲ್ಡಿಂಗ್‌ ಕುಂದಾಪುರ ಇವರು ಕೆನರಾ ಗೂಡ್ಸ್‌ ಟ್ರಾನ್ಸ್‌ಪೋರ್ಟ್‌ ನಲ್ಲಿ ಪಾಲುದಾರರಾಗಿದ್ದು, ದಿನಾಂಕ 07/08/2015 ರಂದು ರಾತ್ರಿ 8:00 ಗಂಟೆಗೆ ಎಂ.ಗೋವಿಂದರಾಯ ಪೈ ರವರ ಲಾರಿಯ ಡ್ರೈವರ್‌ನಾದ ರಾಜೇಶ ನಾಯ್ಕ ಮತ್ತು ಪುರುಷೋತ್ತಮ ಭಟ್‌ ರವರು ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಬೊಬ್ಬರ್ಯನ ಕಟ್ಟೆ ಎದುರು ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಬದಿಯಲ್ಲಿ ನಿಂತುಕೊಂಡು ಮಾತನಾಡುತ್ತಿರುವಾಗ ಭಟ್ಕಳ-ಮಂಗಳೂರು ಮಾರ್ಗದ ಎ.ಪಿ.ಎಂ ಬಸ್ಸಿನ ಚಾಲಕ ಭೀಮ ಎಂಬುವವರು ಲಾರಿ ಚಾಲಕ ರಾಜೇಶ ನಾಯ್ಕ ರವರಲ್ಲಿ, ‘ನಮ್ಮ ಬಸ್ಸು ಬರುವಾಗ ನಿನಗೆ ಸೈಡ್‌ ಕೊಡಲು ಆಗುದಿಲ್ಲವೆ ಎಂದು ಹೇಳಿದವನೇ ಆತನ ಕೈಯಲ್ಲಿದ್ದ ಬಸ್ಸು ಕ್ಲೀನ್‌ ಮಾಡುವ ಬ್ರಶ್‌ನಿಂದ ರಾಜೇಶ ನಾಯ್ಕರವರ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 286/2015  ಕಲಂ: 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    


No comments: