Friday, August 07, 2015

Daily Crime Reports As On 07/08/2015 At 17:00 Hrs



ಇತರೇ ಪ್ರಕರಣ 
  • ಅಮಾಸೆಬೈಲು: ಪಿರ್ಯಾದಿ ನಾರಾಯಣ ಪೂಜಾರಿ (40) ತಂದೆ: ಸುಕ್ರ ಪೂಜಾರಿ ವಾಸ : ಮೆಕ್ಕಿ ಮನೆ  ಅಮಾಸೆಬೈಲು ಗ್ರಾಮ ಕುಂದಾಪುರ ರವರು ಕೂಲಿ ಕೆಲಸ ಮಾಡಿಕೊಂಡಿದ್ದು 5 ವರ್ಷದ ಹಿಂದೆ ಅಮಾಸೆಬೈಲು ಗ್ರಾಮದ ದಿವಾನಂದ ಕೊಡ್ಗಿರವರ ಬಳಿ 17.500/-ರೂಪಾಯಿ ಸಾಲವಾಗಿ ಪಡೆದುಕೊಂಡಿದ್ದು ಕೊಟ್ಟ ಸಾಲಕ್ಕೆ ತಿಂಗಳಿಗೆ 10,000/- ರೂಪಾಯಿಗೆ 700/-ರಂತೆ ಬಡ್ಡಿಕೊಡಲು ತಿಳಿಸಿದ್ದು. ಈ ಬಗ್ಗೆ  ದಿವಾನಾಂದ ಕೊಡ್ಗಿಯವರಿಗೆ 300/-ರೂಪಾಯಿಯ ಠಸೆ ಪೇಪರ್ ಹಾಗೂ ಉಳ್ಳೂರು ಮಚ್ಚಟ್ಟು  ವ್ಯವಸಾಯ ಸೇವಾ ಸಹಾಕಾರಿ  ಸಂಘದಿಂದ ಖಾತೆಯ ಚಕ್ ಪಡೆದುಕೊಂಡಿದ್ದು, ಒಂದು ತಿಂಗಳು ಸಾಲ ನೀಡಲು ಅಸಾದ್ಯವಾದಲ್ಲಿ ಮೀಟರ್ ಬಡ್ಡಿ ರೂಪದಲ್ಲಿ ಹಣವನ್ನು ಕೊಡುವಂತೆ ಹೇಳಿ ವಸೂಲಿ ಮಾಡುತ್ತಿದ್ದರು ದಿವಾನಂದ ಕೊಡ್ಗಿಯವರಲ್ಲಿ ಸಾಲ ತೆಗೆದುಕೊಂಡ ಬಗ್ಗೆ ಈಗಾಗಲೇ 25,000/- ರೂಪಾಯಿಯನ್ನು  ಬಡ್ಡಿಯ  ರೂಪದಲ್ಲಿಯೇ ಕೊಟ್ಟಿದ್ದು  ಈಗ ಪಿರ್ಯಾದಿದಾರರು  ಒಂದು ಲಕ್ಷ ರೂಪಾಯಿವನ್ನು ಮೀಟರ್ ಬಡ್ಡಿಯ  ರೂಪದಲ್ಲಿ ಕೊಡಬೇಕೆಂದು  ಹೇಳಿ ವಕೀಲರಿಂದ ನೋಟಿಸು ಕಳುಹಿಸಿರುತ್ತಾರೆ. ದಿವಾನಂದ ಕೊಡ್ಗಿಯವರಿಗೆ ಕೋಡಬೇಕಾಗಿದ್ದ  ಸಾಲ ಹಾಗೂ ಬಡ್ಡಿರೂಪದ ಹಣವನ್ನು ಕೊಟ್ಟು  ಚುಕ್ತಾವಾಗಿರುತ್ತದೆ.  ಆದರೂ  ಮೀಟರ್ ಬಡ್ಡಿಯ ರೂಪದಲ್ಲಿ 1,00,000 ರೂಪಾಯಿ ಚಕ್ ನ್ನು ವಸೂಲಿಯ ರೂಪದಲ್ಲಿ ನಾರಾಯಣ ಪೂಜಾರಿ ಇವರ ಮೇಲೆ ದೌರ್ಜನ್ಯ ಮಾಡಲು ವಕೀಲರಿಂದ ನೋಟಿಸು ಮಾಡಿದ್ದು ಮತ್ತು ನಾರಾಯಣ ಪೂಜಾರಿಯವರ  ಮನೆಗೆ ಹಲವಾರು ಬಾರೀ ದಿವಾನಂದ ಕೊಡ್ಗಿಯವರು ಬಂದು ಬಡ್ಡಿ ಹಣವನ್ನು ಕೊಡುವಂತೆ ಪೀಡಿಸಿ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ, ಈ ಬಗ್ಗೆ ಅಮಾಸೆಬೈಲು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 44/2015 ಕಲಂ 3, 4 KARNATAKA PROHIBITION OF CHARGING EXORBITANT INTEREST ACT, 2004 & U/s-38,39 KARNATAKA MONEY LENDERS ACT 1961 ಯಂತೆ  ಪ್ರಕರಣ ದಾಖಲಾಗಿರುತ್ತದೆ.
ಹುಡುಗಿ ಕಾಣೆ ಪ್ರಕರಣ
  • ಕಾರ್ಕಳ: ಪಿರ್ಯಾದಿ ಪ್ರವೀಣ್ ಜತ್ತನ, ತಂದೆ: ಸೀನ ಪೂಜಾರಿ, ವಾಸ: ಜಲಶ್ರೀ ನಿಲಯ,ಹೆಪ್ಪಳ, ಎರ್ಲಪಾಡಿ ಗ್ರಾಮ,  ಕಾರ್ಕಳ ತಾಲೂಕುರವರ ಅಣ್ಣನ ಮಗಳಾದ ಸವಿತಾ (19) ಎನ್ನುವವರು ದಿನಾಂಕ 06/08/2015 ರಂದು ಬೆಳಗ್ಗೆ 10:30 ಗಂಟೆಗೆ ತನ್ನ ವಾಸದ ಮನೆಯಿಂದ, ಕಾರ್ಕಳಕ್ಕೆ ಹೊಸದಾಗಿ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ, ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 112/2015 ಕಲಂ ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಫಘಾತ ಪ್ರಕರಣ
  • ಕುಂದಾಪುರ: ದಿನಾಂಕ 06/08/2015 ರಂದು ಸಮಯ ಸುಮಾರು ರಾತ್ರಿ 8:15 ಗಂಟೆಗೆ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ   ಕೊಟೇಶ್ವರ ಬಸ್ಸ್ಟಾಪ್  ಬಳಿ ರಸ್ತೆಯಲ್ಲಿ ಆಪಾದಿತ ಗೋಪಾಲ ಎಂಬವರು KA20 X 4148 ನೇ ಬೈಕನ್ನು  ಕೊಟೇಶ್ವರ ರಥಭೀದಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ  ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರ ಎಡ ಬದಿಗೆ ಸವಾರಿ ಮಾಡಿ, ಕುಂದಾಪುರ  ಕಡೆಯಿಂದ ಕೊಟೇಶ್ವರ ರಥಭೀದಿ ಕಡೆಗೆ ಮಣ್ಣಿನ ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿದ್ದ  ಸಂಜೀವ  ಶೆಟ್ಟಿಗಾರ್ ರವರಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯು ರಸ್ತೆಯಲ್ಲಿ  ಬಿದ್ದು  ಅವರ ತಲೆಗೆ, ಕೈ ಕಾಲುಗಳಿಗೆ ಗಾಯ ನೋವು ಆಗಿ ಕೊಟೇಶ್ವರ  ಎನ್‌. ಆರ್  ಆಚಾರ್ಯ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ   ಉಡುಪಿ ಆದರ್ಶ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ, ಎಂಬುದಾಗಿ ವೆಂಕಟೇಶ (38)ತಂದೆ: ವಿಠಲ್  ಶೆಟ್ಟಿಗಾರ್ ವಾಸ: ದೊಡ್‌‌ ಮನಿಬೆಟ್ಟು,  ಬೀಜಾಡಿ ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ: 95/2015  ಕಲಂ 279 , 337 ಐಪಿಸಿಯಂತೆ ಪ್ರಕ ರಣ ದಾಖಲಾಗಿರುತ್ತದೆ.   
ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಕಗ್ಗು (40),  ತಂದೆ:-ದಿವಂಗತ ಕುಡ್ಡು, ಬರ್ಪಣಿಗುಡ್ಡೆ, ಇರಂದಾಡಿ ಗ್ರಾಸ್, ಎಲ್ಲೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆರವರ ಮನೆಯಲ್ಲಿ ದಿನಾಂಕ 06/08/2015 ರಂದು ರಾತ್ರಿ 9:30 ಗಂಟೆಗೆ ಕಗ್ಗು ರವರ ಹೆಂಡತಿ ಮೀನಾಕ್ಷಿ (38) ಎಂಬವರು ಮನೆಯ ಹೊರಗಡೆ ನಾಯಿ ಬೊಗಳುತ್ತಿದ್ದನ್ನು ನೋಡಲು ಹೊರಗಡೆ ಬಂದು ಹೊರಗಿನ ಮೆಟ್ಟಲಿನಲ್ಲಿ ಕಾಲಿಟ್ಟಗ ಅಲ್ಲೆ ಇದ್ದ ಒಂದು ನಾಗರಹಾವು ಮೀನಾಕ್ಷಿರವರ ಬಲಗಾಲಿಗೆ ಕಚ್ಚಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ, ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 23/15 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: