Thursday, August 06, 2015

Daily Crime Reports As On 06/08/2015 At 07:00 Hrs



ಅಪಘಾತ ಪ್ರಕರಣ
  • ಹಿರಿಯಡ್ಕ: ದಿನಾಂಕ 04/08/2015 ರಂದು  ಬೆಳಿಗ್ಗೆ 8:30 ಗಂಟೆಗೆ ಉಡುಪಿ ತಾಲೂಕು ಅಂಜಾರು ಗ್ರಾಮದ ರಿಂಗ್‌ ರೋಡ್‌ ರಸ್ತೆಯಲ್ಲಿ  KA 20 EH 8470 ನೇಯ ಮೋಟಾರ್‌ ಸೈಕಲ್‌  ಸವಾರ ಸುರೇಶ್‌ ನಾಯ್ಕ್‌ ರವರು ತನ್ನ ಬೈಕ್‌ನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಹಿರಿಯಡ್ಕ ಕಡೆಯಿಂದ ಆತ್ರಾಡಿ ಕಡೆಗೆ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ  ಪಿರ್ಯಾದಿದಾರರಾದ ಶ್ರೀ ರವೀಂದ್ರ (32) ತಂದೆ: ಮುದ್ದು ಪೂಜಾರಿ ವಾಸ: ಸಂಕ್ರಿ ನಿಲಯ, ಓಂತಿಬೆಟ್ಟು ಹೌಸ್‌ ಅಂಜಾರು ಗ್ರಾಮ ,ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ತಂದೆ ಮುದ್ದು ಪೂಜಾರಿ (59) ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಮುದ್ದು ಪೂಜಾರಿಯವರಿಗೆ ತಲೆಗೆ ಹಾಗೂ ಕೈಕಾಲುಗಳಿಗೆ ತರಚಿದ ಗಾಯವಾಗಿ ಕೆಎಂಸಿ ಮಣಿಪಾಲ ಅಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 81/2015 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
ವಂಚನೆ ಪ್ರಕರಣ
  • ಮಣಿಪಾಲ: ಪಿರ್ಯಾದಿದಾರರಾದ ದೆಬೋಲಿನ್‌ ದಾರ (20) ತಂದೆ: ಎಸ್.ಕೆ ದಾರ ವಾಸ: ಎಮ್.ಐ.ಟಿ ಗಲ್ಸ್‌ ಹಾಸ್ಟೇಲ್‌ ಬ್ಲಾಕ್‌ ನಂಬ್ರ 13 ಮಣಿಪಾಲ  ಉಡುಪಿ ಇವರು   ಮಣಿಪಾಲ ಎಸ್.ಬಿ.ಐ ಖಾತೆ ನಂಬ್ರ 20174139944  ಹೊಂದಿದ್ದು ದಿನಾಂಕ 04/08/2015 ರಂದು ಬೆಳಿಗ್ಗೆ 7:23 ಗಂಟೆಗೆ ದೆಬೋಲಿನ್‌ರವರ ಮೊಬೈಲ್ ಗೆ ಕರೆ ಮಾಡಿ  ತಾನು ಎಸ್.ಬಿ.ಐ ಮಣಿಪಾಲದಿಂದ  ಮಾತನಾಡುವುದೆಂದು ತಿಳಿಸಿ ನಿಮ್ಮ ಎ.ಟಿ.ಎಂ ಕಾರ್ಡ ಬ್ಲಾಕ್ ಆಗಿದೆ ಎಂದು ತಿಳಿಸಿದ್ದು ಅದೇ ವೇಳೆ ಎಸ್.ಬಿ.ಐ ನಿಂದ ಕಳುಹಿಸಿದ್ದು ಎನ್ನಲಾದ ಕೆಲವು ಸಂದೇಶಗಳು ದೆಬೋಲಿನ್‌ರವರ ಮೊಬೈಲ್‌ಗೆ ಬಂದಿದ್ದು ಅದನ್ನು ನಂಬಿ ಕರೆಮಾಡಿದ ವ್ಯಕ್ತಿಗೆ ಎ.ಟಿ.ಎಂ ನಂಬ್ರ ನೀಡಿ ಬಳಿಕ ಬಂದ ಓ.ಟಿ.ಪಿ ನಂಬರನ್ನು ಕೂಡ ಆ ವ್ಯಕ್ತಿಗೆ ತಿಳಿಸಿದ್ದು ಕೂಡಲೆ  ದೆಬೋಲಿನ್‌ರವರ ಮೊಬೈಲಿಗೆ ಅವರ ಖಾತೆಯಿಂದ ರೂಪಾಯಿ 2,500/-, 1,000/- ಮತ್ತು 1,000/- ಒಟ್ಟು 4,500/ ರೂಪಾಯಿಯ ವರ್ಗಾವಣೆ ಸಂದೇಶ ಬಂದಿರುತ್ತದೆ. ಆಪಾದಿತನು ದೆಬೋಲಿನ್‌ರವರ ಎ.ಟಿ.ಎಂ ನಂಬ್ರವನ್ನು  ಉಪಯೋಗಿಸಿ ಅವರ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿ ದೆಬೋಲಿನ್‌ರವರಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಪ್ರಕರಣ 155/2015 ಕಲಂ:66(ಸಿ), 66(ಡಿ) ಐ.ಟಿ ಆಕ್ಟ್‌  ಮತ್ತು 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ 
  •  ಬೈಂದೂರು: ಪಿರ್ಯಾದಿದಾರರಾದ ಪರಮೇಶ್ವರ ಹೋಬಳಿದಾರ (43) ತಂದೆ: ಗಣಪಯ್ಯ ಹೋಬಳಿದಾರ ವಾಸ: ಯಲ್ಲೂರು ಗೋಳಿಹೊಳೆ ಗ್ರಾಮ ಕುಂದಾಪುರ ತಾಲೂಕು ಇವರ ಮಗನಾದ ಕಿರಣ ಹೋಬಳಿದಾರನು ಅರೆಶಿರೂರು ಗೋಳಿಹೊಳೆಯ ಮೂಕಾಂಬಿಕ ಪ್ರೌಢಾ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿರುವುದಾಗಿದ್ದು , ದಿನಾಂಕ 01/08/2015 ರಂದು ಮದ್ಯಾಹ್ನ 02:30 ಗಂಟೆಯ ಸಮಯಕ್ಕೆ ಯಾವುದೋ ಒಂದು ಚೀಟಿಯ ವಿಚಾರದಲ್ಲಿ ಪರಮೇಶ್ವರ ಹೋಬಳಿದಾರವರ ಮಗನಿಗೆ ಅದೇ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವರಾಮ್‌ ಎಂಬುವವರು ಕೈಯಿಂದ ಹೊಡೆದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 214/2015 ಕಲಂ: 323, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •   ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ಸಂಗೀತಾ (36) ಗಂಡ: ಉಮೇಶ ಶೆಟ್ಟಿ ವಿದ್ಯಾನಗರ 3 ನೇ ಕ್ರಾಸ್ ಚಾಂತಾರು ಗ್ರಾಮ ಉಡುಪಿ ತಾಲೂಕು   ಇವರ ವಿವಾಹವು ದಿನಾಂಕ 04/05/2012 ರಂದು ಉಡುಪಿ ಶಾಮಿಲಿ ಸಭಾ ಭವನದಲ್ಲಿ ಆರೋಪಿ 1) ಉಮೇಶ್ ಶೆಟ್ಟಿ (37) ನೊಂದಿಗೆ ನಡೆದಿರುತ್ತದೆ. ಮದುವೆ ಪೂರ್ವದಲ್ಲಿ ಆಪಾದಿತರುಗಳಾದ 2) ಚಿತ್ತರಂಜನ್ ಶೆಟ್ಟಿ (45),3) ಶ್ರೀಮತಿ ಮಾಲತಿ ಸಿ. ಶೆಟ್ಟಿ (39) ರವರು  ಸಂಗೀತಾ ರವರ ತಾಯಿ ಮನೆಯಾದ ಚಾಂತಾರು ಗ್ರಾಮದ ವಿದ್ಯಾನಗರ ಎಂಬಲ್ಲಿಗೆ ಬಂದು ರೂಪಾಯಿ 15 ಲಕ್ಷ ವರದಕ್ಷಿಣೆ ನೀಡಲು ಒತ್ತಾಯಿಸಿ ನಂತರ ರೂಪಾಯಿ 10 ಲಕ್ಷ ವರದಕ್ಷಿಣೆ ಪಡೆದಿರುತ್ತಾರೆ. ಮದುವೆಯ ಬಳಿಕ ವರದಕ್ಷಿಣೆ ಕೇಳಿದಷ್ಟು ನೀಡಲಿಲ್ಲ ಎಂಬ ಕಾರಣಕ್ಕೆ 2 ಮತ್ತು 3 ನೇ ಆರೋಪಿಗಳ ಪ್ರಚೋದನೆಯಿಂದ 1 ನೇ ಆಪಾದಿತ ಸಂಗೀತಾ ರವರಿಗೆ ಹಾವಂಜೆ ಗ್ರಾಮದ 1 ನೇ ಆಪಾದಿತನ ಮನೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದಿರುತ್ತಾನೆ. ನಂತರ ಸಂಗೀತಾರವರನ್ನು ಬಿಟ್ಟು 1 ನೇ ಆಪಾದಿತ ಕುವೈಟಿಗೆ ಹೋಗಿ ಅಲ್ಲಿಂದ ಪೋನ್ ಕರೆ ಮಾಡಿ ಹೀಯಾಳಿಸಿ ಮಾನಸಿಕ ನೋವು ನೀಡಿರುತ್ತಾನೆ. ನಂತರ ರಾಜಿ ಪಂಚಾತಿಕೆಗೆಂದು ಕರೆದು ಸಂಗೀತಾ ರವರ ತಂದೆಗೆ ಆಪಾದಿತರುಗಳು ಅವಾಚ್ಯವಾಗಿ ಬೈದು ಬೆದರಿಕೆ ಹಾಕಿರುತ್ತಾರೆ. ದಿನಾಂಕ 08/07/2015 ರಂದು 1 ನೇ ಆಪಾದಿತ ವಿದೇಶದಿಂದ ಕರೆ ಮಾಡಿ ಮರು ಮದುವೆ ಆಗುವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 153/2015 ಕಲಂ: 323,504,498 (ಎ) ಜೊತೆಗೆ 34 ಐಪಿಸಿ ಮತ್ತು ಕಲಂ: 3,4 ವರದಕ್ಷಿಣೆ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.      

     





    No comments: