Wednesday, August 05, 2015

Daily Crime Reports As On 05/08/2015 At 19:30 Hrsಅಪಘಾತ ಪ್ರಕರಣಗಳು
  • ಕಾಪು: ಪಿರ್ಯಾದಿ ಅಬ್ದುಲ್ ರಹಿಮಾನ್ (34) ತಂದೆ:ದಿವಂಗತ ಹಸನಬ್ಬ, ವಾಸ: ಬಿಸ್ಮಿಲ್ಲಾ ಮಂಜಿಲ್, ಪಕ್ಷಿಕೆರೆ, ಕೆಮ್ರಾಲ್ ಅಂಚೆ ಮತ್ತು ಗ್ರಾಮ, ಮಂಗಳೂರು ಇವರು ಬಸ್ಸು ನಂಬ್ರ ಕೆಎ 19 ಸಿ 5478 ನೇದರ ಚಾಲಕರಾಗಿದ್ದು, ದಿನಾಂಕ 05/08/2015 ರಂದು ಬೆಳಿಗ್ಗೆ ಮಂಗಳೂರಿನಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಕಡೆಗೆ ಬರುತ್ತಾ ಬೆಳಿಗ್ಗೆ ಸುಮಾರು 8:35 ಗಂಟೆಗೆ ಮೂಡಬೆಟ್ಟು ಗ್ರಾಮದ ಮಹಾಕಾಳಿ ಗ್ಯಾರೇಜ್‌ನಿಂದ ಸ್ವಲ್ಪ ಮುಂದೆ ತಲುಪುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬಸ್ಸು ನಂಬ್ರ ಕೆಎ 21 ಎ 2077 ನೇದರ ಚಾಲಕ ವಿಷ್ಣುಪ್ರಸಾದ್ ಎಂಬುವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ, ಈ ಬಗ್ಗೆ ಕಾಪು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 150/2015 ಕಲಂ 279 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾಪು:ಪಿರ್ಯಾದಿ ಸುಧೀರ್ (30) ತಂದೆ: ಸುರೇಶ್ ಪೂಜಾರಿ, ವಾಸ: ನಂದಾದೀಪ ಹೌಸ್, ಮೇಲ್ಪೇಟೆ ಉದ್ಯಾವರ ಗ್ರಾಮ, ಉಡುಪಿ ಇವರು ದಿನಾಂಕ 04/08/2015 ರಂದು ಸಂಜೆ 18:30 ಗಂಟೆಗೆ ತನ್ನ ಮೋಟಾರ್‌ ಸೈಕಲ್ ನಂ ಕೆಎ 20 ಎಲ್  5168 ನೇದರಲ್ಲಿ ಸುನಿಲ್ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಮಜೂರಿನಿಂದ ಉದ್ಯಾವರ ಕಡೆಗೆ ಹೊರಟು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಾಂಗಾಳ ಗ್ರಾಮದ ಪಾಂಗಾಳ ಗುಡ್ಡೆ ಕ್ರಾಸ್ ಬಳಿ ತಲುಪುವಾಗ ಎದುರಿನಲ್ಲಿ ಹೋಗುತ್ತಿದ್ದ ಮಾರುತಿ ಓಮ್ನಿ ಕಾರು ನಂಬ್ರ  ಕೆಎ 31 ಎಂ 6501 ನೇದನ್ನು ಅದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಕಾರಿನ ಎದುರಿನಲ್ಲಿ ಹೋಗುತ್ತಿದ್ದ ಲಾರಿಗಳನ್ನು ಓವರ್‌ ಟೇಕ್ ಮಾಡಲು ಪ್ರಯತ್ನಿಸಿ ಮುಂದಕ್ಕೆ ಹೋಗಲಾರದೇ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಕಾರು ರಸ್ತೆಯ ಎಡ ಮಗ್ಗುಲಿಗೆ ಜಾರಿಕೊಂಡು ಬಂದು ಹಿಂದಿನಿಂದ  ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಸುಧೀರ್  ಮತ್ತು ಸುನಿಲ್ ಇರ್ವವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದರು, ಸುದೀರ್‌ ರವರಿಗೆ  ಎಡಕಾಲಿನ ಮೊಣಗಂಟಿಗೆ ಒಳ ಜಖಂ ಉಂಟಾಗಿದ್ದು, ಸುನಿಲ್‌ನವರಿಗೆ ಬಲಕಾಲಿನ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ, ಈ ಬಗ್ಗೆ ಕಾಪು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 151/2015 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

No comments: