Wednesday, August 05, 2015

Daily Crime Reports As On 05/08/2015 At 07:00 Hrs



ಅಪಘಾತ ಪ್ರಕರಣಗಳು 
  • ಕಾರ್ಕಳ: ದಿನಾಂಕ 04/08/2015 ರಂದು 08:10 ಗಂಟೆಗೆ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಶೆಣೈ ನಗರ ಎಂಬಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ KA 20 B 6422 ನೇ ನಂಬ್ರದ ಪ್ರಯಾಣಿಕರ ಬಸ್ಸನ್ನು ಅದರ ಚಾಲಕ ಹರೀಶ್ ಶೆಟ್ಟಿ ಎಂಬಾತನು ಬಸ್ಸನ್ನು ಜೋಡುಕಟ್ಟೆ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಬಸ್ಸಿಗೆ ಏಕಾಏಕಿಯಾಗಿ ಬ್ರೇಕ್‌ ಹಾಕಿದ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿ ಡ್ಯಾರನ್‌ ಶಾನ್‌ ರೇಂಜರ್‌ ಎಂಬಾತನು ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟ ಪರಿಣಾಮ ಆತನ ಎಡ ಕೈಗೆ, ಮುಖ ಮತ್ತು ಗಲ್ಲಕ್ಕೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಠಾಣೆ ಅಪರಾಧ ಕ್ರಮಾಂಕ 111/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ಪಿರ್ಯಾದಿದಾರರಾದ ಸಂತೋಷ ಶಟ್ಟಿ (29) ತಂದೆ:ಜಯರಾಮ ಶೆಟ್ಟಿ ,ವಾಸ: ಮೀನು ಮಾರುಕಟ್ಟೆ ಹತ್ತಿರ  ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 04/08/2015 ರಂದು ರಾತ್ರಿ 09:45 ಗಂಟೆ ಸಮಯಕ್ಕೆ ಅವರ ಸ್ನೇಹಿತರೊಂದಿಗೆ ತೆಕ್ಕಟ್ಟೆ ಗ್ರಾಮದ ಬಸ್ ನಿಲ್ದಾಣದ ಬಳಿ ನಿಂತುಕೊಂಡಿರುವಾಗ ಅವರ ಪರಿಚಯದ ರೂಪೇಶ್ ಭಂಡಾರಿ ಎಂಬುವವರು ಅವರ ಕೆಎ 20 ಕ್ಯೂ 1248 ನೇ ನಂಬ್ರದ ಮೋಟಾರ್‌ ಸೈಕಲ್‌ನಲ್ಲಿ ಮಲ್ಯಾಡಿ ರೋಡ್ ನಿಂದ ಕುಂದಾಪುರ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ 66 ರ ಟಾರು ರಸ್ತೆಯ ಪಶ್ಚಿಮ ಬದಿಯಲ್ಲಿ ಮೋಟಾರ್ ಸೈಕಲ್‌ ಸವಾರಿ ಮಾಡಿಕೊಂಡು ಹೋಗುವಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಕೆಎ 25 ಡಿ 6347 ನೇ ನಂಬ್ರದ ಲಾರಿ ಚಾಲಕ ವೀರಣ್ಣ ಎಂಬುವವನು ಆತನ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರೂಪೇಶ್ ಭಂಡಾರಿಯವರ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್‌ ಸಮೇತ ಲಾರಿಯ ಅಡಿಗೆ ಸಿಲುಕಿ ತಲೆಗೆ ,ಎದೆಯ ಭಾಗ ಹಾಗೂ ಮೈ ಕೈಗೆ ತೀವ್ರ ಸ್ವರೂಪದ ರಕ್ತಗಾಯ ಹಾಗೂ ಒಳನೋವು ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್‌.ಆರ್ ಆಚಾರ್ಯ ಆಸ್ಪತ್ರೆಗೆ ಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ರೂಪೇಶ್ ಭಂಡಾರಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 179/2015 ಕಲಂ:279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು
  • ಬ್ರಹ್ಮಾವರ: ದಿನಾಂಕ 04/08/2015 ರಂದು 14.00 ಗಂಟೆಯಿಂದ 16.30 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಹಾರಾಡಿ ಗ್ರಾಮದ ಕೆಪ್ಪನಬೆಟ್ಟು ಎಂಬಲ್ಲಿ ಪಿರ್ಯಾದಿದಾರರಾದ ಸುಲೋಚನ (34) ಗಂಡ: ಮಂಜುನಾಥ  ಕೆಪ್ಪನಬೆಟ್ಟು ಹಾರಾಡಿ ಗ್ರಾಮ ಉಡುಪಿ ತಾಲೂಕು ಇವರ ಗಂಡನಾದ ಮಂಜುನಾಥ (38) ಎಂಬುವವರು ವಾಸದ ಮನೆಯ ಬಚ್ಚಲು ಮನೆಯ ಮಾಡಿನ ಪಕ್ಕಾಸಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 44/2015 ಕಲಂ:174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ಪಿರ್ಯಾದಿದಾರರಾದ ಪಾವ್ಲ್ ಡೇರಿಯಲ್ ಬಾಂಜ್ (55) ತಂದೆ:ದಿ.ಸೈಮನ್ ಬಾಂಜ್ ವಾಸ:ಕೃಷಿ ಕೇಂದ್ರದ ಎದುರು, ಬ್ರಹ್ಮಾವರ ಚಾಂತಾರು ಗ್ರಾಮ,ಉಡುಪಿ ತಾಲೂಕು ಇವರ ತಮ್ಮ ಡೊಲ್ಫಿ ಬಾಂಜ್  (49)  ಎಂಬುವವರು ಉಡುಪಿ ತಾಲೂಕು ಕಾವಡಿ ಗ್ರಾಮದ ಅವರ ಮನೆಯಲ್ಲಿ ವಾಸವಾಗಿದ್ದು ದಿನಾಂಕ 04/08/2015 ರಂದು ಮಧ್ಯಾಹ್ನ 3:00 ಗಂಟೆಗೆ ಆತನ ನೆರೆಮನೆಯವರು ಪಾವ್ಲ್ ಡೇರಿಯಲ್ ಬಾಂಜ್ ರವರಿಗೆ ದೂರವಾಣಿ ಕರೆ ಮಾಡಿ  ಡೊಲ್ಫಿ ಬಾಂಜ್  ರವರಿಗೆ ಸೌಖ್ಯವಿಲ್ಲವಾಗಿದ್ದು ಕೂಡಲೇ ಬರುವಂತೆ ತಿಳಿಸಿದ ಮೆರೆಗೆ ಪಾವ್ಲ್ ಡೇರಿಯಲ್ ಬಾಂಜ್ ರವರು ಕೂಡಲೇ ಅಲ್ಲಿಗೆ ಬಂದು ಡೊಲ್ಫಿ ಬಾಂಜ್ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ಉಡುಪಿ ತಾಲೂಕು ಕಾವಡಿ ಗ್ರಾಮದ ಬ್ರಿಡ್ಜ್ ಸಮೀಪ ತಲುಪುವಾಗ ರಕ್ತವಾಂತಿ ಮಾಡಿಕೊಂಡಾಗ ಆತನ ದೇಹ ಸಂಪೂರ್ಣ ನಿಶ್ಚಲವಾಗಿದ್ದು  18:40 ಗಂಟೆಗೆ  ಮಹೇಶ ಆಸ್ಪತ್ರೆಯ ವೈದ್ಯರ ಮುಂದೆ ಹಾಜರು ಪಡಿಸಿದಾಗ ಪರೀಕ್ಷಿಸಿದ ವೈದ್ಯರು ಡೊಲ್ಫಿ ಬಾಂಜ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 31/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಹೆಂಗಸು ಕಾಣೆ ಪ್ರಕರಣ 
  • ಮಣಿಪಾಲ: ದಿನಾಂಕ 01/08/15 ರಂದು 10:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳೀ ಗ್ರಾಮದ ಮೂಡುಸಗ್ರಿ ಎಂಬಲ್ಲಿಂದ ಪಿರ್ಯಾದಿದಾರರಾದ ಪ್ರದೀಪ್‌ ಮಂಡಲ್‌  ತಂದೆ: ರೂಡಲ್‌ ಮಂಡಲ್‌, ವಾಸ: ದಿಲ್‌ದಾರ್‌ ಪುರ ಗ್ರಾಮ, ಭಾಗಲ್‌ಪುರ ಜಿಲ್ಲೆ, ಬಿಹಾರ ರಾಜ್ಯ ಇವರ ಹೆಂಡತಿ ಶ್ರೀಮತಿ ಸಂಗೀತಾದೇವಿ ಎಂಬವರು ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 154/2015 ಕಲಂ: ಹೆಂಗಸು  ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  



No comments: