Tuesday, August 04, 2015

Daily Crime Reports As On 04/08/2015 At 19:30 Hrs

ಅಪಘಾತ ಪ್ರಕರಣ
  • ಬ್ರಹ್ಮಾವರ: ದಿನಾಂಕ 04/08/2015 ರಂದು 14:25 ಗಂಟೆಗೆ  ಉಡುಪಿ  ತಾಲೂಕು ವಾರಂಬಳ್ಳಿ ಗ್ರಾಮದ, ಉಪ್ಪಿನಕೋಟೆ, ಮಾಲ್ಗುಡಿ ಬಾರ್‌ನ ಮುಂಭಾಗ  ರಾಷ್ಡ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿದಾರರಾದ ಬಿ.ಸಂತೋಷ ಕುಮಾರ್ ಶೆಟ್ಟಿ (48), ತಂದೆ: ಭುಜಂಗ ಶೆಟ್ಟಿ, ವಾಸ: ಸೌರಭ ನಿಲಯ, ಆರ್ಡಿ, ಅಡ್ಜಿಲ್ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರ ಭಾವನಾದ  ಜಿ.ರಮಾನಂದಾ ಹೆಗ್ಡೆ ರವರು ಅವರ ಕೆಎ 20 ಹೆಚ್‌ 5019 ನೇ ಸಿಡಿ 100 ಮೋಟಾರ್ ಸೈಕಲ್‌ನಲ್ಲಿ ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ ಸವಾರಿ ಮಾಡಿ ಕೊಂಡು ಬರುತ್ತಿರುವಾಗ, ಆರೋಪಿ ಚಾಲಕ ಕಪ್ಪು ಬಣ್ಣದ ಸ್ಕೋರ್ಪಿಯೊ ಕಾರನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜಿ. ರಮಾನಂದಾ ಹೆಗ್ಡೆ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಮೋಟಾರ್ ಸೈಕಲ್ ರಸ್ತೆಯ ಎಡ ಬದಿಯ ಚರಂಡಿಯ ಗುಂಡಿಗೆ ಮಗುಚಿ ಬಿದ್ದು, ಜಿ.ರಮಾನಂದಾ ಹೆಗ್ಡೆ ರವರ ತಲೆಯ ಎದುರು ಭಾಗ ತೀವ್ರ ರಕ್ತಗಾಯವಾಗಿದ್ದು, ಆರೋಪಿ ಚಾಲಕ ಸ್ಕೋರ್ಪಿಯೊ ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 151/2015 ಕಲಂ: 279, 338 ಐಪಿಸಿ & 134 (ಎ&ಬಿ)  ಜೊತೆಗೆ 187  ಐ.ಎಮ್.ವಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.
ಮನುಷ್ಯ ಕಾಣೆ ಪ್ರಕರಣ                                             


  • ಮಣಿಪಾಲ : ಪಿರ್ಯಾದಿದಾರರಾದ ಸುನಂದ ಶೆಟ್ಟಿ ಗಂಡ: ಶಂಕರ ಶೆಟ್ಟಿ, ವಾಸ:ಬುಕ್ಕಿ ಗುಡ್ಡೆ,ಪೆರ್ಡೂರು ಗ್ರಾಮ ಇವರ ಮಗ ಶಶಿಧರ ಶೆಟ್ಟಿ (30) ಎಂಬುವವರು ದಿನಾಂಕ 01/08/2015 ರಂದು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಕೆಲಸದ ಬಗ್ಗೆ ಮನೆಯಿಂದ ಹೋಗಿದ್ದು, ದಿನಾಂಕ 02/08/15 ರಂದು ಬೆಳಿಗ್ಗೆ 5:30 ಗಂಟೆಗೆ ಮಣಿಪಾಲ ಸೆಕ್ಯೂರಿಟಿ ಗಾರ್ಡ್‌ ರೂಮ್‌ನಿಂದ ಹೋದವರು ವಾಪಸ್ಸು ಕೆಲಸಕ್ಕೂ ಬಾರದೇ, ಮನೆಗೂ ವಾಪಸ್ಸು ಹೋಗದೆ ಕಾಣೆಯಾಗಿದ್ದಾಗಿದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 153/2015 ಕಲಂ  ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ. 
ಕಳವು ಪ್ರಕರಣ
  • ಹಿರಿಯಡ್ಕ: ದಿನಾಂಕ 03/08/2015 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಸೀತಾರಾಮ ಶೇಷಗಿರಿ ಪ್ರಭು (67) ತಂದೆ: ಶ್ರೀನಿವಾಸ ಪ್ರಭು, ವಾಸ: ಚಂದನವನ ಹೊಸೂರು ಗ್ರಾಮ ಕರ್ಜೆ ಅಂಚೆ ಉಡುಪಿ ತಾಲೂಕು ಇವರು  ತಮ್ಮ ಆರೋಗ್ಯ ತಪಾಸಣೆಗೆ ಪೇತ್ರಿ- ಕುಕ್ಕೆಹಳ್ಳಿ- ಆತ್ರಾಡಿ ಮಾರ್ಗವಾಗಿ ಮಣಿಪಾಲಕ್ಕೆ ಹೋಗಲು ತನ್ನ ಕೆಎ 20 ಸಿ 6013 ನೇ ಮಹೀಂದ್ರಾ ಜಿಯೊ ಗೂಡ್ಸ್‌ ವಾಹನದಲ್ಲಿ ಹೋಗುವಾಗ ಆತ್ರಾಡಿ ಗ್ರಾಮದ ಪರೀಕ ಬೊಬ್ಬರ್ಯ ದೈವಸ್ಥಾನದ ಬಳಿ ತಲುಪುವಾಗ ಬೆಳಿಗ್ಗೆ 09:00 ಗಂಟೆಗೆ ವಾಹನ ಕೆಟ್ಟು ಹೋಗಿದ್ದು ಬಳಿಕ ಪಿಟ್ಟರ್ ಓರ್ವರಿಗೆ ವಾಹನದ ದುರಸ್ಥಿಗೆ ಬರುವಂತೆ ತಿಳಿಸಿದ್ದು ಫಿಟ್ಟರ್ ಸಂಜೆ ವೇಳೆ ಬರುವುದಾಗಿ ಹೇಳಿದ ಮೇರೆಗೆ ಸೀತಾರಾಮ ಶೇಷಗಿರಿ ಪ್ರಭು ರವರು ವಾಹನವನ್ನು ಅಲ್ಲಿಯೇ ಬಿಟ್ಟು ವಾಹನದ ಚಾವಿಯನ್ನು ಕೂಡಾ ವಾಹನದ ಕ್ಯಾಬಿನ್‌ ನಲ್ಲಿ ಇಟ್ಟು ತನ್ನ ಕೆಲಸಕ್ಕೆ ಹೋಗಿರುತ್ತಾರೆ. ಸಂಜೆ 04:30 ಗಂಟೆಗೆ ಫಿಟ್ಟರ್ ವಾಹನದ ಬಳಿಗೆ ಬಂದಾಗ ಸ್ಥಳದಲ್ಲಿ ವಾಹನ ಕಂಡು ಬಾರದೆ  ಸೀತಾರಾಮ ಶೇಷಗಿರಿ ಪ್ರಭು ರವರಿಗೆ ತಿಳಿಸಿದ ಮೇರೆಗೆ ಅವರು ಕೂಡಾ ಸ್ಥಳಕ್ಕೆ ಬಂದು ಪರಿಶೀಲಿಸಿದಲ್ಲಿ ವಾಹನ ಇಟ್ಟ ಸ್ಥಳದಲ್ಲಿಯಾಗಲಿ ಆಸುಪಾಸಿನಲ್ಲಿಯಾಗಲಿ ಎಲ್ಲಿಯೂ ಪತ್ತೆಯಾಗದೆ ಅದನ್ನು ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳುವಾದ ವಾಹನದ ಮೌಲ್ಯ ರೂಪಾಯಿ 90,000/- ಆಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 80/2015 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ 
  • ಮಲ್ಪೆ: ಪಿರ್ಯಾದಿದಾರರಾದ  ಸುರೇಂದ್ರ ನಾಯ್ಕ್‌‌ (50) ತಂದೆ: ರಾಮ ನಾಯ್ಕ್‌‌ ವಾಸ: ಹೊನ್ನಾರಿ ಕಾಲನಿ, ಗಿಳಿಯಾರು ಗ್ರಾಮ, ಕೋಟಾ ಪೋಸ್ಟ್‌‌‌, ಉಡುಪಿ ತಾಲೂಕು ಇವರು ದಿನಾಂಕ: 31/07/2015 ರಂದು ಮಲ್ಪೆ ಪಡುತೋನ್ಸೆ ಗ್ರಾಮದ ಕೆಮ್ಮಣ್ಣುನಲ್ಲಿ ಹೊಸದಾಗಿ ಕಟ್ಟುತ್ತಿರುವ ಮನೆಯ ಕೆಲಸ ಮಾಡುತ್ತಿದ್ದಾಗ ಸಮಯ 12:30 ಗಂಟೆಗೆ ಗೋಡೆಯಿಂದ ಕೆಳಗೆ ಬಿದ್ದ ಪರಿಣಾಮ ಅವರ ಬೆನ್ನಿನ ಹಿಂಭಾಗದ ಪಕ್ಕೆಲುಬು ಮತ್ತು ಬೆನ್ನಿನ ಕೋಲು ಜಖಂಗೊಂಡಿದ್ದು, ಬಲ ಕೈ ಮತ್ತು ಕಣ್ಣಿನ ಬಲಭಾಗದಲ್ಲಿ ಪೆಟ್ಟಾಗಿದ್ದು, ಅಲ್ಲಿನ ಕೆಲದಸವರು ಚಿಕಿತ್ಸೆ ಬಗ್ಗೆ ಕಲ್ಯಾಣಪುರ ಗೊರಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದುನಂತರ ಸುರೇಂದ್ರ ನಾಯ್ಕ್‌‌ ರವರ ಮನೆಯವರು ಅವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್‌ಲಾಕ್‌ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಘಟನೆಗೆ ಸುರೇಂದ್ರ ನಾಯ್ಕ್‌‌ ರವರು ಕೆಲಸ ಮಾಡುತ್ತಿದ್ದ ಕಂಟ್ರಾಕ್ಟರ್‌ ಸತೀಶ್‌ ಆಚಾರಿ ಮತ್ತು ಇಂಜಿನಿಯರ್‌ ಆರ್‌.ಕೆ ಅರ್ಚಿ ರವರು ಬಿಲ್ಡಿಂಗ್‌ ಕಟ್ಟುವಾಗ ಸುರಕ್ಷತಾ ಕ್ರಮ ತೆಗೆದುಕೊಳ್ಳದೇ ಇದ್ದು, ನಿರ್ಲಕ್ಷತನ ವಹಿಸಿರುವುದು ಕಾರಣವಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 119/2015 ಕಲಂ: 338 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 No comments: