Monday, August 03, 2015

Daily Crime Reports As On 03/08/2015 At 17:00 Hrs

ಅಪಘಾತ ಪ್ರಕರಣ
  • ಉಡುಪಿ: ಪಿರ್ಯಾದಿ ಸತೀಶ್ (28) ತಂದೆ: ಸಂಜೀವ ಕಡೆಕಾರ್,  ವಾಸ: ಸುವರ್ಣ ನಿಲಯ, ನೀರಿನ ಟ್ಯಾಂಕ್ ಬಳಿ ಕಡೆಕಾರು ಉಡುಪಿರವರು ದಿನಾಂಕ: 03/08/2015 ರಂದು ಕೆಲಸದ ನಿಮಿತ್ತ ತನ್ನ ಮೋಟಾರು ಸೈಕಲ್ ನಂಬ್ರ ಕೆಎ 20 ವೈ 0741  ನೇದನ್ನು ಸವಾರಿ ಮಾಡಿಕೊಂಡು ಸಮಯ ಸುಮಾರು ಬೆಳಿಗ್ಗೆ 10.50 ಗಂಟೆಗೆ ಉಡುಪಿಯ ನ್ಯಾಯಾಲಯದ ಎದುರು ಹೋಗುವಾಗ ಪಿರ್ಯಾದಿದಾರರ ಹಿಂಬದಿಯಿಂದ ಓರ್ವ ಬಸ್ಸು ಚಾಲಕನು ಕೆಎ 20 ಡಿ 4549 ಬಸ್ಸನ್ನು ಅತೀವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆ ಬಿದ್ದು ಬಲಕಾಲಿಗೆ ರಕ್ತಗಾಯ ಹಾಗೂ ಬಲ ಸೊಂಟಕ್ಕೆ ಜಖಂ ಉಂಟಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 83/2015 ಕಲಂ. 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೊಲ್ಲೂರು: ದಿನಾಂಕ 02/08/2015 ರಂದು ಬೆಳಿಗ್ಗೆ 09:45 ಗಂಟೆಗೆ ಪಿರ್ಯಾದಿ ಪಿ. ದಿಲೀಪ್ ಕುಮಾರ್ (54) ತಂದೆ; ಪಿ. ನಾಗೇಶ ರಾವ್  ವಾಸ: ಅಂಬಿಕಾ ನಿಲಯ ವಾದಿರಾಜ ಕ್ರಾಸ್ ರಸ್ತೆ ಶಿವಳ್ಳಿ  ಗ್ರಾಮ ಉಡುಪಿ ತಾಲೂಕುರವರು ತನ್ನ ಪತ್ನಿ ಜ್ಯೋತಿ ಡಿ ರಾವ್,  ಮಗ ಗೌರೀಶ್ ರಾವ್,  ಮತ್ತು ಮಗಳು ಭಾಗ್ಯಶ್ರೀ ಡಿ ರವರುಗಳೊಂದಿಗೆ ಕೊಲ್ಲೂರು ದೇವಸ್ಥಾನದಲ್ಲಿ ಧಾರ್ಮಿಕ ಕಾಯ್ರಕ್ರಮಕ್ಕೆ ಹೋಗಲು ಬಾಡಿಗೆ ವಾಹನ KA 20 D 2464 ನೇ ಮಾರುತಿ ಒಮ್ನಿ ಕಾರಿನಲ್ಲಿ ಚಾಲಕ ಗಣೇಶ ದೇವಾಡಿಗರೊಂದಿಗೆ ತಮ್ಮ ಮನೆಯಿಂದ ಹೊರಟು ಕುಂದಾಪುರ ವಂಡ್ಸೆ ಮಾರ್ಗವಾಗಿ ಕೊಲ್ಲೂರು ಕಡೆಗೆ ಹೋಗುತ್ತಾ ಬೆಳಿಗ್ಗೆ ಸುಮಾರು 11.15 ಗಂಟೆಗೆ ಇಡೂರು ಕುಂಜ್ಞಾಡಿ ಗ್ರಾಮದ ಹೆದ್ದಾರಿಮನೆ  ಎಂಬಲ್ಲಿ ತಲುಪುವಾಗ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಮ್ನಿಯನ್ನು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯ ತೀರಾ ಎಡಭಾಗಕ್ಕೆ ರಸ್ತೆಯಿಂದ ಕೆಳಗೆ ಇಳಿದು ಎಡಭಾಗದ ಒಂದು ಮರಕ್ಕೆ  ಢಿಕ್ಕಿ ಹೊಡೆದ ಪರಿಣಾಮ ಒಮ್ನಿ ಕಾರಿನಲ್ಲಿದ್ದ ಪಿ. ದಿಲೀಪ್ ಕುಮಾರ್ ರವರಿಗೆ ಹಣೆಗೆ, ಮೂಗಿಗೆ  ತರಚಿದ ಗಾಯವಾಗಿ ಎಡಕೈ ಮೂಳೆ ಮುರಿತದ ಗಾಯವಾಗಿರುತ್ತದೆ. ಜ್ಯೋತಿ ಡಿ ರಾವ್  ರವರಿಗೆ ಬಲಕಾಲು ಮೂಳೆ ಮುರಿತ ಗಾಯವಾಗಿದ್ದು ಪಿರ್ಯಾದಿದಾರರ ಮಗನಿಗೆ ಕುತ್ತಿಗೆ ಬಳಿ,  ಎಡ ಕಿವಿಯ ಬಳಿ  ಮತ್ತು ಬಲಕೈಗೆ ರಕ್ತಗಾಯ, ಪಿರ್ಯಾದಿದಾರರ ಮಗಳಿಗೆ ಬಲಬದಿ ಕೆನ್ನೆಗೆ ತರಚಿದ ಗಾಯವಾಗಿದ್ದು ಚಾಲಕನಾದ ಗಣೇಶ ದೇವಾಡಿಗರವರಿಗೆ ಎಡಬದಿ ಎದೆಗೆ, ಎಡಬದಿ ತಲೆಗೆ ಹಾಗೂ ಕುತ್ತಿಗೆಗೆ ರಕ್ತಗಾಯವಾಗಿರುತ್ತದೆ, ಈ ಬಗ್ಗೆ ಕೊಲ್ಲೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 94/2015 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ:ಪಿರ್ಯಾದಿ ರಾಜೆಶ್‌ ನಾಯಕ್‌ (42) ತಂದೆ:ಭಾಸ್ಕರ ನಾಯಕ್‌,ವಾಸ: ಹನುಮಾನ್‌ ರೈಸ್‌ ಮಿಲ್‌ ಬಳಿ ತೆಕ್ಕಟ್ಟೆ ಗ್ರಾಮ, ಕುಂದಾಪುರ ತಾಲೂಕುರವರ ಅಕ್ಕನ ಮಗ ದೀಪಕ್‌ ಕಾಮತ್‌ (21) ಎಂಬವರು ದಿನಾಂಕ 02/08/2015 ರಂದು ಆತನ  ಮೋಟಾರು ಸೈಕಲ್‌ ಕೆಎ:20 ಇಜಿ: 2286 ನೇದರಲ್ಲಿ ಸಾಯಿಬ್ರಕಟ್ಟೆ ಕಡೆಯಿಂದ ಶೀರೂರು ಮೂರು ಕೈ ಕಡೆಗೆ ಹೋಗುತ್ತಿರುವಾಗ ಶ್ರೀ ವಿಘ್ನೇಶ್ವರ ಕ್ಯಾಶ್ಯೂ ಫ್ಯಾಕ್ಟರಿಗೆ ಹೋಗುವ ಕ್ರಾಸ್‌ ಬಳಿ ತಲುಪುವಾಗ ಸಂಜೆ ಸುಮಾರು 5:30 ಗಂಟೆಗೆ ಎದುರಿನಿಂದ ಕೆಎ:20 ಇಎ:0680 ನೇ ನಂಬ್ರದ ಮೋಟಾರ್‌  ಸೈಕಲ್‌ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೀಪಕ್‌ ಕಾಮತ್‌ರವರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದಿದ್ದು, ದೀಪಕ್‌ ಕಾಮತ್‌ರವರ ಮುಖಕ್ಕೆ ಹಾಗೂ ತಲೆಗೆ ತೀವ್ರ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕೆ.ಎಮ್‌.ಸಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 03/08/2015 ರಂದು 11:45 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟಾ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 177/2015 ಕಲಂ:279,304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಕ್ರಮ ಮದ್ಯ ಮಾರಾಟ ಪ್ರಕರಣ
  • ಗಂಗೊಳ್ಳಿ : ದಿನಾಂಕ 03/08/2015 ರಂದು ನಾಡ ಗ್ರಾಮದ ಕೋಣ್ಕಿ ಎಂಬಲ್ಲಿ ಅಕ್ರಮ ಶರಾಬು ಮಾರಾಟ ನಡೆಯುತ್ತಿದ್ದ  ಬಗ್ಗೆ  ಸುಬ್ಬಣ್ಣ ಬಿ, ಪಿಎಸ್‌ಐ, ಗಂಗೊಳ್ಳಿ ಪೊಲೀಸ್‌ ಠಾಣೆ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ  12.00 ಗಂಟೆಗೆ ನಾಡ ಗ್ರಾಮದ ಕೋಣ್ಕಿ ಎಂಬಲ್ಲಿ  ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ  ಸುರೇಶ ಶೆಟ್ಟಿ ಪ್ರಾಯ  43 ವರ್ಷ ತಂದೆ ದಿ. ಕೃಷ್ಣಪ್ಪ  ಶೆಟ್ಟಿ ವಾಸ ಕೋಣ್ಕಿ ಅಂಗಡಿಬೆಟ್ಟು, ನಾಡ ಗ್ರಾಮ, ಕುಂದಾಪುರ ತಾಲೂಕು. ಎಂಬವರನ್ನು ದಸ್ತಗಿರಿ ಮಾಡಿ 2,040/- ರೂ ಮೌಲ್ಯದ 180 ML 34 ORIGINAL CHOICE  WHISKY PACKETS  ಹಾಗೂ ನಗದು ಹಣ 850/= ರೂ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 104/2015 ಕಲಂ 32, 34 KE Act ನಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ಪಿರ್ಯಾದಿ ಪ್ರಭಾಕರ್ ನಾಯಕ್ (37),  ಕಾವೇರಿ, ಬೆನಗಲ್, ಪಡುಬೆಟ್ಟು, ಪೆಜಮಂಗೂರು ಗ್ರಾಮ, ಕೊಕ್ಕರ್ಣೆ ಅಂಚೆ, ಉಡುಪಿ ತಾಲೂಕುರವರ ತಂದೆಯಾದ ಮಹಾಬಲ ನಾಯಕ್ (85) ಎಂಬವರು  ಮಾನಸಿಕ ಖಾಯಿಲೆಯಿಂದಲೋ ಅಥವಾ ಬೇರೆ ಯಾವುದೋ ವೈಯಕ್ತಿಕ ಕಾರಣದಿಂದಲೋ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 02/08/2015  ರ ರಾತ್ರಿ   11:00  ಗಂಟೆಯಿಂದ ದಿನಾಂಕ 03/08/2015  ರ ಬೆಳಿಗ್ಗೆ 05:00  ಗಂಟೆಯ ಮದ್ಯದ ಅವಧಿಯಲ್ಲಿ  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ, ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಯು.ಡಿ.ಆರ್  ನಂಬ್ರ 43/2015 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: