Monday, August 03, 2015

Daily Crime Reports As On 03/08/2015 At 07:00 Hrsಹಲ್ಲೆ ಪ್ರಕರಣ 
  • ಗಂಗೊಳ್ಳಿ: ದಿನಾಂಕ 02/08/2015 ರಂದು ಪಿರ್ಯಾದಿದಾರರಾದ ಅರುಣ್‌ ಕುಮಾರ್‌ ದೇವಾಡಿಗ (31) ತಂದೆ: ಬಾಬು ದೇವಾಡಿಗ ವಾಸ: ಬಂಟ್ವಾಡಿ, ಕೆಳಾಕಳಿ, ಹಕ್ಲಾಡಿ ಗ್ರಾಮ ಇವರು ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬಾಬಣ್ಣ ಎಂಬುವವರ ಹೊಟೇಲ್ ಮುಂಭಾಗ ರಸ್ತೆಯಲ್ಲಿ ಆಪಾದಿತರಾದ 1) ನಾಗರಾಜ ಶೆಟ್ಟಿ ನಾರ್ಕಳಿ, 2) ಪ್ರಶಾಂತ ಬೂರ್ದ ಹಕ್ಲು, 3) ದಿನೇಶ ಮುಳ್ಳಿಕಟ್ಟೆ  ಹಾಗೂ ಇತರ 3 ಜನರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆಸುವ ಉದ್ದೇಶದಿಂದ ಅರುಣ್‌ ಕುಮಾರ್‌ ರವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 103/2015 ಕಲಂ: 143, 147, 341, 323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ 
  • ಕೊಲ್ಲೂರು: ಪಿರ್ಯಾದಿದಾರರಾದ ಶಿವರಾಮ ಶೆಟ್ಟಿ ವಿ.ಕೆ (63) ತಂದೆ: ತಿಮ್ಮಪ್ಪ ಶೆಟ್ಟಿ ವಾಸ; ಕಟ್ಟೆಮನೆ ವಂಡ್ಸೆ ಗ್ರಾಮ, ಕುಂದಾಪುರ ತಾಲೂಕು ಇವರು ವಂಡ್ಸೆ ಗ್ರಾಮದ ಶ್ರೀ ತಿರುಮಲ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಮುಕ್ತೇಶ್ವರರಾಗಿದ್ದು ದಿನಾಂಕ 01/08/2015 ರಂದು ದೇವಳದ ಸರತಿ ಅರ್ಚಕರಾದ ಶ್ರೀ ರಾಜಶೇಖರ ಉಪಾದ್ಯಾಯ ರವರು  ಎಂದಿನಂತೆ ಪೂಜೆ ಮಾಡಿ ರಾತ್ರಿ 08:00 ಗಂಟೆಗೆ ದೇವಳದ ಬಾಗಿಲ ಬೀಗವನ್ನು ಹಾಕಿ ಹೋಗಿದ್ದು ಮರುದಿನ ದಿನಾಂಕ 02/08/2015 ರಂದು ಬೆಳಿಗ್ಗೆ 06:15 ಗಂಟೆಗೆ ಬಂದು ನೋಡಲಾಗಿ ಯಾರೋ ಕಳ್ಳರು ದೇವಳದ ಬಾಗಿಲಿನ ಬೀಗದ ಕೊಂಡಿಯನ್ನು ಮುರಿದು ಒಳ ಪ್ರವೇಶಿಸಿ ಗರ್ಭಗುಡಿಯ ಎರಡೂ ಬಾಗಿಲಿನ ಬೀಗ ಮುರಿದು ಒಳಹೊಕ್ಕಿ ದೇವರ ವಿಗ್ರಹದ ಬೆಳ್ಳಿಯ ಕವಚ, ಬೆಳ್ಳಿಯ ಪತಾಕೆ ಮತ್ತು ಬೆಳ್ಳಿಯ ಚಿಕ್ಕ ಕೊಡೆ ಮತ್ತು ಗರ್ಭಗುಡಿಯಲ್ಲಿದ್ದ  ಸ್ಟೀಲಿನ ಹುಂಡಿ ಮತ್ತು ದೇವಳದ ಹೊರಗಿನ ಕಾಣಿಕೆ ಹುಂಡಿ ಒಡೆದು ನೋಟುಗಳನ್ನು ಕಳವು ಮಾಡಿ ಕಛೇರಿಯ ಬಾಗಿಲಿನ ಬೀಗ ಮುರಿದಿರುತ್ತಾರೆ. ಕಳವಾದ ದೇವಳದ ಸೊತ್ತುಗಳ ಒಟ್ಟು ಅಂದಾಜು ಬೆಲೆ 80,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 93/2015 ಕಲಂ: 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.No comments: