Sunday, August 02, 2015

Daily Crime Reports As On 02/08/2015 At 19:30 Hrs

ಅಪಘಾತ ಪ್ರಕರಣ
  • ಉಡುಪಿ:ಪಿರ್ಯಾದಿ ಮಹೇಶ್ (32) ತಂದೆ: ಸಂಜೀವ ತಿಂಗಳಾಯ ವಾಸ: ಉಗ್ಗೇಲ್ಬೆಟ್ಟು ಕೊಳಲಗಿರಿ ಅಂಚೆ, ಉಪ್ಪುರು ಗ್ರಾಮ ಉಡುಪಿರವರು ದಿನಾಂಕ: 02/08/2015 ರಂದು ಮಧ್ಯಾಹ್ನ 1:30 ಗಂಟೆ ಸಮಯಕ್ಕೆ ತನ್ನ ಮೋಟಾರ್ ಸೈಕಲಿನಲ್ಲಿ ಕಲ್ಯಾಣಪುರ ಸಂತೆಕಟ್ಟೆ ಮಾರ್ಕೆಟ್‌ನಿಂದ ತನ್ನ ಮನೆಯಾದ ಉಪ್ಪೂರಿಗೆ  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಹೊಗುತ್ತಿರುವಾಗ ಸಂತೆಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಕೆಎ 30 8465 ನೇ ಲಾರಿ ಚಾಲಕನು ಲಾರಿಯನ್ನು ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಒಮ್ಮೇಲೆ ಬಲಬದಿಗೆ ಬಂದು ಕೆಎ 20 ಯು 8100 ನೇ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದನು. ಪರಿಣಾಮ ಬೈಕ್ ಸವಾರರಾದ  ಆಶೋಕ ಸಾಲಿಯಾನ್ ಹಾಗೂ ರಮೇಶ್ ಪೂಜಾರಿ ರವರು ರಸ್ತೆಗೆ ಬಿದ್ದರು, ಆಶೋಕ್ ಸಾಲಿಯಾನ್ ರವರು  ತೀವ್ರ ತರಹದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ,  ಹಾಗೂ ರಮೇಶ್ ಪೂಜಾರಿಯವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಅಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 82/2015 ಕಲಂ. 279,337,304(a)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: