Monday, August 03, 2015

Daily Crime Reports As On 03/08/2015 At 19:30 Hrs



ಅಪಘಾತ ಪ್ರಕರಣಗಳು

  • ಕಾರ್ಕಳ: ದಿನಾಂಕ 03/08/2015 ರಂದು 12:00 ಗಂಟೆಗೆ ಪಿರ್ಯಾದಿ ದೇವೇಂದ್ರಪ್ಪ ಹೆಚ್.(30) ತಂದೆ: ಹನುಮಂತಪ್ಪ ಎ.ಕ.ಎ ವಾಸ: ಉದ್ರಿ ಅಂಚೆ, ಬಿದಗೇರಿ ಗ್ರಾಮ, ಸೊರಬ ತಾಲೂಕು. ಶಿವಮೊಗ್ಗ ಜಿಲ್ಲೆರವರು ಮೂಡಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ರಾಷ್ಟ್ರೀಯ ಹೆದ್ದಾರಿ 169 ನೇಯದರ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಹಳೆ ವಿಜಯಾ ಬ್ಯಾಂಕ್ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್ಸು ನಂಬ್ರ KA 19 F 3281 ನೇಯದನ್ನು ಚಲಾಯಿಸಿಕೊಂಡು ಬರುವಾಗ, ಕಾರ್ಕಳ ಕಡೆಯಿಂದ ಮೂಡಬಿದ್ರಿ ಕಡೆಗೆ ಟಿಪ್ಪರ್ ನಂಬ್ರ KA 20 D 3240 ನೇಯದರ ಚಾಲಕನು ಅತಿವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಬಸ್ಸಿಗೆ ಢಿಕ್ಕಿ ಹೊಡೆದ, ಪರಿಣಾಮ ಬಸ್ಸು ರಸ್ತೆ ಬದಿಯಲ್ಲಿದ್ದ ಕೆ.ಇ.ಬಿ. ಇಲಾಖೆಯ ವಿದ್ಯುತ್ ಕಂಬಕ್ಕೆ ತಾಗಿ ವಿದ್ಯುತ್ ಕಂಬ ತುಂಡಾಗಿದ್ದು, ಎರಡೂ ವಾಹನಗಳು ಜಖಂಗೊಂಡಿರುತ್ತವೆ, ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 109/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಕಾರ್ಕಳ: ದಿನಾಂಕ: 02/08/2015 ರಂದು ಸಮಯ ಸುಮಾರು 13:00 ಗಂಟೆಗೆ ಪಿರ್ಯಾದಿ ಸುಕೇಶ್ (22), ತಂದೆ: ಮಹಾಬಲ ಮೂಲ್ಯ, ವಾಸ: ನಂದಾದೀಪ ಮನೆ, ವಾಸ: ಸಾನದ ಗುಡ್ಡೆ ನಿಟ್ಟೆ ಕಾಕ್ಳ ತಾಲೂಕುರವರು ತನ್ನ ಸ್ನೇಹಿತ ನವೀನ್ ಎಂಬವರ ಮೋಟಾರ್ ಸೈಕಲ್ ನಂಬ್ರ KA20 EF 4060  ನೇ Yamaha FZS ನೇಯದರಲ್ಲಿ  ಸಹಸವಾರನಾಗಿ ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆಗೆ ಬರುತ್ತಾ  ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಇನ್ನಾ ಕ್ರಾಸ್ ಬಳಿ ತಲುಪುವಾಗ ಬೈಕ್ ನಂಬ್ರ  KA 21 J7130  ನೇ ಮೋಟಾರ್ ಸೈಕಲ್ ನ್ನು  ಅತೀವೇಗ ದಿಂದ ಸವಾರಿ ಮಾಡಿಕೊಂಡು ಅಜಾಗರೂಕತೆಯಿಂದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ತುಟಿಗೆ ಹಾಗೂ ನವೀನರಿಗೆ ತಲೆಗೆ ಹಾಗೂ ಬಲ ಕಣ್ಣಿನ ಬಳಿ ರಕ್ತಗಾಯವಾಗಿರುತ್ತದೆ ಹಾಗೂ ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ಸವಾರ ಮತ್ತು ಸಹ ಸವಾರ ಇಬ್ಬರಿಗೂ ರಕ್ತಗಾಯವಾಗಿರುತ್ತದೆ, ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 130/2015 ಕಲಂ  279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

  • ಕುಂದಾಪುರ:  ದಿನಾಂಕ 03/08/2015 ರಂದು ಸಮಯ ಸುಮಾರು ಮಧ್ಯಾಹ್ನ  3:30  ಗಂಟೆಗೆ  ಕುಂದಾಪುರ ತಾಲೂಕು ಕಟ್‌  ಬೇಲ್ತೂರು ಗ್ರಾಮದ  ರೈಲ್ವೆ ಸೇತುವೆಯ ರಸ್ತೆಯಲ್ಲಿ ಆಪಾದಿತ ರವಿ ಹೆಚ್.ಎಂ  ಎಂಬವರು KA 19 C 2931ನೇ 407 ಟೆಂಪೋವನ್ನು ವಂಡ್ಸೆ  ಕಡೆಯಿಂದ ಹೆಮ್ಮಾಡಿ  ಕಡೆಗೆ ಅತೀವೇಗ  ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿ ಕೊಂಡು ರಸ್ತೆಯ ಬಲ ಬದಿಗೆ ಹೋಗಿ ಹೆಮ್ಮಾಡಿ ಕಡೆಯಿಂದ ವಂಡ್ಸೆ ಕಡೆಗೆ ಸಂಪತ್ ಪೂಜಾರಿಯವರು ಸುರೇಂದ್ರ ಗಾಣಿಗ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ನೊಂದಣಿಯಾಗದ ಹೊಸ  ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಸುರೇಂದ್ರ  ಗಾಣಿಗ ರವರ ತಲೆಗೆ  ಹಾಗೂ ಮೈ ಕೈಗೆ  ಗಂಭೀರ ಗಾಯವಾಗಿ  ಸ್ಥಳದಲ್ಲಿಯೇ ಮೃತಪಟ್ಟಿದ್ದು,  ಸಂಪತ್ ಪೂಜಾರಿತಲೆಗೆ  ಹಾಗೂ ಮೈ ಕೈಗೆ  ಗಂಭೀರ ಗಾಯವಾಗಿ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ  ಕೆ.ಎಂ.ಸಿ ಆಸ್ಪತ್ರೆಗೆ  ಹೋಗಿರುತ್ತಾರೆ.ಎಂಬುದಾಗಿ ಸುಧಾಕರ  ಎನ್ ದೇವಾಡಿಗ (38) ತಂದೆ : ದಿ. ನಾರಾಯಣ ದೇವಾಡಿಗ ವಾಸ: ಕಟ್ಟು ಬಾಗಿನ ಮನೆ, ಹೆಮ್ಮಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 93/2015  ಕಲಂ 279,338, 304 (ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

No comments: