Tuesday, August 04, 2015

Daily Crime Reports As On 04/08/2015 At 07:00 Hrs

ಸುಲಿಗೆ ಪ್ರಕರಣ
  • ಪಡುಬಿದ್ರಿ: ಪಿರ್ಯಾದಿದಾರರಾದ ಸುಧಾಕರ (58) ತಂದೆ: ದಿ. ರಾಮಚಂದ್ರ ರಾವ್, ವಾಸ: ರಾಮರಾವ್ ನಿವಾಸ, ವಿಷ್ಣುಮೂರ್ತಿ ದೇವಸ್ಥಾನದ ಬಳಿ, ಪಲಿಮಾರು, ಪಲಿಮಾರು ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಇವರು ಪಲಿಮಾರು ಮಹಾಲಿಂಗೇಶ್ವರ  ದೇವಸ್ಥಾನದ ಬಳಿ ದಿನಸಿ ಅಂಗಡಿ ಹೊಂದಿದ್ದು, ದಿನಾಂಕ 03/08/2015 ರಂದು ಸುಧಾಕರರವರ ತಾಯಿ ಸರಸ್ವತಿ (83) ಎಂಬವರು ಅಂಗಡಿಯಿಂದ ಅಲ್ಲೇ ಸಮೀಪದಲ್ಲಿರುವ ತಮ್ಮ ಮನೆಯ ಕಡೆ ಮಹಾಲಿಂಗೇಶ್ವರ ದೇವಸ್ಥಾನದ  ಬಳಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ 12.00 ಗಂಟೆಯ ವೇಳೆಗೆ ನಂಬ್ರ ತಿಳಿಯದ ಒಂದು ಮೋಟಾರು ಸೈಕಲ್ ನಲ್ಲಿ ಬಂದ ಅಪರಿಚಿತ ಆಸಾಮಿಯೊಬ್ಬನು ಸರಸ್ವತಿಯವರ ಕುತ್ತಿಗೆಯಲ್ಲಿದ್ದ 35,000/- ರೂಪಾಯಿ ಬೆಲೆ ಬಾಳುವ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿರುತ್ತಾನೆ. ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 102/2015 ಕಲಂ: 392  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
ಕಳವು ಪ್ರಕರಣ
  • ಕೋಟ: ಪಿರ್ಯಾದಿದಾರರಾದ ವಾಸುದೇವ ಪೈ (49),ತಂದೆ:ದಿ ವಿಠಲ ಪೈ,ವಾಸ:ರಾಧ ನಿವಾಸ.ರಾಷ್ಟ್ರೀಯ ಹೆದ್ದಾರಿ-66,ಗಿಳಿಯಾರು ಗ್ರಾಮ,ಕೋಟ ಅಂಚೆ,ಉಡುಪಿ ತಾಲೂಕು ಇವರು ತಮ್ಮ  ಮನೆಯ ಕಂಪೌಂಡ್ ಬಳಿ  ನಿಲ್ಲಿಸಿದ ಕೆಎ 20 ಇಡಿ 9005 ನೇ ನಂಬ್ರದ ರಾಯಲ್‌ ಎನ್‌ಪಿಲ್ಡ್ ಮೋಟಾರ್‌ ಸೈಕಲ್‌ನ್ನು ದಿನಾಂಕ 02/08/2015 ರಂದು ರಾತ್ರಿ 23:00 ಗಂಟೆಯಿಂದ ದಿನಾಂಕ 03/08/2015 ರಂದು ಬೆಳಿಗ್ಗೆ 05:00 ಗಂಟೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳ್ಳವು ಮಾಡಿಕೊಂಡು ಹೋಗಿರುವುದಾಗಿದೆ.  ಕಳವಾದ ಮೋಟಾರ್‌ ಸೈಕಲ್‌ನ ಅಂದಾಜು ಮೌಲ್ಯ  ರೂಪಾಯಿ 49,000/- ಅಗಿರುತ್ತದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 178/2015 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣಗಳು
  • ಕುಂದಾಪುರ: ದಿನಾಂಕ 03/08/2015 ರಂದು ಸಂಜೆ 04:20 ಗಂಟೆಗೆ  ಕುಂದಾಪುರ ತಾಲೂಕು ಹಂಗಳೂರು  ಗ್ರಾಮದ ಯೂನಿಟಿ ಹಾಲ್ ಎದುರುಗಡೆ  ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ  ಆಪಾದಿತ MH 02 WA 5652  ನೇ ಇನ್ನೋವಾ ಕಾರಿನ ಚಾಲಕ ತನ್ನ ಕಾರನ್ನು ಕುಂದಾಪುರ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಯಾವುದೋ ವಾಹನವನ್ನು ಎಡಬದಿಯಿಂದ ಓವರ್ ಟೇಕ್ ಮಾಡಿಕೊಂಡು ತೀರಾ ಎಡಕ್ಕೆ ಬಂದು ಪಿರ್ಯಾದಿದಾರರಾದ ಮಂಜುನಾಥ (27) ತಂದೆ: ರಾಮ ನಾಯ್ಕ, ವಾಸ: ಪೈನಾಡಿ, ಕಾಲ್ತೋಡು ಗ್ರಾಮ, ಕುಂದಾಪುರ ಇವರು ತನ್ನ  KA 47 H 8263 ನೇ ಬೈಕ್ ನ್ನು ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಪಶ್ಚಿಮ ಬದಿಯಿಂದ ಪೂರ್ವ ಬದಿಗೆ ದೂಡಿಕೊಂಡು ಹೋಗಿ ನಿಂತುಕೊಂಡಿರುವಾಗ  ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥರವರಿಗೆ ಎಡ ಕೈಗೆ ಹಾಗೂ ಎಡ ಭುಜದ ಬಳಿ ಒಳ ನೋವಾಗಿದ್ದು ಚಿಕಿತ್ಸೆ ಬಗ್ಗೆ ಸರ್ಜನ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆ ಅಪರಾಧ ಕ್ರಮಾಂಕ 94/2015  ಕಲಂ 279 , 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ದಿನಾಂಕ 03/08/2015 ರಂದು ಮದ್ಯಾಹ್ನ 3.20  ಗಂಟೆಗೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಕಾರ್ಕಳ ಬಸ್ಸು ತಂಗುದಾಣದ ಅಭಿಷೇಕ್‌ ಹೇರ್‌ ಡ್ರೆಸ್ಸಸ್‌ ಅಂಗಡಿ ಬಳಿ ವಿಶಾಲ್‌ ಮೋಟಾರ್ಸ್‌ ಗೆ ಸೇರಿದ KA 20 C 1567 ನೇ ನೊಂದಣಿ ಸಂಖ್ಯೆಯ ಬಸ್ಸನ್ನು ಅದರ ಚಾಲಕ ಸತೀಶ ಎಂಬಾತನು ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಿದ್ದು ಚಾಲಕನ ಅಜಾಗರೂಕತೆಯಿಂದ ಬಸ್ಸು ಹಿಂದಕ್ಕೆ ಚಲಿಸಿ ಬಸ್ಸಿನ ಹಿಂಬದಿಯಲ್ಲಿ ನಿಲ್ಲಿಸಿದ್ದ ಸಂದೇಶ ಎಂಬುವವರ GJ 6 BM 381 ಮತ್ತು ಗಣೇಶ ಎಂಬುವವರ KA 20 Q 6928 ನೇ ನೊಂದಣಿ ಸಂಖ್ಯೆಯ ಮೋಟಾರ್‌ ಸೈಕಲ್‌ಗಳಿಗೆ ಢಿಕ್ಕಿ ಹೊಡೆದು ಮೋಟಾರ್‌ ಸೈಕಲ್‌ಗಳನ್ನು ತಳ್ಳಿಕೊಂಡು ಬಂದು ಪಿರ್ಯಾದಿದಾರರಾದ ಆನಂದ ಸುವರ್ಣ (38) ತಂದೆ: ಲಕ್ಷ್ಮಣ ಸಾಳಿಯಾನ್‌ ವಾಸ: ಶೃತುಭಾ ಸದಾನಂದ ಕಾಮತ್‌ ರಸ್ತೆ 7 ನೇ ಅಡ್ಡ ರಸ್ತೆ ಕಾರ್ಕಳ ಇವರ ಅಂಗಡಿಗೆ ಢಿಕ್ಕಿ ಹೊಡೆದು ನಿಂತಿರುತ್ತದೆ. ಪರಿಣಾಮ ಮೋಟಾರ್‌ ಸೈಕಲ್‌ಗಳು ಎರಡೂ ಜಖಂಗೊಂಡಿದ್ದು , ಆನಂದ ಸುವರ್ಣ ರವರ  ಅಂಗಡಿಯ ಎದುರು ಹಾಕಿದ ತಗಡು ಶೀಟು, ಆರ್‌ಸಿಸಿ  ಡ್ರಾಫ್‌ ಪ್ಲೋರಿಂಗ್‌ ಟೈಲ್ಸ್ ಗಳು ಹಾನಿಗೊಂಡಿದ್ದು ಸುಮಾರು 25,000/- ರೂಪಾಯಿ  ನಷ್ಟವುಂಟಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 110/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಹಲ್ಲೆ ಪ್ರಕರಣಗಳು
  • ಬೈಂದೂರು: ದಿನಾಂಕ 03/08/2015 ರಂದು ಅಪರಾಹ್ನ 03:45 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ನರಸಿಂಹ ದೇವಾಡಿಗ (45) ತಂದೆ:ಮಾಸ್ತಿ ದೇವಾಡಿಗ ವಾಸ: ಕಟ್ಟೆಮನೆ ಬಿಜೂರು ಗ್ರಾಮ ಕುಂದಾಪುರ ತಾಲೂಕು ಇವರು ತಮ್ಮ ಮನೆಯ ಬಳಿ ಹೋದಾಗ ನರಸಿಂಹ ದೇವಾಡಿಗ ರವರ ತಮ್ಮ ಸೀತಾರಾಮ್‌, ಗುರುರಾಜ್‌, ಸಚಿನ್‌ ಹಾಗೂ ಇತರರು ಸಮಾನ ಉದ್ದೇಶದಿಂದ ನರಸಿಂಹ ದೇವಾಡಿಗ ರವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಸೀತಾರಾಮನು ಕತ್ತಿಯಿಂದ ನರಸಿಂಹ ದೇವಾಡಿಗ ರವರ ಎಡಕೈಗೆ ಕಡಿದನು, ಗುರುರಾಜನು ಒಂದು ದೊಣ್ಣೆಯಿಂದ ಎಡಕೈಗೆ, ಎಡಕಾಲಿಗೆ ಹೊಡೆದನು, ಜಗಳ ಬಿಡಿಸಲು ಬಂದ ನರಸಿಂಹ ದೇವಾಡಿಗರವರ ಅಕ್ಕ ಗಿರಿಜಾಳಿಗೆ ಸೀತಾರಾಮನು ಮುಖಕ್ಕೆ ಹೊಡೆದನು ಪರಿಣಾಮ ಗಿರಿಜಾರವರ  ಎರಡು ಹಲ್ಲು ಬಿದ್ದು ಹೋಗಿರುತ್ತದೆ. ನರಸಿಂಹ ದೇವಾಡಿಗ ರವರು ಬೊಬ್ಬೆ ಹೊಡೆಯುವುದನ್ನು ಕೇಳಿ ಅಕ್ಕಪಕ್ಕದವರು ಬರುವುದನ್ನು ನೋಡಿ ಆರೋಪಿತರು ಅಲ್ಲಿಂದ ಹೋಗುತ್ತಾ ಜೀವ ಬೆದರಿಕೆ ಹಾಕಿರುತ್ತಾರೆ. ಆರೋಪಿತರ ಕೃತ್ಯಕ್ಕೆ ಮಹಾಬಲ ದೇವಾಡಿಗನು ದುಷ್ಪ್ರೇರಣೆ ನೀಡಿರುತ್ತಾನೆ. ಈ ಕೃತ್ಯದಲ್ಲಿ ಗುರುರಾಜನ ಅಕ್ಕ ಮತ್ತು ತಂಗಿ ಕೂಡಾ ಬಾಗಿಯಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 211/2015 ಕಲಂ 341, 504, 324, 326, 506, 109, ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ದಿನಾಂಕ 03/08/2015 ರಂದು ಸಂಜೆ 04:00 ಗಂಟೆಯ ಸಮಯಕ್ಕೆ ಆರೋಪಿತರಾದ 1) ನರಸಿಂಹ, 2) ದಯಾನಂದ, 3)ರಾಘವೇಂದ್ರ, 4) ಗಿರಿಜಾ ಹಾಗೂ 5) ಶಾರದ ಎಂಬುವವರು ಬಿಜೂರು ಗ್ರಾಮದ ಕಟ್ಟೆಮನೆ ಎಂಬಲ್ಲಿರುವ ಪಿರ್ಯಾದಿದಾರರಾದ ಸವಿತಾ ದೇವಾಡಿಗ (35) ತಂದೆ:ನಾಗೇಶ  ದೇವಾಡಿಗ ವಾಸ: ಕಟ್ಟೆಮನೆ ಬಿಜೂರು ಗ್ರಾಮ ಕುಂದಾಪುರ ತಾಲೂಕು ಇವರ ಮನೆಯ ಬಳಿ ಬಂದು ಸವಿತಾ ದೇವಾಡಿಗರವರ ಅಜ್ಜಿಯೊಂದಿಗೆ ನಮಗೆ ಜಾಗದಲ್ಲಿ ಪಾಲು ಕೊಡಿ ನಾವು ನಿನ್ನನ್ನು ಸಾಕುತ್ತೇವೆ ಎಂದು ಹೇಳಿ ಹೊಡೆಯಲು ಬಂದು ದೂಡಿ ಹಾಕಿದರು. ಆಗ ಅವರು ಕೆಳಗೆ ಬಿದ್ದಾಗ ಸವಿತಾ ದೇವಾಡಿಗ ರವರು ಬಿಡಿಸಲು ಹೋಗಿದ್ದು ಆಗ ನರಸಿಂಹನು ಕೈಯಿಂದ ಸವಿತಾ ದೇವಾಡಿಗರವರ ಎಡಕೆನ್ನೆಗೆ ಹೊಡೆದು ನಂತರ ಆತನ ಕೈಯಲ್ಲಿದ್ದ ಮರದ ಸೌದೆಯಿಂದ ಬಲಕೈ ಮಣಿಗಂಟು ಬಳಿ ಹೊಡೆದಿದ್ದು ಸವಿತಾ ದೇವಾಡಿಗ ರವರ ಕೈಗೆ ಒಳ ನೋವು ಆಗಿರುತ್ತದೆ. ಸವಿತಾ ದೇವಾಡಿಗ ರವರ ಅಜ್ಜಿ ದುರ್ಗಿಯವರಿಗೆ ಎದೆ ನೋವು ಹಾಗೂ ಎಡಕೈಮೊಣಗಂಟು ಬಳಿ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 212/2015 ಕಲಂ: 323,324 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
ಇತರೇ ಪ್ರಕರಣ
  • ಕಾರ್ಕಳ: ದಿನಾಂಕ: 03/08/2015 ರಂದು ಸಮಯ ಸುಮಾರು 14:00 ಗಂಟೆಗೆ ಕಾರ್ಕಳ ತಾಲೂಕು ಈದು ಗ್ರಾಮದ, ಹೊಸ್ಮಾರು ಪೇಟೆಯಲ್ಲಿರುವ  ನಾಗಪ್ರಸಾದ್ ಕಟ್ಟಡದಲ್ಲಿರುವ ಶೀತಲ್ ಕೆ ಜೈನ್ ಎಂಬವರ ಬಾಬ್ತು  ನಿಸರ್ಗ ಸ್ಟುಡಿಯೋದಲ್ಲಿರುವ ಯುವತಿ ಬಳಿ ಅಪಾದಿತ ಸತೀಶ ಮೇರಾ ಪ್ರಾಯ: 19 ವರ್ಷ ತಂದೆ: ಬಾಬು ಮೇರಾ ವಾಸ: ಮಂಗಳಾ ಫಾರಂ ಬಳಿ ಹೊಸ್ಮಾರು ಈದು ಗ್ರಾಮ ಈತನು ಪೋಟೋ ತೆಗೆಯುವ ನೆಪ ಹೇಳಿ ಸ್ಟುಡಿಯೋಗೆ ಬಂದು ಪೋಟೋ ತೆಗೆಸಿ ಅದನ್ನು ಕ್ಲೀನ್  ಮಾಡುತ್ತಿರುವ ಸಮಯದಲ್ಲಿ ಆಕೆಯನ್ನು  ಕೊಲ್ಲುವ ಉದ್ದೇಶದಿಂದ  ಆಕೆಯ ಹಿಂದಿನಿಂದ  ಬಂದು ಕುತ್ತಿಗೆಗೆ ಆತನ ಕೈಯಲ್ಲಿ ಇದ್ದ ಆಲ್ಯುಮಿನಿಯಂ  ಸರಿಗೆಯಿಂದ  ಬಿಗಿದು ಕೊಲೆ ಮಾಡಲು  ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 131/2015 ಕಲಂ  354(ಬಿ), 307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಹಲ್ಲೆ ಪ್ರಕರಣ
  • ಕಾರ್ಕಳ: ದಿನಾಂಕ 03.08.2015 ರಂದು ಮಧ್ಯಾಹ್ನ  2:15 ಗಂಟೆಯ ಸಮಯಕ್ಕೆ  ಸತೀಶ ಮೇರಾ ರವರು ಹೊಸ್ಮಾರು ಪೇಟೆಯರಲ್ಲಿರುವ ನಿಸರ್ಗ ಪೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡುವ ಹುಡುಗಿ ಒಬ್ಬಳೆ ಇರುವುದನ್ನು ನೋಡಿ ಅವಳಿಗೆ ಅಲ್ಯೂಮಿನಿಯಂ ತಂತಿಯಿಂದ ಕೊಲ್ಲಲು ಯತ್ನಿಸಿ ಅವಳು ಕಿರುಚಿಕೊಳ್ಳಲು ಪ್ರಯತ್ನಿಸಿದಾಗ ಅವಳ ಬೊಬ್ಬೆ ಕೇಳಿ ಅಕ್ಕ ಪಕ್ಕ ಸಾರ್ವಜನಿಕರು ಸತೀಶ ಮೇರಾನನ್ನು  ಹಿಡಿದು ಸ್ಟುಡಿಯೋದ ಕೆಳಗಡೆ ತಂದು ಅಂಗಡಿ ಎದುರುಗಡೆ ಇರುವ ಬೊರ್ಡ್ ಕಂಬಕ್ಕೆ ಕಟ್ಟಿ ಹಾಕಿ 3-4 ಜನ ಸೇರಿ ಕೈ ಯಿಂದ ಮತ್ತು ಬೆತ್ತದಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 132/2015 ಕಲಂ 342.323.324.355 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
ಅಸ್ವಾಭಾವಿಕ ಮರಣ ಪ್ರಕರಣ
  • ಮಣಿಪಾಲ: ಪಿರ್ಯಾದಿದಾರರಾದ ರಾಮ್‌ ಪ್ರಸಾದ್‌ ನಿಸಾರ್‌‌ (24), ತಂದೆ: ಭಾಗವಾನ್‌ದಾಸ್‌, ವಾಸ: ಅವಾರ ಗ್ರಾಮ ಮತ್ತು ಅಂಚೆ, ಜನವಾರಿ ಡೇರೆ, ಜಸ್‌ಪುರ, ಬಾಂದಾ ಜಿಲ್ಲೆ, ಉತ್ತರ ಪ್ರದೇಶ ಇವರು ವಾಸವಾಗಿರುವ ಬಿಡಾರದ ದಕ್ಷಿಣ ದಿಕ್ಕಿನ ಬಿಡಾರದಲ್ಲಿ ವಾಸವಾಗಿರುವ ಗಯಾ ಪ್ರಸಾದ್‌‌ನ ಹೆಂಡತಿ ರೋಶನಿ(18) ಎಂಬವರು ದಿನಾಂಕ 03/08/15ರಂದು ಬೆಳಿಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 32/2015 ಕಲಂ 174(3) ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: