Friday, July 31, 2015

PRESS NOTE

 
ಈ ಮೇಲ್ಕಾಣಿಸಿದ ವ್ಯಕ್ತಿಯ ಮಲ್ಪೆ ಠಾಣಾ ವ್ಯಾಪ್ತಿಯ ಮಲ್ಪೆ ಮಣಪುರಂ ಗೋಲ್ಡ್ ಲೋನ್ ಫೈನಾನ್ಸ್ ನಲ್ಲಿ ನಕಲಿ ಚಿನ್ನಭರಣಗಳನ್ನು ಅಸಲಿ ಚಿನ್ನಾಭರಣ ಎಂದು ಸುಳ್ಳು ಹೇಳಿ ಸಂಸ್ಥೆಗೆ ಅಕ್ರಮ ನಷ್ಟವನ್ನುಂಟು ಮಾಡುವ ಉದ್ದೇಶದಿಂದ 48.6 ಗ್ರಾಂ ಬಂಗಾರವನ್ನು ಅಡವಿಟ್ಟು ರೂ 93.000/-ಗಳನ್ನು ಪಡೆದುಕೊಂಡು ಮೋಸ ಮಾಡಿದ್ದು ಅದರಂತೆ ದಿನಾಂಕ:26/07/2015 ರಂದು ಮಲ್ಪೆ ಠಾಣಾ ಅಕ್ರ 110/2015 ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ, ಅದೇ ರೀತಿ ಉಡುಪಿ ನಗರ ಠಾಣೆಯಲ್ಲೂ ಇತನ ವಿರುದ್ದ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.
          ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಪೊಲೀಸ್ ವೃತ್ತ ನಿರೀಕ್ಷಕರು ಉಡುಪಿ ಶ್ರೀಕಾಂತ ಕೆ  ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪನಿರೀಕ್ಷಕರು ರವಿಕುಮಾರ ಎ, ಹಾಗೂ ಸಿಬ್ಬಂದಿಗಳಾದ ಇಮ್ರಾನ್, ಮತ್ತು ರಾಘವೇಂಧ್ರ ಇವರು ಆರೋಪಿ ತಲಾಶೆಯ ಬಗ್ಗೆ ಬೆಂಗಳೂರಿಗೆ ಹೋಗಿ ಅಲ್ಲಿನ ಆನಂದ ರಾವ್ ಸರ್ಕಲ್ ಬಳಿ ಆರೋಪಿತ ಅಬ್ದುಲ್ ಮಜೀದ್(32), ಅಬ್ದುಲ್ ಗಫೂರ್, ವಾಸ:ರುಬೀನಾ ಕಾಂಪ್ಲೆಕ್ಸ್, ಪಂದುಬೆಟ್ಟು, ಉಡುಪಿ ತಾಲೂಕು ಈತನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮದ ಬಗ್ಗೆ ದಿನಾಂಕ: 29/07/2015 ರಂದು ಬೆಳಿಗ್ಗೆ 8.30 ಗಂಟೆಗೆ ಠಾಣೆಗೆ ಕರೆತಂದಿರುತ್ತಾರೆ, ನಂತರ ಇತನನ್ನು ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

No comments: