Friday, July 31, 2015

Daily Crime Reports As On 31/07/2015 At 07:00 Hrs

ಜುಗಾರಿ ಪ್ರಕರಣ
  • ಕೋಟ: ದಿನಾಂಕ 30/07/2015 ರಂದು ಕಬ್ಬಳ್‌ರಾಜ್ ಹೆಚ್.ಡಿ ಪೊಲೀಸ್ ಉಪನಿರೀಕ್ಷಕರು ಕೋಟ ಪೊಲೀಸ್ ಠಾಣೆ ಇವರಿಗೆ ದೊರೆತ ಖಚಿತ ವರ್ತಮಾನದಂತೆ ಕುಂದಾಪುರ ತಾಲೂಕು ಹಳ್ಳಾಡಿ ಹರ್ಕಾಡಿ ಗ್ರಾಮದ ಗುಡ್ಡೆಅಂಗಡಿ ರಾಮ ಮೂರ್ತಿರವರ ಅಂಗಡಿಯ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್-ಬಾಹಾರ್ ಇಸ್ಪೀಟ್ ಜುಗಾರಿ ಆಟ ನಡೆಯುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಠಾಣಾ ಸಿಬ್ಬಂದಿಗಳೊಂದಿಗೆ 16:30 ಗಂಟೆಗೆ ದಾಳಿ ನಡೆಸಿ ಅಂದರ್-ಬಾಹಾರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1) ಮಾಧವ ಆಚಾರಿ, 2) ಗೋಪಾಲ ಆಚಾರಿ, 3) ಬಸವ ಮೊಗವೀರ, 4) ಕೊರಗ ಮೊಗವೀರ ಎಂಬುವವರನ್ನು ದಸ್ತಗಿರಿ ಮಾಡಿ, ಜುಗಾರಿ ಆಟಕ್ಕೆ ಬಳಸುತ್ತಿದ್ದ ಇಸ್ಪೀಟ್ ಎಲೆಗಳು-52, ನಗದು ರೂಪಾಯಿ 720/- ಹಾಗೂ ಅವುಗಳನ್ನು ಹಾಕಿದ್ದ ಪ್ಲಾಸ್ಟಿಕ್ ಹಾಳೆ-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ, ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 175/2015 ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಪುಟ್ಟಿ (40) ಗಂಡ: ನಾಗರಾಜ ವಾಸ: ಕಾಗೇರಿ, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಇವರ ದೊಡ್ಡಮ್ಮನ ಮಗಳಾದ ಮಾಧುರಿ (40) ರವರು ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ಜನತಾ ಕಾಲೋನಿ ಎಂಬಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದು, ದಿನಾಂಕ 24/07/2015 ರಂದು ರಾತ್ರಿ ಮಲಗಿದ್ದು, ನಿದ್ರೆಯ ಮಂಪರಿನಲ್ಲಿ ಚಿಮಣಿಯ ದೀಪವನ್ನು ಆರಿಸದೇ ಇದ್ದು, ರಾತ್ರಿ 12:00 ಗಂಟೆ ಸುಮಾರಿಗೆ ಕಾಲು ಬದಿಯಲ್ಲಿದ್ದ ಚಿಮಣಿ ದೀಪವು ಕಾಲಿಗೆ ತಾಗಿ ಅಡ್ಡಬಿದ್ದು, ಚಿಮಣಿ ದೀಪದ ಬೆಂಕಿ ಮಾಧುರಿಯವರು ಧರಿಸಿದ್ದ ನೈಲಾನ್‌ ನೈಟಿಗೆ ತಾಗಿ ಬೆಂಕಿ ಹೊತ್ತಿಕೊಂಡು ತೀವ್ರ ಸುಟ್ಟ ಗಾಯಗೊಂಡು ಸರ್ಜನ್‌ ಆಸ್ಪತ್ರೆಗೆ ಹೋಗಿದ್ದು, ಬಳಿಕ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 30/07/2015 ರಂದು ಬೆಳಿಗ್ಗೆ 08:15 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 34/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: