Friday, July 31, 2015

Daily Crime Reports As On 31/07/2015 At 17:00 Hrs



ಇತರೇ ಪ್ರಕರಣ

  • ಗಂಗೊಳ್ಳಿ: ಗಂಗೊಳ್ಳಿ ಪೊಲೀಸ್ ಠಾಣಾ .ಪೊಲೀಸ್ ಉಪನಿರೀಕ್ಷಕ ಸುಬ್ಬಣ್ಣ ಬಿ  ಇವರು ಗಂಗೊಳ್ಳಿ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ದಿನಾಂಕ 31/07/2015  ರಂದು ಬೆಳಿಗ್ಗೆ ಜಾವ ಸುಮಾರು 03.00 ಗಂಟೆಗೆ ತ್ರಾಸಿ ಗ್ರಾಮದ ತ್ರಾಸಿ ಜಂಕ್ಷನ್ ಬಳಿ ಇರುವ ಕರ್ನಾಟಕ  ಬ್ಯಾಂಕ್ ಕಟ್ಟಡದ  ಕೆಳಗಡೆ ಅಂಗಡಿ ಬದಿಯಲ್ಲಿ ಒಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಂಚರಿಸಿಕೊಂಡಿರುವುದು ಕಂಡುಬಂದಿದ್ದು ಹತ್ತಿರ ಹೋಗಿ ಪರಿಶೀಲಿಸಲಾಗಿ ಅಂಗಡಿ ಕಟ್ಟಡಗಳ ಮಧ್ಯ ಓಣಿಯಲ್ಲಿ ಮರೆಯಲ್ಲಿ ಅಡಗಿ ನಿಂತಿದ್ದು, ಅವರನ್ನು ನೋಡಿ ಒಂದು ಸೈಕಲಿನಲ್ಲಿ  ಓಡಿಹೋಗಲು  ಪ್ರಯತ್ನಿಸಿದ್ದು  ಕೂಡಲೇ ಅವನನ್ನು ಹಿಡಿದು. ವಿಚಾರಿಸಲಾಗಿ ಸೇಡ್ರಿಕ್ ಪ್ರಾಯ 44 ವರ್ಷ ತಂದೆ ದಿ.ರೊಜಾರಿಯೋ ಮೆನೆಜಸ್ ವಾಸ C/O ರಾಕಿ ಲಾರೆನ್ಸ್ ಡಯಾಸ್ ಗರ್ಜನಹಿತ್ಲು ರಾಹುತನಕಟ್ಟೆ, ಯಡ್ತರೆ ಗ್ರಾಮ ಕುಂದಾಪುರ ತಾಲೂಕು ಎಂಬುವುದಾಗಿ ತಿಳಿಸಿರುತ್ತಾನೆ. ಈತನಲ್ಲಿ ರಾತ್ರಿ ಸಮಯ ಸದ್ರಿ ಸ್ಥಳದಲ್ಲಿ ಇರುವಿಕೆಯ ಬಗ್ಗೆ ಪ್ರಶ್ನಿಸಲಾಗಿ ಸಮರ್ಪಕವಾದ ಉತ್ತರ  ನೀಡಿರುವುದಿಲ್ಲ. ಸೈಕಲಿನಲ್ಲಿ ಹಿಂಭಾಗ ಸುಮಾರು 2  ಅಡಿ ಉದ್ದದ ಒಂದು  ಕಬ್ಬಿಣದ ಸರಳನ್ನು ಇಟ್ಟುಕೊಂಡಿರುವುದು ಕಂಡುಬಂತು. ಆಪಾದಿತನು ಮಾರಕ ಆಯುಧವನ್ನು ಹಿಡಿದುಕೊಂಡು ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ ತನ್ನ ಇರುವಿಕೆಯನ್ನು ಮರೆಮಾಚಿಕೊಂಡಿದ್ದಲ್ಲದೇ ತನ್ನ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರವನ್ನು ನೀಡದೇ ಇರುವ ಕಾರಣ ಆಪಾದಿತನನ್ನು ದಸ್ತಗಿರಿ ಮಾಡಿ ಗಂಗೊಳ್ಳಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 102/2015 ಕಲಂ: 96(ಎ)(ಬಿ) (ಡಿ) ಕೆಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿರುವುದಾಗಿದೆ.

ವಂಚನೆ ಪ್ರಕರಣ

  • ಬೈಂದೂರು: ಪಿರ್ಯಾದಿ ರಾಘವೇಂದ್ರ ಇವರ ತಂದೆಯವರು ಶಿರೂರು ಗ್ರಾಮದ ಶಿರೂರು ಮಾರ್ಕೇಟ್‌ ನಲ್ಲಿ ಜನರಲ್‌ ಸ್ಟೋರ್‌ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದಾಗಿದೆ ದಿನಾಂಕ 30-07-2015 ರಂದು ಬೆಳಿಗ್ಗೆ 10:15 ಗಂಟೆಯ ಸಮಯಕ್ಕೆ ಯಾರೋ ಇಬ್ಬರು ವ್ಯಕ್ತಿಗಳು ಅಂಗಡಿಗೆ ಬಂದು ಚಾಪೆ , ಡ್ರಮ್‌ ಬೇಕೆಂದು ಕೇಳಿದಾಗ ಪಿರ್ಯಾದಿದಾರರ ತಂದೆಯವರು ಅವರಿಗೆ ಕೇಳಿದ ವಸ್ತುಗಳನ್ನು ತೋರಿಸಲು ಅಂಗಡಿಯ ಹೊರಗೆ ಬಂದಿದ್ದು ಆ ಸಮಯ ಓರ್ವ ವ್ಯಕ್ತಿಯು ಅಂಗಡಿಯ ಒಳಗೆ ಇದ್ದು ಇನ್ನೋರ್ವನು ಅವರೊಂದಿಗೆ ಬಂದು ವಸ್ತುಗಳನ್ನು ನೋಡಿ ನಂತರ ತಮಗೆ ವಸ್ತುಗಳು ಇಷ್ಟವಾಗಿಲ್ಲ ಎಂಬುದಾಗಿ ತಿಳಿಸಿ ವಾಪಾಸ್ಸು ಹೋಗಿರುತ್ತಾರೆ, ಸ್ವಲ್ಪ ಸಮಯದ ನಂತರ ಪಿರ್ಯಾದಿದಾರರು ಅಂಗಡಿಯ ಒಳಗೆ ಬಂದು ನೋಡಿದಾಗ ಅಂಗಡಿಯ ಒಳಗೆ ಕುರ್ಚಿಯ ಮೇಲೆ ಬ್ಯಾಗಿನ ಒಳಗೆ ಇಟ್ಟಿದ್ದ 22,800/- ರೂಪಾಯಿ ನಗದು ಹಣ ಇರುವ ಬ್ಯಾಗ್‌ ಹಾಗೂ  ಇತರ ದಾಖಲಾತಿಗಳನ್ನು ಆರೋಪಿತರು ಪಿರ್ಯಾದಿದಾರರ ತಂದೆಯನ್ನು ವಂಚಿಸಿ ಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 210/15 ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ದಿನಾಂಕ 30/07/2015 ರಂದು 20:00 ಗಂಟೆಯಿಂದ ದಿನಾಂಕ 31/07/2015 ರ ಬೆಳಿಗ್ಗೆ 6:00 ಗಂಟೆಯ ನಡುವಿನ ಅವಧಿಯಲ್ಲಿ ಕಾರ್ಕಳ ತಾಲೂಕು ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿ ಇರುವ ಶ್ರೀ ದುರ್ಗಾಪರಮೇಶ್ವರೀ  ದೇವಸ್ಥಾನದ ಹೆಬ್ಬಾಗಿಲಿನ ಬೀಗವನ್ನು ಮುರಿದು ದೇವಸ್ಥಾನದ ಒಳಗೆ ಪ್ರವೇಶಿಸಿ ಗರ್ಭಗುಡಿಯ ಒಳಗಿದ್ದ 9 ಇಂಚು ಎತ್ತರದ ಸಿಂಹಾರೂಢ ದೇವಿಯ ಪಂಚಲೋಹದ ಬಲಿಮೂರ್ತಿ  ಪ್ರಭಾವಳಿ ಸಮೇತ ಮತ್ತು ಮೂಲ ಮೂರ್ತಿಯ ಬೆಳ್ಳಿಯ ದೃಷ್ಠಿ ಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ 1,25,000/-ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 129/15 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: