Friday, July 31, 2015

Daily Crime Reports As On 31/07/2015 At 19:30 Hrsಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 31/07/2015 ರಂದು ಸಮಯ ಮಧ್ಯಾಹ್ನ   12:50 ಗಂಟೆಗೆ  ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ಜಂಕ್ಷನ್ ಬಳಿ, ಬಸ್‌ ನಿಲ್ದಾಣದ  ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಆಪಾದಿತ ಶಂಕರ ಎಂಬವರು KA 25 A 3305 ನೇ ಲಾರಿಯನ್ನು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕರೀಮ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ KA 20 B 1950 ಅಟೋರಿಕ್ಷಾವನ್ನು ಓವರ್‌ಟೇಕ್ ಮಾಡುತ್ತಿರುವಾಗ ಎದುರುಗಡೆಯಿಂದ ಬಂದ ಬಸ್‌ ನ್ನು  ನೋಡಿ ಏಕಾಏಕಿ  ಲಾರಿಯನ್ನು  ರಸ್ತೆಯ ಏಡಕ್ಕೆ ಚಲಾಯಿಸಿ ಅಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಟೋರಿಕ್ಷಾ ಬಲ ಭಾಗಕ್ಕೆ ಅಡ್ಡ ಬಿದ್ದು ಅಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿ ಬಸವರಾಜ್ ಶೆಟ್ಟಿ (58), ತಂದೆ: ದಿವಂಗತ ನಾರಾಯಣಶೆಟ್ಟಿ ವಾಸ: ನೂಜಾಡಿ ಕ್ರಾಸ್‌ ಭೂತನಾಡ್‌, ವಂಡ್ಸೆ ಗ್ರಾಮ,ಕುಂದಾಪುರ ಇವರು ಹಾಗೂ ಕಸ್ತೂರಿ ಶೆಟ್ಟಿಯವರು ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ, ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 92/2015  ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ಪಿರ್ಯಾದಿ ರಾಜ ಸುವರ್ಣ (78) ತಂದೆ: ದಿವಂಗತ ಶೀನ ಸಾಲ್ಯಾನ್ ವಾಸ: ಮನೆ ನಂ 11/134 ರಾಜಕಮಲ ನಿಲಯ ಜನತಾ ಕಾಲೋನಿ ಕುತ್ಪಾಡಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆರವರ ಮಗಳಾದ ಜ್ಯೋತಿರವರ ಗಂಡ ಸುಧಾಕರ್ (50) ಇವರು ವಿಪರೀತ ಶರಾಬು ಸೇವಿಸುತ್ತಿದ್ದು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದು ಮಾನಸಿಕ ಖಿನ್ನತೆಗೊಳಗಾಗಿರುತ್ತಾರೆ. ದಿನಾಂಕ:31/07/2015 ರಂದು ಸುಧಾಕರವರು ವಿಪರೀತ ಮದ್ಯ ಸೇವಿಸಿಕೊಂಡು ಬಂದು ಅಡುಗೆ ಮನೆಯ ಪಕ್ಕಸಿಗೆ ಲುಂಗಿಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಯುಡಿಆರ್ ನಂಬ್ರ 37/2015 ಕಲಂ 174  ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: