Saturday, July 25, 2015

Daily Crimes Reported As on 25/07/2015 at 07:00 Hrs



ಅಪಘಾತ ಪ್ರಕರಣ
  • ಬೈಂದೂರು: ದಿನಾಂಕ 24/07/2015 ರಂದು ಪಿರ್ಯಾದಿದಾರರಾದ ರವಿ ಹೋಬಳಿದಾರ್ (36) ತಂದೆ:ರಾಯ ಹೋಬಳಿದಾರ್ ವಾಸ: ಹೋಬಳಿದಾರ್ ಹೌಸ್ ಎಲ್ಲೂರು, ಗೋಳಿಹೊಳೆ ಗ್ರಾಮ ಕುಂದಾಪುರ ತಾಲೂಕು ಇವರು ಓಮಿನಿ ಕಾರಿನಲ್ಲಿ ಬಾಡಿಗೆ ಕೆಲಸ ನಿಮಿತ್ತ ಬೈಂದೂರಿನಿಂದ ಕೊಲ್ಲೂರು ಕಡೆಗೆ ಹೋಗುತ್ತಿರುವಾಗ ಮೋಟಾರು ಸೈಕಲ್ ನಂಬ್ರ ಕೆಎ 20 ಡಬ್ಲ್ಯೂ 5820 ನೇದರ ಚಾಲಕ ಸುಧೀಂದ್ರರವರು ಸಹಸವಾರ ಮಹೇಶನನ್ನು ಕುಳ್ಳಿರಿಸಿಕೊಂಡು ಬೈಂದೂರು ಕಡೆಯಿಂದ ಕೊಲ್ಲೂರು ಕಡೆಗೆ ಹೋಗುತ್ತಿರುವಾಗ ಸಮಯ 9:15 ಗಂಟೆಗೆ 12ನೇ ಮೈಲಿಕಲ್ಲು ಮಾವಿನ ಮನೆ ತಲುಪಿದಾಗ ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ ಬರುತ್ತಿರುವ ಬಸ್ ನಂಬ್ರ ಕೆಎ 20 ಎ 9144 ನೇದರ ಚಾಲಕ ರಘುರವರು ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರರಿಬ್ಬರೂ ರಸ್ತೆಗೆ ಬಿದ್ದು ಮೋಟಾರು ಸವಾರ ಸುಧೀಂದ್ರರವರ ಕಾಲಿಗೆ ಒಳ ಜಖಂ ಹಾಗೂ ಸಹ ಸವಾರ ಮಹೇಶರವರಿಗೆ ಸಣ್ಣ ಪುಟ್ಟ ಒಳನೋವುಂಟಾಗಿರುತ್ತದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 205/2015 ಕಲಂ  279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 ಮನುಷ್ಯ ಕಾಣೆ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಜೋಹರ್ ಶೇಖ್ (38) ಗಂಡ:ಸಾಜಿ, ವಾಸ: ಶಾಂತನಂದ ರೆಸಿಡೆನ್ಸಿ  2ನೇ ಮಹಡಿ ಮಿಷನ್ ಕಂಪೌಂಡ್‌  76 ಬಡಗುಬೆಟ್ಟು ಗ್ರಾಮ ಉಡುಪಿ ಇವರ ಮಗನಾದ ಶೋಹೆಬ್ (18) ದಿನಾಂಕ 24/07/2015 ರಂದು 12:30 ಗಂಟೆಗೆ ಉಡುಪಿಯ ಮಸೀದಿಗೆ ನಮಾಜ್ ಗೆ ಹೋಗಿದ್ದು ವಾಪಾಸು ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ  ಸ್ನೇಹಿತರಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಉಡುಪಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 172/2015 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸುಕುಮಾರ (17) ತಂದೆ; ಜಯ ಆಚಾರ್ಯ ವಾಸ: ಅಶ್ವತ್ ಕಟ್ಟೆ ಜನತಾ ಕಾಲೋನಿ  ದುರ್ಗ ಗ್ರಾಮ ಕಾರ್ಕಳ ತಾಲೂಕ ಉಡುಪಿ ಜಿಲ್ಲೆ ಇವರ ತಂದೆ ಜಯ ಆಚಾರ್ಯ ಎಂಬುವವರು ದಿನಾಂಕ:24/07/2015 ರಂದು ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 5:00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಕಿಟಕಿಗೆ ಬೈರಾಸಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಯು.ಡಿ.ಆರ್ ಕ್ರಮಾಂಕ 18/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
ವಂಚನೆ ಪ್ರಕರಣ
  • ಮಣಿಪಾಲ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ದುರ್ಗಾ ನಗರ ಎಂಬಲ್ಲಿ ಮನೆ ನಂ 5-356 ಸಿ ಯಲ್ಲಿ ವಾಸವಿದ್ದ ವಾಲ್ಟರ್ ಡಿಸೋಜ ಎಂಬವರು ಮೃತಪಟ್ಟಿದ್ದು , ಅವರು ಮೃತಪಡುವ ಮುಂಚೆ ದಿನಾಂಕ 04/04/2014 ರಂದು ಅವರ ಸಹೋದರರಾದ ಜಾರ್ಜ್ ಡಿಸೋಜ, ಅಲ್ಪೋನ್ಸ್ ಡಿಸೋಜ, ಹೆನ್ರಿ ಡಿಸೋಜ ಮತ್ತು ಅಂಬ್ರೋಸ್ ಡಿಸೋಜ ಎಂಬವರು ಅಪರಾಧಿಕ ಒಳಸಂಚು ನಡೆಸಿ, ವಾಲ್ಟರ್  ಡಿಸೋಜರವರ ಹೆಸರಿನಲ್ಲಿದ್ದ ವಾಹನ, ಮನೆ, ಚಿನ್ನಾಭರಣ , ಬ್ಯಾಂಕ್ ಮೊತ್ತ, ಎಲ್.ಐ.ಸಿ ಮೊತ್ತ ಮತ್ತು ಪಿ.ಎಫ್ ಹಣವನ್ನು ವಾಲ್ಟರ್ ಡಿಸೋಜ ರವರ ಮರಣಾ ನಂತರ ಅವರ ಸಹೋದರರಾದ ಜಾರ್ಜ್ ಡಿಸೋಜ, ಅಲ್ಪೋನ್ಸ್ ಡಿಸೋಜ, ಹೆನ್ರಿ ಡಿಸೋಜ ಮತ್ತು ಅಂಬ್ರೋಸ್ ಡಿಸೋಜ ರವರಿಗೆ ಸೇರಬೇಕು ಎಂಬ ನಕಲಿ ವೀಲು ನಾಮೆಯನ್ನು ತಯಾರಿಸಿ , ವಾಲ್ಟರ್ ಡಿಸೋಜ ರವರ ನಕಲಿ ಸಹಿಯನ್ನು ಹಾಕಿ, ನಕಲಿ ಸೃಷ್ಠಿಸಿದ ದಾಖಲೆಯನ್ನು ನೈಜ ದಾಖಲಾತಿ ಎಂದು ಸರಕಾರಿ ಅಧಿಕಾರಿಯವರ ಮುಂದೆ ಹಾಜರುಪಡಿಸಿ ಪಿರ್ಯಾದದಾರರಾದ ಮೃತ  ವಾಲ್ಟರ್ ಡಿಸೋಜರವರ ಹೆಂಡತಿ ಫಾತಿಮಾ ವಾಲ್ಟರ್ ಡಿಸೋಜ ರವರಿಗೆ ಮೋಸ ಮಾಡಿರುವುದಾಗಿದೆ.ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 145 /2015  ಕಲಂ : 467,468,471,420, 120B  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಮಣಿಪಾಲ: ದಿನಾಂಕ 25/07/15 ರಂದು 00:15 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶಿವಂ ಭಾತ್ರ (24) ತಂದೆ: ಜಸ್ವಂತ್ ಭಾತ್ರ, ವಾಸ: ಎ ವಿಂಗ್, ಪ್ಲಾಟ್ ನಂ 107, ಮಾಂಡವಿ ಪರ್ಲ ಸಿಟಿ, ಆಪಾರ್ಟ್ಮೆಂಟ್, ಮಣಿಪಾಲ ಇವರು ತನ್ನ ಸ್ನೇಹಿತೆ ಲವ್ಲೀನ್ ಎಂಬವರೊಂದಿಗೆ ಮಣಿಪಾಲದ ಮಾಂಡವಿ ಎಮಾರಾಲ್ಡ್  ಆಪಾರ್ಟ್ ಮೆಂಟ್ ಎದುರು ರಸ್ತೆಯಲ್ಲಿ ಎಮ್.ಎಸ್. ಆಪಾರ್ಟ್ ಮೆಂಟ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ಕೆಎ 20 ಪಿ 2914 ನೇ ಕೆಂಪು ಬಣ್ಣದ ಕಾರನ್ನು ಸಿಂಡಿಕೇಟ್ ಸರ್ಕಲ್ ಕಡೆಯಿಂದ ಡಿ.ಸಿ ಕಛೇರಿ ಕಡೆಗೆ ಚಲಾಯಿಸಿಕೊಂಡು ಬಂದು ಶಿವಂ ಭಾತ್ರರವರಿಗೆ ಅತೀ ಹತ್ತಿರದಲ್ಲಿ ಚಲಾಯಿಸಿದಾಗ ಶಿವಂ ಭಾತ್ರರವರು ಕಾರಿನವರಿಗೆ ಬೈದಿದ್ದು ಆಗ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಕಾರನ್ನು ಮುಂದೆ ನಿಲ್ಲಿಸಿ ಶಿವಂ ಭಾತ್ರ ಮತ್ತು ಅವರ ಸ್ನೇಹಿತೆಯನ್ನು ತಡೆದು ನಿಲ್ಲಿಸಿ ಇಬ್ಬರು ಅಪರಿಚಿತರು ಶಿವಂ ಭಾತ್ರರವರ ಮುಖಕ್ಕೆ ಕೈಯಿಂದ ಹೊಡೆದಿದ್ದು ಅದೇ ಸಮಯಕ್ಕೆ ಅಲ್ಲಿಗೆ ಬಂದ ಅಪರಿಚಿತರ ಸ್ನೇಹಿತ ಬೈಕ್ ಸವಾರನು ಕೂಡ ಕೈಯಿಂದ ಹಲ್ಲೆ ಮಾಡಿ ಮೂರು ಜನ ಅಪರಿಚಿತರು ಶಿವಂ ಭಾತ್ರರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 146/2015  ಕಲಂ: 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: