Friday, July 24, 2015

Daily Crimes Reported As on 24/07/2015 at 19:30 Hrsಹಲ್ಲೆ ಪ್ರಕರಣ
  • ಕಾರ್ಕಳ: ದಿನಾಂಕ: 23/07/2015 ರಂದು ರಾತ್ರಿ ಸುಮಾರು 8:30 ಗಂಟೆಗೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಜಂತ್ರ ಎಂಬಲ್ಲಿ ಆರೋಪಿಗಳಾದ ಪ್ರಶಾಂತ್, ಪ್ರಾಣೇಶ್,  ಸುನೀಲ್,  ಮೋಹಿತ್, ಮತ್ತು ಇತರ ಇಬ್ಬರು ವ್ಯಕ್ತಿಗಳು ವಿವಿಧ ವಾಹನಗಳಲ್ಲಿ ಬಂದವರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಕೈಯಲ್ಲಿ ಬ್ಯಾಟ್ ವಿಕೇಟ್ ಗಳನ್ನು ಹಿಡಿದುಕೊಂಡು ಪಿರ್ಯಾದಿ ರಾಕೇಶ್  (22), ತಂದೆ: ದಿ ರಮೇಶ್ , ವಾಸ: ಜಂತ್ರ ಮನೆ ನಂದಳಿಕೆ ಪೋಸ್ಟ್, ಕಾರ್ಕಳ ತಾಲೂಕುರವರ ಮನಗೆ ಅಕ್ರಮ ಪ್ರವೇಶ ಮಾಡಿ ಬ್ಯಾಟ್ ವಿಕೇಟ್ ನಿಂದ ಅವರ ಮನೆಯ ಬಾಗಿಲು ಮತ್ತು ಕಿಟಕಿ ಬಾಗಿಲುಗಳನ್ನು ಬಡಿದು, ರಾಕೇಶ್ ರವರನ್ನು ಮತ್ತು ಗೆಳೆಯ ಸುಭಾಶ್ ರವರನ್ನು  ಜೀವ ಸಹಿತ ಬಿಡುವುದಿಲ್ಲ,  ನಿನ್ನನ್ನು ಎರಡು ದಿವಸದಲ್ಲಿ ಮುಗಿಸುತ್ತೇನೆ ಎಂದು ಹೇಳಿ  ಕಾಲಿನಿಂದ ಬಾಗಿಲು ತುಳಿದು ಬಾಗಿಲನ್ನು ತೆರೆದು ಒಳಪ್ರವೇಶಿಸಿರುತ್ತಾರೆ, ತಡೆಯಲು ಬಂದ ರಾಕೇಶ್ ರವರ ಅಜ್ಜಿಯನ್ನು ಪ್ರಶಾಂತನು ದೂಡಿ ಹಾಕಿ, ಅವರ  ಹಣೆಗೆ ಹೊಡೆದು ಮತ್ತು ಕುತ್ತಿಗೆಗೆ  ಕೈಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 127/15 ಕಲಂ 143,147,148,427,448,324,504, 506(2), ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ: 
  • ಕಾಪು: ಪಿರ್ಯಾದಿ ಲೋಕೇಶ್. ಎನ್. ಗೌಡ, (36) ತಂದೆ: ನಾಗೇಂದ್ರ ಗೌಡ, ವಾಸ: ನಾಣಿಕಟ್ಟ ಅಂಚೆ, ಮತ್ತಿಹಳ್ಳಿ ಗ್ರಾಮ, ಸಿದ್ಧಾಪುರ ತಾಲೂಕು, ಕಾರವಾರ ಜಿಲ್ಲೆರವರು ದಿನಾಂಕ 24/07/2015 ರಂದು  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈಚರ್ ಲಾರಿ ನಂಬ್ರ ಕೆಎ 19 ಡಿ 1907 ನೇದನ್ನು ಮಂಗಳೂರು ಕಡೆಯಿಂದ ಮಲ್ಪೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ 5:30 ಗಂಟೆಗೆ ಏಣಗುಡ್ಡೆ ಗ್ರಾಮದ ಕಟಪಾಡಿ ಫಾರೆಸ್ಟ್ ಗೇಟ್ ನಿಂದ ಸ್ವಲ್ಪ ಮುಂದೆ ತಲುಪುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕಾರು ನಂಬ್ರ ಕೆಎ 05 ಎಂಕೆ 4765 ನೇದನ್ನು ಅದರ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದು ಎದುರಿನಿಂದ ಲಾರಿಯ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು ಕಾರಿನಲ್ಲಿದ್ದ ಕೆಲವು ಪ್ರಯಾಣಿಕರಿಗೆ ರಕ್ತಗಾಯ ಆಗಿರುತ್ತದೆ, ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 146/2015 ಕಲಂ 279 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಕೋಟಾ: ಪಿರ್ಯಾದಿ ಕರುಣಾಕರ ಹೆಗ್ಡೆ (57),ತಂದೆ:ದಿ.ಬೊಮ್ಮಯ್ಯ  ವಾಸ:ಕೇಸನ ಮಕ್ಕಿ ಬಡಾಮನೆ,ಯಡಾಡಿ ಮತ್ಯಾಡಿ ಗ್ರಾಮ,ಕುಂದಾಪುರ ತಾಲೂಕುರವರ ತಮ್ಮ ರತ್ನಾಕರ ಹೆಗ್ಡೆ ರವರ ಬಾಬ್ತು ಸರ್ವೆ ನಂಬ್ರ 198/2 ಜಾಗದಲ್ಲಿ ಬೆಳೆದಿರುವ ಬೋಗಿ ಸಸಿಗಳನ್ನು  ದಿನಾಂಕ:20/07/2015 ರಂದು ರಾತ್ರಿ 7:15 ಗಂಟೆ ಸಮಯಕ್ಕೆ ಆಪಾದಿತರಾದ ರಮೇಶ ಮೊಗವೀರ ಹಾಗೂ ಕೇಶವ ಮೊಗವೀರ ಎಂಬುವರು ಕಡಿದು 4-5 ಅಡಿ ಉದ್ದದ ತುಂಡುಗಳಾಗಿ ಕತ್ತರಿಸಿ ಬಿಳಿ ಬಣ್ಣದ ಮಾರುತಿ ಓಮಿನಿ ಕಾರಿನ ಹಿಂದೆ ತುಂಬಿಸುತ್ತಿದ್ದರು, ಕರುಣಾಕರ ಹೆಗ್ಡೆರವರನ್ನು ನೋಡಿ ಕತ್ತರಿಸಿದ  30-40 ಬೋಗಿ ಮರದ  ಪೊಲ್ಸ್ ಗಳನ್ನು ಬಿಟ್ಟು,ತುಂಬಿಸಿದ ಪೊಲ್ಸ್ ಗಳೊಂದಿಗೆ  ಓಡಿ ಹೋಗಿರುತ್ತಾರೆ, ಕಳವು ಮಾಡಿ ಕೊಂಡು ಹೋದ ಮರದ ಅಂದಾಜು ಮೌಲ್ಯ ಸುಮಾರು ರೂಪಾಯಿ 20,000/- ಆಗಿರುತ್ತದೆ, ಈ ಬಗ್ಗೆ ಕೋಟಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 172/2015 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಉಡುಪಿ:  ಫಿರ್ಯಾದಿ ಎನ್ವಸಂತ ಕುಮಾರ್‌ (43) ತಂದೆ ಕೆ ಸುಧಾಕರ ವಾಸ: ಶ್ರೀ ಗಣೇಶ ಆಟೋ ಕಾರ್ರಾಷ್ಟ್ರೀಯ ಹೆದ್ದಾರಿ 66 ಆಭರಣ ಮೋಟಾರ್ಸ್ಹತ್ತಿರ  ಪುತ್ತೂರು ಗ್ರಾಮ,  ಉಡುಪಿರು ಪುತ್ತೂರು ಗ್ರಾಮದ ನಿಟ್ಟೂರು ಎಂಬಲ್ಲಿ ಮಹಮ್ಮದ್ ಫಜಿಲ್ ಮತ್ತು  ಆಶಿಶ್ ಶೆಟ್ಟಿರವರೊಂದಿಗೆ ಶ್ರೀ ಗಣೇಶ್ ಅಟೋ ಕಾರ್ಸ್ ಎಂಬ ಸೆಕೆಂಡ್ ಹ್ಯಾಂಡ್ ಕಾರ್ ಬಜಾರ್ ವ್ಯವಹಾರ  ಮಾಡಿಕೊಂಡಿದ್ದು, ದಿನಾಂಕ 24/07/2015 ರಂದು ಹಳೆಯ ಕಾರೊಂದನ್ನು ಖರೀದಿಸಲು ವ್ಯಾಪಾರದಿಂದ ಬಂದಿದ್ದ 6,50,000/- ನಗದನ್ನು ತೆಗೆದುಕೊಂಡು ಸ್ನೇಹಿತ ಆರೀಫ್  ಎಂಬವರ ಕಾರಿನಲ್ಲಿ ಬ್ರಹ್ಮಗಿರಿಗೆ ಬಂದು ನಂತರ ಪಾಲುದಾರರಾದ ಮಹಮ್ಮದ್‌ ಫಜೀಲ್‌ ರು ಚಲಾಯಿಸಿಕೊಂಡಿದ್ದ ಮಾರುತಿ ಸುಜುಕಿ ಎರ್ಟಿಕಾ ಕಾರು ಕೆಎ 19 ಎಮ್‌ಡಿ 1077 ರಲ್ಲಿ HDFC ಬ್ಯಾಂಕ್‌ ಗೆ ತೆರಳಿ ಅಲ್ಲಿ 1,10,000/- ರೂ ತೆಗೆದುಕೊಂಡು ಬಂದು ಅದರಲ್ಲಿ 1,00,000/ ರೂ ನ್ನು 6,50,000/- ರೂಪಾಯಿನೊಂದಿಗೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇರಿಸಿ ನಂತರ ಮಹಮ್ಮದ್‌ ಫಜೀಲ್‌ ರವರನ್ನು ನಾಯರ್‌ಕೆರೆ ಮಸೀದಿ ಬಳಿ ಬಿಟ್ಟು ಅದೇ ಕಾರಿನಲ್ಲಿ ಆಶಿಶ್ ಶೆಣೈರೊಂದಿಗೆ 13:25 ಗಂಟೆಗೆ  ಅಂಬಲಪಾಡಿ  ದೇವಸ್ಥಾನದ ಹಿಂಬದಿ  ಗೇಟಿನ  ಬಳಿ ರಸ್ತೆ ಬದಿ ನಿಲ್ಲಿಸಿ ದೇವಸ್ಥಾನಕ್ಕೆ  ಹೋಗಿ  ಪೂಜೆ ಮುಗಿಸಿ 13:45 ಗಂಟೆಗೆ ಕಾರಿನ ಬಳಿ ಬಂದು ನೋಡಿದಾಗ ಯಾರೋ ಕಳ್ಳರು ಕಾರಿನ ಚಾಲಕನ ಸೀಟಿನ ಬಳಿ ಇರುವ ಡೋರ್ ಗ್ಲಾಸನ್ನು ಒಡೆದು ಕಾರಿನ ಒಳಗೆ ಡ್ಯಾಶ್‌ಬೋರ್ಡ್‌ ನಲ್ಲಿ ಇಟ್ಟಿದ್ದ ನಗದು ರೂ 7,50,000/- ರೂಪಾಯಿ ಕಳವು ಮಾಡಿರುವುದಾಗಿದೆ ಈ ಬಗ್ಗೆ ಉಡುಪಿ ನಗರ ಪೊಲೀಸ್ಠಾಣಾ ಅಪರಾಧ ಕ್ರಮಾಂಕ: 171/2015 ಕಲಂ, 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕಾಪು: ಪಿರ್ಯಾದಿ ನವೀನ ಬರ್ಬೊಜ (43) ವಾಸ:ಮಾರ್ಕೆಟ್ ರೋಡ್, ಶಂಕರಪುರ ಇನ್ನಂಜೆ ಗ್ರಾಮ ಉಡುಪಿರವರ ತಂದೆ ಸೆಬಾಸ್ಟಿಯನ್ ಬರ್ಬೋಜರವರು ದಿನಾಂಕ: 22/07/2015 ರಂದು ರಾತ್ರಿ ಸುಮಾರು 10:00 ಗಂಟೆಗೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಮಲಗಿದ್ದು ರಾತ್ರಿ 11.15 ಗಂಟೆ ಸುಮಾರಿಗೆ ಅವರ ಬಾಯಿಯಲ್ಲಿ ನೊರೆ ಬರುವುದನ್ನು ಕಂಡು ಕೂಡಲೇ ಚಿಕಿತ್ಸೆ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಸೆಬಾಸ್ಟಿಯನ್ ಬರ್ಬೋಜರವರು ದಿನಾಂಕ: 24/07/2015 ರಂದು ಮದ್ಯಾಹ್ಯ 3:10 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಸೆಬಾಸ್ಟಿಯನ್ ಬರ್ಬೋಜರವರಿಗೆ ಸುಮಾರು ಒಂದೂವರೆ ತಿಂಗಳಿನಿಂದ ಬಲಕಾಲು ನೋವಿದ್ದು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖವಾಗದೇ ಇದ್ದುದರಿಂದ ಅದೇ ಚಿಂತೆಯಿಂದ ಯಾವುದೋ ವಿಷಪದಾರ್ಥ ಸೇವಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿದೆ. ಬಗ್ಗೆ ಕಾಪು ಪೊಲೀಸ್ಠಾಣಾ ಯು.ಡಿ.ಆರ್. ನಂಬ್ರ 21/2015 ಕಲಂ 174 ಸಿ.ಆರ್.ಪಿ.ಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: