Saturday, July 25, 2015

Daily Crimes Reported As on 25/07/2015 at 17:00 Hrsಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಚಂದ್ರಶೇಖರ ಶೆಟ್ಟಿ ಪ್ರಾಯ:56 ವರ್ಷ ಎಂಬುವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:25/07/2015 ರಂದು ಬೆಳಿಗ್ಗಿನ ಜಾವ 6:15 ಗಂಟೆಯಿಂದ 07:30 ಗಂಟೆಯ ಮಧ್ಯಾವಧಿಯಲ್ಲಿ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ತನ್ನ ಮನೆಯ ಮಾಳಿಗೆಯ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಬಗ್ಗೆ  ಕೋಟ ಪೊಲೀಸ್ಠಾಣಾ ಯು.ಡಿ.ಆರ್. ನಂಬ್ರ 30/15 ಕಲಂ 174 ಸಿ.ಆರ್.ಪಿ.ಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕಾರ್ಕಳ: ಚಿಕ್ಕಮಂಗಳೂರು ಜಿಲ್ಲೆ, ಮೂಡಿಗೆರೆ ತಾಲೂಕು, ಸಂಸೆ ಗ್ರಾಮ ಕಡೆಮನೆ ಎಂಬಲ್ಲಿಯ ವಾಸಿ ಪ್ರಾಯ 32 ವರ್ಷದ ಜಗದೀಶ್  ಎಂಬವರು ಹೊಟ್ಟೆ ನೋವು ಖಾಯಿಲೆಯಿಂದ ಬಳಲುತ್ತಿದ್ದು  ಚಿಕಿತ್ಸೆ ಬಗ್ಗೆ ಕಾರ್ಕಳದ ಸ್ಪಂದನಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾ, ದಿನಾಂಕ 25.07.2015 ರಂದು ಬೆಳಗ್ಗೆ 06:30 ಗಂಟೆಯಿಂದ 06:45 ಗಂಟೆಯ ನಡುವಿನ ಅವಧಿಯಲ್ಲಿ, ತನಗಿರುವ ಹೊಟ್ಟೆ ನೋವಿನ ಖಾಯಿಲೆಯಿಂದ ಜೀವನದಲ್ಲಿ ಬೇಸತ್ತು, ಅದೇ ಕೊರಗಿನಿಂದ ತಾನು ಚಿಕಿತ್ಸೆ ಬಗ್ಗೆ ದಾಖಲಾಗಿದ್ದ ಕಾರ್ಕಳದ ಸ್ಪಂದನಾ ಆಸ್ಪತ್ರೆಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ಠಾಣಾ ಯು.ಡಿ.ಆರ್. ನಂಬ್ರ 24/15 ಕಲಂ 174 ಸಿ.ಆರ್.ಪಿ.ಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಹಿರಿಯಡ್ಕ: ಸುಶೀಲಾ ಆಚಾರ್ತಿ(67) ಎಂಬವರು ಟಿಬಿ ಖಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಮಗಳ ಗಂಡ ಮರಣ ಹೊಂದಿರುವುದರರಿಂದ ಮನೆಯಲ್ಲಿ ಒಂಟಿಯಾಗಿ ಚಿಂತೆ ಮಾಡುತ್ತಾ ಬೇಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 23.07.2015 ರ ರಾತ್ರಿ 21.00 ಗಂಟೆಯಿಂದ ದಿನಾಂಕ 25.07.2015 ರ ಬೆಳಿಗ್ಗೆ 10.00 ಗಂಟೆಯ ಮನೆ ಹತ್ತಿರದ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ  ಹಿರಿಯಡ್ಕ ಪೊಲೀಸ್ಠಾಣಾ ಯು.ಡಿ.ಆರ್. ನಂಬ್ರ 14/15 ಕಲಂ 174 ಸಿ.ಆರ್.ಪಿ.ಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: