Tuesday, July 21, 2015

Daily Crimes reported as on 21/07/2015 at 19:30 Hrsಅಪಘಾತ ಪ್ರಕರಣಗಳು
  • ಕಾಫು: ಪಿರ್ಯಾದಿದಾರರಾದ ಉಮೇಶ್ ಶೆಟ್ಟಿ (60) ತಂದೆ: ದಿ/ ಪೂವಪ್ಪ ಶೆಟ್ಟಿ ವಾಸ: ಶ್ರೀ ನಿಧಿ ಸಾಯಿನಾಥ ಹೌಸ್, ರೈಲ್ವೆ ಬ್ರಿಡ್ಜ್ ಬಳಿ, ಪಯ್ಯೊಟ್ಟು ಮಜೂರು ಗ್ರಾಮ ಉಡುಪಿ ತಾಲೂಕುರವರು  ದಿನಾಂಕ 20/07/2015 ರಂದು ರಾತ್ರಿ 8:00 ಗಂಟೆಗೆ ಉಳಿಯಾರಗೋಳಿ ಗ್ರಾಮದ ದೇಸಿಕ್ರೂ ಎದುರು ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಪಶ್ವಿಮ ಬದಿಯಲ್ಲಿ ನಿಂತುಕೊಂಡಿರುವಾಗ ಆರೋಪಿ ಕೆಎ 20 ಪಿ 1763 ನೇ ಕಾರು ಚಾಲಕ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಒಮ್ಮೇಲೆ ರಸ್ತೆಯ ಪಶ್ವಿಮ ದಿಕ್ಕಿಗೆ ಬಂದು  ಡಿಕ್ಕಿ ಹೊಡೆದ ಪರಿಣಾಮ ಉಮೇಶ್ ಶೆಟ್ಟಿರವರಿಗೆ ರಕ್ತಗಾಯ ಆಗಿರುತ್ತದೆ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಬಗ್ಗೆ ಕಾಫು ಪೋಲಿಸ್ ಠಾಣಾ ಅಪರಾದ ಕ್ರಮಾಂಕ:144/2015 ಕಲಂ 279 337 .ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ, 
  • ಮಣಿಪಾಲ: ದಿನಾಂಕ 20/07/15ರಂದು ಪಿರ್ಯಾದಿ ಮಲ್ಲಿಕಾರ್ಜುನ, ತಂದೆ: ಸೋಮಪ್ಪ ಕೆಂಬಾವಿ, ವಾಸ: ಅಲ್ಲಾಳ ಅಂಚೆ, ಸುರಪುರ ತಾಲೂಕು, ಯಾದಗಿರಿ ಜಿಲ್ಲೆರೊಂದಿಗೆ ಕೆಲಸ ಮಾಡಿಕೊಂಡಿದ್ದ ಚಿದಾನಂದರವರು ಉಡುಪಿ ಮಣಿಪಾಲ ಹೆದ್ದಾರಿಯ ಬ್ಯಾಕಸಿನ್ಬಾರ್ಬಳಿ ರಾತ್ರಿ 20:30 ಗಂಟೆಗೆ ಸುಮಾರಿಗೆ ರಸ್ತೆ ದಾಟುತಿದ್ದಾಗ ಯಾವುದೋ ಕಾರು ಚಾಲಕನು ತಾನು ಚಲಾಯಿಸಿಕೊಂಡು ಬಂದ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಚಿದಾನಂದನಿಗೆ ಢಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಹೋಗಿದ್ದು, ರಸ್ತೆಗೆ ಬಿದ್ದ ಚಿದಾನಂದನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಮಲ್ಲಿಕಾರ್ಜುನರವರು ಹಾಗೂ ಸುರೇಶರವರು ಮಣಿಪಾಲ ಕೆಎಮ್ಸಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ, ಬಗ್ಗೆ ಮಣಿಪಾಲ ಪೋಲಿಸ್ ಠಾಣಾ ಅಪರಾದ ಕ್ರಮಾಂಕ: 142/15 ಕಲಂ 279,338 ಐಪಿಸಿ & ಕಲಂ 134(ಎ)(ಬಿ) ಐಎಮ್‌‌ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ,
ಹಲ್ಲೆ ಪ್ರಕರಣ :
  • ಬೈಂದೂರು: ದಿನಾಂಕ 20/07/2015 ರಂದು ಪಿರ್ಯಾದಿ ಪ್ರೇಮ (40) ಗಂಡ: ನಾಗೇಶ ವಾಸ: ಮಾಪಾರಿಮನೆ ಪಡುವರಿ ಗ್ರಾಮ ಕುಂದಾಪುರ ತಾಲೂಕುರವರಿಗೂ ಹಾಗೂ ಪಾಂಡು ಯಾನೆ ಗೋವಿಂದ ಸೇರುಗಾರರಿಗೆ ಜಾಗದ ವಿಚಾರದಲ್ಲಿ ಗಲಾಟೆ ಆಗಿದ್ದು, ಈ ಬಗ್ಗೆ ವಿಚಾರಣೆಗಾಗಿ ಪ್ರೇಮರವರ ಗಂಡ ಬೈಂದೂರು ಪೊಲೀಸ್ ಠಾಣೆಗೆ ಹೋಗಿರುವಾಗ ಪ್ರೇಮರವರೊಬ್ಬರೇ ಮನೆಯಲ್ಲಿದ್ದರು, ಸಮಯ ಸುಮಾರು 11:30 ಗಂಟೆ ಹೊತ್ತಿಗೆ ಪಾಂಡು ಯಾನೆ ಗೋವಿಂದ ಶೇರುಗಾರರ ಮಕ್ಕಳಾದ ರಾಜು, ರಮೇಶ, ಅಂಬು ಯಾನೆ ಮೂಕಾಂಬುರವರು ಪಿರ್ಯಾದಿ ಜಾಗದೊಳಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಅಂಬು ಯಾನೆ ಮೂಕಾಂಬು ಕೈಗಳಿಂದ ಹಿಡಿದು. ರಾಜು ದೊಣ್ಣೆಯಿಂದ ಬೆನ್ನಿಗೆ ಎಡಕೈಗೆ ಹೊಡೆದು,  ರಮೇಶನು ಕೈಗಳಿಂದ ಹೊಡೆದು ಕಾಲಿನಿಂದ ತುಳಿದು ಇನ್ನು ಮುಂದಕ್ಕೆ ಜಾಗದ ವಿಚಾರದಲ್ಲಿ ತಕರಾರು ಮಾಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿ, ಪಿರ್ಯಾದಿದಾರರು ಹೊಸದಾಗಿ ನಿರ್ಮಿಸುತ್ತಿರುವ ಮನೆಯ ಮೆಟ್ಟಿಲಿಗೆ ಅಳವಡಿಸಿದ ಸಿಮೆಂಟಿನ ಕಡವುಗಳನ್ನು ಒಡೆದು ಜಖಂ ಮಾಡಿ, ಮನೆಯ ಕಂಫೌಂಡಿಗೆ ಹಾಕಿದ ಶಿಲೆ ಕಲ್ಲುಗಳನ್ನು ಕೂಡಾ ತುಂಡು ಮಾಡಿ ಜಖಂ ಮಾಡಿರುತ್ತಾರೆ,  ಈ ಬಗ್ಗೆ ಬೈಂದೂರು ಪೋಲಿಸ್ ಠಾಣಾ ಅಪರಾದ ಕ್ರಮಾಂಕ: 201/2015 447,504,324,323,506,427  ಜೊತೆಗೆ  34 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ,
ಅಸ್ವಾಭಾವಿಕ ಮರಣ ಪ್ರಕರಣಗಳು
  • ಬೈಂದೂರು: ದಿನಾಂಕ 15-07-2015 ರಂದು ಸಂಜೆ ಪಿರ್ಯಾದಿದಾರರಾದ ಯಶೋಧ ದೇವಾಡಿಗ ತೆಂಗಿನ ಕಾಯಿ ಮನೆ ಬಿಜೂರು ಗ್ರಾಮ ಕುಂದಾಪುರ ತಾಲೂಕುರವರ ತಂಗಿ ಶಾರದಾ ಎಂಬವರು ಉಪ್ಪುಂದ ಮಾರ್ಕೆಟ್ ಬಳಿ ವಿಷ ಸೇವನೆ ಮಾಡಿಕೊಂಡು ಒದ್ದಾಡುತ್ತಿದ್ದವರನ್ನು ಯಾರೋ ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ದಿನಾಂಕ 17/07/2015 ರಂದು  ರಾತ್ರಿ ವೇಳೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ದಿನಾಂಕ 20/07/2015 ರಂದು 19:25 ಗಂಟೆಗೆ ಶಾರದಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ, ಬಗ್ಗೆ ಬೈಂದೂರು ಪೋಲಿಸ್ ಠಾಣಾ ಯುಡಿಅರ್  28/2015 : ಕಲಂ: 174   ಸಿಅರ್ಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ, 
  • ಕುಂದಾಪುರ: ಪಿರ್ಯಾದಿದಾರರಾದ ಬಾಬಣ್ಣ ಪೂಜಾರಿ (55) ವಾಸ: ಹೆಬ್ರಿಮನೆ, ಗೋಪಾಡಿ ಗ್ರಾಮ, ಕೋಟೇಶ್ವರ ಅಂಚೆ, ಕುಂದಾಪುರ ತಾಲೂಕು ರವರ ತಂದೆ ಬಸವ ಪೂಜಾರಿ (75) ರವರಿಗೆ ವಿಪರೀತ ಮದ್ಯಪಾನ ಮಾಡುವ ಚಟವಿದ್ದು, ನಿಯಂತ್ರಿಸುವ ಸಲುವಾಗಿ ಅವರಿಗೆ ಹಣ ಸಿಗದಂತೆ ಮಾಡಿದ್ದು, ಅದೇ ಸಿಟ್ಟಿನಿಂದ ದಿನಾಂಕ 18/0/.2015 ರಂದು ಸಂಜೆ 6:00 ಗಂಟೆಗೆ ವಾಸ್ತವ್ಯದ ಮನೆಯಲ್ಲಿ ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಹೆಬ್ರಿಮನೆ ಎಂಬಲ್ಲಿ ಕೃಷಿಗೆ ತಂದಿರಿಸಿದ ಕೀಟನಾಶಕವನ್ನು ಮದ್ಯದೊಂದಿಗೆ ಸೇವಿಸಿದ್ದು, ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ದಿನಾಂಕ 20/07/2015 ರಂದು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 21/07/.2015 ರಂದು ಬೆಳಿಗ್ಗೆ 07:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಬಗ್ಗೆ ಕುಂದಾಪುರ ಪೋಲಿಸ್ ಠಾಣಾ ಯುಡಿಅರ್  30/2015, ಕಲಂ:  174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ, 
  • ಕುಂದಾಪುರ: ಪಿರ್ಯಾದಿದಾರರಾದ ಹರೀಶ ಶೆಟ್ಟಿ (32) ವಾಸ: ಹಾರ್ಯಾಡಿ, ಹೆಸ್ಕತ್ತೂರು ಗ್ರಾಮ,  ಕುದಾಪುರ ತಾಲೂಕುರವರ ತಂದೆ ವಿಠಲ ಶೆಟ್ಟಿ (70) ರವರಿಗೆ ವಿಪರೀತ ಕುಡಿತದ ಚಟ ಇದ್ದು, ಅದೇ ಚಿಂತೆಯಲ್ಲಿ ಜೀನವದಲ್ಲಿ ಜಿಗುಪ್ಸೆಗೊಂಡು ದಿನಾಂಕ 21/07/2015 ರಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 2:30 ಗಂಟೆ ನಡುವೆ ಕುಂದಾಪುರ ತಾಲೂಕು ಹೆಸ್ಕತ್ತೂರು ಗ್ರಾಮದ ಹಾರ್ಯಾಡಿ ಎಂಬಲ್ಲಿ ಕರುಣಾಕರ ಭಂಡಾರಿ ಯವರಿಗೆ ಸಂಬಂಧಪಟ್ಟ ರಬ್ಬರ್ಫ್ಲಾಂಟ್ ಮಧ್ಯ ಇರುವ ಬಾವಿಗೆ ತನ್ನ ಕಾಲಿಗೆ ಹಗ್ಗವನ್ನು ಕಟ್ಟಿಕೊಂಡು ಬಾವಿಯ ನೀರಿಗೆ ಹಾರಿ, ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಬಗ್ಗೆ ಕುಂದಾಪುರ ಪೋಲಿಸ್ ಠಾಣಾ ಯುಡಿಅರ್  31/2015, ಕಲಂ:174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ,

No comments: