Wednesday, July 22, 2015

Daily Crimes Reported As on 22/07/2015 at 07:00 Hrs

ಅಪಘಾತ ಪ್ರಕರಣ
  • ಬ್ರಹ್ಮಾವರ: ದಿನಾಂಕ: 21/07/2015 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿ ಯಶೋದ ವಿ ಶೆಟ್ಟಿ (45) ಗಂಡ: ವಿಜಯ ಕುಮಾರ, ವಾಸ : ಹೆದ್ದಾರಿ ಮನೆ , ಬೈಕಾಡಿ ಗ್ರಾಮರವರು ಬ್ರಹ್ಮಾವರ ಬಸ್  ನಿಲ್ದಾಣದಲ್ಲಿ  ಬಸ್ ನಿಂದ ಇಳಿದು ಅಂಗಡಿಗೆ ಹೋಗಿ ವಾಪಾಸು ಬರುವಾಗ ಕುಂದಾಪುರದಿಂದ ಉಡುಪಿ ಕಡೆಗೆ ಹೋಗುವ ದುರ್ಗಾಂಬಾ ಬಸ್ ನಂಬ್ರ ಕೆಎ 20 ಬಿ 4404 ನ್ನು ಅದರ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಬಂದು ಯಶೋದ ವಿ ಶೆಟ್ಟಿರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರ ಎಡ ಕೈ ಮೊಣಗಂಟು ಮತ್ತು ಮೊಣಕಾಲಿನ ಗಂಟಿಗೆ ಗಾಯವಾಗಿದ್ದು ಮೈಗೆ ಗುದ್ದಿದ ನೋವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣಾ ಅಪರಾದ ಕ್ರಮಾಂಕ: 145/15 ಕಲಂ:279.337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ,
  • ಶಂಕರನಾರಾಯಣ: ದಿನಾಂಕ 20/07/2015 ರಂದು ಮದ್ಯಾಹ್ನ 2:00 ಗಂಟೆಗೆ ಪಿರ್ಯಾದಿ ಸಂದೀಪ್‌ ಕುಂದರ್‌ (26) ತಂದೆ: ಹನುಮಂತರಾಯ, ವಾಸ: ಭಟ್ರಹಾಡಿ, ಕುಂದಾಪುರ ಇವರು ಕುಂದಾಪುರದಿಂದ ಆಗುಂಬೆಗೆ ಓಮ್ನಿ ಕಾರು ಕೆಎ 30 ಬಿ 4158 ರಲ್ಲಿ ಲೋಕೇಶ್‌ ಸಂದೀಪ್‌ ಪೂಜಾರಿ, ಶರತ್‌ಕುಮಾರ್‌ ಖಾರ್ವಿ ಚಾಲಕ ಅನಿಲ್‌ ಇವರೊಂದಿಗೆ ಹೊರಟಿದ್ದು, ವಾಪಾಸು ಕುಂದಾಪುರಕ್ಕೆ ಬರುತ್ತಿರುವಾಗ ರಾತ್ರಿ 8:30 ಗಂಟೆ ಸಮಯಕ್ಕೆ ಹಾಲಾಡಿ ವಾರಾಹಿ ಕಾಲುವೆ ಹತ್ತಿರ ಇಳಿಜಾರು ರಸ್ತೆಯಲ್ಲಿ ಬರುತ್ತಿರುವಾಗ  ಕಾರಿನ ಚಾಲಕ ಅನಿಲ್‌ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿದ್ದರಿಂದ ಕಾರಿನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿ ಚರಂಡಿಗೆ ಬಿದ್ದ ಪರಿಣಾಮ ಸಂದೀಪ್‌ ಕುಂದರ್‌ ರವರಿಗೆ ಹಾಗು ಲೋಕೇಶ್‌ ರವರಿಗೆ ರಕ್ತ ಗಾಯ ಹಾಗೂ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣಾ ಅಪರಾದ ಕ್ರಮಾಂಕ: 155/15 ಕಲಂ:279 338  ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ,
  • ಉಡುಪಿ: ಪಿರ್ಯಾದಿ ಸುರೇಂದ್ರ (31) ತಂದೆ: ಬೂದ ಕುಂದರ್ ವಾಸ: ಅರ್ಚನ ನಿಲಯ ಮಣೂರು ಪಡುಕೆರೆ ಕೋಟತಟ್ಟು ಅಂಚೆ ಉಡುಪಿರವರು  ದಿನಾಂಕ; 21/07/2015 ರಂದು ಕೆಲಸ ಮುಗಿಸಿ ತನ್ನ ಮೋಟಾರ್ ಸೈಕಲ್ ನಂಬ್ರ ಕೆಎ 20 ಇಬಿ 2867 ನೇದರಲ್ಲಿ ಮನೆಗೆ ಹೋಗುತ್ತಿರುವಾಗ ಸುಮಾರು ಬೆಳಿಗ್ಗೆ 10:45 ಗಂಟೆಗೆ ಲಕ್ಷ್ಮಿ ನಗರ ಬಳಿ ತಲುಪುವಷ್ಟರಲ್ಲಿ ಕೆಎ 20 ಎನ್ 2551 ನೇ ಕಾರು ಚಾಲಕ ಸೋಮನಾಥ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆ,ಮುಖಕ್ಕೆ,ಸೊಂಟಕ್ಕೆ,ಕಾಲಿಗೆ ಮತ್ತು ಭುಜಕ್ಕೆ ಗುದ್ದಿದ ಗಾಯವಾಗಿದ್ದು, ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ, ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣಾ ಅಪರಾದ ಕ್ರಮಾಂಕ: 78/2015 ಕಲಂ:279, 337 ಐಪಿಸಿ ಪ್ರಕರಣ ದಾಖಲಾಗಿರುತ್ತದೆ,
ಸುಲಿಗೆ ಪ್ರಕರಣ
  • ಮಣಿಪಾಲ: ದಿನಾಂಕ 21.07.15 ರಂದು 19:20 ಗಂಟೆಗೆ ಪಿರ್ಯಾದಿ ಡಾ. ಸ್ಮಿತಾ ರವಿ, ಗಂಡ: ರವಿ, ವಾಸ: ಸೀತಾ ಕುಂಜ್ಞಿ, ಎಮ್‌ಜಿಎಮ್ ಕಾಲೇಜ್‌ ಹಿಂಬದಿ, ಕುಂಜಿಬೆಟ್ಟು, ಉಡುಪಿರವರು ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಫ್ಯಾಷನ್‌ ಟೈಲರ್‌ ಬಳಿ ನಡೆದುಕೊಂಡು ಹೋಗುತ್ತಿರುವ ಸಮಯ ಇಬ್ಬರು ಹಿಂದಿನಿಂದ ಬೈಕಿನಲ್ಲಿ ಬಂದು ಬ್ಯಾಗ್‌‌ನ್ನು ಎಳೆದುಕೊಂಡು ಹೋಗಿದ್ದು, ಸದ್ರಿ ಬ್ಯಾಗಿನಲ್ಲಿ S6 Edge Samsung Phone, ATM Card, House Key, Wallet, Cash 1700/- & Lipstick Mac ಇದ್ದುದಾಗಿರುತ್ತದೆ, ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣಾ ಅಪರಾದ ಕ್ರಮಾಂಕ: 143/15 ಕಲಂ 392 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ,
 ಇತರ ಪ್ರಕರಣ:
  • ಉಡುಪಿ: ಪಿರ್ಯಾದಿ: ರೋಯ್‌ ಎ.ಎಮ್‌ ಭರತ್‌ ಟೈಲ್‌ ಫ್ಯಾಕ್ಟ್ರರಿ ಎದುರುಗಡೆ, ವಾಸುಕಿ ನಗರ , ಸಂತೆಕಟ್ಟೆ, ಉಡುಪಿ ರವರು ಉಪ್ಪಿನಕಾಯಿ ತಯಾರಿಕ ಪ್ಯಾಕ್ಟರಿ ಮತ್ತು ಹಣ್ಣಿನ ವ್ಯವಹಾರ ಉಡುಪಿಯಲ್ಲಿ ಸುಮಾರು 20 ವರ್ಷದಿಂದ ನಡೆಸಿಕೊಂಡಿದ್ದು ಅವರು 2013 ಏಪ್ರಿಲ್‌ ತಿಂಗಳಲ್ಲಿ ಬ್ಯಾಂಕ್ ನಿಂದ ಮಾಡಿದ ಸಾಲವನ್ನು ತೀರಿಸಲು ಅಸಾಧ್ಯಗೊಂಡಿರುವುದರಿಂದ ಆರೋಪಿತ ಅನಿಲ್‌ ಎ.ವಿ ಎಂಬವರಿಂದ 2.6 ಲಕ್ಷ ಹಣವನ್ನು ಖಾಸಗಿಯಾಗಿ ಬಡ್ಡಿ ವ್ಯವಹಾರದ ಸಾಲವನ್ನು ತೆಗೆದುಕೊಂಡಿದ್ದು ಆ ಬಗ್ಗೆ ಸಾಲ ಮರುಪಾವತಿಗೆ ಕಟಪಾಡಿ ಸಿಂಡಿಕೇಟ್‌ ಬ್ಯಾಂಕ್‌ನ ಮೂರು ಖಾಲಿ ಚಕ್‌ಗಳನ್ನು ಆರೋಪಿತರು ಪಡೆದುಕೊಂಡಿದ್ದಾರೆ, ತನ್ಮಧ್ಯ ಫಿರ್ಯಾದಿದಾರರು ಆರೋಪಿತನ ಫೆಡರಲ್‌ ಬ್ಯಾಂಕ್‌ ಖಾತೆಗೆ 1 ಲಕ್ಷ ರೂ ಹಣ ಮರುಪಾವತಿ ಮಾಡಿರುತ್ತಾರೆ ಉಳಿದ ಹಣ 2 ಲಕ್ಷಕ್ಕೆ ಬರೋಡಾ ಬ್ಯಾಂಕ್‌ನ  ಚೆಕ್‌ ಪಾವತಿಸಿದ್ದು ಆರೋಪಿತನಲ್ಲಿರುತ್ತದೆ ಅನಂತರ ಫಿರ್ಯಾದಿದಾರರು ಕೆನರ ಬ್ಯಾಂಕ್‌ ಕೋರ್ಟ್‌ ರೋಡ್‌ ಶಾಖೆಗೆ ಚೆಕ್‌ ಮೂಲಕ ದಿನಾಂಕ: 15/11/2014ರಂದು 1 ಲಕ್ಷ ಹಣ ಪಾವತಿಸಿರುತ್ತಾರೆ ತದನಂತರ ಫಿರ್ಯಾದಿದಾರರು ಆರೋಪಿತನ ಪೆಡರಲ್‌ ಬ್ಯಾಂಕ್‌ ಖಾತೆಗೆ NEFT  ದಿನಾಂಕ: 19/01/2015ರ ಮುಖಾಂತರ ರೂ 80 ಸಾವಿರ ವನ್ನು ಪಾವತಿಸಿದ್ದು ಆ ನಂತರ ಆರೋಪಿತನಲ್ಲಿ ಸಾಲದ ಹಣದ ಬಗ್ಗೆ ಮಾತುಕತೆ ನಡೆಸಿ ಪಿರ್ಯಾದಿದಾರರು  ತನ್ನ ಚೆಕ್‌ಗಳನ್ನು ವಾಪಸ್ಸು ಕೇಳಿದಾಗ ಆತನು 5 ಲಕ್ಷ ಹಣವನ್ನು ಕೊಡಬೇಕಾಗಿ ಅಗ್ರಹಿಸುತ್ತಿದ್ದು ಇಲ್ಲವಾದಲ್ಲಿ ಖಾಲಿ ಚೆಕ್‌ ಗಳಲ್ಲಿ ಮೊತ್ತವನ್ನು ಬರೆದು ಎನ್‌. ಐ ಕಾಯಿದೆಯಂತೆ ವಸೂಲಾತಿಗೆ ಕ್ರಮ ಕೈಗೊಳ್ಳುವುದಾಗಿ ಕಿರುಕುಳ  ನೀಡಿರುತ್ತಾರೆ. ಈ ಬಗ್ಗೆ ರೋಯ್‌ ಎ.ಎಮ್‌ ರವರು ನೀಡಿದ ದೂರಿನಂತೆ ಉಡುಪಿ ನಗರ ಪೋಲಿಸ್ ಠಾಣಾ ಅಪರಾಧ ಕ್ರಮಾಂಕ: 169/15 ಕಲಂ 3,4 Karnataka Prohibition of Exorbitant Interest Act 2014 & Sec 38,39 K.Money Lenders Act 1961 ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: