Tuesday, July 21, 2015

Daily Crimes reported as on 21/07/2015 at 17:00 Hrs



ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 20-07-2015 ರಂದು ಸಂಜೆ 7:45 ಗಂಟೆಗೆ ಉಡುಪಿ ತಾಲೂಕು, ದೂಪದಕಟ್ಟೆ, ಹಾರಾಡಿ ಕ್ರಾಸ್ ಬಳಿ , ರಾಹೆ 66 ರಲ್ಲಿ ಪಿರ್ಯಾದಿ ರಾಘು ಶೆಟ್ಟಿ ಇವರು ತನ್ನ ಬಾಬ್ತು ಕೆಎ-20-ಇಡಿ-7961 ನೇ ಮೋಟಾರ್ ಸೈಕಲ್‌ ನಲ್ಲಿ ಸಹಸವಾರ ಸುನಿಲ್ ರೋಡ್ರಿಗಸ್ ರವರೊಂದಿಗೆ ಕುಳಿತುಕೊಂಡು ಉಡುಪಿ ಕಡೆಯಿಂದ  ಬ್ರಹ್ಮಾವರ ಕಡೆಗೆ ಬರುತ್ತಿರುವಾಗ ಹೊನ್ನಾಳ ಕಡೆಯಿಂದ ಆರೋಪಿ ತನ್ನ ಬಾಬ್ತು ಕೆಎ-20-ಇಸಿ-6035 ನೇ ಮೋಟಾರ್ ಸೈಕಲ್‌ ನಲ್ಲಿ ಸಹ ಸವಾರಳು ವಿಯ ಪೂಜಾರ್ತಿ ರವರನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರ ಮತ್ತು ಸಹ ಸವಾರ ಸುನಿಲ್ ರೊಡ್ರಿಗಸ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಗುದ್ದಿದ ಒಳನೋವು ಮತ್ತು ಬಲಕಾಲಿನ ಮೊಣಗಂಟಿನ ಬಳಿ ಗುದ್ದಿದ ನೋವು ಹಾಗೂ ಸುನಿಲ್ ರೊಡ್ರಿಗಸ್‌ ರವರಿಗೆ ಎರಡೂ ಕಾಲುಗಳ ಬೆರಳಿಗೆ ತರಚಿದ ಗಾಯ , ಹಣೆಗೆ, ತಲೆಗೆ ರಕ್ತಗಾಯವಾಗಿದ್ದು, ಆರೋಪಿ ಮೋಟಾರ್ ಸೈಕಲ್ ಸಹ ಸವರಳಾದ ವಿನಯ ಪೂಜಾರ್ತಿ ರವರಿಗೆ ಕುತ್ತಿಗೆ ಹಾಗೂ ತಲೆಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 144/2015 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ಪಿರ್ಯಾದಿ ಶಶಿಧರ ಇವರು ದಿನಾಂಕ: 21.07.2015 ರಂದು ಕಾರ್ಕಳ ತಾಲೂಕು ಕಸಬಾ ಗ್ರಾಮದ ಗುಂಡ್ಯಡ್ಕ ಮಂಜುನಾಥ್ ಪೈ ಕಾಲೇಜಿಗೆ ಕೆ,20 ಸಿ 7775 ನೇ ಬಸ್ಸಿನಲ್ಲಿ ಕಾರ್ಕಳ ಕಡೆಯಿಂದ ಗುಂಡ್ಯಡ್ಕ ಕಡೆಗೆ ಹೋಗುತ್ತಿದ್ದು, ಬಸ್ಸನ್ನು ಅದರ ಚಾಲಕ ಪ್ರವೀಣ್ ಎಂಬುವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸುತ್ತಿದ್ದು, ಸದ್ರಿ ಬಸ್ಸು ಗುಂಡ್ಯಡ್ಕದ ಸಂಜೀವ  ಭಂಡಾರಿ ಎಂಬುವರ ಅಂಗಡಿಯಿಂದ ಸ್ವಲ್ಪ ದೂರದಲ್ಲಿ ಮುಂದಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಬಿಡುವ ಸಮಯದಲ್ಲಿ  ಬಸ್ ಚಾಲಕನ ನಿಯಂತ್ರಣ ತಪ್ಪಿ ಎಡ ಬದಿಯಲ್ಲಿದ್ದ ಕಣಿವೆಗೆ ಉರುಳಿ ಬಿದ್ದಿದ್ದು ಬಸ್ಸಿನಲ್ಲಿದ್ದ ಪಿರ್ಯಾದಿದಾರರಿಗೆ ಬಲಕೈ ಮೊಣಗಂಟಿನ ಹತ್ತಿರ ಜಜ್ಜಿದ ಗಾಯವಾಗಿರುತ್ತದೆ. ಹಾಗೂ ಇತರ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯವಾಗಿ ಚಿಕಿತ್ಸೆ ಬಗ್ಗೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 103/2015 ಕಲಂ 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ

  • ಉಡುಪಿ: ಮಾನ್ಯ ಉಡುಪಿ ಎಸಿಜೆ ಮತ್ತು ಜೆಎಂಏಫ್‌ಸಿ ನ್ಯಾಯಾಲಯದ ಸಿಸಿನಂಬರ್‌ 2873/10ರ ಲ್ಲಿನ ಆರೋಪಿತ 1.  Manikanta, ,Karamballi Janatha, Colony,Kunjibettu, 2. Bharath Ganiga,,1st Cross Pragathi,Nagara,Alevoor, Village, udupi, 3 Eshvara esha, ,1st Cross, Nethajinagara,80 Badagabettu, 4.Prasad Ganiga,5th Cross,Pragathinagara,Alevoor Village, 5 Sunil Mendon, ,1st Cross Nethajinagara,80 badagabettuudupi, 6 Shashi Kumar Shashi, 1st Cross Pragathi Nagara,Alevoor Village, Udupi, 7. Sameer  ,2nd Cross Pragathinagara, Alevoor Village, Udupi, ಇವರುಗಳು ಪ್ರಕರಣದಲ್ಲಿ ಜಾಮೀನು ಪಡೆಯುವ ಸಮಯದಲ್ಲಿ ಮಾನ್ಯ ನ್ಯಾಯಾಲಯದಲ್ಲಿ ಸುಳ್ಳಾಗಿ ಪ್ರಮಾಣಿಕರಿಸಿದ ದಾಖಲೆ ಮತ್ತು ಸುಳ್ಳಾದ ಅಫಿದಾವಿತ್‌ ದಿನಾಂಕ: 04/03/2010ರೊಂದಿಗೆ ಬೇರೊಬ್ಬರ ಆರ್‌ಟಿಸಿ ದಾಖಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಅಪರಾಧವೆಸಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 167/2015 ಕಲಂ 181, 200 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಉಡುಪಿ: ದಿನಾಂಕ: 20/07/2015ರಂದು ಸಂಜೆ ಸುಮಾರು 6:00ಗಂಟೆಗೆ ಉಡುಪಿ ಸರ್ವಿಸ್‌ ಬಸ್ಸ್‌ನಿಲ್ದಾಣದ ಬಳಿಯಿರುವ ಆಟೋ ರಿಕ್ಷಾ ನಿಲ್ದಾಣದಲ್ಲಿ ಫಿರ್ಯಾದಿ ಸಂಜೀವ ಪೂಜಾರಿ ಇವರು ತನ್ನ ರಿಕ್ಷಾ ನಂಬರ್‌ ಕೆಎ20ಸಿ732ನೇದರಲ್ಲಿ ಬಾಡಿಗೆ ಬಗ್ಗೆ ಹೊರಡುತ್ತಿದ್ದಾಗ ಅರೋಪಿ ಸುಬ್ಬು @ ಸುಬ್ರಹ್ಮಣ್ಯ ಎಂಬವನು ತನ್ನ ರಿಕ್ಷಾ ನಂಬರ್‌ ಕೆಎ20ಎ9192ನೇದನ್ನು ಫಿರ್ಯಾದಿದಾರರ ರಿಕ್ಷಾಕ್ಕೆ ಅಡ್ಡನಿಲ್ಲಿಸಿ ಮುಂದಕ್ಕೆ ಹೋಗದಂತೆ ತಡೆದು ಚೂರಿಯಿಂದ ತಿವಿದು ಕೊಲ್ಲುತ್ತೇನೆ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 168/2015 ಕಲಂ 341, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಕೃಷ್ಣ ನಾಯ್ಕ್‌ (40) ಎಂಬುವವರು ವಿಪರೀತ ಶರಾಬು ಸೇವಿಸುವ ಅಭ್ಯಾಸವನ್ನು ಹೊಂದಿದ್ದು, ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು, ತನ್ನ ತಾಯಿಯೊಂದಿಗೆ ಶಿವಪುರ ಗ್ರಾಮದ ಮೇಲ್ಬೆಟ್ಟು ಎಂಬಲ್ಲಿ ವಾಸವಾಗಿರುವುದಾಗಿದ್ದು, ಸದ್ರಿಯವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19-07-2015 ರಂದು ಬೆಳಿಗ್ಗೆ 5:00 ಗಂಟೆಯಿಂದ ಈ ದಿನ ದಿನಾಂಕ 21-07-2015 ರಂದು ಬೆಳಿಗ್ಗೆ 6:00 ಗಂಟೆಯ ಮಧ್ಯಾವಧಿಯಲ್ಲಿ ಶಿವಪುರ ಗ್ರಾಮದ ಕಾಕಿಳ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೋಲಿಸ್ ಠಾಣೆ ಯಡಿಆರ್ ಕ್ರಮಾಂಕ 29/2015 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಪಿಲಿಚಂಡಿ ಸ್ಥಾನ ಎಂಬಲ್ಲಿಯ ವಾಸಿ ಪ್ರಾಯ 37 ವರ್ಷದ ಕುಮಾರ ಎಂಬವರು ದಿನಾಂಕ 20.07.2015 ರಂದು ರಾತ್ರಿ 8:30 ಗಂಟೆಯಿಂದ 09:55 ಗಂಟೆಯ ನಡುವಿನ ಅವಧಿಯಲ್ಲಿ ತಾನು ವಾಸವಾಗಿದ್ದ ಮನೆಯಲ್ಲಿ ಅಸ್ವಸ್ಥಗೊಂಡು ಬಿದ್ದಿದವನನ್ನು ಚಿಕಿತ್ಸೆ ಬಗ್ಗೆ  ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮದ್ಯೆದಲ್ಲಿ  ಮೃತಪಟ್ಟಿರುತ್ತಾನೆ.   ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಯಡಿಆರ್ ಕ್ರಮಾಂಕ 23/2015 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ಚಂದು ಪೂಜಾರಿ ಪ್ರಾಯ:65 ವರ್ಷ ಎಂಬುವರು ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೆ ಇದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:07/07/2015 ರಂದು ರಾತ್ರಿ ಸುಮಾರು 11:00 ಗಂಟೆಗೆ ಯಾವುದೋ ಕೀಟನಾಶಕ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರಗೆ ದಾಖಲಿಸಿದ್ದು  ಚಿಕಿತ್ಸೆಗೆ ಸ್ಪಂದಿಸಿದೆ ಇರುವುದರಿಂದ ಅವರನ್ನು ದಿನಾಂಕ:21/07/2015 ರಂದು 12:00 ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಿ ಮನೆಗೆ ಕರೆದು ಕೊಂಡು ಹೋಗಿದ್ದು ಮಧ್ಯಾಹ್ನ ಸುಮಾರು 12:45 ಗಂಟೆಗೆ ಮನೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಯಡಿಆರ್ ಕ್ರಮಾಂಕ 29/2015 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: