Tuesday, July 21, 2015

Daily Crimes reported as on 21/07/2015 at 07:00 Hrs

ಅಪಘಾತ ಪ್ರಕರಣ  

  • ಕುಂದಾಪುರ: ದಿನಾಂಕ 20/07/2015 ರಂದು ಸಂಜೆ 7:30 ಗಂಟೆಗೆ ಕುಂದಾಪುರ ತಾಲೂಕು ಬಸ್ರೂರು  ಗ್ರಾಮದ ರೂಪ ಮೂನ್‌‌ ಲ್ಯಾಂಡ್ ಬಾರ್ ಬಳಿ  ರಾಜ್ಯ ರಸ್ತೆಯಲ್ಲಿ  ಆಪಾದಿತ ನಾಗರಾಜ ಶೆಟ್ಟಿ ಎಂಬವರು KA 20 EH 4424 ನೇ ಬೈಕ್ ನಲ್ಲಿ ಹರೀಶ ಶೆಟ್ಟಿ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಬದಿಗೆ ಯಾವುದೇ ಸೂಚನೆ ನೀಡದೆ ತಿರುಗಿಸಿ, ಬಳ್ಕೂರು ಕಡೆಯಿಂದ ಬಸ್ರೂರು ಕಡೆಗೆ ಪಿರ್ಯಾದಿದಾರರಾದ ರವಿ ಆಚಾರಿ (23) ತಂದೆ:ಶಂಕರ ಆಚಾರಿ ವಾಸ: ರ್ಶ್ರೀ ವಿನಾಯಕ ಬಡ್ತಿ ಮಕ್ಕಿ, ಬಳ್ಕೂರು ಗ್ರಾಮ ಇವರು ಮಂಜುನಾಥ  ಪೂಜಾರಿಯವರನ್ನು ಸಹ ಸವಾರಾಗಿ ಕುಳ್ಳೀರಿಸಿಕೊಂಡು  ಸವಾರಿ ಮಾಡಿಕೊಂಡು ಬರುತ್ತಿದ್ದ  KA 20 V 1465 ನೇ ಬೈಕಿಗೆ ಎದುರುಗಡೆಯಿಂದ ಅಪಘಾತಪಡಿಸಿದಾಗ  ಬೈಕ್‌‌‌‌‌ಗಳು ಸವಾರರ ಸಮೇತ ರಸ್ತೆಯಲ್ಲಿ ಉರುಳಿ ಬಿದ್ದಾಗ  ನಡೆದುಕೊಂಡು ಹೋಗುತ್ತಿದ್ದ  ಅಕ್ಷಯ ಆಚಾರಿಯವರಿಗೆ  ತಾಗಿ  ರವಿ ಆಚಾರಿ, ಮಂಜುನಾಥ  ಪೂಜಾರಿ, ಹರೀಶ  ಶೆಟ್ಟಿ  ಹಾಗೂ ಅಕ್ಷಯ ಆಚಾರಿ ಗಾಯಗೊಂಡು ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ.ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 86/2015  ಕಲಂ 279,337, 338  ಐಪಿಸಿಯಂತೆ   ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ  

  • ಗಂಗೊಳ್ಳಿ : ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ರಸ್ತೆಯ ನಿವಾಸಿ ಶ್ರೀಮತಿ ದೇವಕಿ ದೇವಾಡಿಗ ರವರ ತಮ್ಮ ಯೋಗೇಂದ್ರ ದೇವಾಡಿಗ (33)  ಎಂಬವನು ದಿನಾಂಕ:19/07/2015 ರಂದು ಸಂಜೆ 6:00 ಗಂಟೆಗೆ ಮನೆಯಿಂದ ಹೊರಗಡೆ ಹೋದವನು ವಾಪಾಸು ಬರದೇ ಕಾಣೆಯಾಗಿದ್ದು ಮನೆಯವರು ಹುಡುಕಾಡುವಾಗ  ದಿನಾಂಕ: 20/07/2015 ರಂದು ಬೆಳ್ಳಿಗ್ಗೆ ಮ್ಯಾಂಗನೀಸ್ ರಸ್ತೆಯಲ್ಲಿ ಪಂಚಾ ಗಂಗಾವಳಿ ಹೊಳೆಯ ದರ್ಗದಲ್ಲಿ  ಯೋಗೇಂದ್ರ ದೇವಾಡಿಗನ ಶರ್ಟ್ ಹಾಗೂ ಚಪ್ಪಲಿ ಕಂಡು ಬಂದಿದ್ದು ಯೋಗೇಂದ್ರ ದೇವಾಡಿಗನು ರಾತ್ರಿ ಪಂಚಾ ಗಂಗಾವಳಿ ಹೊಳೆಯಲ್ಲಿ ಮೀನು ಹಿಡಿಯಲು ಗಾಳ ಹಾಕುವ ಸಮಯ ಹೊಳೆಯಲ್ಲಿ  ಒಮ್ಮೇಲೆ ನೆರೆ ಬಂದು ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಯಡಿಆರ್ ಕ್ರಮಾಂಕ 11/2015 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಬೈಂದೂರು: ದಿನಾಂಕ 20/07/2015 ರಂದು ಪಿರ್ಯಾದಿದಾರರಾದ ಗೋವಿಂದ ಶೇರುಗಾರ್ (64) ತಂದೆ:ದಾಸಪ್ಪ ಶೇರುಗಾರ್ ವಾಸ: ಹೊನ್ನಯ್ಯನ ಮನೆ ಪಡುವರಿ ಗ್ರಾಮ ಕುಂದಾಪುರ ತಾಲೂಕು ಇವರ ಹೆಂಡತಿ ಮನೆಯ ಬಳಿ ಇರುವಾಗ ಅನಿಲ ಹಾಗೂ ಪ್ರೇಮ ಎಂಬವರು ಗೋವಿಂದ ಶೇರುಗಾರ್ ರವರ  ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು, ರಾಡ್‌ನಿಂದ ಹೊಡೆದು ಹೋಗಿರುತ್ತಾರೆ. ಮದ್ಯಾಹ್ನ 1:30 ಗಂಟೆಗೆ ಗೋವಿಂದ ಶೇರುಗಾರ್ ಅವರ ಹಿತ್ತಲಿನಲ್ಲಿ ಇರುವಾಗ ನಾಗೇಶ ಎಂಬವರು ಹಿತ್ತಲಿನ ಒಳಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಹೋಗಿರುತ್ತಾರೆ.ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 199/2015 ಕಲಂ 447,324,504, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

 ಜುಗಾರಿ ಪ್ರಕರಣ  

  • ಬೈಂದೂರು: ದಿನಾಂಕ 20/07/2015 ರಂದು ಅಪರಾಹ್ನ  3:30 ಗಂಟೆಯ ವೇಳೆಗೆ ಸುದರ್ಶನ್‌ ಎಮ್‌ ವೃತ್ತನಿರೀಕ್ಷಕರು ಬೈಂದೂರು ವೃತ್ತ ಇವರಿಗೆ ಕುಂದಾಪುರ ತಾಲೂಕು ನಾವುಂದ  ಗ್ರಾಮದ  ವಿನಾಯಕ ಹೋಟೆಲ್ ಬಳಿಯ  ಸಾರ್ವಜನಿಕ  ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಠಾಣಾ ಸಿಬ್ಬಂದಿಯವರೊಂದಿಗೆ ಸಂಜೆ 4:30 ಗಂಟೆಗೆ ದಾಳಿ ಮಾಡಿ ಇಸ್ಪೀಟು ಜುಗಾರಿ ಆಟದಲ್ಲಿ ತೊಡಗಿದ್ದ 1) ಸೀತಾರಾಮ (37) ತಂದೆ:ಸೂಲ್ಯಣ್ಣ ಶೆಟ್ಟಿ, ವಾಸ: 11 ನೇ ಉಳ್ಳೂರು ಗ್ರಾಮ, ಕುಂದಾಪುರ  ತಾಲೂಕು,2) ಸುರೇಶ ಪೂಜಾರಿ (34)  ತಂದೆ:ಸುಬ್ರಹ್ಮಣ್ಯ, ವಾಸ: ನಾವುಂದ ಗ್ರಾಮ, ಕುಂದಾಪುರ  ತಾಲೂಕು, 3) ರಾಜ ಮೊಗವೀರ (24) ತಂದೆ: ಸೂರ ಮೊಗವೀರ,  ವಾಸ: ನಾವುಂದ ಗ್ರಾಮ,  ಕುಂದಾಪುರ  ತಾಲೂಕು, 4) ಉದಯ (32) ತಂದೆ:ಮೊನಪ್ಪ ಹರಿಕಾಂತ   ವಾಸ: ಕನಗಿಲ್ ಇಚಗಡ ಅಂಚೆ, ಒಂಡೆಭಾಗ ಗ್ರಾಮ, ಅಂಕೋಲ ತಾಲೂಕು, 4) ಶಿವ (27) ತಂದೆ: ಗಣೇಶ್‌  ವಾಸ: ಗೋಳಿಹೊಳೆ ಅಂಚೆ ಮತ್ತು ಗ್ರಾಮ, ಕುಂದಾಪುರ  ತಾಲೂಕು, 5) ಶರತ್ ಕುಮಾರ್ ( 28)  ತಂದೆ: ವೆಂಕಟ ಪೂಜಾರಿ  ವಾಸ: ಹೊಸ್ಕೋಟೆ, ಬಿಜೂರು ಗ್ರಾಮ, ಕುಂದಾಪುರ ತಾಲೂಕು, 6) ಮಂಜುನಾಥ ಪ್ರಾಯ 29 ತಂದೆ: ನಾರಾಯಣ ಬಿಜೂರು ಗ್ರಾಮ, ಕುಂದಾಪುರ ತಾಲೂಕು  ರನ್ನು ಹಿಡಿದು ಅಂದರ್ ಬಾಹರ್ ಜುಗಾರಿ ಆಟಕ್ಕೆ ಉಪಯೋಗಿಸಿದ 1) ಹಳೆಯ ದಿನಪತ್ರಿಕೆ-1 2) ಡೈಮಾನ್,ಆಟಿನ್. ಇಸ್ಪೀಟ್, ಕಳವಾರ್ ಚಿತ್ರಗಳಿರುವ 52 ಇಸ್ಪೀಟ್ ಎಲೆಗಳು 3) ನಗದು ರೂಪಾಯಿ 21,500/- ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 200/2015 ಕಲಂ 87 ಕೆ.ಪಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: