Monday, July 20, 2015

Daily Crimes reported as on 20/07/2015 at 19:30 Hrsಅಸ್ವಾಭಾವಿಕ  ಮರಣ ಪ್ರಕರಣ : 
  • ಕಾಪು: ಪಿರ್ಯಾದಿದಾರರಾದ ಹರೀಶ್ ಕೊಟ್ಯಾನ್ (41), ತಂದೆ: ಕರಿಯ ಸುವರ್ಣ, ವಾಸ: ಪದ್ಮಶ್ರೀ, ಕುತ್ಪಾಡಿ, ಉಡುಪಿ ಇವರ ಅಕ್ಕನ ಮಗ ಶಿವಾನಂದ ಕೋಟ್ಯಾನ್ ಇವರು ದಿನಾಂಕ: 18/07/2015 ರಂದು ಬೆಳಿಗ್ಗೆ 8.45 ಗಂಟೆಗೆ ಇತರರೊಂದಿಗೆ ಮಲ್ಪೆಯ ಪಡುಕೆರೆ ಸಮುದ್ರದಲ್ಲಿ ಸುಮಾರು 20 ಮಾರು ದೂರದಲ್ಲಿ ಸುಂದರ ಕರ್ಕೇರಾ ಇವರ ಸಾಂಪ್ರಾದಾಯಿಕ ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಬೀಸಿದ ದೊಡ್ಡ ಅಲೆಗೆ ದೋಣಿ ಮಗುಚಿ ಬಿದ್ದು ದೋಣಿಯಲ್ಲಿದ್ದವರೆಲ್ಲರೂ ಸಮುದ್ರದ ನೀರಿಗೆ ಬಿದ್ದಿದ್ದು ಶಿವಾನಂದ ಕೋಟ್ಯಾನ್ರು ಸಮುದ್ರದಿಂದ ಮೇಲೆ ಬಾರದೇ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದು ದಿನಾಂಕ:20/07/2015 ರಂದು ಸಂಜೆ ಸುಮಾರು 4.00 ಗಂಟೆಗೆ ಶಿವಾನಂದನ ಮೃತದೇಹವು ಕಾಪುವಿನ ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಸಮುದ್ರ ತೀರದಲ್ಲಿ ತೇಲಿ ಬಂದಿರುತ್ತದೆ, ಬಗ್ಗೆ ಕಾಪು ಪೋಲಿಸ್ ಠಾಣೆ ಯು.ಡಿ.ಆರ್. ನಂಬ್ರ 19/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ,
ಅಪಘಾತ ಪ್ರಕರಣ:
  • ಗಂಗೊಳ್ಳಿ: ಪಿರ್ಯಾದಿದಾರರಾದ  ಕೆ. ರಾಜೀವ ಶೆಟ್ಟಿ (48) ತಂದೆ: ದಿ: ಸುಬ್ಬಯ್ಯ ಶೆಟ್ಟಿ, ವಾಸ: ಬೆಟ್ಟಿನ ಮನೆ,ಶಿರೂರು ಗ್ರಾಮ ಕುಂದಾಪುರ ತಾಲೂಕುರವರು ತನ್ನ ಮಾರುತಿ ಸುಜುಕಿ KA 19 MA 8147ನೇ ಕಾರಿನಲ್ಲಿ ತನ್ನ ಭಾವ ಗಣಪಯ್ಯ ಶೆಟ್ಟಿ ಎಂಬವರೊಂದಿಗೆ ಶಿರೂರಿನಿಂದ ರಾಷ್ಟ್ರೀಯ ಹೆದ್ದಾರಿ. 66 ರಲ್ಲಿ ಕುಂದಾಪುರ ಕಡೆಗೆ ಬರುತ್ತಿದ್ದಾಗ ದಿನಾಂಕ: 20/07/2015 ರಂದು ಮಧ್ಯಾಹ್ನ 12:30 ಗಂಟೆಗೆ ಮುಳ್ಳಿಕಟ್ಟೆ ಜಂಕ್ಷನ್ ನಲ್ಲಿ ತಲುಪುವಾಗ ಹಿಂದಿನಿಂದ ಬಂದ  ಲಾರಿ ನಂಬ್ರ: AP 02 X 8899  ನೇಯ ಚಾಲಕನು ಅತೀ ವೇಗ ಜಾಗರೂಕತೆಯಂದ ಚಲಾಯಿಸಿ ಕಾರನ್ನು ಒವರ್ ಟೇಕ್ ಮಾಡಿ ಕಾರನ್ನು ಮುಂದೆ ಹೋಗುವ ಬರದಲ್ಲಿ ಕಾರಿಗೆ ಲಾರಿಯು ಹಿಂದಿನಿಂದ ಢಿಕ್ಕಿ ಹೊಡೆದು ಕಾರು ಮುಂದಕ್ಕೆ ಹೋಗಿ ರಸ್ತೆಯ ಎಡಭಾಗದ ಧರೆಗೆ ಗುದ್ದಿ ಮಗುಚಿ ಬಿದ್ದಿರುತ್ತದೆ. ಲಾರಿಯು ಬಲಭಾಗಕ್ಕೆ ಹೋಗಿ ಎದುರಿನಿಂದ ಬರುತ್ತಿದ್ದ 407 ಟೆಂಟೋ KA 19 C 7377ನೇದಕ್ಕೆ ಎದುರಿನಿಂದ ಢಿಕ್ಕಿ ಹೊಡೆದು ರಸ್ತೆಯ ಬಲ ಬದಿಯ ಧರೆಗೆ ಗುದ್ದಿದ್ದು ಅಪಘಾತದಿಂದ ಟೆಂಪೋ ಚಾಲಕನ ಕಾಲಿಗೆ ಮುಳಿಮುರಿತದ ಗಾಯವುಂಟಾಗಿರುತ್ತದೆ. ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣಾ ಅಪರಾದ ಕ್ರಮಾಂಕ: 101 /2015 ಕಲಂ:  279,338 ಐಪಿಸಿ. ಕಲಂ 134(ಎ)&(ಬಿ) ಐಎಂ.ವಿ. ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ,
ವಂಚನೆ ಪ್ರಕರಣ:
  • ಉಡುಪಿ:ಫಿರ್ಯಾದಿದಾರರಾದ ಕಮಲ ಡಿ ಜಂಬಿಗೆ(27) ತಂದೆ:ದೇವೇಂದ್ರಪ್ಪ, ಶ್ರೀದೇವಿ ನಿಲಯ, ಕೀರ್ತಿ ನಗರ 1s ಕ್ರಾಸ್‌ ಕುಂಜಿಬೆಟ್ಟು ಪೊಸ್ಟ್ ರವರು ದಿನಾಂಕ: 05/11/2012 ರಂದು ಹೆಚ್ಡಿಏಪ್ಸಿ ಬ್ಯಾಂಕ್ಖಾತೆಯಿಂದ ರೂಪಾಯಿ 2 ಲಕ್ಷ  ಸಾಲ ಪಡೆದು, ರೂಪಾಯಿ  2ಲಕ್ಷ ಹಣವನ್ನು ಆರೋಪಿ ಶ್ರೀನಾಥ ಮಜೂರು ತಂದೆ: ಬಿಕೆ ನಾರಾಯಣ 9-85-41 ಕಂಕನಾಡಿ ಮಗಳೂರು ರವರು ಹಳೆ ಕಾರು ಕೃಯ ಸಾಧನೆ ಮಾಡುವರೇ ಭಾರತ್ಆಟೋ ಕಾರ್ಡೀಲರ್ಗೆ ನೀಡಿದ್ದು ಪ್ರಸ್ತುತ ಆರೋಪಿಯು ಬ್ಯಾಂಕ್‌‌ ಖಾತೆಗೆ ಮಾಸಿಕ ಕಂತನ್ನು ಕಟ್ಟಿರುವುದಿಲ್ಲ ಆರೋಪಿಯ ಸದ್ರಿ ಕಾರನ್ನು ಮಾರಾಟ ಮಾಡಿ ಬೇರೆ ಕಾರನ್ನು ಕ್ರಯ ಸಾಧನ ಮಾಡಿ ಮೋಸ ಮಾಡಿರುತ್ತಾರೆ ಹಾಗೂ ಆರೋಪಿಯು ಕಮಲ ಡಿ ಜಂಬಿಗೆ ರವರಿಗೆ ಪೋನ್ಮಾಡಿ ನೀನು ಎನಾದರು ಕೇಸು ದಾಖಲಿಸಿದರೆ ನಿನ್ನನ್ನು ಬಿಡುವುದಿಲ್ಲ ನಿನ್ನನ್ನು ಮುಗಿಸುತ್ತೇನೆ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ. ಬಗ್ಗೆ ಉಡುಪಿ ನಗರ ಪೋಲಿಸ್ ಠಾಣಾ ಅಪರಾದ ಕ್ರಮಾಂಕ: 166/2015 ಕಲಂ 406, 415, 420, 506 ಜೊತೆಗೆ 34 ಐಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: