Monday, July 20, 2015

Daily Crimes reported as on 20/07/2015 at 07:00 Hrsಅಪಘಾತ ಪ್ರಕರಣಗಳು 
  • ಕಾರ್ಕಳ: ದಿನಾಂಕ 19/07/2015 ರಂದು ಪಿರ್ಯಾದಿದಾರರಾದ ಅಶೋಕ ಪೈ (33) ತಂದೆ:ಗೋಪಾಲ ಪೈ ವಾಸ: ಕಾರ್ಪೊರೇಶನ್ ಬ್ಯಾಂಕ್ ಹತ್ತಿರ ಕಾರ್ಕಳ, ಉಡುಪಿ ಜಿಲ್ಲೆ ಇವರು ತಮ್ಮ ಕಾರಿನಲ್ಲಿ ಹೊಸ್ಮಾರು ಕಡೆಗೆ ಹೋಗುತ್ತಿರುವಾಗ ಅವರ ಮುಂದಿನಿಂದ KA 20 Z 2830 ನೇ ಚರ್ವಲೇಟ್‌ ಬೀಟಾ ಕಾರಿನಲ್ಲಿ ಹರಿ ಕೃಷ್ಣ ಎಸ್‌ ಕೆ ಎಂಬವರು ಹೋಗುತ್ತಿದ್ದು, 11:30 ಗಂಟೆಗೆ ನಲ್ಲೂರು ರಾಜ್ಯ ರಸ್ತೆಯಲ್ಲಿ ಹೋಗುತ್ತಾ  ನಲ್ಲೂರು ಗ್ರಾಮದ  ರಾಜೇಂದ್ರ ಬಲ್ಲಾಳ್‌‌ ಎಂಬವರ ಮನೆಯ ಹತ್ತಿರ ಬಂದಾಗ ಧರ್ಮಸ್ಥಳ ಕಡೆಯಿಂದ ಬಜೆಗೋಳಿ ಕಡೆಗೆ KA 17 N 8044ನೇ ಸ್ವಿಫ್ಟ್‌ ಕಾರನ್ನು ಅದರ ಚಾಲಕ ಅತೀವೇಗ ಹಾಗ ಅಜಾಗರೂಕತೆಯಿಂದ ಚಲಾಯಿಸುತ್ತಾ ರಸ್ತೆಯ ತೀರಾ ಬಲಭಾಗಕ್ಕೆ ಬಂದ ಪರಿಣಾಮ KA 20 Z 2830 ಕಾರಿಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿರುವುದಾಗಿದೆ. ಕಾರಿನಲ್ಲಿದ್ದ ಹರಿಕೃಷ್ಣ ರವರಿಗೆ ಬಲ ಹೆಗಲಿಗೆ, ಎದೆಗೆ, ಬಲ ಮೊಣಗಂಟಿಗೆ ಗುದ್ದಿದ ನೋವಾಗಿದ್ದು ಅಲ್ಲದೇ KA 17 N 8044ನೇ ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 124/15 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ,
  •  ಕೊಲ್ಲೂರು: ದಿನಾಂಕ 19/07/2015 ರಂದು ಪಿರ್ಯಾದಿದಾರರಾದ ಆಲೀಶಾ (51) ಗಂಡ:ಪಿ.ಪಿ ವರ್ಗೀಸ್‌ ವಾಸ: ಹೊಸಂಗಡಿ, ಬಗ್ವಾಡಿ ಕ್ರಾಸ್‌ ಹತ್ತಿರ, ನೂಜಾಡಿ ಗ್ರಾಮ ಕುಂದಾಪುರ ತಾಲೂಕು ಇವರು ತನ್ನ ಗಂಡ ವರ್ಗೀಸ್‌, ಮಗಳು ಸಂಧ್ಯಾ, ನೆರೆಮನೆಯ ಮಥಾಯಿ ಹಾಗೂ ಅವರ ಹೆಂಡತಿ ಲಾಲಿ ರವರುಗಳೊಂದಿಗೆ ತಮ್ಮ KA 19 M 8006 ನೇ ಮಾರುತಿ 800 ಕಾರಿನಲ್ಲಿ ತಮ್ಮ ಮನೆ ಬಗ್ವಾಡಿಯಿಂದ ಜಡ್ಕಲ್‌ ಚರ್ಚ್‌ಗೆ ಕುಂದಾಪುರ ಕೊಲ್ಲೂರು ಮಾರ್ಗವಾಗಿ ಬರುತ್ತಿರುವಾಗ ವಂಡ್ಸೆ ಗ್ರಾಮದ ಶಾರ್ಕೆ ಕ್ರಾಸ್‌ ಬಳಿಗೆ 10:15 ಗಂಟೆಗೆ ತಲುಪುವಾಗ ಎದುರಿನಿಂದ  ಕೊಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ KA 31 3535 ನೇ ಲಾರಿ ಚಾಲಕನು  ಅತೀವೇಗ ಮತ್ತು ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ಬಲ ಕೈ ಮೂಳೆ ಮುರಿತ ಮತ್ತು ಮುಖಕ್ಕೆ ತರಚಿದ ಗಾಯ, ಪಿರ್ಯಾದಿದಾರರ ಗಂಡ ವರ್ಗೀಸ್‌ ರವರಿಗೆ ಬಲಕೈ ಮೂಳೆ ಮುರಿತ, ಎದೆಗೆ, ಕೈ-ಕಾಲುಗಳಿಗೆ ರಕ್ತ ಗಾಯ, ಪಿರ್ಯಾದಿದಾರರ ಮಗಳಾದ ಸಂಧ್ಯಾ ರವರಿಗೆ ಬಲ ಕಾಲಿಗೆ, ತಲೆಗೆ ರಕ್ತ ಗಾಯವಾಗಿದ್ದು ಮತ್ತು ಪಿರ್ಯಾದಿದಾರರ ನೆರೆ ಮನೆಯ ಮಥಾಯಿ ರವರಿಗೆ ತಲೆಗೆ ಪೆಟ್ಟಾಗಿದ್ದು, ಮೂಗು ಮತ್ತು ಕೈಗಳಿಗೆ ತರಚಿದ ಗಾಯ ಹಾಗೂ ಲಾಲಿ ರವರಿಗೆ ಬಲಭಾಗದ ಸೊಂಟ ಜಖಂಗೊಂಡಿದ್ದು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿದ್ದು ಪಿರ್ಯಾದಿದಾರರ ಗಂಡ ವರ್ಗೀಸ್‌ ಮತ್ತು ಮಥಾಯಿ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣೆಪಾಲದ ಕೆಎಂಸಿ ಆಸ್ಪತ್ರೆಗೆ ವರ್ಗಾವಣೆ ಮಾಡಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 91 /2015 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಜುಗಾರಿ ಪ್ರಕರಣ
  • ಬ್ರಹ್ಮಾವರ: ದಿನಾಂಕ; 19/07/2015 ರಂದು 16:45 ಗಂಟೆಗೆ  ಉಡುಪಿ ತಾಲೂಕು ಆರೂರು ಗ್ರಾಮದ ಕೆಳ ಅಡ್ಪು  ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತ್ರಾದ1] ರಾಜೇಂದ್ರ ದೇವಾಡಿಗ, 2]ಭಾಸ್ಕರ ಪೂಜಾರಿ, 3]ಶಂಕರ ಪೂಜಾರಿ, 4]ನರಸಿಂಹ ಪೂಜಾರಿ, 5]ಮಥಾಯಿಸ್ ಡಿ.ಮೆಲ್ಲೊ, 6]ಶೇಖರ ದೇವಾಡಿಗ, 7]ರಘು ಇವರುಗಳು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್‌ ಬಾಹರ್‌ ಎಂಬ ಇಸ್ಪೀಟು ಜೂಜಾಟ ನಡೆಸುತ್ತಿರುವಾಗ ಅನಂತಪದ್ಮನಾಭ ಕೆ.ವಿ, ಪಿಎಸ್‌ಐ ಬ್ರಹ್ಮಾವರ ಠಾಣೆ ಇವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳು ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟು ಎಲೆಗಳು-52, ಕಂದು ಬಣ್ಣದ ಕಂಬಳಿ-1,ನಗದು ರೂಪಾಯಿ25,645-/-ನ್ನು ಸ್ವಾಧೀನಪಡಿಸಿ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 143/15 ಕಲಂ: 87 ಕೆ.ಪಿ ಆ್ಯಕ್ಟ್ ನಂತೆ ಪ್ರಕರಣ ದಾಖಲಿಸಿರುವುದಾಗಿದೆ.

 ಅಸ್ವಾಭಾವಿಕ ಮರಣ ಪ್ರಕರಣ 
  • ಕಾಪು: ದಿನಾಂಕ 19-07-2015 ರಂದು ಬೆಳಿಗ್ಗೆ 10:30 ಗಂಟೆಯಿಂದ ಮದ್ಯಾಹ್ನ 2:45 ಗಂಟೆಯ ಮದ್ಯಾವದಿಯಲ್ಲಿ ಸುಮಾರು 75 ವರ್ಷ ಪ್ರಾಯದ ಶ್ರೀಧರ್ ಶಣೈ ಇವರು ಮನೆಯಿಂದ ಪೇಟೆಗೆ ಹೋಗಿ ಹಿಂದಿರುಗುವಾಗ ಮೂಡಬೆಟ್ಟು ಗ್ರಾಮದ ಪೊಸಾರು ಎಂಬಲ್ಲಿ ಸಂಘಮಿತ್ರ ಮನೆಯ ಎದುರು ರಾ.ಹೆ. 66 ರ ಪೂರ್ವಬದಿಯ ಮಣ್ಣು ರಸ್ತೆಯ ಬದಿಯಲ್ಲಿ ಕಾಲು ಜ್ಯಾರಿ ಬದಿಯಲ್ಲಿರುವ ಹೊಂಡಕ್ಕೆ ಬಿದ್ದು, ಮುಖ ಕಲ್ಲಿಗೆ ತಾಗಿ ಅದರ ಗಾಯದಿಂದಲೇ ಮೃತಪಟ್ಟಿದ್ದಾಗಿರುತ್ತದೆ. ಈ ಬಗ್ಗೆ ಕಾಪು ಪೋಲಿಸ್ ಠಾಣೆ ಯುಡಿಅರ್‌ ಕ್ರಮಾಂಕ 18/2015 ಕಲಂ: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: