ಅಸ್ವಾಭಾವಿಕ ಮರಣ ಪ್ರಕರಣಗಳು :
- ಕಾರ್ಕಳ ನಗರ : ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಪ್ರಕಾಶ್ ಹೆಗ್ಡೆ ಎಂಬುವರ ಕಲ್ಲು ಕೋರೆಯಲ್ಲಿ ಕೆಲಸ ಮಾಡಿಕೊಂಡಿರುವ ಪಿರ್ಯಾದಿದಾರ ವಿನಿತೇಗೌಡ (40) ತಂದೆ: ದಿವಂಗತ ಮಾದೇಗೌಡ, ವಾಸ: ಮನೆ ನಂ 42, ಕಾಂಚಳ್ಳಿ, ಬಸಪ್ಪನದೊಟ್ಟಿ (ಅಂಚೆ) ರಾಮಾಪುರ ಹೋಬಳಿ, ಕೊಳ್ಳೆಗಾಲ, ತಲೂಕು, ಚಾಮರಾಜನಗರ ಜಿಲ್ಲೆ ಇವರ ತಮ್ಮ 45 ವರ್ಷ ಪ್ರಾಯದ ಕೃಷ್ಣೆಗೌಡ ಎಂಬವರು ದಿನಾಂಕ 17.07.2015 ರಂದು 6:30 ಗಂಟೆಗೆ ತಾನು ಕೆಲಸ ಮಾಡುತ್ತಿದ್ದ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕುಸಿದು ಬಿದ್ದು ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳದ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಕೃಷ್ಣೆಗೌಡ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕೃಷ್ಣೆಗೌಡ ಇವರು ಹೃದಯಘಾತದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿರಬಹುದಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ : 21/2015 ಕಲಂ. 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಕಾರ್ಕಳ ನಗರ : ಅಣ್ಣು, ಪ್ರಾಯ: 48, ತಂದೆ: ಮಂಗಿಲ, ವಾಸ: ಪೊಸನೊಟ್ಟು, ನಕ್ರೆ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರ ಹೆಂಡತಿ 45 ವರ್ಷ ಪ್ರಾಯದ ಶ್ರೀಮತಿ ರೀತಾ ಇವರು ದಿನಾಂಕ 14.07.2015 ರಂದು ಸಂಜೆ ಸುಮಾರು 6:30 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಪೊಸನೊಟ್ಟು ಎಂಬಲ್ಲಿ ತನ್ನ ವಾಸದ ಮನೆಯಲ್ಲಿ ಅಡುಗೆ ಮಾಡುವರೇ ಕಟ್ಟಿಗೆ ಒಲೆಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಮಾಡುವರೇ ಒಲೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದಾಗ ಆಕಸ್ಮಿಕವಾಗಿ ಬೆಂಕಿ ರೀತಾ ಇವರು ಉಟ್ಟಿದ್ದ ಸೀರೆಗೆ ತಾಗಿ ಸುಟ್ಟು ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ದಿನ ದಿನಾಂಕ: 18.07.2015 ರಂದು ರಾತ್ರಿ 10:30 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ : 22/2015 ಕಲಂ. 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಹಿರಿಯಡ್ಕ : ದಿನಾಂಕ 19/07/15 ರಂದು ಬೆಳಿಗ್ಗೆ 10-00 ಗಂಟೆಗೆ ಪ್ರಕಾಶ್ ಶೆಟ್ಟಿ (39) ತಂದೆ: ಕಾಳು ಶೆಟ್ಟಿ ವಾಸ:ಪಡ್ಡಮ ಪಡುಭಾಗ, ಹಿರಿಯಡ್ಕ ಅಂಚೆ, ಬೊಮ್ಮರಬೆಟ್ಟು ಗ್ರಾಮ, ಉಡುಪಿ ಇವರು ಕಾಲೇಜ್‌ನಲ್ಲಿಯ ಸ್ವಸಹಾಯ ಗುಂಪಿನ ಮೀಟಿಂಗ್‌ಗೆ ಹಾಜರಾಗಲು ಬರುವಾಗ ಬೊಮ್ಮರ ಬೆಟ್ಟು ಗ್ರಾಮದ ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜ್ ಗೇಟ್ ಬಳಿ, ಹೆಬ್ರಿ- ಹಿರಿಯಡ್ಕ ರಸ್ತೆಯಲ್ಲಿ ಶ್ರೀಮತಿ ಸರಸ್ವತಿ ಎಂಬವರು ತನ್ನ 4 ವರ್ಷ ಪ್ರಾಯದ ತೇಜಸ್ವಿ ಹಾಗೂ ಪಕ್ಕದ ಮನೆಗೆ ನೆಂಟರಾಗಿ ಬಂದ ದಿತಿ ಎಂಬ 6 ವರ್ಷ ಪ್ರಾಯದ ಹೆಣ್ಣು ಮಗುವಿನೊಂದಿಗೆ ಡಿಗ್ರಿ ಕಾಲೇಜಿನಲ್ಲಿ ನಿಗದಿ ಪಡಿಸಿದ ಸ್ವ-ಸಹಾಯ ಸಂಘದ ಸಭೆಗೆ ಹಾಜರಾಗಲು ರಸ್ತೆ ಬದಿಯಲ್ಲಿ ಪುತ್ತಿಗೆ ಕಡೆಯಿಂದ ನಡೆದು ಕೊಂಡು ಬರುತ್ತಿದ್ದ ಆ ವೇಳೆ ಪೆರ್ಡೂರು ಕಡೆಯಿಂದ ಕೆಎ 20 ಎಮ್ 9558ನೇ ಸ್ಕಾರ್ಪಿಯೋ ವಾಹನವನ್ನು ಅದರ ಚಾಲಕ ಆರೋಪಿ ಯೋಹಾನ್ ಎಂಬವನು ಅತಿ ವೇಗ ಹಾಗೂ ತೀರಾ ನಿರ್ಲಕ್ಷತನದಿಂದ ಚಲಾಯಿಸುತ್ತಾ ರಸ್ತೆಯ ತೀರಾ ಎಡಬದಿಗೆ ಅಂದ್ರೆ ಮಣ್ಣು ರಸ್ತೆಯಲ್ಲಿ ಚಲಾಯಿಸಿದ ವೇಳೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಹೆಂಗಸು ಮತ್ತು ಮಕ್ಕಳಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರೂ ತೀವೃ ಜಖಂ ಗೊಂಡಿದ್ದು ಅವರನ್ನು ಆರೋಪಿಯು ತನ್ನದೇ ವಾಹನದಲ್ಲಿ ಚಿಕಿತ್ಸೆಗೆ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ತಂದರೂ ಗಾಯಾಳುಗಳ ಪೈಕಿ ದಿತಿ ಎಂಬ 6 ವರ್ಷ ಪ್ರಾಯದ ಹೆಣ್ಣು ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 75/2014 ಕಲಂ. 279 338, 304 (A) IPC ಯಂತೆ ಪ್ರಕರಣ ಧಾಖಲಿಸಿಕೊಳ್ಳಲಾಗಿದೆ.
- ಉಡುಪಿ ನಗರ : ದಿನಾಂಕ 18-19-07-2015 ರಂದು ಶ್ರೀಮತಿ ಮೀನಾಕ್ಷಿ ಮಹಿಳಾ ಪೊಲೀಸ್ ಉಪ ನಿರೀಕ್ಷಕರು ಉಡುಪಿ ನಗರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಉಡುಪಿ ನಗರ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಗಿನ ಜಾವ ಸಮಯ ಸುಮಾರು 03-30 ಗಂಟೆಗೆ ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಆದಿ ಉಡುಪಿ ಜಂಕ್ಷನ್ ಬಳಿ ತಲುಪುವಾಗ ಕಲ್ಮಾಡಿ ಕಡೆಯಿಂದ ಉಡುಪಿ ಕಡೆಗೆ ಆರೋಪಿ ನಾಗರಾಜ@ ಗಾಳಿಯಪ್ಪ ತಂದೆ ಹನುಮಂತಪ್ಪ ವಡ್ಡಾರ ನಾಣಿಯಾಪುರ ದನ್‌ಮಾಪುರ ಪೋಸ್ಟ್, ಹಗರಿಬೊಮ್ಮನ ಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆ ಇತನು ರಸ್ತೆಯಲ್ಲಿ ನಡೆದು ಬರುತ್ತಾ ಇದ್ದವನು ಪೊಲೀಸ್ ಜೀಪು ಕಂಡು ತನ್ನ ಹೆಗಲ ಮೇಲೆ ಇದ್ದ ಕಟ್ಟನ್ನು ರಸ್ತೆಯಲ್ಲಿ ಹಾಕಿ ಓಡಿಹೋದವನನ್ನು ಬೆನ್ನಟ್ಟಿ ಹಿಡಿದು ತಂದು ಆತನ ವಶವಿದ್ದ ಕಟ್ಟನ್ನು ಪರಿಶೀಲಿಸಿ ವಿಚಾರಿಸಿದಾಗ ಕಲ್ಮಾಡಿ ಅತ್ತ ಕಡೆಯಿಂದ ರಾತ್ರಿ ವೇಳೆಯಲ್ಲಿ ಯಾವುದೋ ಸ್ಥಳದಲ್ಲಿರುವ ದೇವರ ಗುಡಿಯಲ್ಲಿರುವ ಕಾಣಿಕೆ ಡಬ್ಬಿಯನ್ನು ಕಳವು ಮಾಡಿ ಡಬ್ಬಿ ಒಡೆದು ರೂ 11,706/- ಕಾಣಿಕೆ ಹಣವನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಬರುತ್ತಿದ್ದುದಾಗಿ ತಿಳಿಸಿದ್ದು ರಾತ್ರಿ ವೇಳೆಯಲ್ಲಿ ಯಾವುದೋ ಸ್ಥಳದಲ್ಲಿನ ದೇವರ ಡಬ್ಬಿಯನ್ನು ಕಳವು ಮಾಡಿದ್ದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 165/2015 ಕಲಂ. 41(1)(ಡಿ) ಸಿಆರ್‌ಪಿಸಿ ಮತ್ತು 379 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment