Monday, July 20, 2015

Daily Crimes reported as on 20/07/2015 at 17:00 Hrs

ಅಪಘಾತ ಪ್ರಕರಣ
  • ಕಾರ್ಕಳ: ಪಿರ್ಯಾದಿ ಸುರೇಶ್ ಇವರು ದಿನಾಂಕ: 19.07.2015 ರಂದು 14:30 ಗಂಟೆಗೆ ತನ್ನ ಬಾಬ್ತ ಕೆ.ಎ 20 ಈಎಫ್ 2822 ನೇ ಫ್ಯಾಷನ್ ಪ್ರೋ ಮೋಟಾರ್ ಸೈಕಲ್ಲಿನಲ್ಲಿ ಕಾರ್ಕಳ  ಕಡೆಯಿಂದ ಉಡುಪಿ ಕಡೆಗೆ  ಹೋಗುತ್ತಿರುವಾಗ ಮಹಾಸತಿ ಪ್ರಾವಿಜನ್ ಅಂಗಡಿಯ ಎದುರು  ರಸ್ತಯಲ್ಲಿ  ತಿರುಗುವಾಗ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಕೆ.ಎ 20 ಝಡ್ 3378 ನೇ ಕಾರನ್ನು ಅದರ ಚಾಲಕ ರಾಘವೇಂದ್ರ ನು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಎಡ ಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಡಾಂಬರು ರಸ್ತೆಗೆ ಬಿದ್ದು ಎಡಕಾಲಿನ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆ ಬಗ್ಗೆ ಕಾರ್ಕಳ ನರ್ಸಿಂಗ್ ಹೋಂ ನಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 102/2015 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ,

  • ಕಾಪು: ದಿನಾಂಕ 19/07/2015 ರಂದು ಪಿರ್ಯಾದಿ ಪ್ರಶಾಂತ್ ಶ್ರೀಯಾನ್ ಇವರು ಹಾಗೂ ಅವರ ಭಾವ ಶಶಿಧರ ಶೆಟ್ಟಿಯವರು ಕಾರು ನಂಬ್ರ ಕೆಎ19ಪಿ 7451 ನೇ ಮಾರುತಿ ಓಮಿನಿ ಕಾರಿನಲ್ಲಿ ತರಕಾರಿ ಮತ್ತು ಹಣ್ಣನ್ನು ತರುವರೆ ಮಟ್ಟುವಿನಿಂದ ಕಟಪಾಡಿಗೆ ಹೋಗಿ ವಾಪಾಸು ಬರುತ್ತಾ ರಾತ್ರಿ 10:15 ಗಂಟೆಯ ಸುಮಾರಿಗೆ ಮಟ್ಟು ಅಣೆಕಟ್ಟಿನ ಬಸ್ ನಿಲ್ದಾಣದ ಬಳಿ ರಸ್ತೆಯ ತಿರುವಿನಲ್ಲಿ ಶಶಿಧರ ಶೆಟ್ಟಿ ಇವರು ಚಲಾಯಿಸುತ್ತಿದ್ದ ಕಾರು ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕಾರು ನದಿಗೆ ಬಿದ್ದು, ಜೋರಾಗಿ ಮಳೆ ಬರುತ್ತಿದ್ದರಿಂದ ನೀರಿನ ಸೆಳೆತಕ್ಕೆ ಕಾರು ಮುಳುಗುತ್ತಿರುವಾಗ ಪಿರ್ಯಾದಿದಾರರು ಕಾರಿನ ಗ್ಲಾಸ್ ಇಳಿಸಿ, ಹೊರಬಂದು ನೀರಿನಲ್ಲಿ ಈಜಿ ದಡಕ್ಕೆ ಬಂದು, ಇತರರಲ್ಲಿ ವಿಷಯ ತಿಳಿಸಿ, ಅವರು ಹಗ್ಗದ ಸಹಾಯದಿಂದ ಸುಮಾರು ಅರ್ಧ ಗಂಟೆಯ ಬಳಿಕ ಕಾರನ್ನು ದಡಕ್ಕೆ ತಂದಾಗ ಕಾರಿನ ಸೀಟಿನಲ್ಲಿದ್ದ ಶಶಿಧರ ಶೆಟ್ಟಿ ಇವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 143/2015 ಕಲಂ 279, 304(ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ,
ಮನುಷ್ಯ ಕಾಣೆ ಪ್ರಕರಣ
  • ಗಂಗೊಳ್ಳಿ: ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ರಸ್ತೆಯ ನಿವಾಸಿ ಶ್ರೀಮತಿ ದೇವಕಿ ದೇವಾಡಿಗರವರ ತಮ್ಮ ಯೋಗೇಂದ್ರ ದೇವಾಡಿಗ 33 ವರ್ಷ ಇವರು ದಿನಾಂಕ 19/07/2015 ರಂದು ಸಂಜೆ 6 ಗಂಟೆಗೆ ಮನೆಯಿಂದ ಹೊರಗಡೆ ಹೋದವನು ವಾಪಾಸು ಬರದೇ ಕಾಣೆಯಾಗಿದ್ದು ಮನೆಯವರು ಹುಡುಕಾಡುವಾಗ ಈ ದಿನ ಬೆಳಿಗ್ಗೆ ಮ್ಯಾಂಗನೀಸ್ ರಸ್ತೆಯಲ್ಲಿ ಪಂಚಾ ಗಂಗಾವಳಿ ಹೊಳೆಯ ದಡದಲ್ಲಿ ಯೋಗೇಂದ್ರ ದೇವಾಡಿಗನ ಶರ್ಟ ಹಾಗೂ ಚಪ್ಪಲಿ ಕಂಡು ಬಂದಿದ್ದು ಯೋಗೇಂದ್ರ ದೇವಾಡಿಗನು ನಿನ್ನೆ ರಾತ್ರಿ ಪಂಚಾ ಗಂಗಾವಳಿ ಹೊಳೆಯಲ್ಲಿ ಮೀನು ಹಿಡಯಲು ಗಾಳ ಹಾಕುವ ಸಮಯ ಹೊಳೆಯಲ್ಲಿ  ಒಮ್ಮೇಲೆ ನೆರೆ ಬಂದು ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿ ಕಾಣೆಯಾಗಿರಬಹುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 100/2015 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ,
  • ಹೆಬ್ರಿ: ಕೃಷ್ಣ ನಾಯ್ಕ(40) ಎಂಬವರು ಅವರ ತಾಯಿ ವನಜಾ ಎಂಬವರೊಂದಿಗೆ ಶಿವಪುರದಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಶರಾಬು ಕುಡಿಯುವ ಚಟ ಹೊಂದಿದುಲ್ಲದೇ ಆಗಾಗ್ಗೆ ತಾನು ಸಾಯುತ್ತೇನೆ ಎಂದು ಹೇಳುತ್ತಿದ್ದವರು ದಿನಾಂಕ 19/07/2015 ರಂದು ಬೆಳಿಗ್ಗೆ 5:00 ಗಂಟೆಗೆ ದೇವಸ್ಥಾನದಲ್ಲಿ ಮಲಗಿದ್ದವರು ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 75/2015 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ,

No comments: