Wednesday, July 29, 2015

Daily Crime Reports As On 29/07/2015 At 19:30 Hrsವಂಚನೆ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ನಾಗರಾಜ (28) ತಂದೆ: ದಿವಂಗತ ಮಂಜುನಾಥ ಪೂಜಾರಿ ವಾಸ:ಮಂಜುನಾಥ ನಿಲಯ, ಗೊರಟೆ, ಅಂಪಾರು ಗ್ರಾಮ,, ಕುಂದಾಪುರ ತಾಲೂಕು ಇವರು ಬಿ.ಕಾಂ ಪದವಿಧರರಾಗಿದ್ದು, ಕೆಲಸದ ಹುಡುಕಾಟದಲ್ಲಿರುವಾಗ ಆಪಾದಿತನಾದ ಸುರೇಂದ್ರ ಕರ್ಕೇರ ವಾಸ: ಖಾರ್ವಿಕೇರಿ, ಕುಂದಾಪುರ ಇವರ ಪರಿಚಯವಾಗಿ, ತನಗೆ ರಾಜಕೀಯ ವ್ಯಕ್ತಿಗಳ ಪರಿಚಯ ಇರುವುದಾಗಿ ಹೇಳಿಕೊಂಡು ಹಣ ಕೊಟ್ಟರೆ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಎರಡು ತಿಂಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ದಿನಾಂಕ 21/12/2014 ರಂದು ಬೆಳಿಗ್ಗೆ 11:00 ಗಂಟೆಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಪುರಸಭೆ ಹೂವಿನ ಮಾರುಕಟ್ಟೆ ಬಳಿ ರೂಪಾಯಿ 1,97,300/- ಹಣವನ್ನು ಪಡೆದು, ಕೆಲಸವನ್ನು ಕೊಡಿಸದೆ, ಹಣವನ್ನೂ ವಾಪಾಸು ನೀಡದೆ ಮೋಸ ಮಾಡಿದ್ದು, ನಾಗರಾಜರವರು ಹಣವನ್ನು ವಾಪಾಸು ಕೇಳಿದ್ದಕ್ಕೆ ನೀನು ಹಣ ಕೊಟ್ಟಿದ್ದಕ್ಕೆ ಎನು ದಾಖಲಾತಿ ಇದೆ, ಇನ್ನೊಮ್ಮೆ ಹಣ ಕೇಳಿದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 283/2015  ಕಲಂ: 417,420,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣ
  • ಉಡುಪಿ: ಪಿರ್ಯಾದಿ ರಕ್ಷಿತ್ ಕುಮಾರ್ (25) ತಂದೆ: ರಘುವೀರ್ ವಾಸ: ಕನಕ ಹೌಸ್, ಕೆಮ್ತೂರು ರೋಡ್ ಮಣಿಪುರ ಉಡುಪಿ ಇವರು ದಿನಾಂಕ: 29/07/2015 ರಂದು ಬೆಳಿಗ್ಗೆ 9:00 ಗಂಟೆಗೆ ತನ್ನ ಮೊಟಾರ್ ಸೈಕಲ್ ನಂಬ್ರ ಕೆಎ 03 ಹೆಚ್‌ಎನ್ 8860 ನೇದರಲ್ಲಿ ಅಜ್ಜರಕಾಡು ಭುಜಂಗ ಪಾರ್ಕಿನಿಂದ ಕಿನ್ನಿಮುಲ್ಕಿಗೆ ಹೋಗುವ ರಸ್ತೆಯಲ್ಲಿ ಗೋವಿಂದ ಕಲ್ಯಾಣ ಮಂಟಪದ ಬಳಿ ಹೋಗುತ್ತಿರುವಾಗ ಒರ್ವ ಟಾಟಾ ಏಸ್ ನಂಬ್ರ  ಕೆಎ 20 ಬಿ 9732 ನೇ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಮೊಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡಕೈಯ, ಮೊಣಗಂಟಿನ ಮೇಲ್ಭಾಗದಲ್ಲಿ ರಕ್ತಗಾಯವಾಗಿದ್ದು, ಹೊಟ್ಟೆಗೆ ಒಳಜಖಂ ಆಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 81/2015 ಕಲಂ. 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: