Wednesday, July 29, 2015

Daily Crime Reports As On 29/07/2015 At 17:00 Hrs


ಅಪಘಾತ ಪ್ರಕರಣಗಳು
  • ಉಡುಪಿ: ಪಿರ್ಯಾದಿ ಪದ್ದಪ್ಪ (30) ತಂದೆ:ಸತ್ಯರಾಜ್ ವಾಸ: ಅಡ್ಕದಕಟ್ಟೆ ಬಳಿ, ನಿಟ್ಟೂರು, ಉಡುಪಿ ಇವರು ದಿನಾಂಕ: 29/07/2015 ರಂದು ಬೆಳ್ಳಿಗೆ  7:30 ಗಂಟೆಗೆ ಕುಂದಾಪುರಕ್ಕೆ ಹೋಗಲು ಉಡುಪಿಗೆ ಬಂದು ಸಿಟಿ ಬಸ್ ನಿಲ್ದಾಣದಿಂದ ಸರ್ವಿಸ್ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೊಗುವಾಗ ಐರೋಡಿಕರ್ಸ್ ಹತ್ತಿರ  ಪುಷ್ಪ ಬೇಕರಿಯ ಬಳಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಉಡುಪಿ ಹೂವಿನ ಮಾರ್ಕೆಟ್ ಕಡೆಯಿಂದ ಓರ್ವ ಮೋಟಾರು ಸೈಕಲ್ ನಂಬ್ರ CRQ 6181 ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಬಲಕೈಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 80/2015 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಣಿಪಾಲ:ದಿನಾಂಕ 28/07/15 ರಂದು ಪಿರ್ಯಾದಿ ಶಾನ್‌ವಾಜ್‌, ತಂದೆ:ಮಹಮ್ಮದ್‌ ಹುಜೇರ್‌, ವಾಸ: ಆಯಿಷಾ ಮಂಜಿಲ್‌, ಗಾಂಧಿನಗರ, ಕೋಟೇಶ್ವರ ಗ್ರಾಮ, ಕುಂದಾಪುರ ಇವರು ಸರ್‌ದಾರ್‌‌ ಪವಾಜ್‌‌ರವರ ನೋಂದಣಿಯಾಗದ ಪಲ್ಸರ್‌ ಮೋಟಾರ್‌ ಸೈಕಲ್‌ನಲ್ಲಿ ಸವಾರಿ ಮಾಡಿಕೊಂಡು ಕೋಟೇಶ್ವರದಿಂದ ಮಣಿಪಾಲ ಬಜಾಜ್‌ ಶೋರೂಮ್‌‌ ಸರ್ವಿಸ್‌ ಬಗ್ಗೆ  ಬರುತ್ತಿರುವಾಗ ಮಧ್ಯಾಹ್ನ 1:00 ಗಂಟೆಗೆ ಅಂಬಾಗಿಲಿನಿಂದ ಪೆರಂಪಳ್ಳಿ ಮಣಿಪಾಲ ರಸ್ತೆಯಲ್ಲಿ ಅಡ್ಡವಾಗಿ ನಾಯಿಯೊಂದು ಬಂದಾಗ ಮೋಟಾರ್‌ ಸೈಕಲ್‌ ಸವಾರ ಸರ್‌ದಾರ್‌ ಪವಾಜ್‌ರವರು ಒಮ್ಮೇಲೆ ಬ್ರೇಕ್‌ ಹಾಕಿದಾಗ ಮೋಟಾರ್‌ ಸೈಕಲ್‌‌ನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಡಾಮಾರು ರಸ್ತೆಗೆ ಬಿದ್ದಿದ್ದು, ಪರಿಣಾಮ ಶಾನ್‌ವಾಜ್‌ರವರ ಎಡಕಾಲಿಗೆ ಒಳಜಖಂ, ಎಡಕೈಯ ಮಣಿಗಂಟಿಗೆ, ಬಲಕೈಗೆ ತರಚಿದ ಗಾಯವಾಗಿರುತ್ತದೆ. ಹಾಗೂ ಸರ್‌‌ದಾರ್‌ ಪವಾಜ್‌ರವರ ಎಡಕೈಯ ಬೆರಳಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 148/15 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಪಡುಬಿದ್ರಿ: ಫಿರ್ಯಾದಿ ಸುಜಾತ ಇವರು ದಿನಾಂಕ 27-07-2015 ರಂದು ಮಧ್ಯಾಹ್ನ 12-45 ಗಂಟೆಗೆ ಎರ್ಮಾಳ್ ಪೇಟೆ ಕಡೆಯಿಂದ ತನ್ನ ಮನೆಯ ಕಡೆಗೆ ರಾ.ಹೆ 66 ನೇದರ ಪೂರ್ವ ಬದಿಯ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೊರಟು ನಾರಂತಾಯ ಗುಡಿ ಬಳಿ ತಲುಪುವಾಗ ಫಿರ್ಯಾದಿದಾರರ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ KA20B5940 ನೇ ಇಂಡಿಕಾ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಫಿರ್ಯಾದಿದಾರರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ತೋಡಿಗೆ ಬಿದ್ದು ಅವರ ಬಲಕಾಲಿನ ತೊಡೆಯ ಮೂಳೆ ಮುರಿತ ಹಾಗೂ ಬೆನ್ನಿಗೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 101/2015 ಕಲಂ; 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಶಂಕರನಾರಾಯಣ: ದಿನಾಂಕ: 28/07/2015 ರಂದು 08:30 ಘಂಟೆಯಿಂದ 17:30 ಗಂಟೆಯ ಮದ್ಯ ಅವಧಿಯಲ್ಲಿ ಪಿರ್ಯಾದಿದಾರರಾದ ಕೊರಗ ನಾಯ್ಕ, ತಂದೆ: ಕುಷ್ಟ ನಾಯ್ಕ, ವಾಸ: ಕುಮ್ಮಿಬೇರು ಯಡಮೊಗ್ಗೆ ಗ್ರಾಮರವರ ಮಗ ರವಿ ನಾಯ್ಕ(26)ಇವರು ಮನೆಯ ಒಳಗಿನ ಕೋಣೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ಯುಡಿಆರ್ ನಂಬ್ರ 10/15  ಕಲಂ:174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: