Monday, July 27, 2015

Daily Crime Reports As On 27/07/2015 At 17:00 Hrs

ಅಪಘಾತ ಪ್ರಕರಣ
  • ಕಾರ್ಕಳ: ದಿನಾಂಕ 27/07/2015 ರಂದು 07:40 ಗಂಟೆಗೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ನೀರೆ ದರ್ಖಾಸು ಮನೆ ಎಂಬಲ್ಲಿ ಹಾದು ಹೋಗುವ ಉಡುಪಿ-ಕಾರ್ಕಳ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಟಿ.ವಿ.ಎಸ್. ಮೋಫೆಡ್ ನಂಬ್ರ KA 20 R 2641 ನೇಯದರ ಸವಾರ ವಿಕಾಸ್ ಎಂಬಾತನು ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಯಲ್ಲಿ ಸವಾರಿ ಮಾಡಿಕೊಂಡು ಬಂದು ಕಾರ್ಕಳ ಕಡೆಯಿಂದ ಮಣಿಪಾಲ ಕಡೆಗೆ ಪಿರ್ಯಾದಿದಾರರಾದ ಪ್ರಭಾಕರ.ಎನ್ ಪೂಜಾರಿ (42) ತಂದೆ: ನಾರಾಯಣ ಬಿ. ಪೂಜಾರಿ, ವಾಸ: ಶಶಿಪ್ರಭಾ ನಿವಾಸ, ಲಾಡಿ ಮೂಡಬಿದ್ರಿ ಅಂಚೆ, ಪ್ರಾಂತ್ಯ ಗ್ರಾಮ, ಮಂಗಳೂರು ತಾಲೂಕು ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಮಾರುತಿ ಸ್ವಿಪ್ಟ್ ಕಾರು ನಂಬ್ರ KA 19 MA 2323 ನೇಯದಕ್ಕೆ ಢಿಕ್ಕಿ ಹೊಡೆದು,  ಟಿ.ವಿ.ಎಸ್. ಮೊಫೆಡ್ ಸವಾರ ವಿಕಾಸ್ ಕಾರಿನ ಅಡಿಗೆ ಬಿದ್ದ ಪರಿಣಾಮ ವಿಕಾಸ್ ನ ತಲೆಗೆ, ಮೈ ಕೈಗೆ ರಕ್ತಗಾಯವಾಗಿರುತ್ತದೆ.ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 104/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಕೋಟ: ದಿನಾಂಕ 26/07/2015 ರಂದು ಮಧ್ಯಾಹ್ನ  12:30 ಗಂಟೆ ಸಮಯಕ್ಕೆ  ಗೋಪಾಲ ತಿಂಗಳಾಯ ಎಂಬುವರು ಪಿರ್ಯಾದಿದಾರರಾದ ಅಶೋಕ ಮೆಂಡನ್ (47), ತಂದೆ: ಅಣ್ಣು ಕುಂದರ್, ವಾಸ:ಕಮಾನ ಬಾಬಕ್ಕನ ಮನೆ, ಮಣೂರು ಪಡುಕೆರೆ, ಮಣೂರು ಗ್ರಾಮ,ಉಡುಪಿ ತಾಲೂಕು ಇವರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವ ಬಗ್ಗೆ ಅಶೋಕರವರ ಮಗ ಗಿರೀಶ್ ಎಂಬುವವರು ತಿಳಿಸಿದ್ದು, ಈ ಬಗ್ಗೆ ವಿಚಾರಿಸಲು ಹೋಗುವಾಗ ಮಣೂರು ಗ್ರಾಮದ ಬಚ್ಚಗುಡಿಗಾರ್ ರವರ ತೋಟದ ಬಳಿ ಆಪಾದಿತ ಗೋಪಾಲ ತಿಂಗಳಾಯರವರು ಅಶೋಕರವರನ್ನು ಅಕ್ರಮವಾಗಿ ತಡೆದು ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಹೊಡೆದು ದೂಡಿ ಹಾಕಿ, ಎಡ ಕೈ ತೋಳಿಗೆ ಕಚ್ಚಿದ್ದು ಆ ಸಮಯ ಅಶೋಕರವರು ಬೊಬ್ಬೆ ಹಾಕಿದಾಗ ಆಪಾದಿತನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಓಡಿ ಹೋಗಿರುತ್ತಾನೆ. ಹಲ್ಲೆಯ ಪರಿಣಾಮ ಅಶೋಕ ಮೆಂಡನ್ ರವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 174/2015 ಕಲಂ: 324, 341, 323, 504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಇತರೇ ಪ್ರಕರಣ
  • ಅಮಾಸೆಬೈಲು: ಪಿರ್ಯಾದಿದಾರರಾದ ಮಂಜುನಾಥ ಪೂಜಾರಿ (30) ತಂದೆ : ಗೋಪು ಪೂಜಾರಿ ವಾಸ : ಉಳಿಕೊಡ್ಲು ನಿಲ್ಸ ಕಲ್ ಕಟ್ಟೆ ರಟ್ಟಾಡಿ ಗ್ರಾಮ ಕುಂದಾಪುರ ತಾಲೂಕು ಇವರು ಬೇಸಾಯ/ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದು, ಈ ಹಿಂದೆ ಅಮಾಸೆಬೈಲು ಗ್ರಾಮದ ದಿವಾನಂದ ಕೊಡ್ಗಿರವರ ಜತೆ ತೋಟದ ಕೆಲಸ ಮಾಡಿಕೊಂಡಿದ್ದು 1 ½ ವರ್ಷದ ಹಿಂದೆ ಅವರಿಂದ  57,000 /- ರೂಪಾಯಿ ಸಾಲ ಪಡೆದಿದ್ದು  ಹಣದಲ್ಲಿ ರೂಪಾಯಿ 65,000 /- ಹಣವನ್ನು ಈಗಾಗಲೇ ಮರುಪಾವತಿಸಿರುತ್ತಾರೆ. ದಿವಾನಂದ ಕೊಡ್ಗಿರವರು ಸಾಲ ನೀಡುವಾಗ ಕೆನರ ಬ್ಯಾಂಕಿನ 8 ಖಾಲಿ ಸಹಿಯಿರುವ ಚೆಕ್ ಗಳನ್ನು ಪಡೆದಿದ್ದು ಸಾಲ ತೀರಿಸಿದ ಕೂಡಲೇ ವಾಪಾಸ್ ನೀಡುವುದಾಗಿ ಹೇಳಿದ್ದು, ಆದರೆ ಸಾಲ ತೀರಿದ ನಂತರ ಚೆಕ್ ಗಳನ್ನು ಮಂಜುನಾಥ ಪೂಜಾರಿಯವರಿಗೆ ನೀಡದೇ ಈಗ ಕಳೆದ 2 ತಿಂಗಳಿಂದ ನೀನು ಇನ್ನೂ ಒಂದು ಲಕ್ಷ ಹಣ  ನೀಡಬೇಕು, ಬಡ್ಡಿ ಅಷ್ಟಾಗುತ್ತದೆ ಎನ್ನುತ್ತಿದ್ದಾರೆ. ಅಷ್ಟೂ ಅಲ್ಲದೇ ತಮ್ಮ ವಕೀಲರ ಮುಖೇನ ಮಂಜುನಾಥ ಪೂಜಾರಿಯವರಿಂದ 1,00,000/- ಹಣ ಕೇಳಿ ನೋಟಿಸ್ ನೀಡಿದ್ದಾರೆ. ಅಲ್ಲದೇ ದಿವಾನಂದ ಕೊಡ್ಗಿ ರವರು ಮಂಜುನಾಥ ಪೂಜಾರಿಯವರ ಮನೆಯ ಹತ್ತಿರ ಬಂದು ಇನ್ನೆರಡು ದಿನದಲ್ಲಿ ಹಣ ನೀಡದಿದ್ದರೆ ಪೇಟೆಯಲ್ಲಿ ಅಡ್ಡ ಹಾಕಿ ಹೊಡೆಯುವುದಾಗಿ ಬೆದರಿಸಿ, ಅವಮಾನ ಮಾಡಿರುತ್ತಾರೆ. ಈ ಬಗ್ಗೆ ಅಮಾಸೆಬೈಲು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 42/2015 ಕಲಂ: 3, 4 KARNATAKA PROHIBITION OF CHARGING EXORBITANT INTEREST ACT, 2004 &  U/s-38,39 KARNATAKA MONEY LENDERS ACT 1961 ರಂತೆ ಪ್ರಕರಣ ದಾಖಲಾಗಿರುತ್ತದೆ.


No comments: