Monday, July 27, 2015

Daily Crime Reports As On 27/07/2015 At 19:30 Hrsಅಪಘಾತ ಪ್ರಕರಣಗಳು
  • ಶಂಕರನಾರಾಯಣ: ದಿನಾಂಕ 27/07/2015 ರಂದು ಕುಂದಾಪುರ ತಾಲೂಕಿನ  ಹಾಲಾಡಿ 76 ಗ್ರಾಮದ  ಕಾಸಾಡಿ ಎಂಬಲ್ಲಿ ಕೆಎ 20 ಪಿ 7004 ನೇ ನಂಬ್ರದ ಕಾರನ್ನು ಆರೋಪಿಯು ಹೆಬ್ರಿ ಕಡೆಯಿಂದ ಹಾಲಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿ ನಾಸೀರ್ (37) ತಂದೆ: ದಿವಂಗತ ಹಮ್ಮಬ್ಬ ವಾಸ: ಕೋಟೇಶ್ವರ ಗ್ರಾಮ, ಕುಂದಾಪುರರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ 20 ಝಡ್ 6658 ನೇ ನಂಬ್ರದ  ಕಾರಿಗೆ ಡಿಕ್ಕಿ ಹೊಡೆದಿದ್ದು ಇದರ ಪರಿಣಾಮ ಎರಡೂ ಕಾರು ಜಖಂಗೊಂಡಿರುತ್ತದೆ, ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 164/15 ಕಲಂ:279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ.27/07/2015 ರಂದು 08:30 ಗಂಟೆಗೆ ಸಾಂತೂರು ಕಡೆಯಿಂದ ಯುಪಿಸಿಎಲ್ ಪವರ್ ಪ್ಲಾಂಟ್ ಕಡೆಗೆ ಸಾರ್ವಜನಿಕ ಡಾಮಾರು ಒಳ ರಸ್ತೆಯಲ್ಲಿ ಸಾಂತೂರು ಗ್ರಾಮದ ಯುಪಿಸಿಎಲ್ ಗೇಟ್ ನ ಎದುರುಗಡೆ ರಸ್ತೆಯಲ್ಲಿ ಜೀರಿಮ್ ಹೇಮ್ರಾಮ್ (40) ಎಂಬವರು ನಡೆದು ಕೊಂಡು ಬರುತ್ತಿರುವಾಗ ಎಂಹೆಚ್ 02 ಡಿಜಿ 4395 ನೇ ಕಾರಿನ ಚಾಲಕ ಆರೋಪಿ ಶಶಿ ಆರ್. ಶೆಟ್ಟಿ ಎಂಬವರು ಕಾರನ್ನು ಅತೀ ವೇಗ ಮತ್ತು ಅಜಾಕರೂಕತೆಯಿಂದ ಮಣ್ಣು ರಸ್ತೆಗೆ ಚಲಾಯಿಸಿಕೊಂಡು ಬಂದು ನಡೆದು ಕೊಂಡು ಹೋಗುತ್ತಿದ್ದ  ಜೀರಿಮ್ ಹೇಮ್ರಾಮ್ ಎಂಬವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಣ್ಣು ರಸ್ತೆಗೆ ಬಿದ್ದು ಬಲಕೈಯ ಹಾಗೂ ಬಲಕಾಲಿನ ಮೂಳೆ ಮುರಿತ ಹಾಗೂ ತರಚಿದ  ಗಾಯವಾಗಿ ಮುಕ್ಕ ಶ್ರೀನಿವಾಸ ಆಸ್ರತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 99/2015 ಕಲಂ; 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ 27/07/2015 ರಂದು ಸಮಯ ಮಧ್ಯಾಹ್ನ 2:30 ಗಂಟೆಗೆ ಕುಂದಾಪುರ ಕಸಬಾ ಗ್ರಾಮದ,  ಪಾರಿಜಾತ ಸರ್ಕಲ್  ಬಳಿಯ ಲಕ್ಷ್ಮೀ ಹೋಟೇಲ್ ಹತ್ತಿರ,  ಪುರಸಭಾ ರಸ್ತೆಯಲ್ಲಿ ಆಪಾದಿತ ಲಾರೆನ್ಸ್  ಡಿಸೋಜಾ ಎಂಬವರು   KA 20 P 6314 ನೇ ಕಾರನ್ನು ಕುಂದಾಪುರ  ಹೊಸ ಬಸ್ ನಿಲ್ದಾಣ ಕಡೆಯಿಂದ ಶಾಸ್ತ್ರಿ ಸರ್ಕಲ್ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಾಬು ಅಂಗಡಿ @ ಬಶೀಟಪ್ಪ ಅಂಗಡಿ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA 25 EC 2999 ನೇ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದು ಮುಖಕ್ಕೆ ಹಾಗೂ ತಲೆಗೆ ರಕ್ತಗಾಯ ಹಾಗೂ ಒಳನೋವು ಉಂಟಾಗಿ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ, ಎಂಬುದಾಗಿ ಹೆರಾಲ್ಡ್  ಬೊಥೆಲೋ  (49) ತಂದೆ : ತೀಯಾದೋರ್ ಬೊಥೆಲೋ ವಾಸ:  ಜೋಗಯ್ಯನ ಕಟ್ಟೆರಸ್ತೆ, ಕುಂದಾಪುರ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 89/2015  ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ
  • ಕಾಪು: ದಿನಾಂಕ: 27/07/2015 ರಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಪಿರ್ಯಾದಿ ಹರೀಶ್ ದೇವಾಡಿಗ (41) ತಂದೆ: ಸಂಜೀವ ಶೇರಿಗಾರ್  ವಾಸ: ತೆಂಕು ಕಲ್ಯ, ಉಳಿಯಾರ ಗೋಳಿ ಗ್ರಾಮ, ಕಾಪು, ಉಡುಪಿರವರು ತಮ್ಮ ತೋಟಕ್ಕೆ ಬಂದಾಗ ಅವರ ಮನೆಯ ಕಂಪೌಂಡ್‌ನ 50 ಗಜಗಳಷ್ಟು ದೂರದಲ್ಲಿ ಕಾಪು ಪೇಟೆಯಿಂದ ತೆಂಕು ಕಲ್ಯ ಕಡೆಗೆ ಹೋಗು ಕಾಲುದಾರಿಯಲ್ಲಿ ಯಾರೋ ವ್ಯಕ್ತಿ ಬಿದ್ದಿರುವುದನ್ನು ನೋಡಿದಾಗ  ಅದು ನೆರೆಮನೆಯ ಗುರುವ ಸೇರಿಗಾರ್(55) ಆಗಿರುತ್ತಾರೆ. ಇವರು ಕಾಪು ಮಾರಿಗುಡಿ ಹಾಗೂ ಜನಾರ್ಧನ ದೇವಸ್ಥಾನದಲ್ಲಿ ವಾದ್ಯ ಊದುವ ಕೆಲಸ ಮಾಡುತ್ತಿದ್ದರು. ಅವರು ಬಿದ್ದಿದ್ದ ಜಾಗದಲ್ಲೇ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದವರು ಅಳವಡಿಸಿರುವ ವಿದ್ಯುತ್ ತಂತಿಯು ತುಂಡಾಗಿ ಬಿದ್ದಿದ್ದು, ಸದ್ರಿ ವಿದ್ಯುತ್ ತಂತಿಯನ್ನು ಗುರುವ ಸೇರಿಗಾರ್‌ರು ಕೈಯಲ್ಲಿ ಹಿಡಿದುಕೊಂಡಿದ್ದು ಉಳಿದ ಭಾಗ ಅವರ ಕಾಲಿನ ಮೇಲೆ ಬಿದ್ದುಕೊಂಡಿತ್ತು. ನೆಲದಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು ಕೂಡಲೇ ಕಾಪು ಕೆಇಬಿಗೆ ಹಾಗೂ ಗುರುವ ಸೇರಿಗಾರ್‌ರ ಮನೆಯವರಿಗೆ ವಿಷಯ ತಿಳಿಸಿದ್ದು, ಕೆಇಬಿಯವರು ವಿದ್ಯುತ್ ಕಡಿತಗೊಳಿಸಿದ ಮೇಲೆ ಆ ಸಮಯ ಅಲ್ಲಿಗೆ ಬಂದ ಗುರುವ ಸೇರಿಗಾರ್‌ರ ಮನೆಯವರೊಂದಿಗೆ ಅವರನ್ನು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಗುರುವ ಸೇರಿಗಾರ್‌ರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 148/2015 ಕಲಂ  304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: