Tuesday, July 28, 2015

Daily Crime Reports As On 28/07/2015 At 07:00 Hrsಅಪಘಾತ ಪ್ರಕರಣಗಳು
  • ಕುಂದಾಪುರ: ದಿನಾಂಕ 23/07/2015 ರಂದು ಸಮಯ ಸುಮಾರು ಮಧ್ಯಾಹ್ನ  01:00  ಗಂಟೆಗೆ  ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ  ನೆಂಪು ಬಿ.ಎಂ ಸುಕುಮಾರ್ ಶೆಟ್ಟಿಯವರ ಮನೆಯ ಬಳಿ ತಿರುವಿನ ರಸ್ತೆಯಲ್ಲಿ ಆಪಾದಿನ ಅಣ್ಣಪ್ಪ ಎಂಬವರು KA 20 EB 4123 ನೇ ಬೈಕಿನಲ್ಲಿ  ಪಿರ್ಯಾದಿ ಶಿವಾನಂದ (23) ತಂದೆ ಶಿವರಾಮ ವಾಸ:ತೂದಳ್ಳಿ ರಸ್ತೆ, ಊದೂರು, ಶಿರೂರು ಗ್ರಾಮ, ಕುಂದಾಪುರ ತಾಲೂಕು ರವರು ಸಹ  ಸವಾರರಾಗಿ ಕುಳ್ಳಿರಿಸಿಕೊಂಡು  ಕುಂದಾಪುರ ಕಡೆಯಿಂದ ಕೊಲ್ಲೂರಿಗೆ  ಅತೀವೇಗ ಹಾಗೂ  ಅಜಾಗರೂಕತೆಯಿಂದ  ಸವಾರಿ ಮಾಡಿದ ಪರಿಣಾಮ ಬೈಕ್‌ ಸ್ಕಿಡ್ ಆಗಿ ವಾಹನ ಹತೋಟಿ ತಪ್ಪಿ ವಾಹನ ಸಮೇತ  ರಸ್ತೆಯಲ್ಲಿ  ಬಿದ್ದ  ಪರಿಣಾಮ ಶಿವಾನಂದರವರ ಎಡ ಕೈ, ಮೊಣ ಕೈ ಹಾಗೂ ಬಲಕಾಲಿನ ಮುಂಗಾಲು ಗಂಟಿಗೆ ರಕ್ತಗಾಯ ಹಾಗೂ ಒಳ ನೋವು ಉಂಟಾಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ, ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 90/2015  ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಪಡುಬಿದ್ರಿ: ದಿನಾಂಕ 27/07/2015 ರಂದು ಮಧ್ಯಾಹ್ನ3:15 ಗಂಟೆಗೆ ಬಡಾ ಗ್ರಾಮದ ಬುನಯ್ಯ ಹೌಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ನೇದರಲ್ಲಿ KA 19 ME 1286 ನೇ ರಿಟ್ಜ್ ಕಾರನ್ನು ಅದರ ಚಾಲಕ ನೌಫಲ್ ರಿಯಾಜ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಉಡುಪಿ ಕಡೆಗೆ ಹೋಗುತ್ತಿದ್ದ KA 20 V 6488 ನೇ ಮೋಟಾರ್ ಸೈಕಲ್ ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ನಾಸೀರ್ ಹುಸೇನ್ ರವರು ಕಾರಿನ ಬಾನೆಟ್ ಮೇಲೆ ಬಿದ್ದು ನಂತರ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಅವರ ತಲೆಯ ಹಿಂಭಾಗ, ಮುಖಕ್ಕೆ, ಕಾಲಿಗೆ ಹಾಗೂ ಬೆನ್ನಿಗೆ ರಕ್ತಗಾಯ ಹಾಗೂ ಗುದ್ದಿದ ಗಾಯವಾಗಿರುತ್ತದೆ, ಎಂಬುದಾಗಿ ಅಬ್ದುಲ್ ಹಮೀದ್ (42) ತಂದೆ:- ಹೆಚ್. ಉಮರಬ್ಬ ವಾಸ:- ಎನ್.ಎಸ್. ರೋಡ್, ಹೆಜಮಾಡಿ ಪೋಸ್ಟ್, ನಡ್ಸಾಲು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ. ಇವರು ನೀಡಿದ ದೂರಿನಂತೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 100/2015 ಕಲಂ; 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಮನುಷ್ಯ ಕಾಣೆ ಪ್ರಕರಣ
  • ಮಲ್ಪೆ: ಪಿರ್ಯಾದಿ ಶ್ರೀಧರ ಗಾಣಿಗ (32) ವಾಸ: ಸತ್ಯ ಶ್ರೀನಿವಾಸ, ಉದ್ದಿನಹಿತ್ಲು, ಕೊಡವೂರು ಗ್ರಾಮ, ಉಡುಪಿ ತಾಲೂಕು. ಇವರ ತಂದೆಯವರಾದ ಶೇಖರ ಗಾಣಿಗ (60) ರವರು ದಿನಾಂಕ:26/07/2015 ರಂದು ಬೆಳಿಗ್ಗೆ 10.00 ಗಂಟೆಗೆ ಮನೆಯಿಂದ ಹೋದವರು ಇದವರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 118/2015 ಕಲಂ: ಗಂಡಸು ಕಾಣೆ ಪ್ರಕರಣ ದಾಖಲಾಗಿರುತ್ತದೆ. 
  • ಮಲ್ಪೆ:ದಿನಾಂಕ 10/07/2015 ರಂದು ಬೆಳಿಗ್ಗೆ ಸಮಯ ೦8:30 ರ ನಂತರದ ಅವಧಿಯಲ್ಲಿ ಅಣ್ಣಪ್ಪ(42) ತಂದೆ:ರಾಮಪ್ಪ, ವಾಸ:ಅಲ್ಮೇಡಾ ಕಂಪೌಂಡ, ತೀರ್ಥಕಲ್ಲೆಯ ತೊಟ್ಟಂ ಅಂಚೆ, ಕೊಡವೂರು ಗ್ರಾಮ, ಉಡುಪಿ ತಾಲೂಕು ರವರ ಮಗ ಕೃಷ್ಣ ಎ.(16) ಎಂಬವನು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾನೆ. ಈ ಬಗ್ಗೆ ಮಲ್ಪೆ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 117/2015 ಕಲಂ: 363 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: