Monday, July 27, 2015

Daily Crime Reports As On 27/07/2015 At 07:00 Hrsಅಪಘಾತ ಪ್ರಕರಣ
  • ಪಡುಬಿದ್ರಿ: ದಿನಾಂಕ. 26/07/2015 ರಂದು ಬೆಳಿಗ್ಗೆ 9:15 ಗಂಟೆಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎಲ್ 39 ಡಿ 9393 ನೇ ಮಹೀಂದ್ರ ಎಕ್ಸ್ ವಿವಿ ಕಾರನ್ನು ಆರೋಪಿ ತೋಮಸ್ಸ್ ಮುರಿಕ್ಕನ್ ಎಂಬವರು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ನಡ್ಸಾಲು ಗ್ರಾಮದ ಕನ್ನಗಾರ್ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ತಿರುವಿನಲ್ಲಿ ಬರುತ್ತಿರುವಾಗ ಕಾರಿಗೆ ಬ್ರೇಕ್ ಹಾಕಿದ್ದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66 ರ ಎಡಬದಿಯ ಚರಂಡಿಗೆ ಉರುಳಿ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಕವಿತ ಬಿಜಿಯವರಿಗೆ ಕುತ್ತಿಗೆಗೆ ರಕ್ತಗಾಯವಾಗಿರುತ್ತದೆ, ವಸಂತ ಭಟ್ಟರವರಿಗೆ ತಲೆಗೆ ರಕ್ತಗಾಯವಾಗಿರುತ್ತದೆ, ಲಾಲಾ ಭರತನ್, ಶ್ರೀಮತಿ ರಾಘು ರಾಹುಲ್ ಹಾಗೂ ಚಾಲಕನಾದ ಆರೋಪಿ ತೋಮಸ್ಸ್ ಮುರಿಕ್ಕನ್ ರವರಿಗೆ ತರಚಿದ ಹಾಗೂ ಗುದ್ದಿದ ಗಾಯವಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 98/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ
  • ಕೋಟ:ದಿನಾಂಕ:26/07/2015 ರಂದು ಮಧ್ಯಾಹ್ನ 12:00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಗೀತಾ(33),ಗಂಡ:ಗೋಪಾಲ ತಿಂಗಳಾಯ,ವಾಸ:ಬ್ರಹ್ಮಲಿಂಗೇಶ್ವರ ಕೃಪಾ,ಮಣೂರು ಪಡುಕೆರೆ,ಕೋಟತಟ್ಟು ಅಂಚೆ,ಉಡುಪಿ ತಾಲೂಕು ಹಾಗೂ ಅವರ ಗಂಡ ಗೋಪಾಲ ತಿಂಗಳಾಯ ರವರು ಉಡುಪಿ ತಾಲೂಕು ಮಣೂರು ಗ್ರಾಮದ ಮಣೂರು ಪಡುಕೆರೆ ಎಂಬಲ್ಲಿನ ಅವರ ಮನೆಯಲ್ಲಿರುವಾಗ ಗೋಪಾಲ ತಿಂಗಳಾಯ ಅವರ ದೂರದ ಸಂಬಂಧಿ ಅಶೋಕ ಹಾಗೂ ಅವರ ಮಗ ಗಿರೀಶ್ ಎಂಬುವವರು ಗೋಪಾಲ ತಿಂಗಳಾಯ ರವರನ್ನು ಹೊರಕ್ಕೆ ಕರೆದು ಬೆಳಿಗ್ಗೆ ಆಡಿದ ಲೂಡೊ ಆಟದ ವಿಚಾರದಲ್ಲಿ ಗಲಾಟೆ ತಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಕೆಳಗೆ ದೂಡಿ ಹಾಕಿ ಗುದ್ದಿದ ಪರಿಣಾಮ ಮೈ ಕೈ ನೋವಾಗಿ,ಬಾಯಿಯಲ್ಲಿ ರಕ್ತ ಬಂದಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 173/2015 ಕಲಂ:323, 504, 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ
  • ಕುಂದಾಪುರ: ದಿನಾಂಕ 26/07/2015ರಂದು ಪಾಂಡುರಂಗ ನಾಯ್ಕ್ ಎ.ಎಸ್. ಐ ಕುಂದಾಪುರ ಪೊಲೀಸ್ ಠಾಣೆ ಇವರಿಗೆ  ದೊರೆತ ಖಚಿತ ಮಾಹಿತಿ ಮೇರೆಗೆ  ಮಧ್ಯಾಹ್ನ 13.20 ಗಂಟೆಗೆ ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಶಾರದಾ ಕಾಲೇಜಿನ ಎದುರು ರಸ್ತೆ ಬದಿಯಲ್ಲಿರುವ  ಖಾಲಿ ಸಾರ್ವಜನಿಕ ಸ್ಥಳದಲ್ಲಿ  ಜನರು ಗುಂಪು ಕಟ್ಟಿ ಕುಳಿತು ನೆಲಕ್ಕೆ ಬಟ್ಟೆಯೊಂದನ್ನು ಹಾಸಿ ಇಸ್ಪಿಟು ಕಾರ್ಡ್  ಸಹಾಯದಿಂದ  ಒಳಗೆ ಹೊರಗೆ ಎಂದು ಹೇಳುತ್ತಾ ಹಣವನ್ನು ಪಣವಾಗಿಟ್ಟು ಇಸ್ಪಿಟು ಕಾರ್ಡನ್ನು ಹಾಕುತ್ತಿದ್ದುದನ್ನು ಕಂಡು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಸುತ್ತುವರಿದು ಜುಗಾರಿ ಆಟವಾಡುತ್ತಿದ್ದ 1)ಲಕ್ಷ್ಮಣ ಪೂಜಾರಿ, 2) ಸತೀಶ ಮೊಗವೀರ, 3)ಭದ್ರ ಪೂಜಾರಿ, 4)ಸುಬ್ರಹ್ಮಣ್ಯ ಪೂಜಾರಿ, 5) ನಾಗರಾಜ, 6)ಸಂಜೀವ ರವರನ್ನುದಸ್ತಗಿರಿ ಮಾಡಿ ಅಂದರ ಬಾಹರ್ ಜುಗಾರಿ ಆಟಕ್ಕೆ ಬಳಸಿದ  ಒಟ್ಟು 52 ಇಸ್ಪಿಟು ಕಾರ್ಡ್ ಗಳು ಹಾಗೂ ನಗದು ರೂಪಾಯಿ 1,070/- ನ್ನು ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 278/2015, ಕಲಂ 87  ಕೆಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ: ದಿನಾಂಕ 26/07/2015 ರಂದು 12:45 ಗಂಟೆಗೆ ಪಿರ್ಯಾದಿದಾರರಾದ ರಾಜು ದೇವಾಡಿಗ(25) ತಂದೆ:ಶೇಷ ದೇವಾಡಿಗ, ಮಾವಿನಕೆರೆ, ಕೆಂಚನೂರು ಗ್ರಾಮ ಕುಂದಾಪುರ ತಾಲೂಕು ಇವರ ಮಾವನ ಮಗನಾದ ರಜಿತ (17) ನು ರಾಜು ದೇವಾಡಿಗರವರ ಮನೆಯ ಗದ್ದೆಗೆ ಬಂದ ದನವನ್ನು ಓಡಿಸಿಕೊಂಡು ಹೋದವನು , ಸರಕಾರಿ ಕೆರೆಯ ದಡದಲ್ಲಿ ಆಕಸ್ಮಿಕವಾಗಿ ಆಯ ತಪ್ಪಿ ಕೆರೆಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಯಡಿಆರ್ ಕ್ರಮಾಂಕ 33/2015, ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಶಂಕರನಾರಾಯಣ: ದಿನಾಂಕ: 26/07/2015 ರಂದು 16:00 ಗಂಟೆಗೆ ದೇಜಪ್ಪ ಪಿಎಸ್‌ಐ ಶಂಕರನಾರಾಯಣ ಠಾಣೆ ಇವರು ಠಾಣೆಯಲ್ಲಿರುವಾಗ ಬಂದ ಖಚಿತ ಮಾಹಿತಿಯಂತೆ ಕುಂದಾಪುರ ಪೊಲೀಸ್ ಠಾಣಾ  ಅಪರಾಧ ಕ್ರಮಾಂಕ 254,260,261/2015 ಕಲಂ:457,380 ಐಪಿಸಿ ಪ್ರಕರಣದಲ್ಲಿ  ಆರೋಪಿಗಳು ಕೃತ್ಯಕ್ಕೆ ಬಳಸಿದ  ಕೆಎ 02 ಸಿ 2405  ನೇ  ಈಚರ್‌‌ ಲಾರಿಯನ್ನು ಬೆಂಗಳೂರು ಕಡೆಯಿಂದ ಕುಂದಾಪುರ  ಕಡೆಗೆ  ಚಲಾಯಿಸಿಕೊಂಡು ಬರುತ್ತಿದ್ದಾರೆ ಎಂಬ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಹೊಸಂಗಡಿ-ಶಂಕರನಾರಾಯಣ ರಾಜ್ಯ ಹೆದ್ದಾರಿಯಲ್ಲಿ ಸಿದ್ದಾಪುರ ಗ್ರಾಮದ  ನೀರಾವರಿ ನಿಗಮ ವರಾಹಿಯ ಸಿದ್ದಾಪುರ ಕಚೇರಿ ಬಳಿ ಇರುವಾಗ ಹೊಸಂಗಡಿ ಕಡೆಯಿಂದ ಟರ್ಪ್ಪಲ್‌‌ ಹಾಕಿದ ತಿಳಿ ಕೇಸರಿ ಬಣ್ಣದ ಕೆಎ 02 ಸಿ 2405 ನೇ  ನಂಬ್ರದ   ಈಚರ್‌ ಲಾರಿಯೊಂದು  ಬರುವುದನ್ನು  ನೋಡಿ   ನಿಲ್ಲಿಸಲು  ಸೂಚಿಸಿ ಪರಿಶೀಲಿಸಿದಾಗ ಸುಮಾರು 95,248/- ರೂ ಮೊಬೈಲ್ ಪೋನ್ 20, ಪಿಸ್ತೂಲ್‌‌- 1, ಜೀವಂತ ಗುಂಡುಗಳು 5, ಸಿಮ್ ಇರುವ  SAMSUNG Galaxy   grand  ಬಿಳಿ ಬಣ್ಣದ  ಮೊಬೈಲ್‌‌  ಸೆಟ್‌‌, ಕಟ್ಟರ್‌‌ -1 ಹಾಗೂ ಮರದ  ದೊಣ್ಣೆಗಳನ್ನು ವಶಪಡಿಸಿಕೊಂಡು ಆರೋಪಿತರಾದ   1)ಗಿರಿಧರ್‌‌ಲಾಲ್‌ (21) ತಂದೆ: ಬನ್ನಾರಾಮ್‌‌‌,  ವಾಸ: ವಾಟರ್‌ ಟ್ಯಾಂಕ್‌ ಬಳಿ  ಅಮರಾಪುರ  ಜಿಲ್ಲೆ  ಜೈತರನ್‌ ತಾಲೂಕು ಪಾಲಿ  ಜಿಲ್ಲೆ ರಾಜಸ್ಥಾನ್ 2) ಮಾಣಿಕ್‌ಚಂದ್‌‌ (38) ತಂದೆ:ಬಾಬುರಾಮ್‌‌, ಬೂಟಿವಾಸ್‌‌‌ ಗ್ರಾಮ ಮತ್ತು ಅಂಚೆ, ರಾಯ್‌‌ಪುರ್‌ ತಾಲೂಕು ಪಾಲೆ ಜಿಲ್ಲೆ   ರಾಜಸ್ಥಾನ್ 3) ನಾಥುರಾಮ್‌ ರವರುಗಳನ್ನು ದಸ್ತಗಿರಿ ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 163 /2015  ಕಲಂ: 3 ಮತ್ತು 25  ಭಾರತೀಯ ಶಸ್ತ್ರಾಸ್ತ್ರ  ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: