Wednesday, July 15, 2015

Daily Crime Reports As On 15/07/2015 At 17:00 Hrs


ಅಕ್ರಮ ಜಾನುವಾರು ಸಾಗಾಟ ಪ್ರಕರಣ

  • ಬೈಂದೂರು: ದಿನಾಂಕ 14/15-7-2015 ರಂದು ಸುದರ್ಶನ್‌ ಎಮ್‌, ಪೊಲೀಸ್‌ ವೃತ್ತ ನಿರೀಕ್ಷಕರು, ಬೈಂದೂರು ವೃತ್ತ ಬೈಂದೂರು ಇವರು ಸಿಬ್ಬಂದಿಯವರೊಂದಿಗೆ ಬೈಂದೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ನಲ್ಲಿರುವ ಸಮಯದಲ್ಲಿ  ದಿನಾಂಕ 15-7-2015 ರಂದು  ರಾತ್ರಿ  04-00  ಗಂಟೆ ವೇಳೆಗೆ ನಾವುಂದ ಪೆಟ್ರೋಲ್ ಪಂಪು ಬಳಿಯ ಜಲೀಲನ ಮನೆ ಬಳಿಯಲ್ಲಿ ಒಂದು ಲಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಸಿಕೊಂಡು ಕೇರಳಕ್ಕೆ ಸಾಗಿಸುವರೆ ನಿಂತಿರುವುದಾಗಿ ಮಾಹಿತಿ ಬಂದಂತೆ ರಾತ್ರಿ ಗಸ್ತು ಸಿಬ್ಬಂದಿಯವರನ್ನು ಹಾಗೂ ಪಂಚರುಗಳನ್ನು ಬರಮಾಡಿಸಿಕೊಂಡು ಬೆಳಗಿನ ಜಾವ  5 ಗಂಟೆಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಲಾರಿಯ ಹತ್ತಿರ  ಹೋಗುತ್ತಿದ್ದಂತೆ ಆ ಲಾರಿಯಿಂದ ಇಬ್ಬರು ಕತ್ತಲೆಯಲ್ಲಿ ಓಡಿ ಪರಾರಿ ಆದರು. ಸದ್ರಿ ಲಾರಿಯನ್ನು ಕೂಲಂಕೂಷವಾಗಿ ತಪಾಸಣೆ ಮಾಡಿದಾಗ ಅದರೊಳಗಡೆ 19 ಕೋಣಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಲಾರಿಯಲ್ಲಿ ತುಂಬಿಸಿ ಅವುಗಳಿಗೆ ಯಾವುದೇ ಮೇವು, ಬಾಯಾರಿಕೆ ನೀಡದೇ, ಹಿಂಸೆಯಿಂದ ಉಸಿರುಗಟ್ಟುವ ರೀತಿಯಲ್ಲಿ ತುಂಬಿಸಿರುವುದು ಕಂಡು ಬಂತು. ಲಾರಿಯ ಅಂದಾಜು ಬೆಲೆ  8 ಲಕ್ಷ ರೂಪಾಯಿ ಆಗಬಹುದು.  19 ಕೋಣಗಳ ಬೆಲೆ 5 ಲಕ್ಷ  ರೂಪಾಯಿ ಆಗಬಹುದು.  ಲಾರಿಯಿಂದ  ಓಡಿ ಹೋದ ಆರೋಪಿತರಲ್ಲಿ ಓರ್ವ ನಾವುಂದದ ಜಲೀಲ್ ಎಂದು ಬೇರೆಯವರಿಂದ ತಿಳಿದಿರುತ್ತದೆ.  ಸದ್ರಿ ಜಾನುವಾರುಗಳನ್ನು  ಆರೋಪಿತರು  ಎಲ್ಲಿಯೋ ಕಳವು  ಮಾಡಿ  ಕೆಎ-21-ಎ-7585  ನೇ ಲಾರಿಯಲ್ಲಿ  ಯಾವುದೇ ಪರವಾನಿಗೆ ಇಲ್ಲದೇ ಅವುಗಳಿಗೆ ಯಾವುದೇ ಮೇವು, ಬಾಯಾರಿಕೆ ನೀಡದೇ, ಹಿಂಸೆಯಿಂದ ಉಸಿರುಗಟ್ಟುವ ರೀತಿಯಲ್ಲಿ ತುಂಬಿಸಿಕೊಂಡು, ಅವುಗಳನ್ನು ವಧೆ ಮಾಡುವ ಉದ್ದೇಶದಿಂದ ಇಲ್ಲವೇ ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಕೊಂಡೊಯ್ಯುವರೆ ಸಾಗಾಟ ಮಾಡುತ್ತಿರುವುದಾಗಿದೆ. ಸದ್ರಿ ಕೋಣಗಳನ್ನು ಹಾಗೂ ಲಾರಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 195/2015 ಕಲಂ  8, 9, 11 ಕರ್ನಾಟಕ ಗೋ ಹತ್ಯ ನಿಷೇಧ ಕಾಯಿದೆ & ಗೋ ಸಂರಕ್ಷಣಾ ಕಾಯಿದೆ. ಮತ್ತು ಕಲಂ 11(1) ಪ್ರಾಣಿ ಹಿಂಸೆ ತಡೆ ಕಾಯಿದೆ ಮತ್ತು 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಕಾರ್ಕಳ: ಶ್ರೀಮತಿ ಸತ್ಯಭಾಮ ರವರು 75 ವರ್ಷ ಪ್ರಾಯದವರಾಗಿದ್ದು ಅವರು ಕಾರ್ಕಳ ತಾಲೂಕು ಸೂಡ ಗ್ರಾಮದ ಪಡುಮನೆ ಎಂಬಲ್ಲಿ ವಾಸಮಾಡಿಕೊಂಡಿದ್ದವರು ದಿನಾಂಕ: 12/07/2015 ರಂದು ಬೆಳಿಗ್ಗೆ 6:00 ಗಂಟೆಯಿಂದ 7:00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/2015 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 14/07/2015 ರಂದು ರಾತ್ರಿ 09:45 ಗಂಟೆಗೆ  ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮಾರ್ಗೋಳಿ ಸ್ಮಶಾನದ ಬಳಿ ರಾಜ್ಯ ರಸ್ತೆಯಲ್ಲಿ  ಆಪಾದಿತ  KA 20 Z 7523 ನೇ ಕಾರಿನ ಚಾಲಕ ಸದಾನಂದ ಭಂಡಾರಿ ಎಂಬವರು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಬದಿಗೆ ಬಂದು ಪಿರ್ಯಾದಿದಾರರಾದ ವಾಲ್ಟರ್‌ ಡಿಸೋಜಾ ತಂದೆ:ಅಂತೋನಿ ಡಿಸೋಜಾ ವಾಸ:ಡಿಮೇಲ್ಲೋ ಹೌಸ್‌, ದಾಮೋದರ ದೇವಸ್ಥಾನದ ಬಳಿ ಬಸ್ರೂರು  ಕುಂದಾಪುರ ಇವರು  ಗುಲ್ವಾಡಿ ಕಡೆಯಿಂದ ಸವಾರಿ ಮಾಡಿಕೊಂಡು ಬರುತ್ತಿದ್ದ KA 15 L 5295 ನೇ ಬೈಕ್ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಯಲ್ಲಿ ಬಿದ್ದು ಗಾಯಗೊಂಡು  ಚಿಕಿತ್ಸೆ  ಬಗ್ಗೆ  ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 85/2015  ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ದಿನಾಂಕ 15/07/2015 ರಂದು ಬೆಳಗ್ಗೆ 08:50 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಗೋಪಾಲ ಕೃಷ್ಣ ದೇವಸ್ಥಾನದ ಬಳಿಯ  ಮಂಜುನಾಥ್ ಪೈ ಕಾಲೇಜಿಗೆ ಹೋಗುವ ರಾಜ್ಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ವಿಲೇಜ್ ಹೋಟೇಲ್ ಎದುರು ರಸ್ತೆಯ ತೀರಾ ಬಲ ಬದಿಯಲ್ಲಿ ನಡೆದುಕೊಂಡು ಕಾಲೇಜಿಗೆ ಹೋಗುತ್ತಿದ್ದ ನಿಶ್ಮಿತಾ, ನಿಖಿತಾ, ಶ್ವೇತಾ, ಅಶ್ವಿತಾ, ಇವರುಗಳಿಗೆ ಎದುರಿನಿಂದ ಓರ್ವ ಮೋಟಾರ್ ಸೈಕಲ್ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಾಜ್ಯ ಹೆದ್ದಾರಿಯ ತೀರಾ ಬಲ ಬದಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ಪರಿಣಾಮ ಅವರುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ಅಲ್ಲದೆ ಮೋಟಾರ್ ಸೈಕಲ್ ಸವಾರ ನಿತೇಶ್‌ಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳದ ಪ್ರತಿಭಾ ನರ್ಸಿಂಗ್ ಹೋಂ ಗೆ ದಾಖಲಾಗಿದ್ದು ಈ ಘಟನೆಗೆ ಹೊಸ ಮೋಟಾರ್ ಸೈಕಲ್ ಸವಾರ ನಿತೇಶ್ ಇವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆ ಕಾರಣವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101/2015 ಕಲಂ 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: