Wednesday, July 15, 2015

PRESS NOTE

ಇತ್ತೀಚಿನ ದಿನಗಳಲ್ಲಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ಸಾಲ ಭಾದೆ ತಾಳಲಾರದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವರದಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಇಂತಹ ಯಾವುದೇ ಪ್ರಕರಣಗಳು ದಾಖಲಾಗ ದಿರುವುದು ಗಮನಾರ್ಹ. ಆದಾಗ್ಯೂ ಸರ್ಕಾರಿ ಆದೇಶ ಸಂಖ್ಯೆ: ಕೃಇ 55/ಕೈಉಇ 2015 ದಿನಾಂಕ 11/07/2015 ಹಾಗೂ ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು ಇವರ ಸುತ್ತೊಲೆ ಸಂಖ್ಯೆ: ಕಾ ಮತ್ತು ಸು/ಮಿಶ್ರ/67/2015-16  ದಿನಾಂಕ  14/07/2015ರಲ್ಲಿ ನಿರ್ದೇಶಿಸಿರುವಂತೆ ಈ ಆದೇಶವನ್ನು ಅನುಷ್ಠಾನಕ್ಕೆ ತರಲು ಇನ್ನು ಮುಂದೆ  ಹಣಕಾಸು ಸಂಸ್ಥೆಗಳಲ್ಲಿ ಅಥವಾ ಯಾವುದೇ ಬಡ್ಡಿ ವ್ಯವಹಾರವನ್ನು ಮಾಡುವ ಮೀಟರ್ ಬಡ್ಡಿ ಅಥವಾ ಡೈಲಿ ಬಡ್ಡಿ ಹಣ ಪಡೆಯುವ ನಿಟ್ಟಿನಲ್ಲಿ ಆಗುವ ಕಿರುಕುಳ ತಾಳಲಾರದೇ ಕೆಲವೊಂದು ರೈತರು ಅಥವಾ ಸಾರ್ವಜನಿಕರು ಬಡ್ಡಿ ಹಣ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ/ಕಿರುಕುಳ ಅನುಭವಿಸುತ್ತಿರುವ ವ್ಯಕ್ತಿಗಳಿದ್ದಲ್ಲಿ ಅಂತಹವರಿಗೆ ತೊಂದರೆ ಕೊಡುವ ವ್ಯಕ್ತಿಗಳ ಕುರಿತು ಪ್ರಕರಣಗಳು ಬೆಳಕಿಗೆ ಬಂದಲ್ಲಿ ಅಂತಹವರ ವಿರುದ್ದ ಕರ್ನಾಟಕ ಮನಿ ಲೆಂಡರ್ಸ್ ಆ್ಯಕ್ಟ್ 1961; ಕರ್ನಾಟಕ ಪಾನ್ ಬ್ರೋಕರ್ಸ್ ಆ್ಯಕ್ಟ್ 1961, ಚಿಟ್ಫಂಡ್ ಆ್ಯಕ್ಟ್ 1982, ಕರ್ನಾಟಕ ಪ್ರೊಹಿಬಿಷನ್ ಆಫ್ ಚಾರ್ಜಿಂಗ್ ಎಕ್ಸಾರ್ಬಿಟೆಂಟ್ ಇಂಟರೆಸ್ಟ್ ಆ್ಯಕ್ಟ್ 2004 ಮತ್ತು ಭಾರತೀಯ ನೀತಿ ಸಂಹಿತೆಯಡಿಯಲ್ಲಿ ಕಾನೂನು ರೀತಿಯ ಸೂಕ್ತ ಕ್ರಮ ತೆಗೆದುಕೊಳ್ಳಲು ಅವಕಾಶವಿರುವುದರಿಂದ ಸಾರ್ವಜನಿಕರು / ನೊಂದವರು ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯನ್ನು ಸಂಪರ್ಕಿಸಲು ಈ ಕೆಳಕಂಡ  ದೂರವಾಣಿ ಸಂಖ್ಯೆಯು ದಿನನಿತ್ಯ  24x7  ಕಾರ್ಯ ನಿರ್ವಹಿಸುತ್ತಿರುತ್ತದೆ.

ಜಿಲ್ಲಾ  ಪೊಲೀಸ್  ಕಂಟ್ರೊಲ್  ರೂಂ ಉಡುಪಿ

0820-2526444 / 9480800942

ಅಲ್ಲದೇ ಇಂತಹ ಪ್ರಕರಣಗಳ ಬಗ್ಗೆ  ಮೇಲುಸ್ತುವಾರಿಕೆ ನೋಡಿಕೊಳ್ಳಲು ಆಡಿಷನಲ್ ಎಸ್.ಪಿ. ಉಡುಪಿ ಜಿಲ್ಲೆ, ಉಡುಪಿ ಇವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

1 comment:

karanth.kv@gmail.com said...

ಅಂದರೆ ಆತ್ಮಹತ್ಯೆ ಆದರೆ ಮಾತ್ರ ಸರಕಾರ ಮುಂದೆ ಅದರ ಬಗ್ಗೆ ತನಿಕೆ ಮಾಡುತ್ತೆ ಅಂತ ಹಾಗಾಯ್ತು!1999.00 ರಲ್ಲಿ ನನ್ನ ಅಮ್ಮನನ್ನು ಯಾಮಾರಿಸಿ, ಇಲ್ಲಿನ ಕುಪ್ರಸಿದ್ದ ಬರಹಗಾರ ದಂಪತಿಗಳು ನನ್ನ ಕೂಡು ಕುಟುಂಭದ ಆಸ್ತಿಯನ್ನು ಅಡಮಾನ ಭಟ್ಕಳ ಅರ್ಬನ್ ಸಹಕಾರಿ ಬೇಂಕ್ ನಲ್ಲಿ ಇಡಿಸಿ ಸಾಲ ಮಾಡಿಸಿದ ಬಗ್ಗೆ ತಮ್ಮ ಇಲಾಖೆಯಲ್ಲಿ ಎಫ್ ಐ ಆರ್ 168/2006 (ಬೈಂದೂರು) ಮತ್ತು ನಂತರದ ಬಗ್ಗೆ ಹತ್ತು ಹಲವು ಅರ್ಜಿಯನ್ನು ಗುಜರಾಯಿಸಿದರೂ, ತಮ್ಮ ಕಚೇರಿಯ SP ಹಾಗೂ Addl SP ಯವರನ್ನು ಕಳೆದ ವರ್ಷ ಬೇಟಿಮಾಡಿದ್ದಾಗ್ಯೂ, ತಮ್ಮ ಇಲಾಖೆಯ ಕೆಳ ಅಂತಸ್ಥಿನ ಅಧಿಕಾರಿಗಳ ತಣ್ಣಿಗೆ ರಾಚಿಸುವಂತಹ ತಪ್ಪು ಇದ್ದಾಗ್ಯೂ ತಮ್ಮ ಇಲಾಖೆ ಅದನ್ನು ಪುನರ್ ಪರಿಸೀಲಿಸುವ ಕಾರ್ಯ ಕೈಗೊಂಡಿಲ್ಲ!!!. ಮಾನ್ಯ ಕೋರ್ಟ್ ನಲ್ಲಿ ಅದನ್ನು ಪುನರ್ ಪರಿಶೀಲಿಸುವ ಅಧಿಕಾರ ಎಸ್ ಪಿ ಯವರಿಗೆ ಇದೆ ಅಂತ ನನಗೆ ತಿಳಿದಿದೆ! ಆದಾಗ್ಯೂ ಅದು ಕೈಗೂಡಿಲ್ಲ! ಯಾವತ್ತೂ ಈ ಸೂಕ್ಷ್ಮ ವಿಚಾರದಲ್ಲಿ ಸಾಮಾಜಿಕ ನ್ಯಾಯ ಸಿಗಲಾರದು ಅಂತ ನನ್ನ ಅಭಿಪ್ರಾಯ! ಯಾವತ್ತೂ ಆತ್ಮಹತ್ಯೆ ಆಗಲು ಬಿಡಬಾರದು ಅಂತ ಸಹಃ ನನ್ನ ಅಭಿಪ್ರಾಯ! ಈ ಬಗ್ಗೆ ನನ್ನ ಕೂಡು ಕುಟುಂಭದ ಹೆಚ್ಚಿನ ಎಲ್ಲರೂ ಮೂಖ, ಕಿವುಡ ಹಾಗೂ ಅಶೀಕ್ಷಿತ ರಾಗಿದ್ದರೂ ಇದನ್ನು ತಡೆದ ಬಗ್ಗೆ ನನಗೆ ಹೆಮ್ಮೆ ಇದೆ!!!!!!!