Saturday, July 11, 2015

Daily Crime reports As On 11/07/2015 At 19:30 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಹೆಬ್ರಿ : ಪಿರ್ಯಾದಿದಾರರಾದ ದೇವರಾಯ ನಾಯ್ಕ್ (32)ತಂದೆ:ಬೆಳ್ಳ ನಾಯ್ಕ್ ವಾಸ:ಕಜ್ಕೆ ಕೊಳಕುಂಬ್ರಿ ನಾಲ್ಕೂರು ಗ್ರಾಮ, ಉಡುಪಿ ತಾಲೂಕು ಇವರ ಅಣ್ಣನ ಮಗನಾದ ಪ್ರಕಾಶ ನಾಯ್ಕ (18)ತಂದೆ:ಕೃಷ್ಣ ನಾಯ್ಕ್ ವಾಸ:ಕಜ್ಕೆ ಕೊಳಕುಂಬ್ರಿ,ನಾಲ್ಕೂರು ಗ್ರಾಮ ಉಡುಪಿ ತಾಲೂಕು ಎಂಬುವವರು ಈ ದಿನ ದಿನಾಂಕ 11/07/15 ರಂದು ಕಾಲೇಜಿಗೆ ರಜೆ ಇದ್ದುದರಿಂದ ಆತನ ಸ್ನೇಹಿತರಾದ ಸತೀಶ್ ಹಾಗೂ ಉಮೇಶ್ ಎಂಬವರೊಂದಿಗೆ ನಾಲ್ಕೂರು ಗ್ರಾಮದ ಮಿಯ್ಯಾರು ಅಂಕ್ರಾಲು ಎಂಬಲ್ಲಿರುವ ತನ್ನ ಮನೆಯ ಹತ್ತಿರದ ಇಂಗು ಕೊಳಕ್ಕೆ ಬೆಳಿಗ್ಗೆ  11:30 ಗಂಟೆ ಸಮಯಕ್ಕೆ ಈಜಲು ಹೋದವನು ಅಲ್ಲಿಯೇ ನೀರಿನಲ್ಲಿ ಮುಳುಗಿದ್ದಾಗಿ ಆತನ ಸ್ನೇಹಿತರು ತಿಳಿಸಿದ ಮೇರೆಗೆ ಸದ್ರಿ ಸ್ಥಳಕ್ಕೆ ಮಧ್ಯಾಹ್ನ  1:00 ಗಂಟೆಗೆ ಹೋಗಿ ನೋಡಲಾಗಿ ಆತನ ಸ್ನೇಹಿತರು ಆತನನ್ನು ಮೇಲಕ್ಕೆ ಎತ್ತಿ ಹಾಕಿದ್ದು ಉಸಿರಾಡುತ್ತಿದ್ದುದು ಕಂಡು ಬಂದಿದ್ದು, ಕೂಡಲೇ ಪ್ರಕಾಶ ನಾಯ್ಕ ರವರನ್ನು ಒಂದು ವಾಹನದಲ್ಲಿ ಮಣಿಪಾಲ ಆಸ್ಪತ್ರೆಗೆ ಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ  ಮಧ್ಯಾಹ್ನ 2:00 ಗಂಟೆಗೆ ಮೃತ ಪಟ್ಟಿರುವುದಾಗಿದೆ.ಈ ಬಗ್ಗೆ ಹೆಬ್ರಿ ಪೋಲಿಸ್ ಠಾಣೆ ಯು.ಡಿ.ಆರ್‌. ಕ್ರಮಾಂಕ  27/15 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: