Sunday, July 12, 2015

Daily Crime reports As On 12/07/2015 At 07:00 Hrs

ಅಸ್ವಾಭಾವಿಕ ಮರಣ ಪ್ರಕರಣಗಳು 
  • ಕುಂದಾಪುರ:ಪಿರ್ಯಾದಿದಾರರಾದ ನರಸಿಂಹ ದೇವಾಡಿಗ (55) ತಂದೆ:ದಿ.ರಾಮ ದೇವಾಡಿಗ ವಾಸ:ಮೂಡಾಡಿ ಮನೆ ಹೆಮ್ಮಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ತಮ್ಮ ಬಾಬು ಆರ್‌. ದೇವಾಡಿಗ (45) ಎಂಬುವವರು ದಿನಾಂಕ 11/07/2015 ರಂದು ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ವಿಘ್ನೇಶ್ವರ ಕಾಂಪ್ಲೆಕ್ಸ್‌ ಕಟ್ಟಡದ ಎದುರು ರಸ್ತೆ ಬದಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದು, ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 28/2015 ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
  • ಅಜೆಕಾರು: ಪಿರ್ಯಾದಿದಾರರಾದ ಶ್ರೀಮತಿ ಭಾರತಿ (40) ಗಂಡ:ಸಚ್ಚೀಂದ್ರ ಆಚಾರ್ಯ ವಾಸ:ಬ್ರಹ್ಮ ಶ್ರೀ ನಾರಾಯಣ ಗುರು ಕಾಲೋನಿ ಜಾರ್ಕಳ ಮುಂಡ್ಲಿ ಗ್ರಾಮ,ಕಾರ್ಕಳ ತಾಲೂಕು ಇವರ ಗಂಡ ಸಚ್ಚೀಂದ್ರ ಆಚಾರ್ಯ (50) ರವರು ಕಾರ್ಕಳದ ಕಾಬೆಟ್ಟು ಎಂಬಲ್ಲಿ ಸ್ಟೈಲ್ ಡಿಜಿಟಲ್ ಎಂಬ ಸ್ಟುಡಿಯೋ ಇಟ್ಟುಕೊಂಡು ಅದರಲ್ಲಿ ಪೋಟೊ ಗ್ರಾಫರ್ ಕೆಲಸ ಮಾಡಿಕೊಂಡಿದ್ದರು,ಇವರಿಗೆ ಶರಾಬು ಸೇವನೆ ಮಾಡುವ ಅಭ್ಯಾಸವಿದ್ದು ದಿನಾಂಕ 11/07/15 ರಂದು ಸಚ್ಚೀಂದ್ರ ಆಚಾರ್ಯರು ತಮ್ಮ ಮನೆಯ ಬಚ್ಚಲ ಕೊಟ್ಟಿಗೆಯ ಮಾಡಿನ ಪಕ್ಕಾಸಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಅಜೆಕಾರು ಪೋಲಿಸ್ ಠಾಣೆ ಯು ಡಿ ಆರ್ ಕ್ರಮಾಂಕ 10/2015 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಇತರೇ ಪ್ರಕರಣ  
  • ಬ್ರಹ್ಮಾವರ: ದಿನಾಂಕ:11/07/2015 ರಂದು 14:15 ಗಂಟೆಗೆ  ಉಡುಪಿ ತಾಲೂಕು ಚಾಂತಾರು ಗ್ರಾಮದ ಕ್ರಾಸ್‌‌ಲ್ಯಾಂಡ್‌ ಕಾಲೇಜಿನ ಎದುರಿನ ಬಸ್‌ ನಿಲ್ಥಾಣ  ಬಳಿ ಪಿರ್ಯಾದಿದಾರಾದ ಕಿಶೋರ್‌ (19) ತಂದೆ: ಕೃಷ್ಣಪ್ಪ ಗೋದ್ದನಕಟ್ಟೆ ವಾಸ: ಕ್ರಾಸ್‌ಲ್ಯಾಂಡ್‌ ಕಾಲೇಜು ಬಳಿ ಬ್ರಹ್ಮಾವರ ಅಂಚೆ ಚಾಂತಾರು ಗ್ರಾಮ ಉಡುಪಿ ತಾಲೂಕು ಇವರು ತಮ್ಮ ಗೆಳೆಯರೊಂದಿಗೆ ನಿಂತುಕೊಂಡಿರುವಾಗ ಆರೋಪಿಗಳಾದ ಅಶೋಕ ಶೆಟ್ಟಿ, ನಾಗೇಶ ಶೆಟ್ಟಿ, ಪ್ರತೀಕ್ಷಾ ಮತ್ತು ಸಂತೋಷ ಶೆಟ್ಟಿ ಯವರು ಕಾಲೇಜು ಚುನಾವಣೆ ವಿಷಯದಲ್ಲಿ ಕಿಶೋರ್‌ ರವರ  ಗೆಳೆಯರಾದ ಪ್ರಶಾಂತ್‌, ಅಜಿತ್‌ ಮತ್ತು ರಾಜೇಶ್‌ರವರಿಗೆ ಕೈಯಿಂದ ಹೊಡೆಯುತ್ತಿದ್ದಾಗ ಜಗಳ ಬಿಡಿಸಲು ಹೋದ ಕಿಶೋರ್‌ ರವರಿಗೆ  ಆರೋಪಿಗಳು ಅವಾಚ್ಯ ಶಬ್ಥಗಳಿಂದ ಬೈದು, ಅಂಗಿಯ ಕಾಲರ್‌ ಪಟ್ಟಿಯನ್ನು ಹಿಡಿದು ಮುಷ್ಠಿಯಿಂದ ಕೆನ್ನೆಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ. ಆರೋಪಿಗಳು ಹಲ್ಲೆ ಮಾಡುತ್ತಿದ್ದ ಸಂದರ್ಭದಲ್ಲಿ ಕಿಶೋರ್‌ರವರ ಗೆಳೆಯರಾದ ಪ್ರಶಾಂತರವರ ಬಂಗಾರದ ಪೆಂಡೆಂಟ್‌ ಮತ್ತು ಅಜಿತರವರ ಚಿನ್ನದ ಸರ ಕಾಣೆಯಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 141/2015 ಕಲಂ 323, 504, 506 ಜೊತೆಗೆ 34 ಐಪಿಸಿ ಮತ್ತು 3(1) (10) ಎಸ್‌.ಸಿ.ಎಸ್‌.ಟಿ ಆ್ಯಕ್ಟ್‌  ರಂತೆ ಪ್ರಕರಣ ದಾಖಲಾಗಿರುತ್ತದೆ .

No comments: