Wednesday, July 08, 2015

Daily Crime reports As On 08/07/2015 At 17:00 Hrs


ಹಲ್ಲೆ ಪ್ರಕರಣಗಳು
  • ಶಂಕರನಾರಾಯಣ:ದಿನಾಂಕ:07/07/15 ರಂದು 13:55 ಘಂಟೆಗೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಸಿದ್ದಾಫುರ  ಕೆ.ಎನ್‌.ಎಲ್ ವರಾಹಿ ಇಲ್ಲಿಯ ಕಾರ್ಯಪಾಲಕ ಇಂಜಿನಿಯರವರ ಕಛೇರಿಯಲ್ಲಿ ಪಿರ್ಯಾದಿದಾರರಾದ ಪ್ರವೀಣ ಕುಮಾರ ಶೆಟ್ಟಿ (42) ತಂದೆ:ದಿವಂಗತ ಬಿ.ಜಗನ್ನಾಥ ಶೆಟ್ಟಿ ವಾಸ:ಕಾವೇರಿ ನಿಲಯ, ಕೆದೂರು ಗ್ರಾಮ, ಕುಂದಾಪುರ ತಾಲೂಕುರವರು ಕುಳಿತುಕೊಂಡಿರುವಾಗ  ಆರೋಪಿ ಸದಾನಂದ ಶೆಟ್ಟಿಯು ಏಕಾಏಕೀ ಪ್ರವೀಣ ಕುಮಾರ ಶೆಟ್ಟಿರವರು ಕುಳಿತುಕೊಂಡ ಕಛೇರಿಯ ಒಳಗೆ ಬಂದು, ಪ್ರವೀಣ ಕುಮಾರ ಶೆಟ್ಟಿರವರ ಪಕ್ಕದಲ್ಲಿ ಕುಳಿತುಕೊಂಡು ಅವರ ಬಗ್ಗೆ  ಅಸಹ್ಯ  ಶಬ್ದಗಳಿಂದ ಬೈದು ನಂತರ ಇಂಜಿನಿಯರ್ ಕಛೇರಿಯಿಂದ  ಅಂಗಿಯ  ಕಾಲರ್  ಹಿಡಿದು ಹೊರಗೆ ಎಳೆದುಕೊಂಡು ಬಂದು  ಕೈಯಿಂದ  ಹಲ್ಲೆ ಮಾಡಿರುತ್ತಾನೆ. ಆಗ ಪ್ರವೀಣ ಕುಮಾರ ಶೆಟ್ಟಿರವರ ಕಾರು ಚಾಲಕ ಬಂದು ಬಿಡಿಸಿದಾಗ ಆರೋಪಿಯು "ನಿನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ನಂತರ  ಪ್ರವೀಣ ಕುಮಾರ ಶೆಟ್ಟಿರವರು ಅಲ್ಲಿಂದ ಕಾರಿನಲ್ಲಿ ಹೊರಟಾಗ ಅವರ ಕಾರನ್ನು ಆರೋಪಿಯ ಕಾರು ನಂಬ್ರ ಕೆಎ.20 ಎನ್ 5235  ನೇದರಲ್ಲಿ  ಕೈಯಲ್ಲಿ  ಪಿಸ್ತೂಲ್ ಹಿಡಿದುಕೊಂಡು ಬೆನ್ನಟ್ಟಿ ಬಂದು ಬಿದ್ಕಲ್‌ಕಟ್ಟೆಯಲ್ಲಿ ಟ್ರಾಫಿಕ್ ಜಾಮ್ ಆದಾಗ ಕಾರಿನಿಂದ ಕೆಳಗೆ ಇಳಿದು ಪ್ರವೀಣ ಕುಮಾರ ಶೆಟ್ಟಿರವರ ಕಾರಿನ ಬಳಿ ಬಂದು ನಿನ್ನನ್ನು ನೋಡಿಕೊಳ್ಳುತ್ತೇನೆ  ಎಂದು ಬೆದರಿಕೆ ಹಾಕಿರುತ್ತಾನೆ. ಈ  ಘಟನೆಗೆ ಆರೋಪಿ ಸರ್ವೋತ್ತಮ ಹೆಗ್ಡೆರವರ ದುಷ್ಪೇರಣೆಯೇ  ಕಾರಣವಾಗಿದೆ.ಈ ಬಗ್ಗೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 148/2015 ಕಲಂ:341, 504, 323, 506(2), 109 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ:ದಿನಾಂಕ:07/07/15 ರಂದು 13:30 ಘಂಟೆಗೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಸಿದ್ದಾಫುರ  ಕೆ.ಎನ್‌.ಎಲ್ ವರಾಹಿ ಇಲ್ಲಿಯ ಕಾರ್ಯಪಾಲಕ ಇಂಜಿನಿಯರವರ ಕಛೇರಿಗೆ ಪಿರ್ಯಾದಿದಾರರಾದ ಕೆ.ಸದಾನಂದ ಶೆಟ್ಟಿ (55) ತಂದೆ:ದಿವಂಗತ ಬಿ.ಜಗನ್ನಾಥ ಶೆಟ್ಟಿ ವಾಸ:ಕಾವೇರಿ ನಿಲಯ, ಕೆದೂರು ಅಂಚೆ ಮತ್ತು ಗ್ರಾಮ, ಕುಂದಾಪುರ ತಾಲೂಕುರವರು  ಹೋದಾಗ ಅಲ್ಲಿ ಕಛೇರಿಯ ಒಳಗೆ ಇದ್ದ ಆರೋಪಿ ಪ್ರವೀಣ ಕುಮಾರ ಶೆಟ್ಟಿ ಹಾಗೂ ಪ್ರಭಾಕರರವರು, ಈ ಹಿಂದೆ ತಾಲೂಕು ಪಂಚಾಯತ್‌ನ  ಸಾಮಾನ್ಯ ಸಭೆಯ ನಿರ್ಣಯ ವಾಪಾಸು ತೆಗೆದುಕೊಳ್ಳಿ ಎಂದು  ಹೇಳಿದ್ದು, ಆ ಸಮಯ ಕೆ.ಸದಾನಂದ ಶೆಟ್ಟಿರವರು   “ವಾಪಾಸು ತೆಗೆದುಕೊಳ್ಳುವುದು ಕಷ್ಟ” ಎಂದು ಹೇಳಿದಾಗ, ಆರೋಪಿ ಪ್ರವೀಣ ಕುಮಾರ ಶೆಟ್ಟಿ ಕೋಪಗೊಂಡು  ಬಲತ್ಕಾರವಾಗಿ  ಆಫೀಸಿನಿಂದ ಹೊರಗೆ ದೂಡಿಕೊಂಡು  ಬಂದಿದ್ದು, ಈ ಸಮಯ ಅಲ್ಲಿಯೇ ಇದ್ದ  ಇತರ  ಆರೋಪಿತರುಗಳಾದ ಪ್ರದೀಪ, ರಮೇಶ, ಪ್ರವೀಣ (ಚಾಲಕ) ಮತ್ತು ಇತರೆ 3 ಜನ ಕೈಯಿಂದ  ಹಲ್ಲೆ ಮಾಡಿದ್ದು, ಚೂರಿ ತೋರಿಸಿ,  “ಚೂರಿ  ಹಾಕಿ ಕೊಂದು ಹಾಕುತ್ತೇವೆ” ಎಂದು ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 149/2015, ಕಲಂ:341, 504, 323, 506(2) ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ ನಗರ:ಪಿರ್ಯಾದಿದಾರರಾದ ಸಂಪತ್ಕುಮಾರ್‌ (32) ತಂದೆ ಪ್ರಭಾಕರ ಭಟ್‌‌ ವಾಸ:ಸಮೃದ್ದಿ, ಮಾಯಾಗುಂಡಿ ಮಠ, ಸಂತೆಕಟ್ಟೆ ಪೋಸ್ಟ್, ಪುತ್ತೂರು ಗ್ರಾಮ, ಉಡುಪಿರವ ತಂದೆ ಪ್ರಭಾಕರ ಭಟ್‌ ‌(54)  ಎಂಬವರಿಗೆ ಇತ್ತೀಚಿಗೆ ನಿದ್ದೆ ಬಾರದೇ ಇದ್ದು ಮಾನಸಿಕ ಖಿನ್ನರಾಗಿದ್ದು ಸುಮಾರು ಎರಡು ತಿಂಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು ಹಾಗೂ ಸುಮಾರು 1 ತಿಂಗಳ ಹಿಂದೆ ಒಂದು ಕಣ್ಣಿಗೆ ಕೆಎಂಸಿ ಮಣಿಪಾಲದಲ್ಲಿ ಆಪರೇಷನ್ಮಾಡಿದ್ದು ದಿನಾಂಕ:07/07/2015ರಂದು ಪುನ: ಅದೇ ಕಣ್ಣಿಗೆ ಆಪರೇಷನ್ಆಗಿರುತ್ತದೆ. ಸಂಪತ್ಕುಮಾರ್ರವರು ದಿನಾಂಕ: 07/07/2015ರಂದು ರಾತ್ರಿ 21:00 ಗಂಟೆಗೆ ಊಟ ಮಾಡಿ ಎಲ್ಲರೂ ಮಲಗಿದ್ದು  ದಿನಾಂಕ:08/07/2015ರಂದು ಬೆಳಿಗ್ಗೆ ಸಂಪತ್ಕುಮಾರ್ರವರ ತಂದೆ ಅವರ ಬೆಡ್‌ರೂಮ್‌ನಲ್ಲಿ ಫ್ಯಾನ್ಗೆ ಬೈರಾಸ್ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದನ್ನು ಕಂಡು ಸಂಪತ್ಕುಮಾರ್ಮತ್ತು ಅವರ ಚಿಕ್ಕಪ್ಪನವರು ಬಿಡಿಸಿ ಕೈ ಅಲ್ಲಾಡುವುದನ್ನು ಕಂಡು ಚಿಕಿತ್ಸೆಗಾಗಿ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತರು ಮಾನಸಿಕ ಅಸ್ಪಸ್ದರಾಗಿದ್ದು ಹಾಗೂ ದೃಷ್ಟಿಹೀನರಾಗಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ಈ ಬಗ್ಗೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 32/2015 ಕಲಂ 174 ಸಿಆರ್ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

No comments: