Wednesday, July 08, 2015

Daily Crime reports As On 08/07/2015 At 07:00 Hrs


ಅಪಘಾತ ಪ್ರಕರಣ
  • ಮಣಿಪಾಲ: ದಿನಾಂಕ 0707/15 ರಂದು 18:00 ಗಂಟೆಗೆ ಕಾರು ನಂಬ್ರ ಕೆಎ 19 ಎಮ್.ಡಿ 6659 ನೇದರ ಚಾಲಕನು ಕಾರನ್ನು ಅತೀ ವೇಗವಾಗಿ ಮಣಿಪಾಲ ಕಡೆಯಿಂದ ರಾಜೀವ ನಗರದ ಕಡೆಗೆ ಚಲಾಯಿಸಿಕೊಂಡು ಹೋಗಿ ಮರ್ಣೆಯಿಂದ ಮಣಿಪಾಲ ಕಡೆಗೆ ಬರುತಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ 20 ಇಇ 0199 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಕೃಷ್ಣಾನಂದ ನಾಯಕ್ ಹಾಗೂ ಹಿಂಬದಿ ಸವಾರ ವೆಂಕಟೇಶ್ ನಾಯ್ಕ್ ಇವರಿಗೆ ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ಸುಂದರ ನಾಯಕ್ ಮನೆ ನಂಬ್ರ :1/88, ಮರ್ಣೆ ಪೋಸ್ಟ್, ಮೂಡುಬೆಳ್ಳೆ, ಉಡುಪಿರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ಠಾಣಾ ಅಪರಾಧ ಕ್ರಮಾಂಕ 136/15  ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಹೆಬ್ರಿ: ಪಿರ್ಯಾದಿದಾರರಾದ ರಾಜೇಶ್ ಭಂಡಾರಿ, ತಂದೆ:ನಂದ್ಯಪ್ಪ ಭಂಡಾರಿ ವಾಸ:ಹುತ್ತುರ್ಕೆ ಮನೆ, ಚಾರ ಗ್ರಾಮ, ಕಾರ್ಕಳ ತಾಲೂಕುರವರ ಅಣ್ಣ ಸುದೇಶ್ ಭಂಡಾರಿ (45) ಎಂಬವರು ಸುಮಾರು ನಾಲ್ಕು ವರ್ಷಗಳಿಂದ ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಮಾಡಿಸಿದರೂ ಗುಣಮುಖರಾಗದೇ ಮಾನಸಿಕವಾಗಿ ನೊಂದುಕೊಂಡು, ಬೇಸರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 06/07/2015 ರಂದು ರಾತ್ರಿ 9:00 ಗಂಟೆಯಿಂದ ಈ ದಿನ ದಿನಾಂಕ 07-07-2015 ರಂದು ಮಾಧ್ಯಾಹ್ನ 12:30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಬಳಿ ಇರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ರಾಜೇಶ್ ಭಂಡಾರಿರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ನಂಬ್ರ: 26/15 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣಗಳು
  • ಕೋಟ:ಪಿರ್ಯಾದಿದಾರರಾದ ಕೆ.ಸದಾನಂದ ಶೆಟ್ಟಿ ತಂದೆ:ಬಿ.ಜಗನ್ನಾಥ ಶೆಟ್ಟಿ ವಾಸ:ಕಾವೇರಿ ನಿಲಯ ಕುಂದಾಪುರ ತಾಲೂಕು ಇವರು ದಿನಾಂಕ 07/07/2015 ರಂದು ಬೆಳಿಗ್ಗೆ 12.30 ಗಂಟೆಗೆ ಸಿದ್ದಾಪುರದಲ್ಲಿರುವ ವಾರಾಹಿ ನೀರಾವರಿ ಯೋಜನೆ ತಾಂತ್ರಿಕ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರನ್ನು ನೋಡಲು ಹೋಗಿದ್ದಾಗ ಕಾರ್ಯನಿರ್ವಾಹಕ ಅಭಿಯಂತರರಾದ ಪ್ರಭಾಕರರವರು ಜಗನ್ನಾಥ ಶೆಟ್ಟಿಯವರನ್ನುದ್ದೇಶಿಸಿ ನೀವು ಪ್ರವೀಣ್ ಕುಮಾರ್ ಗುತ್ತಿಗೆದಾರರ ಮೇಲೆ ತಾಲೂಕು ಪಂಚಾಯತ್ ನಲ್ಲಿ ಮಾಡಿದ ನಿರ್ಣಯ ವಾಪಾಸ್ಸು ತೆಗೆಯಬೇಕು ಇಲ್ಲದಿದ್ದಲ್ಲಿ ನಮ್ಮ ಕೆಲಸಕ್ಕೆ ತೊಂದರೆ ಯಾಗುತ್ತದೆ ಎಂದಾಗ ಜಗನ್ನಾಥ ಶೆಟ್ಟಿಯವರು ಸಾಧ್ಯವಿಲ್ಲ ಎಂದಾಗ ಅವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಲು ಯತ್ನಿಸಿರುತ್ತಾರೆ ನಂತರ ಕೆ ಸದಾನಂದ ಶೆಟ್ಟಿರವರು ಅಲ್ಲಿಂದ ಹೊರಟು ಕುಂದಾಪುರಕ್ಕೆ ಬರುತ್ತಿರುವಾಗ 13.30 ಗಂಟೆಯ ಸಮಯಕ್ಕೆ ಬಿದ್ಕಲ್ಲಕಟ್ಟೆಯ ಉಬ್ಬು ಎಂಬಲ್ಲಿ ಕೆ ಸದಾನಂದ ಶೆಟ್ಟಿರವರ ಕಾರನ್ನು ಆಪಾದಿತರಾದ ಪ್ರವೀಣ್ ಕುಮಾರ್ ಶೆಟ್ಟಿ, ಪ್ರದೀಪ, ರಮೇಶ ಮತ್ತು ವಿಜಯ ಎಂಬವರುಗಳು ತಡೆದು ನಿಲ್ಲಿಸಿ ಚೂರಿ ತೋರಿಸಿ, ಕೈ ಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 165/2015 ಕಲಂ:323,341,504,506,149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು:ಪಿರ್ಯಾದಿದಾರರಾದ ಸುರೇಶ್‌ ಬಟ್ವಾಡಿ (44) ತಂದೆ: ಶೇಷಯ್ಯ ಶೇರುಗಾರ ವಾಸ:ಕಸ್ಟಮ್‌ ರಸ್ತೆ ಪಡುವರಿ ಗ್ರಾಮರವರು ದಿನಾಂಕ:02/07/2015  ರಂದು  ಬೆಳಿಗ್ಗೆ 10:10 ಗಂಟೆಗೆ ಅವರ ಕೆಲಸದ ನಿಮಿತ್ತ ಬೈಂದೂರು ವಿಶೇಷ ತಹಶೀಲ್ದಾರ್‌ ಕಛೇರಿಗೆ ಹೋಗುತ್ತಿರುವಾಗ ಕಛೇರಿಯ  ಒಳಗಡೆ ಇದ್ದ ಪಡುವರಿ ಗ್ರಾಮದ ನಿವಾಸಿ ಸೋಡಿತಾರು ಸುಬ್ರಾಯ ಶೇರಿಗಾರರ ಮಕ್ಕಳಾದ ಮಹೆಶ್‌ ಮತ್ತು ದಿನೇಶ್‌ ಎಂಬುವವರು ಏಕಾಏಕಿಯಾಗಿ ಸುರೇಶ್‌  ಬಟ್ವಾಡಿರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಮೈಮೇಲೆ ಎರಗಿ, ಕೈಯಿಂದ ಕಪಾಕ್ಕೆ ಹೊಡೆದು ಕಾಲಿನಿಂದ ತುಳಿದು, ಶರ್ಟನ್ನು ಹಿಡಿದು ಎಳೆದು ಶರ್ಟನ್ನು ಹರಿದು ಹಾಕಿರುತ್ತಾರೆ.ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 189/2015 ಕಲಂ:504, 506, 323 ಜೊತೆಗೆ 34 ಐಪಿಸಿರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

No comments: