Tuesday, July 07, 2015

Daily Crime reports As On 07/07/2015 At 19:30 Hrs

ಅಸ್ವಾಭಾವಿಕ ಮರಣ ಪ್ರಕರಣಗಳು
  • ಕಾರ್ಕಳ:ಪಿರ್ಯಾದಿದಾರರಾದ ದೇವೆಂದ್ರ ನಾಯಕ್ (42),ತಂದೆ:ಸಂಜೀವ ನಾಯಕ್ ವಾಸ:ಸತ್ಯನಿಕೇತನ ಬೆಂಗೂರು ಮುಡಾರು ಗ್ರಾಮ,ಕಾರ್ಕಳ ತಾಲೂಕು ಇವರ ಅಣ್ಣ ರಾಮಚಂದ್ರ ನಾಯಕ್ ಎಂಬವರು ರಕ್ತದ ಒತ್ತಡ ,ಸಕ್ಕರೆ  ಖಾಯಿಲೆ, ಹಾಗೂ ಟಿ.ಬಿ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಇದ್ದು ಅದೇ ವಿಚಾರದಲ್ಲಿ ಮಾನಸಿಕವಾಗಿ ನೊಂದು ದಿನಾಂಕ:07/07/2015 ರಂದು ಬೆಳಿಗ್ಗೆ 8:30 ಗಂಟೆಯಿಂದ ಬೆಳಿಗ್ಗೆ 10:30 ಗಂಟೆಯ ನಡುವಿನ ಅವಧಿಯಲ್ಲಿ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬೆಂಗೂರು ಎಂಬಲ್ಲಿ  ತನ್ನ ವಾಸ್ತವ್ಯದ ಮನೆಯ ಸಮೀಪದಲ್ಲಿರುವ ಬಾವಿಯ ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದು ಬಾವಿ ನೀರಿಗೆ ಹಾರಿ ಮೃತಪಟ್ಟಿರುತ್ತಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್ ಕ್ರಮಾಂಕ 15/15 ಕಲಂ:174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ:ಪಿರ್ಯಾದಿದಾರಾದ ಉದಯ (32) ತಂದೆ:ಹೆರಿಯ ವಾಸ: ಗುಡ್ಡೆ ಅಂಗಡಿ,ಯಡಾಡಿ-ಮತ್ಯಾಡಿ ಅಂಚೆ ಮತ್ತು ಗ್ರಾಮ,ಕುಂದಾಪುರ ತಾಲೂಕು. ಇವರ ಅಣ್ಣ ರಾಜು (42) ಎಂಬುವವರು ದಿನಾಂಕ 07/07/2015 ರಂದು ಕುಂದಾಪುರ ತಾಲೂಕು ಜಪ್ತಿ ಗ್ರಾಮದ ಜಡ್ಡು ಎಂಬಲ್ಲಿನ ಶಂಕರ ಆಚಾರಿ ಎಂಬವರ ಮನೆಯ ತೆಂಗಿನ ತೋಟದ ಮರದಿಂದ ಕಾಯಿ ತೆಗೆಯಲು ಹೋಗಿದ್ದು, ಬೆಳಿಗ್ಗೆ 10:30 ಗಂಟೆಗೆ ತೆಂಗಿನ ಕಾಯಿಯನ್ನು ಕೀಳುವಾಗ ಆಕಸ್ಮಾತ ಕಾಲು ಜಾರಿ 20 ಅಡಿ ಎತ್ತರದ ಮರದಿಂದ ಕೆಳಕ್ಕೆ ಬಿದ್ದು ಪೆಟ್ಟಾಗಿ ಮೃತಪಟ್ಟಿರವುದಾಗಿದೆ.ಈ ಬಗ್ಗೆ ಕುಂದಾಪುರ ಪೋಲಿಸ್  ಠಾಣೆ ಯು.ಡಿ.ಆರ್‌ ಕ್ರಮಾಂಕ 27/2015, ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.        
ಕಳವು ಪ್ರಕರಣಗಳು
  • ಕುಂದಾಪುರ:ಪಿರ್ಯಾದಿದಾರರಾದ ಅಮರನಾಥ ಶೆಟ್ಟಿ (31) ತಂದೆ:ಸೀತಾರಾಮ ಶೆಟ್ಟಿ ವಾಸ:ಹೊಸಾಡು ಕೋಟಿಮಕ್ಕಿ,ಕುಂದಾಪುರ ತಾಲೂಕು. ಇವರು ಹೆಮ್ಮಾಡಿ ಗ್ರಾಮದ ವಿಘ್ನೇಶ್ವರ ಕಾಂಪ್ಲೆಕ್ಸ್‌ನ 1ನೇ ಮಹಡಿಯಲ್ಲಿ ಅಂಬಾ ಹೋಂ ಅಪ್ಲೇಯನ್ಸ್‌ ಎಂಬ ಅಂಗಡಿಯನ್ನು ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು,ದಿನಾಂಕ 06/07/2015 ರ ರಾತ್ರಿ 8:15 ಗಂಟೆಯಿಂದ ದಿನಾಂಕ 07/07/2015 ರ ಬೆಳಿಗ್ಗೆ 08:15 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸದ್ರಿ ಅಂಗಡಿಯ ಶೆಟರ್‌ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಅಂಗಡಿಯಲ್ಲಿದ್ದ 2 ಎಲ್‌.ಇ.ಡಿ ಟಿ.ವಿ, ಬಜಾಜ್‌ & ಫ್ರಿಜೀನ್‌ ಕಂಪೆನಿಯ 30 ಮಿಕ್ಸಿಗಳು, 50 ಐರನ್‌ ಬಾಕ್ಸ್‌ ಗಳು, ಸ್ಟ್ಯಾಂಡ್‌ ಫ್ಯಾನ್‌, ವಾಲ್‌ ಫ್ಯಾನ್‌ಗಳು, ಕೆಂಟ್‌ ಕಂಪೆನಿಯ ವಾಟರ್‌ ಪ್ಯೂರಿಪಯರ್‌,ನಾನ್‌ ಸ್ಟಿಕ್‌ ಥವಾ ಮುಂತಾದವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂ. 2,50,000/- ಆಗಬಹುದು.ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 260/2015,ಕಲಂ: 457, 380 ಐಪಿಸಿ ಯಂತೆ ಪ್ರಕ ರಣ ದಾಖಲಾಗಿರುತ್ತದೆ.    
  • ಕುಂದಾಪುರ:ಪಿರ್ಯಾದಿದಾರರಾದ ಪ್ರಕಾಶ ನಾಯ್ಕ (29) ತಂದೆ:ರಮೇಶ ನಾಯ್ಕ ವಾಸ: ರತ್ನ ನಿವಾಸ ಕಟ್‌ಬೇಲ್ತೂರು ಗ್ರಾಮ, ಕುಂದಾಪುರ ಕುಂದಾಪುರ ತಾಲೂಕು ಇವರು ಹೆಮ್ಮಾಡಿ ಗ್ರಾಮದ ವಿಘ್ನೇಶ್ವರ ಕಾಂಪ್ಲೆಕ್ಸ್‌ನ 1ನೇ ಮಹಡಿಯಲ್ಲಿ ಸನ್‌ಶೈನ್‌ ಎಲೆಕ್ಟ್ರಿಕಲ್‌ ಅಂಗಡಿಯನ್ನು ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು, ದಿನಾಂಕ 06/07/2015 ರ ರಾತ್ರಿ 8:00 ಗಂಟೆಯಿಂದ ದಿನಾಂಕ 07/07/2015 ರ ಬೆಳಿಗ್ಗೆ 08:45 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸದ್ರಿ ಅಂಗಡಿಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಅಂಗಡಿಯಲ್ಲಿದ್ದ ಸ್ವಿಚ್‌ ಸೊಕೆಟ್‌, ಸಿ.ಎಫ್‌.ಎಲ್‌, ಸೂರ್ಯ ಎಲ್‌.ಇ.ಡಿ, ಕೇಬಲ್‌, ಮೊಡ್ಯೂಲರ್‌ ಬೊಕ್ಸ್‌, ಮೊಡ್ಯೂಲರ್‌ ಸ್ವಿಚ್‌‌, ಫ್ಯಾನ್‌ ರೆಗ್ಯೂಲೇಟರ್‌, ಫ್ಲೆಟ್ಸ್‌, ಇನ್ವರ್ಟರ್‌ ಬ್ಯಾಟರಿ ಮುಂತಾದವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂ. 1,50,000/- ಆಗಬಹುದು.ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 261/2015,ಕಲಂ: 457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.     
ಇತರ ಪ್ರಕರಣ
  • ಕಾರ್ಕಳ:ದಿನಾಂಕ 02/07/2015 ರಂದು ಅರೋಪಿತರಾದ ವಸಂತ ಪೂಜಾರಿ, ದಾಮೋದರ ಪೂಜಾರಿ, ಹರೀಶ್ ಪೂಜಾರಿ ರವರು ತಾಲೂಕು ಸರ್ವೆಯರ್ ಆದ ಅರವಿಂದರವರೊಂದಿಗೆ ಸೇರಿ ಪಿರ್ಯಾದುದಾರಾದ ಶ್ರೀಮತಿ ಸುಶೀಲ, ಗಂಡ: ಮೆಣ್ಪ, ವಾಸ: ಮಹಾಲಿಂಗಬೆಟ್ಟು ಮನೆ, ಕುಂಟಲ್ಪಾಡಿ, ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರ ಸ್ವಾಧೀನಾನುಭೋಗದಲ್ಲಿರುವ ಕಾರ್ಕಳ ತಾಲೂಕು, ಸಾಣೂರು ಗ್ರಾಮದ ಸರ್ವೆ ನಂಬ್ರ 268/1ಬಿ ರಲ್ಲಿನ 1.98 ಎಕ್ರೆ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ, ಸುಶೀಲ ರವರಿಗೆ ಯಾವುದೇ ನೋಟೀಸು ನೀಡದೆ ಅಳತೆ ಕಾರ್ಯ ಮಾಡುತ್ತಿದ್ದಾಗ, ತಡೆಯಲು ಹೋದ ಸುಶೀಲ ಹಾಗೂ ಅವರ ಮೊಮ್ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದುದಲ್ಲದೆ,ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿದೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 98/2015 ಕಲಂ 504, 506 ಜೊತೆಗೆ 34 ಐ.ಪಿ.ಸಿ. ಮತ್ತು ಕಲಂ 3(i) (x) PREVENTION ATTROCITY OF THE SC/ST ACT 1989 ರಂತೆ ಪ್ರಕರಣ ದಾಖಲಾಗಿರುತ್ತದೆ.


No comments: