Tuesday, July 07, 2015

Daily Crime reports As On 07/07/2015 At 07:00 Hrs

ಅಪಘಾತ ಪ್ರಕರಣ
  • ಗಂಗೊಳ್ಳಿ:ಪಿರ್ಯಾದಿದಾರರಾದ ಮನೋಹರ ಶೆಟ್ಟಿ (21) ತಂದೆ:ಚಂದ್ರಶೇಖರ ಶೆಟ್ಟಿ ವಾಸ:ಹೊಸೂರು ಮಣ್ಮಾಹರ ಹೊಸೂರು ಗ್ರಾಮ ಇವರು ದಿನಾಂಕ 06/07/2015 ರಂದು ತನ್ನ ಕೆಎ 20 ಇಜಿ 1156 ನೇ ಮೋಟಾರು ಸೈಕಲಿನಲ್ಲಿ ಆಲೂರು ಗ್ರಾಮದಿಂದ ಹೊಸೂರು ಗ್ರಾಮದ ಕಡಗೆ ಸವಾರಿ ಮಾಡಿಕೊಂಡು 14.30 ಗಂಟೆಗೆ ಕಳಿ ಬೋಗಿಮರದ ಹತ್ತಿರ ಅಲೂರು ಹಸೂರು ಡಾಂಬರ್ ರಸ್ತೆಯಲ್ಲಿ  ಹೋಗುತ್ತಿರುವಾಗ ಎದುರಿನಿಂದ ಅಂದರೆ ಆಲೂರು ಕಡೆಗೆ ಹೋಗುವ ಕೆಎ 20 ಸಿ 4155 ನೇ ಟಿಪ್ಪರ್‌ ಲಾರಿಯನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮನೋಹರ ಶೆಟ್ಟಿರವರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಹಣೆ, ಮೊಣಕೈ, ಬಲಕಾಲಿಗೆ ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 97/2015 ಕಲಂ  279,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಹಿರಿಯಡ್ಕ:ಪಿರ್ಯಾದಿದಾರರಾದ ಜಯಂತಿ ನಾಯಕ್‌ (45) ಗಂಡ:ಮಂಜುನಾಥ ನಾಯಕ್‌ ವಾಸ:ಮೂಡುಬೈಲು ಕುಕ್ಕಿಕಟ್ಟೆ,ಬೆಳ್ಳಂಪಳ್ಳಿ ಗ್ರಾಮ,ಉಡುಪಿ ತಾಲೂಕು ಇವರ ಅಳಿಯ ಹರೀಶ್‌ ನಾಯಕ್‌ (21) ಎಂಬವರು ದಿನಾಂಕ:02/07/15 ರಂದು 22:00 ಗಂಟೆಗೆ ಬೆಳ್ಳಂಪಳ್ಳಿ ಗ್ರಾಮದ ಕುಕ್ಕಿಕಟ್ಟೆಯ ತನ್ನ ಮನೆಯಲ್ಲಿ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ  ಉಡುಪಿಯ ಆದರ್ಶ ಆಸ್ಪತ್ರೆಗೆ ಸೇರಿಸಿದ್ದು,ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:06/07/15 ರಂದು 16:20 ಗಂಟೆಗೆ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಹಿರಿಯಡ್ಕ ಪೋಲಿಸ್ ಠಾಣೆ ಯು.ಡಿ.ಆರ್  ಕ್ರಮಾಂಕ 12/2015  U/s 174 CRPC ರಂತೆ ಪ್ರಕರಣ ದಾಖಲಾಗಿರುತ್ತದೆ.
 ಮಟ್ಕಾ ಜುಗಾರಿ ಪ್ರಕರಣಗಳು
  • ಗಂಗೊಳ್ಳಿ:ದಿನಾಂಕ 06/07/2015 ರಂದು ಸಾಯಂಕಾಲ ಗಂಗೊಳ್ಳಿ ಪೊಲೀಸ್‌ ಠಾಣೆಯ  ಎಸ್‌ಐ ಸುಬ್ಬಣ್ಣ. ಬಿ ರವರು ರೌಂಡ್ಸ್‌  ಕರ್ತವ್ಯದಲ್ಲಿ  ಇರುವಾಗ ಗಂಗೊಳ್ಳಿ ಗ್ರಾಮದ ನಾಗಶ್ರೀ ಬಾರ್‌ ಹತ್ತಿರ ಇರುವ ಗೂಡಂಗಡಿ ಮರೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒರ್ವ ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರನ್ನು ಒಟ್ಟುಗೂಡಿಸಿ ಹಣವನ್ನು ವಸೂಲಿ ಮಾಡಿ ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ  ಸದ್ರಿ ಸ್ಥಳಕ್ಕೆ 17:20 ಗಂಟೆಗೆ ದಾಳಿ ಮಾಡಿದ್ದು,ಅಲ್ಲಿ ಸುತ್ತುವರಿದಿದ್ದ  ಜನರೆಲ್ಲಾ ಓಡಿಹೋಗಿದ್ದು ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಚೀಟಿ ಬರೆಯುತ್ತಿದ್ದ  ವ್ಯಕ್ತಿ ಓಡಲು ಪ್ರಾರಂಭಿಸಿದವನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಶೇಖರ ಪೂಜಾರಿ (45) ತಂದೆ:ದಿ.ವೆಂಕಟ ಪೂಜಾರಿ,ವಾಸ:ಗುಡ್ಡಿಕೇರಿ ಬೈಲ್‌ ಮನೆ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿರುತ್ತಾನೆ.ಮಟ್ಕಾ ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ 1550/-ರೂಪಾಯಿ ಹಾಗೂ ಮಟ್ಕಾ ಚೀಟಿ, ಬಾಲ್‌‌ ಪೆನ್ನನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 96 /2015 ಕಲಂ 78(1)(3) Kp Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ:ದಿನಾಂಕ 06/07/15 ರಂದು ಪೋಲಿಸ್ ನಿರೀಕ್ಷಕರು ಮಣಿಪಾಲ ಪೋಲಿಸ್ ಠಾಣೆ ಇರವರಿಗೆ ಮಣಿಪಾಲ ಬಸ್ಸು ನಿಲ್ದಾಣದ ಬಳಿ ಮೊಬೈಲ್‌ ರಿಚಾರ್ಜ್‌ ಅಂಗಡಿಯಲ್ಲಿ ಓರ್ವ ವ್ಯಕ್ತಿ ಮಟ್ಕಾ ಚೀಟಿಯನ್ನು ಬರೆದು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾನೆ ಎಂದು ದೊರೆತ ಖಚಿತ ಮಾಹಿತಿಯಂತೆ 18:55 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆಪಾದಿತ ಅಂತೋನಿ ಡಿ’ಸೋಜ (33)ತಂದೆ:ಆಲ್ಪ್ರೆಡ್‌ ಡಿ’ಸೋಜಾ,ವಾಸ:ನರ್ನಾಡು,ಮದಗ ತೆಂಕಬೆಟ್ಟು ಪೋಸ್ಟ್‌,ಉಪ್ಪೂರು ಗ್ರಾಮ,ಉಡುಪಿ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿದ್ದು,ಈತನು ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣವನ್ನು ಅಂಬಾಗಿಲಿನ ಲಿಯೋ ಎಂಬಾತನಿಗೆ ನೀಡುವುದಾಗಿ ತಿಳಿಸಿದ್ದು,ಆತನಿಂದ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ರೂ.1,560/-,ಮಟ್ಕಾ ನಂಬರ್‌ ಬರೆದ ಚೀಟಿ, ಬಾಲ್‌ ಪೆನ್ನು ಹಾಗೂ ನೋಕಿಯಾ ಮೊಬೈಲ್‌-2 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 135/15 ಕಲಂ 78(3) ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ .
 ಕಳವು ಪ್ರಕರಣ
  • ಬ್ರಹ್ಮಾವರ: ದಿನಾಂಕ 02/07/2015 ರಂದು ರಾತ್ರಿ 8.30 ಗಂಟೆಯಿಂದ 05/07/2015 ರಂದು ಬೆಳಿಗ್ಗೆ 09.15 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರಾದ ಸದಾಶಿವ ಶೆಟ್ಟಿ (60)ತಂದೆ:ಹಿರಿಯಣ್ಣ ಶೆಟ್ಟಿ ವಾಸ;ಸುರಭಾ ಚಾಂತಾರು ಗ್ರಾಮ, ಉಡುಪಿ ತಾಲೂಕು ಎಂಬವರ ಮೆನೆಯಲ್ಲಿ  ಯಾರೂ ಇಲ್ಲದ ಸಮಯದಲ್ಲಿ ಮನೆಯ ಮೇಲಿನ ಮಹಡಿಯ ದ್ವಾರ ಬಾಗಿಲಿನ ಮೂಲಕ ಮನೆ ಒಳ ಪ್ರವೇಶಿಸಿ ದೇವರ ಕೋಣೆಯ ಡಬ್ಬಿಯಲ್ಲಿದ್ದ  ಸುಮಾರು 10,000/- ರೂ ನಗದು ಹಾಗೂ ಕಪಾಟಿನಲ್ಲಿದ್ದ ಸ್ಪಾಸ್‌ ಕಂಪೆನಿಯ ವಾಚ್‌  ಕಳವು ಮಾಡಿಕೊಂಡು ಹೋಗಿರುತ್ತಾರೆ.ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 136/2015 ಕಲಂ:454,457,380 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.
ಇತರ ಪ್ರಕರಣ: 
  •  ಬೈಂದೂರು: ಪಿರ್ಯಾಧಿದಾರರಾದ ಅಣ್ಣಪ್ಪ ಖಾರ್ವಿ ಬಿ (52) ತಂದೆ: ನಾರಾಯಣ ಖಾರ್ವಿ ವಾಸ: ಬೈಗೆಮನೆ ಕರ್ಕಿಕಳಿ ಉಪ್ಪುಂದ ಗ್ರಾಮ ಕುಂದಾಪುರ ತಾಲೂಕು ಗೆ ದಿನಾಂಕ 04/07/2015 ರಂದು ಮದ್ಯಾಹ್ನ ಸುಮಾರು 12;06 ಗಂಟೆಗೆ ಅವರ ಮೊಬೈಲ್‌ ನಂಬ್ರಕ್ಕೆ  ಯಾವುದೋ ವ್ಯಕ್ತಿಯು ಕರೆ  ಮಾಡಿ ತಾನು  ಸುವರ್ಣ ವಾಹಿನಿಯಿಂದ ಮಾತನಾಡುತ್ತಿರುವುದು “ ನಿಮ್ಮ  ಮಾನ ಮರ್ಯಾದೆಯನ್ನು ಹರಾಜು ಮಾಡುತ್ತೇನೆ  ನೀನು 2 ಲಕ್ಷ ರೂಪಾಯಿಯನ್ನು ಸೋಮವಾರ “ಮಣಿಪಾಲ ಬೇಕರಿ”  ಕುಂದಾಪುರಕ್ಕೆ ತೆಗೆದುಕೊಂಡು ಬಾ ಇಲ್ಲದಿದ್ದರೆ  ನಿನ್ನ ಮಗನನ್ನು ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದು ನಂತರ ದಿನಾಂಕ 06-07-2015 ರಂದು ಬೆಳಿಗ್ಗೆ 10:00 ಗಂಟೆಯಿಂದ ಪುನಃ  10 ಸಲ ಕರೆ ಮಾಡಿ “ ನೀನು 2 ಲಕ್ಷ ರೂಪಾಯಿಯನ್ನು ಕೊಡದೇ ಇದ್ದಲ್ಲಿ ನಿನ್ನನ್ನು ಹಾಗೂ ನಿನ್ನ ಮಗನನ್ನು ಕೊಂದು ಬಿಸಾಡುತ್ತೇನೆ ”  ಎಂದು ಧಮಕಿ ಹಾಕಿರುತ್ತಾನೆ.ಪಿರ್ಯಾಧಿದಾರರ 2 ನೇ ಮಗ ಅಪಘಾತದಿಂದ ಕೋಮಾ ಸ್ಥಿತಿಯಲ್ಲಿ ಇದ್ದು ಕರೆ ಮಾಡಿದ ವ್ಯಕ್ತಿಯು ಇನ್ನೊಬ್ಬ ಮಗನನ್ನು ಎನಾದರು ಮಾಡಬಹುದು ಎಂದು ಹೆದರಿ ಹಾಗೂ ಪಿರ್ಯಾಧಿದಾರರು ಸಮಾಜದ ಒಬ್ಬ ಮುಖಂಡನಾಗಿದ್ದು  ಆರೋಪಿಯು ಆತನ ಬಳಿಯಲ್ಲಿದ್ದ  ಸುಳ್ಳು ಸಿಡಿಯನ್ನು ಉಪಯೋಗಿಸಿ ಮಾನ ಮರ್ಯಾದೆಯನ್ನು ತೆಗೆಯಬಹುದು ಎಂದು ಹೆದರಿ ಆರೋಪಿಗೆ ತಾನು 1 ½ ಲಕ್ಷ ರೂಪಾಯಿ ನಾಳೆ  ಕೊಡುವುದಾಗಿ ಹೇಳಿರುವುದಾಗಿದೆ.ಈ ಬಗ್ಗೆ ಬೈಂದೂರು  ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 188/2015 ಕಲಂ 386 ಐಪಿಸಿ  ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: