Monday, July 06, 2015

Daily Crime Reports As On 06/07/2015 At 19:30 Hrs




 ಅಸ್ವಾಭಾವಿಕ ಮರಣ ಪ್ರಕರಣ
  • ಮಣಿಪಾಲ: ಪಿರ್ಯಾದಿದಾರರಾದ ವಿಜಯ ಕುಮಾರ್ ಶೆಟ್ಟಿ, ತಂದೆ: ದಿವಂಗತ ಸೀತರಾಮ ಶೆಟ್ಟಿ, ವಾಸ:ವನಜ ನಿಲಯ, ಹಕ್ಲಾಡಿ, ಕುಂದಾಪುರ, ಉಡುಪಿರವರ ಸೊಸೆ ನವ್ಯ(22) ಎಂಬವರು Exide Life Insurence Companyಯಲ್ಲಿ Development Officer ಆಗಿ ಉದ್ಯೋಗ ಮಾಡಿಕೊಂಡು ಮಣಿಪಾಲ ರಾಜೀವನಗರದ 2ನೇ ಕ್ರಾಸ್‌‌ನಲ್ಲಿರುವ ಪುರುಷೋತ್ತಮ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದವರು, ದಿನಾಂಕ 05/07/2015ರಂದು ರಾತ್ರಿ 11:45ಗಂಟೆಯಿಂದ ದಿನಾಂಕ: 06/07/2015ರಂದು ಮಧ್ಯಾಹ್ನ 1:00ಗಂಟೆಯ ಮಧ್ಯಾವಧಿಯಲ್ಲಿ ಬೆಡ್‌‌ರೂಮಿನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ವಿಜಯ ಕುಮಾರ್ ಶೆಟ್ಟಿರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 29/15 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
  • ಪಡುಬಿದ್ರಿ: ಪಿರ್ಯಾದಿದಾರರಾದ ಗೌತಮ್ ಜೋಗಿ (22) ವಾಸ:-ನಿಸರ್ಗ ಹೌಸ್, ಕಾಪೆಟ್ಟು, ಬೀಡಿನಕೆರೆ, ನಡ್ಸಾಲು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ರವರ  ತಂದೆ ಉಮೇಶ ಪುರುಷ (56) ಎಂಬವರು ಮದ್ಯಪಾನ ಮಾಡುವ ಚಟವಿದ್ದು, ದಿನಾಂಕ. 05/07/2015 ರಂದು ಮಧ್ಯಾಹ್ನ ಮದ್ಯಪಾನ ಮಾಡಿ ನಡ್ಸಾಲು ಗ್ರಾಮದ ಬೀಡಿನಕೆರೆ, ನಿಸರ್ಗ ಹೌಸ್, ಕಾಪೆಟ್ಟು ಎಂಬಲ್ಲಿರುವ ತನ್ನ ಮನೆಗೆ ಬಂದು  ಕುರ್ಚಿಯಲ್ಲಿ ಕುಳಿತ್ತಿದ್ದವರು ಸಂಜೆ 7:45 ಗಂಟೆಯಿಂದ ಸಂಜೆ 8:30 ಗಂಟೆಯ ಮಧ್ಯಾವಧಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ ಎಂಬುದಾಗಿ ಗೌತಮ್ ಜೋಗಿರವರು ನೀಡಿದ ದೂರಿನಂತೆ ಪಡುಬಿದ್ರಿ  ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 19/15 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಬ್ರಹ್ಮಾವರ:ಪಿರ್ಯಾದಿದಾರರಾದ ಎಸ್.ವೆಂಕಟರಾಯ ನಾಯಕ, (60), ಕಾರ್ಯದರ್ಶಿ, ಬ್ರಹ್ಮ ಬೈದರ್ಕಳಗರಡಿ, ಬ್ರಹ್ಮಾವರ, ಚಾಂತಾರು ಗ್ರಾಮ, ಉಡುಪಿ ತಾಲೂಕು  ರವರು  ದಿನಾಂಕ: 05/07/2015 ರಾತ್ರಿ 7:30 ಗಂಟೆಯಿಂದ 06/07/2015 ರ ಬೆಳಿಗ್ಗೆ 07:30 ಗಂಟೆಯ ಮಧ್ಯಾವಧಿಯಲ್ಲಿಯಾರೋ ಕಳ್ಳರು ಉಡುಪಿ ತಾಲೂಕು, ಚಾಂತಾರು ಗ್ರಾಮದ, ಬ್ರಹ್ಮ ಬೈದರ್ಕಳ ಗರಡಿಯ ಪ್ರಧಾನಮರದ ಬಾಗಿಲಿನ ಬೀಗ ಮುರಿದು, ಗರ್ಭಗುಡಿಯ ಬಾಗಿಲಿನ ಬೀಗ ಒಡೆದು ಒಳ ಪ್ರವೇಶಿಸಿ ಸುಮಾರು  15.000/- ರುಪಾಯಿ ಬೆಲೆ ಬಾಳುವ ಬೆಳ್ಳಿಯ ಪ್ರಭಾವಳಿ ಮತ್ತು ಸುಮಾರು 6,000/-ರೂಪಾಯಿಬೆಲೆ ಬಾಳುವ ಬೆಳ್ಳಿಯ ನಾಗನ ಹೆಡೆಗೆ ಚಿನ್ನದ ಲೇಪನ ಮಾಡಿದ ತಗಡನ್ನು ಕಳವು ಮಾಡಿಕೊಂಡುಹೋಗಿರುತ್ತಾರೆ ಎಂಬುದಾಗಿ ಎಸ್.ವೆಂಕಟರಾಯ ನಾಯಕರವರು ನೀಡಿದ ದೂರಿನಂತೆ ಬ್ರಹ್ಮಾವರಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 135/2015 ಕಲಂ:457,380 ಐಪಿಸಿಯಂತೆ ಪ್ರಕರಣದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ

  • ದಿನಾಂಕ.05/07/2015 ರಂದು ರಾತ್ರಿ ವೇಳೆಗೆ ಫಿರ್ಯಾದಿದಾರರಾದ ಸತೀಶ್ ಆಚಾರ್ಯ (42) ತಂದೆ: ಜನಾರ್ಧನ ಆಚಾರ್ಯ ವಾಸ:ವಿನಾಯಕ ನಿಲಯ, ಕೊಟ್ಯಾರ, ನಡ್ಸಾಲು ಗ್ರಾಮ,, ಉಡುಪಿ ತಾಲೂಕು ಮತ್ತು ಜಿಲ್ಲೆ ರವರು ಕಾರು ನಂಬ್ರ ಕೆಎ 20-268 ನೇದರಲ್ಲಿ ಪಡುಬಿದ್ರಿ ಪೇಟೆಯಿಂದ ತನ್ನ ಮನೆಯಾದ ಕೋಟ್ಯಾರ್ಕಡೆಗೆ ಹೊರಟು ರಾತ್ರಿ ಸಮಯ 11:30 ಗಂಟೆಗೆ ಪಡುಬಿದ್ರಿ ಗುಡ್ಡೆಚ್ಚಿ ಎಂಬಲ್ಲಿ ತಲುಪಿದಾಗ ಆರೋಪಿ ಮಹೇಂದ್ರ ಯಾನೇ ಪುಟ್ಟ ಎಂಬವರು ತನ್ನ ಮೋಟಾರು ಸೈಕಲ್ ನಲ್ಲಿ  ಕಾರನ್ನು ಓವರ್ ಟೇಕ್ ಮಾಡಿ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಮುಖಕ್ಕೆ ತಲೆಗೆ ಬೆನ್ನಿಗೆ ಹೊಡೆದಿದ್ದು, ಆಗ ಅಲ್ಲಿಗೆ ಇನ್ನೊಂದು ಬೈಕಿನಲ್ಲಿ  ಬಂದ ಉಳಿದ ಆರೋಪಿತರಾದ ಮಯೂರ ಹಾಗೂ ದಯಾನಂದರವರು ಕೂಡಾ ಆರೋಪಿ ಮಹೇಂದ್ರನಿಗೆ ಸಹಕರಿಸಿ ಕೈಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಎಂಬುದಾಗಿ ಸತೀಶ್ ಆಚಾರ್ಯರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 92/2015 ಕಲಂ:341, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣದಾಖಲಿಸಿಕೊಳ್ಳಲಾಗಿದೆ.

 


No comments: