Tuesday, July 07, 2015

Daily Crime reports As On 07/07/2015 At 17:00 Hrs

ಅಪಘಾತ ಪ್ರಕರಣ
  • ಕೋಟ: ಪಿರ್ಯಾದಿ ಸುಂದರ ಪೂಜಾರಿ ಇವರು ಸಿದ್ದಾಪುರಕ್ಕೆ ಹೋಗುವರೇ ದಿನಾಂಕ:07/07/2015 ರಂದು ಬೆಳಿಗ್ಗೆ ಸುಮಾರು 06:30 ಗಂಟೆ ಸಮಯಕ್ಕೆ ಸಾಯಿಬ್ರಕಟ್ಟೆಬಿದ್ಕಲ್ ಕಟ್ಟೆ ತಾರು ರಸ್ತೆಯಲ್ಲಿ ಅವರ ಬಾಬ್ತು ಕೆ.ಎ20ಝಡ್2174 ನೇ ನಂಬ್ರದ ಕಾರನ್ನು ಚಲಾಯಿಸಿಕೊಂಡು ಹೋಗುವಾಗ ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ತಿರುವಿನ ಬಳಿ ತಲುಪುವಾಗ ಎದುರಿನಿಂದ ಕೆಎ19ಸಿ7218 ನೇ ನಂಬ್ರದ ಲಾರಿ ಚಾಲಕ ಸತೀಶ ಪೂಜಾರಿ ಎಂಬುವನು ಆತನ ಬಾಬ್ತು ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲ ಬದಿಗೆ ಚಲಾಯಿಸಿ ಪಿರ್ಯಾದುದಾರರ ಕಾರಿನ ಬಲ ಬದಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಬಲದ ಬದಿಯ ಎರಡು ಡೋರ್ ಹಾಗೂ ಡೋರ್‌ನ ಗಾಜುಗಳು ಜಖಂ ಗೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 164/2015 ಕಲಂ:279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
  • ಕಾರ್ಕಳ: ದಿನಾಂಕ 06/07/2015 ರ 21:00 ಗಂಟೆಯಿಂದ ದಿನಾಂಕ 07/07/2015 ರಂದು 06:00 ಗಂಟೆಯ ಮಧ್ಯೆ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ದೇಂದಬೆಟ್ಟು ಎಂಬಲ್ಲಿರುವ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಬಾಗಿಲಿಗೆ ಅಳವಡಿಸಿದ ಬೀಗದ ಸರಪಳಿಯನ್ನು ಯಾರೋ ಕಳ್ಳರು ಗ್ಯಾಸ್ ಕಟ್ಟರ್ ಉಪಯೋಗಿಸಿ ತುಂಡರಿಸಿ ದೇವಸ್ಥಾನದ ಒಳ ಪ್ರವೇಶಿಸಿ ಒಳಗಿರುವ ಮುಖ ಮಂಟಪದ ಬಳಿಯಲ್ಲಿನ ಕಾಣೆಕೆ ಡಬ್ಬಿಯ ಎಡ ಮಗ್ಗುಲಿನ ಕಬ್ಬಿಣದ ಭಾಗವನ್ನು ಗ್ಯಾಸ್ ಕಟ್ಟರ್‌ನಿಂದ ಉಪಯೋಗಿಸಿ ಕನ್ನ ಕೊರೆದು ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು ಸುಮಾರು 70,000/- ರೂಪಾಯಿ ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 97/2015 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

No comments: