Sunday, July 05, 2015

Daily Crime Reports As On 05/07/2015 At 17:00 Hrs

ಅಪಘಾತ ಪ್ರಕರಣಗಳು
  • ಉಡುಪಿ:ಪಿರ್ಯಾದಿದಾರರಾದ ಸ್ಟಿವರ್ಟ ಮೀನಸ್ (30) ತಂದೆ:ಸ್ಟಾನಿ ಮೀನಸ್  ವಾಸ:ಮೌಂಟ್ ವೀವ್ ತುತ್ಯಾರು ಇವರು ದಿನಾಂಕ 04/07/2015 ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವಾಗ ರಾತ್ರಿ 11:00 ಗಂಟೆಗೆ ಐರೋಡಿಕಾರ್ ಜಂಕ್ಷನ್ ಬಳಿ ಸ್ಟಿವರ್ಟ ಮೀನಸ್ ರವರ ಸಹೋದ್ಯೋಗಿಯಾದ ಉಲ್ಲಾಸ ಶೆಟ್ಟಿರವರು ಕೆಎ 20 ವಿ 9745 ನೇ ಸ್ಕೂಟಿಯಲ್ಲಿ  ಹೋಗುತ್ತಿರುವಾಗ  ಕೆಎಲ್ 15 9127 ನೇ ಬಸ್ಸಿನ ಚಾಲಕ ಶಾಜಿ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಉಲ್ಲಾಸ ಶೆಟ್ಟಿರವರ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಉಲ್ಲಾಸ ಶೆಟ್ಟಿರವರು ರಸ್ತೆಗೆ ಬಿದ್ದು ತಲೆಗೆ ಒಳ ಜಖಂ ಆಗಿದ್ದು ಕೈಗೆ ರಕ್ತಗಾಯವಾಗಿರುತ್ತದೆ, ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 75/2015 ಕಲಂ  279, 337 ಐಪಿಸಿ ರಂತೆ ಪ್ರಕರಣ  ದಾಖಲಾಗಿರುತ್ತದೆ.
  • ಉಡುಪಿ:ಪಿರ್ಯಾದಿದಾರರಾದ ರವಿ (47) ತಂದೆ:ವಾಮನ ವಾಸ:ಕಟಮಾಲ್ ನಗರ ಪುತ್ತೂರು ಗ್ರಾಮ ಉಡುಪಿ ಇವರು ದಿನಾಂಕ:03/07/2015 ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವಾಗ ರಾತ್ರಿ 08:00 ಗಂಟೆಗೆ ಬಾಳಿಗಾ ಫಿಶ್‌ನೆಟ್‌ಗಿಂತ ಸ್ವಲ್ಪ ಮುಂದೆ ಪೆಟ್ರೋಲ್ ಬಂಕ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ಅಪರಿಚಿತ ಲಾರಿ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರವಿ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ರವಿ ರವರು ರಸ್ತೆಗೆ ಬಿದ್ದು ಬಲಕೈಗೆ ತೀವ್ರ ತರಹದ ಗಾಯವಾಗಿರುತ್ತದೆ.ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ,ರವಿ ಅವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 76/2015 ಕಲಂ. 279, 338 ಐಪಿಸಿ 134 (ಎ&ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ  ದಾಖಲಾಗಿರುತ್ತದೆ.
  • ಕೋಟ:ಪಿರ್ಯಾದಿದಾರರಾದ ಸಂತೋಷ (25) ತಂದೆ;ಸುಬ್ರಾಯ ಶೇರಿಗಾರ್ ವಾಸ:ಶ್ರೀ ಕಾರ್ತಿಕೇಯ ಚಿಕ್ಕಮ್ಮ ದೇವಸ್ಥಾನದ ಹತ್ತಿರ ಹಾಲಾಡಿ ರೋಡ್ ಕೋಟೇಶ್ವರ ಕುಂದಾಪುರ ತಾಲೂಕು ಇವರು  ದಿನಾಂಕ:04/07/2015 ರಂದು ರಾತ್ರಿ 8:00  ಗಂಟೆಗೆ ಅವರ  ಮೊಟಾರ್ ಸೈಕಲ್‌ನಲ್ಲಿ ಕೋಟ ಕಡೆಯಿಂದ ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ  66 ರಲ್ಲಿ ಹೋಗುತ್ತಿರುವಾಗ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ರೈಸ್‌ ಮಿಲ್ ಸಮೀಪ  ಕೆಎ 20 ಸಿ 6566 ನೇ  ಭಾರತಿ ಬಸ್ಸಿನ ಚಾಲಕ ಶೇಷು ಮೊಗವೀರ  ಬಸ್ಸನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟಾರು ರಸ್ತೆ ಪಶ್ಚಿಮ ಬದಿಯ ಮಣ್ಣಿನ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ಆ ವ್ಯಕ್ತಿ  ರಸ್ತೆಗೆ ಬಿದ್ದು ತಲೆಗೆ ರಕ್ತಗಾಯ ಹಾಗೂ ಮೈ ಕೈಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ವೈದ್ಯರ ಸಲಹೆಯಂತೆ  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಅಂಬುಲೆನ್ಸ್ ನಲ್ಲಿ ಕಳುಹಿಸಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 162/2015 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ :ದಿನಾಂಕ 02/07/2015 ರಂದು  19:30 ಗಂಟೆಗೆ ಪಿರ್ಯಾದಿದಾರರಾದ  ಶ್ರೀನಿವಾಸ (36) ತಂದೆ:ಅರ್ಮ ವಾಸ:ಕೆ.ಎಫ್.ಡಿ.ಸಿ. ವಸತಿ ಗೃಹ  ಬಂದರು ರಸ್ತೆ ಗಂಗೊಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ತಮ್ಮ ಪರಿಚಯದ ನಾಗರಾಜ ಇವರ ಆಟೋರಿಕ್ಷಾ ಕೆಎ. 20 ಬಿ 6014 ನೇದರಲ್ಲಿ ತಮ್ಮ ವಾಸದ ವಸತಿ ಗೃಹಕ್ಕೆ ಹೋಗುತ್ತಿದ್ದು ಪಿಂಟೋ ರವರ ಮನೆಯ ಹತ್ತಿರ ಬಂದರು ರಸ್ತೆ ಗಂಗೊಳ್ಳಿ ಇಲ್ಲಿ ಬರುತ್ತಿರುವಾಗ ಆಟೋರಿಕ್ಷಾ ಚಾಲಕ ಅತಿವೇಗದಿಂದ ರಿಕ್ಷಾವನ್ನು ಚಲಾಯಿಸಿ ಒಮ್ಮೆಲೇ ರಿಕ್ಷಾವನ್ನು ನಿಲ್ಲಿಸಲು  ಬ್ರೇಕ್ ಹಾಕಿದ್ದು ಚಾಲಕನ ಹತೋಟಿ ತಪ್ಪಿ ರಿಕ್ಷಾ ಪಲ್ಟಿ ಆಗಿದ್ದು  ಪರಿಣಾಮ ಶ್ರೀನಿವಾಸ ರವರ  ಕಾಲಿಗೆ  ತೀವ್ರವಾದ ನೋವಾಗಿದ್ದು ಅಲ್ಲದೇ ಅವರ ಮಗಳಾದ ವಿಭಾಶ್ರೀ (12) ಇವಳಿಗೆ ಗಲ್ಲಕ್ಕೆ, ದವಡೆಗೆ ಹಾಗೂ ಕುತ್ತಿಗೆಗೆ ಒಳ ಜಖಂ ನೋವಾಗಿರುತ್ತದೆ. ಕೂಡಲೇ  ಚಿಕಿತ್ಸೆ ಬಗ್ಗೆ ಆಸ್ಪತ್ರಗೆ ದಾಖಲಾಗಿದ್ದು ವೈದ್ಯರು ಮೊಣಕಾಲಿನಿಂದ ಸ್ವಲ್ಪ ಕೆಳಗೆ ಮೂಳೆ ಮುರಿತಗೊಂಡಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 92/ 2015 ಕಲಂ  279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣಗಳು
  • ಪಡುಬಿದ್ರಿ:ದಿನಾಂಕ 04/07/2015 ರಂದು ಅಝಮತ್ ಆಲಿ.ಜಿ  ಪಿ.ಎಸ್.ಐ ಪಡುಬಿದ್ರಿ ಠಾಣೆ ಇವರು ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ಮಾಡುತ್ತಿರುವ ವೇಳೆ ಹೆಜಮಾಡಿ ಎಸ್.ಎಸ್. ರಸ್ತೆಯ ಉರ್ದು ಶಾಲೆಯ ಬಳಿ ಇರುವ ಇಸ್ಮಾಯಿಲ್ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ದನಗಳನ್ನು ವಧೆ ಮಾಡುವ ಉದ್ದೇಶದಿಂದ ಕಟ್ಟಿ ಹಾಕಿರುವುದಾಗಿ ಬಂದ ಮಾಹಿತಿಯ ಮೇರೆಗೆ ಸದ್ರಿ ಸ್ಥಳಕ್ಕೆ 18:30 ಗಂಟೆಗೆ ದಾಳಿ ನಡೆಸಿ ಪರಿಶೀಲಿಸಲಾಗಿ ಕೊಠಡಿಯಲ್ಲಿ 3 ಕರುಗಳನ್ನು ಕಟ್ಟಿ ಹಾಕಿದ್ದು, ಅಲ್ಲದೇ ಸಮೀಪದಲ್ಲಿ ಪ್ರಾಣಿಗಳನ್ನು ವಧೆ ಮಾಡಿ ಮಾಂಸ ಮಾಡಲು ಬಳಸುವ ಕತ್ತಿ,ತೂಕ ಮಾಡಲು ಬಳಸುವ ತಕ್ಕಡಿಹಾಗೂ ಇತರ ಸಲಕರಣಿಗಳಾದ ಪ್ಲಾಸ್ಟಿಕ್ ಟ್ರೇ,ತೂಕದ ಕಲ್ಲು 2 ಕೆಜಿ,1 ಕೆಜಿ,ಕಬ್ಬಿಣದ ಕತ್ತಿ,ಹರಿತವಾದ ಸ್ಟೀಲ್ ಅಲಗಿರುವ ಚಾಕು-1,ಕಬ್ಬಿಣದ ಕೊಕ್ಕೆಗಳು-3, ನೈಲಾನ್ ರೋಪ್-2 ಕಂಡು ಬಂದಿದ್ದು ಕೊಠಡಿಯಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು,ಸದ್ರಿ ಕೊಠಡಿಯನ್ನು ಕಸಾಯಿಖಾನೆಯನ್ನಾಗಿ ಬಳಸುತ್ತಿರುವುದು ಕಂಡು ಬಂದಿದ್ದು ಸೊತ್ತುಗಳನ್ನು ಸ್ವಾಧೀನಪಡಿಸಿಗೊಂಡಿರುವುದಾಗಿದೆ.ಈ ಬಗ್ಗೆ ಪಡುಬಿದ್ರಿ ಠಾಣೆ ಅಪರಾಧ ಕ್ರಮಾಂಕ 91/2015 ಕಲಂ:7,9,11  ಕರ್ನಾಟಕ ಗೋ ವಧೆ ಮತ್ತು ಪ್ರತಿಬಂಧಕ ಜಾನುವಾರು ಪರಿರಕ್ಷಣೆ ಅಧಿನಿಯಮ 196  ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: