Sunday, July 05, 2015

Daily Crime Reports As On 05/07/2015 At 07:00 Hrs
ಅಪಘಾತ ಪ್ರಕರಣ
  • ಬೈಂದೂರು: ದಿನಾಂಕ 03/07/2015 ರಂದು ಅಪರಾಹ್ನ 02:45 ಗಂಟೆಯ ವೇಳೆಗೆ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಆಲಂದೂರು ಮಾಕೂಡಿ ಎಂಬಲ್ಲಿ ಉದಯರವರ ಅಂಗಡಿಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಶಿರೂರಿನಿಂದ ಆಲಂದೂರು ಕಡೆಗೆ ಕೆಎ 20 ಇಸಿ 6489 ನೇ ಮೋಟಾರ್‌ ಸೈಕಲ್‌ನಲ್ಲಿ ಮಂಜುನಾಥ ಎಂಬುವವರು ಶಾರದರವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು  ಹೋಗಿ ನಿಯಂತ್ರಣ ತಪ್ಪಿ ಸ್ಕಿಡ್‌ ಆಗಿ ರಸ್ತೆಗೆ ಬಿದ್ದ ಪರಿಣಾಮ ಶಾರದರವರಿಗೆ ತಲೆಗೆ ರಕ್ತ ಗಾಯವಾಗಿರುತ್ತದೆ. ಶಾರದರವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ, ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 185/2015 ಕಲಂ:279,338 ಐಪಿಸಿಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ 
  • ಕಾರ್ಕಳ: ದಿನಾಂಕ 02/07/2015 ರಂದು ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಸರ್ವೆ ನಂಬ್ರ 268/1ಬಿ1 ರಲ್ಲಿ 1.98 ಎಕ್ರೆ ಸ್ಥಿರಾಸ್ಥಿಯಲ್ಲಿ ಆಳತೆ ಕಾರ್ಯ ಹಾಗೂ ಗಡಿ ಗುರುತು ನಡೆಸಿ ಬೇಲಿ ಹಾಕುವ ಸಂದರ್ಭದಲ್ಲಿ ಅಪಾದಿತರಾದ 1.ಶ್ರೀಮತಿ ಸುಶೀಲಾ ಕುಂಟಲ್ಪಾಡಿ, ಸಾಣೂರು ಗ್ರಾಮ, ಕಾರ್ಕಳ ತಾಲೂಕು, 2.ಹರೀಶ ಕುಂಟಲ್ಪಾಡಿ, ಸಾಣೂರು ಗ್ರಾಮ, ಕಾರ್ಕಳ ತಾಲೂಕು ಹಾಗೂ 3.ಅಶೋಕ್ ಕುಂಟಲ್ಪಾಡಿ, ಸಾಣೂರು ಗ್ರಾಮ, ಕಾರ್ಕಳ ತಾಲೂಕು. ಎಂಬುವರು ಪಿರ್ಯಾದಿದಾರರಾದ ಹರೀಶ್ ಸಾಲ್ಯಾನ್, (49) ತಂದೆ:ದಿವಗಂತ ಶೀನ ಪೂಜಾರಿ ವಾಸ :ಮಹಾಲಿಂಗಬೆಟ್ಟು ಮನೆ, ಕುಂಟಾಲ್ಪಾಡಿ, ಸಾಣೂರು ಗ್ರಾಮ ಕಾರ್ಕಳ ತಾಲೂಕು ಇವರನ್ನು ಹಾಗೂ ಸಹೋದರರಾದ ವಸಂತ ಹಾಗೂ ದಾಮೋದರರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ನಿಂದಿಸಿದಲ್ಲದೆ, ಅಪಾದಿತ ಅಶೋಕರವರು ವಸಂತ ಹಾಗೂ ದಾಮೋದರರವರ ಎದೆಗೆ ಕೈ ಹಾಕಿ ದೂಡಿ ಹಲ್ಲೆ ಮಾಡಿದ್ದಲ್ಲದೆ, ಸ್ಥಿರಾಸ್ತಿಯಲ್ಲಿ ಸರ್ವೆ ಕಾರ್ಯದ ಸಮಯ ನೆಟ್ಟಿರುವ ಕಲ್ಲು ಕಂಬಗಳನ್ನು ತುಂಡರಿಸಿ ಕಿತ್ತೆಗೆದಿರುತ್ತಾರೆ ಎಂಬುದಾಗಿ ಹರೀಶ್ ಸಾಲ್ಯಾನ್ ರವ ರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 95/2015 ಕಲಂ 323, 504, 427 ಐಪಿಸಿಯಂತೆ  ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.


No comments: