Sunday, July 05, 2015

Daily Crime Reports As on 05/07/2015 at 19:30 Hrs

ಅಪಘಾತ ಪ್ರಕರಣಗಳು  
  • ಕೊಲ್ಲೂರು: ದಿನಾಂಕ 05.07.2015 ರಂದು ಕೇಮಾರು ಸ್ವಾಮೀಜಿ ರವರೊಂದಿಗೆ ಪಿರ್ಯಾದಿದಾರರಾದ ಶ್ರೀನಿವಾಸ ಆಚಾರಿ (32) ತಂದೆ: ದಾಮೋದರ ಆಚಾರಿ ವಾಸ:ನಾಗದ್ದೆ ಮೂದೂರು ಗ್ರಾಮ ಕುಂದಾಪುರ ತಾಲೂಕು ರವರು ಕೆ.ಕೆ ಸಾಬು, ಲಕ್ಷ್ಮಣ್ ಶೆಟ್ಟಿ, ಸೂಲ್ಯ ಬೋವಿ ರವರು ಕೇಮಾರು ಸ್ವಾಮೀಜಿಯ ತಂದೆಯ KA 19 P 7444 ನೇ ಬೊಲೆರೋ ಕಾರಿನಲ್ಲಿ ಕೊಡಚಾದ್ರಿಗೆ ಹೋಗುವರೇ ಕೊಲ್ಲೂರು ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಕೊಲ್ಲೂರು ಗ್ರಾಮದ ದಳಿಯಿಂದ ಸ್ವಲ್ಪ ಮುಂದೆ ನಾಗೋಡಿ ಘಾಟಿಯಲ್ಲಿ ಹೋಗುತ್ತಿರುವಾಗ ಸಮಯ ಸುಮಾರು 11.00 ಗಂಟೆಗೆ ಎದುರಿನಿಂದ ಅಂದರೆ ಶಿವಮೊಗ್ಗ ಕಡೆಯಿಂದ ಕೊಲ್ಲೂರು ಕಡೆಗೆ ಬರುತ್ತಿದ್ದ KA 14 M 5586 ನೇ ಮಾರುತಿ ಓಮಿನಿ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬಾಗಕ್ಕೆ ಬಂದು ಪಿರ್ಯಾದುದಾರರ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ  ಕೆ.ಕೆ ಸಾಬು, ಹಾಗೂ ಚಾಲಕನಿಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ವಿನಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಶ್ರೀನಿವಾಸ ಆಚಾರಿ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಅಮಾಸೆಬೈಲು: ಪಿರ್ಯಾದುದಾರರಾದ ಶೀನ ನಾಯ್ಕ ಪ್ರಾಯ 65 ವರ್ಷ ತಂದೆ ದಿ.ಕೊರಗ ನಾಯ್ಕ ವಾಸ ಬೊಬ್ಬರ್ಯನ ಜಡ್ಡು ಮಚ್ಚಟ್ಟು ಗ್ರಾಮ ಕುಂದಾಪುರ ತಾಲೂಕು ರವರು ದಿನಾಂಕ: 04/07/2015 ರಂದು ಸುಬ್ರಮಣ್ಯ ದೇವಸ್ಥಾನಕ್ಕೆ  ಕೆಲಸಕ್ಕೆ ಹೋಗುವರೇ ರಸ್ತೆ ಬದಿಯಲ್ಲಿ ಬರುವಾಗ ಬೆಳಗ್ಗೆ 08:30 ಗಂಟೆಗೆ ಮಸೀದಿ ಕಡೆಯಿಂದ ಕೆಎ 20 ಇಜಿ 2805 ನೇ ಬೈಕ್ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ತಲೆಯ ಹಿಂದಿನ ಭಾಗಕ್ಕೆ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಹಾಲಾಡಿಯ ದುರ್ಗಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಶೀನ ನಾಯ್ಕ ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ನಂಬಿಕೆ ದ್ರೋಹ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ಡಾ. ಸಂತೋಷ್ ವಿ.ಕೆ. (43) ತಂದೆ: Late ಡಾ. ವಿ.ಎಂ. ಕೃಷ್ಣ ಮೂರ್ತಿ ವಾಸ: ನಂ. 61, ಶ್ರೀ ಅಂಗಳ, ಎರಡನೇ ಅಡ್ಡ ರಸ್ತೆ, ಸರ್. ಎಂ.ವಿ. ಲೇ ಓಟ್, ಸಿಡೇದಹಳ್ಳಿ, ಬೆಂಗಳೂರು ರವರು ಕುಂದಾಪುರ ಕಾರ್ಮಿಕ ರಾಜ್ಯ ವಿಮಾ ಯೋಜನೆ ಚಿಕಿತ್ಸಾಲಯದಲ್ಲಿ ವಿಮಾ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ತಮ್ಮ ಕಛೇರಿಯಲ್ಲಿ ಕುಣಿಗಲ್ ಮೂಲದ ರವಿ ಕುಮಾರ್ ಎಂ.ಎಂ. ಎಂಬವರು ದ್ವಿತೀಯ ದರ್ಜೆ ಸಹಾಯಕವಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಪಿರ್ಯಾದಿದಾರರು ಕಛೇರಿಯಲ್ಲಿ ಕಾರ್ಮಿಕರ ಚಿಕಿತ್ಸಾ ವೆಚ್ಚವನ್ನು ಸರಕಾರದಿಂದ ಮಂಜೂರಾದ ಹಣವನ್ನು ಸರ್ಕಾರಿ ಚೆಕ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕುಂದಾಪುರ ಖಾಖೆಯಿಂದ ರವಿ ಕುಮಾರ್ ಮುಖಾಂತರ ಬ್ಯಾಂಕಿನಿಂದ ತರಿಸಿಕೊಂಡು ಫಲಾನುಭವಿಗಳಿಗೆ ವಿತರಿಸುವುದಾಗಿದ್ದು, ದಿನಾಂಕ: 31/07/2014 ರಂದು ನಗದೀಕರಿಸಿದ ಚೆಕ್ ನಂಬ್ರ 138623 ರಲ್ಲಿ ರೂ. 14,854/-, ದಿನಾಂಕ: 27/08/2014 ರಂದು ನಗದೀಕರಿಸಿದ ಚೆಕ್ ನಂಬ್ರ. 138624 ರಲ್ಲಿ ರೂ. 1,55,468/-, ದಿನಾಂಕ: 16/09/2014 ರಂದು ನಗದೀಕರಿಸಿದ ಚೆಕ್ ನಂಬ್ರ 313431 ರಲ್ಲಿ ರೂ. 44,037/-, ದಿನಾಂಕ: 07/10/2014 ರಂದು ನಗದೀಕರಿಸಿದ ಚೆಕ್ ನಂಬ್ರ 313434 ರಲ್ಲಿ ರೂ. 1,51,000/- ದಿನಾಂಕ: 01/12/2014 ರಂದು ನಗದೀಕರಿಸಿದ ಚೆಕ್ ನಂಬ್ರ 313435 ರಲ್ಲಿ ರೂ. 14, 725  ಹಣ ಒಟ್ಟು 3,80,084/-  ಹಣವನ್ನು ರವಿ ಕುಮಾರ್ ಎಂ.ಎಂ. ರವರು ನಗದೀಕರಿಸಿಕೊಂಡಿರುವುದು ದೃಢಪಟ್ಟಿರುತ್ತದೆ. ಸರಕಾರದಿಂದ ಫಲಾನುಭವಿಗಳಿಗೆ ಮಂಜೂರಾದ ಹಣವನ್ನು ಹಂಚಿಕೆ ಮಾಡದೇ ಅಪ್ರಮಾಣಿಕತೆಯಿಂದ ತನ್ನ ಸ್ವಂತ ಲಾಭಕ್ಕೆ ಬಳಸಿಕೊಂಡು ನಂಬಿಕೆ ದ್ರೋಹವೆಸಗಿ ಅಕ್ರಮ ನಷ್ಟವನ್ನು ಉಂಟು ಮಾಡಿರುತ್ತಾರೆ ಎಂಬುದಾಗಿ ಡಾ. ಸಂತೋಷ್ ವಿ.ಕೆ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 258/2015 ಕಲಂ 409, 418 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಕಾಪು: ದಿನಾಂಕ 04-07-2015 ರಂದು ಪಿರ್ಯಾದಿದಾರರಾದ ಸುರೇಶ್ ಸುವರ್ಣ (21) ತಂದೆ: ರಮೇಶ ಪಿ. ಕರ್ಕೆರ ವಾಸ: ಸೀತಾ ಗರಡಿ ಬದಿ ಕಾಪು ಪಡು ಗ್ರಾಮ ರವರ ತಂದೆ ಸುಮಾರು 48 ವರ್ಷ ಪ್ರಾಯದ ರಮೇಶ್ ಪಿ. ಕರ್ಕೆರ ಇವರು ಕಾಪು ಪಡು ಗ್ರಾಮದ ಕಾಪು ಬೀಚ್ ಬಳಿಯ ಸಮುದ್ರದಲ್ಲಿ ಟ್ಯೂಬ್‌‌ ಬೋಟ್‌‌ನಿಂದ ಜೆಪ್ಪು ಬಲೆಯ ಮೀನುಗಾರಿಕೆ ಮಾಡುವಾಗ ಒಮ್ಮೇಲೆ ಗಾಳಿ ಪ್ರಾರಂಭವಾಗಿ ಸಮುದ್ರದ ನೀರಿನ ಅಲೆಗಳ ಅಬ್ಬರ ಹೆಚ್ಚಾಗಿ ಆಕಸ್ಮಿಕವಾಗಿ ಟ್ಯೂಬಿನಿಂದ ಜಾರಿ ಸಮುದ್ರದ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಸುರೇಶ್ ಸುವರ್ಣ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 17/2015 ಕಲಂ 174ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: