Thursday, June 18, 2015

Daily Crimes Reported as On 18/06/2015 at 17:00 Hrsಹಲ್ಲೆ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ ಪೌಝಿಯಾ ಇವರು ದಿನಾಂಕ: 14/12/2008 ರಂದು ಪ್ರಕರಣದಲ್ಲಿನ 1 ನೇ ಆರೋಪಿ ಶಮೀರ್ ಅಬ್ದುಲ್ ಖಾದರ್ ನನ್ನು ಮದುವೆಯಾಗಿದ್ದು ಮದುವೆಯ ಬಳಿಕ ಪಿರ್ಯಾದಿದಾರರು ಗಂಡನ ಮನೆಯಾದ ಹೇರೂರು ಗ್ರಾಮದ ರಾಜೀವ ನಗರದ ಕೊಳಂಬೆ ಎಂಬಲ್ಲಿ  ವಾಸ ಮಾಡಲು ಪ್ರಾರಂಭಿಸಿದ್ದು ಸುಮಾರು 3 ತಿಂಗಳ ನಂತರ 1 ನೇ ಆರೋಪಿ ಪಿರ್ಯಾದಿದಾರರನ್ನು ಕಡೆಗಣಿಸಿ ರಾತ್ರಿ ವೇಳೆ ಮನೆಗೆ ಬಾರದೇ ವಾರದಲ್ಲಿ 4 ದಿನ ಆರೋಪಿಯು ಅಣ್ಣನ ಮನೆಯಾದ ಹಂಗಾರಕಟ್ಟೆಯಲ್ಲಿ ಉಳಿದುಕೊಳ್ಳುತ್ತಿದ್ದು ಇದನ್ನು ಆಕ್ಷೇಪಿಸಿದ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಡೈವರ್ಸ್ ಕೊಡುತ್ತೇನೆ ಎಂದು ಬೆದರಿಸಿ ಕೈಯಿಂದ ಹೊಡೆದು ಹಿಂಸೆ ಕೊಡಲು ಪ್ರಾರಂಭಿಸಿದ್ದು 2 ನೇ ಆರೋಪಿ ತಾಜುನ್ನಿಸಾ ಚಾಡಿ ಹೇಳಿ ಪ್ರಚೋದನೆ ನೀಡಿರುತ್ತಾರೆ. 2014 ನೇ ಇಸವಿಯ ಅಕ್ಟೋಬರ್ ತಿಂಗಳಲ್ಲಿ ಆರೋಪಿತ 1.ಸಮೀರ್ ಅಬ್ದುಲ್ ಖಾದರ್ 2.ತಾಜುನ್ನಿಸಾ, 3.ಫೆಮಿನಾ ಪರ್ವಿಸನ್ 4.ಜಮೀರ್ ಸಾಹೆಬ್ 5.ನಜ್ಮನ್ 6.ಯಾಸ್ಮಿನ್ 7.ಶಮೀಮ್ 8.ಇಸ್ಮಾಯಿಲ್ ಗೌಸ್,9.ಸಾಹಿನ್  ಖಾದರ್ 10.ಫರ್ಝಾನ್ ಇವರುಗಳು ಪಿರ್ಯಾದಿದಾರರನ್ನು ಮನೆಯಿಂದ ಹೊರಗೆ ಹಾಕಿದ ಕಾರಣ ಅಸ್ವಸ್ಥಳಾಗಿ ಮಹೇಶ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ. ದಿನಾಂಕ: 09/06/2015 ರಂದು 1 ನೇ ಆರೋಪಿ ಪಿರ್ಯಾದಿದಾರರನ್ನು  ಮನಯಿಂದ ದೂಡಿ ಹಳೆ ಮನೆಗೆ ಹೋಗು ಎಂದು ಕೈಯಿಂದ ಹೊಡೆದಿರುತ್ತಾರೆ. ದಿನಾಂಕ: 16/06/2015 ರಂದು ಸಂಜೆ ಸಮಯ ಸುಮಾರು 7 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿರುವಾಗ 1 ರಿಂದ 3 ರ ವರೆಗಿನ ಆರೋಪಿಗಳು ಒಟ್ಟಾಗಿ ಮನೆಯಿಂದ ದೂಡಿ 1 ನೇ ಆರೋಪಿ ಪಿರ್ಯಾದಿದಾರರ ಕೆನ್ನೆ, ಭುಜಕ್ಕೆ ಕೈಯಿಂದ ಹೊಡೆದಿರುತ್ತಾರೆ ಅವಾಚ್ಯ ಶಬ್ದಗಳಿಂದ ಬೈದು ಮನೆಬಿಟ್ಟು ಹೋಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2015 ಕಲಂ: 498(ಎ) 323,504,506,109 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇತರೇ ಪ್ರಕರಣ

  • ಕುಂದಾಪುರ:  ಕುಂದಾಪುರ ತಾಲ್ಲೂಕು ಕಂದಾವರ ಗ್ರಾಮದ ಚಂದ್ರಶೇಖರ ಎಂಬವರು ಕಂದಾವರ ಗ್ರಾಮದ  ಸ.ನಂ . 209/2ಪಿ9 ರಲ್ಲಿ 0.16.75 ಸೆಂಟ್ಸ್ ಸ್ಥಳವು ಭೂ ಪರಿವರ್ತನೆ ಆಗಿರುವ ಆದೇಶ ನಂಬ್ರ CDS/LNA/4/CR/56/13-14/78420ರ ಆದೇಶ ಮತ್ತು ನಕ್ಷೆಯ  ದೃಢೀಕೃತ ನಕಲು ಕೋರಿ ಅರ್ಜಿ ಸಲ್ಲಿಸಿದ್ದು, ಕಛೇರಿ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಆದೇಶವಾಗಿರುವುದು ಕಂಡು ಬಂದಿರುತ್ತದೆ. ಸಹಾಯಕ ನಿರ್ದೇಶಕರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ  ಉಡುಪಿ ಇವರು ಶ್ರೀ ವಾಸುದೇವ ಎನ್ ದೇವಾಡಿಗ, ತಂದೆ:ನಾರಾಯಣ ದೇವಾಡಿಗ, ವಡೇರಹೋಬಳಿ ಗ್ರಾಮ ಇವರ ಬಾಬ್ತು , ಕುಂದಾಪುರ ತಾಲ್ಲೂಕು ವಡೇರಹೋಬಳಿ ಗ್ರಾಮದ  ಸ.ನಂ. 147/10ಬಿ15ರಲ್ಲಿ 0.05 1/2 ಎಕ್ರೆ ಸ್ಥಳದ ಭೂ ಪರಿವರ್ತನಾ ಆದೇಶ LNA(4)CR230/2011-12/49175 ದಿನಾಂಕ:9.10.2011ರ ನೈಜತೆಯ ಬಗ್ಗೆ ಕಛೇರಿಗೆ ಕೋರಿಕೊಂಡಿದ್ದು, ಕಛೇರಿ ದಾಖಲೆಗಳನ್ನು ಪರಿಶೀಲಿಸಿದಾಗ ಈ ನಂಬ್ರದ ಆದೇಶವು ಶ್ರೀ ಕರೀಂ ಮುಕ್ತಾರ್ @ಕರೀಂ ಮುಕ್ತಾರ್ ಮಹಮ್ಮದ್ ,ತಂದೆ: ಕರೀಂ ಅಬ್ದುಲ್ ವಹೀದ್‌ರವರಿಗೆ ಸೇರಿದ ವಡೇರಹೋಬಳಿ ಗ್ರಾಮದ ಸ.ನಂ. 147/10ಬಿ15ರಲ್ಲಿ 0.10 1/2 ಎಕ್ರೆ ಭೂಮಿ ವಾಸ್ತವ್ಯದ ಉದ್ದೇಶಕ್ಕೆ ಪರಿವರ್ತನೆಯಾಗಿರುವುದು ಕಂಡುಬಂದಿರುತ್ತದೆ.ಈ ಮೇಲಿನ ಎರಡೂ ಪ್ರಕರಣಗಳಲ್ಲಿ ಆಪಾದಿತರು ನಕಲಿ ದಾಖಲೆಗಳನ್ನು ಸೃಷ್ಠಿಸಿ, ಕಚೇರಿಯ ನಕಲಿ ಶೀಲು ಬಳಸಿ, ನಕಲಿ ಸಹಿಯನ್ನು ಹಾಕಿ ನೈಜವಾದುದೆಂದು ಬಳಸಿರುವುದು ಕಂಡು ಬಂದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ಇವರ ದೂರಿನಂತೆ ಆಪಾದಿತರ ವಿರುದ್ಧ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 239/15 ಕಲಂ 464, 465, 468, 470, 471 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಸೌಜಾನ್ಯ ಪ್ರಾಯ 11 ವರ್ಷ ಇವಳು ನಾಗೂರಿನ ಉರ್ದು ಶಾಲೆಯಲ್ಲಿ 6 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ದಿನಾಂಕ 17/06/2015 ರಂದು ಬೆಳಿಗ್ಗೆ  08:30 ಗಂಟೆಯ  ಸಮಯಕ್ಕೆ ಮನೆಯಿಂದ ಶಾಲೆಗೆ ಹೋದವಳು ಸಂಜೆ 04:30 ಗಂಟೆಯ ಸಮಯಕ್ಕೆ ವಾಪಾಸ್ಸು ಮನೆಗೆ ಬಂದವಳು ವಾಂತಿ ಮಾಡಿಕೊಂಡಿದ್ದು ತಲೆ ನೋವು ಆಗುತ್ತಿದೆ ಎಂದು ತಿಳಿಸಿದ್ದು ಈ ಬಗ್ಗೆ ಔಷಧ ತೆಗೆದುಕೊಂಡು ಬಂದಿದ್ದು ನಂತರ ವಿಶ್ರಾಂತಿಯಲ್ಲಿರುವಾಗ ದಿನಾಂಕ 18/06/2015 ರಂದು ರಾತ್ರಿ 02:00  ಗಂಟೆಯ ಸಮಯಕ್ಕೆ ಸೌಜಾನ್ಯಳಿಗೆ ತಲೆ ನೋವು ಜಾಸ್ತಿಯಾಗಿದ್ದು 108 ಅಂಬುಲೆನ್ಸ ವಾಹನದಲ್ಲಿ 02:45 ಗಂಟೆಯ ವೇಳೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯರು ಸೌಜನ್ಯಳನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 21/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ: ಚಂದ್ರಶೇಖರ ಮೊಗವೀರ(59) ಎಂಬುವರು ಶಿರಿಯಾರದ ಅಭಿಮಾನ್ ಬಾರ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು  ದಿನಾಂಕ:17-06-2015 ರಂದು ಸಂಜೆ ಸುಮಾರು 6.00 ಗಂಟೆಗೆ ಹಳ್ಳಾಡಿ ಪೇಟೆಯಲ್ಲಿರುವ ಮನೆಗೆ ಹೋಗುವುದಾಗಿ ಹೇಳಿ ಹೋದವರು ರಾತ್ರಿ 9.00 ಗಂಟೆಯಾದರೂ ಮನೆಗೆ ಬಾರದ ಕಾರಣ ಅವರನ್ನು ಹುಡುಕಿಕೊಂಡು ಹೋದಾಗ, ಚಂದ್ರಶೇಖರ ಮೊಗವೀರರವರು  ಮನೆಗೆ ಹೋಗುವ ಕಾಲುದಾರಿಯ ಬದಿಯಲ್ಲಿರುವ ಬಡಾಕೇರಿಯ ನೀರು ತುಂಬಿದ ಚರಂಡಿಯಲ್ಲಿ ಕವುಚಿ ಬಿದ್ದುಕೊಂಡಿದ್ದು, ಅವರನ್ನು ಕೂಡಲೇ ಮಹೇಶ್ ಆಸ್ಪತ್ರೆಗೆ ಕೊಂಡು ಹೋಗಿದ್ದು, ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟ  ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 26/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: