Thursday, June 18, 2015

Daily Crimes Reported as On 18/06/2015 at 07:00 Hrs



ಹುಡುಗಿ ಕಾಣೆ:

  • ಕಾಪು: ದಿನಾಂಕ 16-06-2015 ರಂದು ಬೆಳಿಗ್ಗೆ 08:30 ಗಂಟೆಗೆ ಸುಮಾರು 19 ವರ್ಷ ಪ್ರಾಯದ ದಿವಿಷಾ ಎಂಬವಳು ಕಟ್ಟು ಮಟಪಾಡಿಯಿಂದ ಉಡುಪಿ ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಹೋಗುವುದಾಗಿ ಹೋದವಳು ಸಂಜೆಯಾದರೂ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 125/2015 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:

  • ಹೆಬ್ರಿ:  ಪಿರ್ಯಾದಿ ಸುಧಾಕರ ಇವರ ಅಣ್ಣ ಶ್ರೀಧರ ಹೆಗ್ಡೆ ಎಂಬುವವರು ತನ್ನ ಸ್ನೇಹಿತ ಹುಸೈನ್‌ ರವರೊಂದಿಗೆ ಕೆ.ಎ.20.ಇಜೆ 0967 ನೇ ಮೋಟಾರ್ ಸೈಕಲಿನಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಸೋಮೇಶ್ವರ ಕಡೆಯಿಂದ ಮಡಾಮಕ್ಕಿ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 4:30 ಗಂಟೆಗೆ ನಾಡ್ಪಾಲ್ ಗ್ರಾಮದ ದುಡ್ಡಿನಜೆಡ್ಡು ಎಂಬಲ್ಲಿ ರಸ್ತೆಯ ತಿರುವಿನ ಬಳಿ ತಲುಪುವಾಗ್ಯೆ ಸದ್ರಿ ಮೋಟಾರ್ ಸೈಕಲ್‌ ಸವಾರ ಹುಸೈನ್‌ ರವರು ಮೋಟಾರ್‌ ಸೈಕಲನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಮೋಟಾರ್‌ ಸೈಕಲ್‌ ಆತನ ಹತೋಟಿ ತಪ್ಪಿ ಸ್ಕಿಡ್ಡಾದ ಪರಿಣಾಮ ಇಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸಹಸವಾರರಾದ ಪಿರ್ಯಾದಿದಾರ ಅಣ್ಣ ಶ್ರೀಧರ್‌ ರವರು ರಕ್ತಗಾಯಗೊಂಡು, ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 67/15 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾರ್ಕಳ: ದಿನಾಂಕ:17/06/2015 ರಂದು ರಿಚರ್ಡ್ ನಾರ್ಬಟ್ ಡಿಸೋಜ ಇವರು ಮಧ್ಯಾಹ್ನ ಸುಮಾರು 1:45 ಗಂಟೆಗೆ ಕಾರ್ಕಳ - ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಮಂಗಳೂರು ಮೂಡಬಿದ್ರೆ -ಕಾರ್ಕಳ-ಬೆಳ್ಮಣ್ ಶಿರ್ವಾ ಮಾರ್ಗವಾಗಿ  ಮುಂಬೈಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಸಲುವಾಗಿ   ಬಸ್ ನಂಬ್ರ ಕೆ ಎ 20 ಡಿ 2798 ದ ಸೀತಲ್ ಬಸ್ಸನ್ನು ಚಾಲನೆ ಮಾಡಿಕೊಂಡು ನಿಟ್ಟೆ ಗ್ರಾಮದ  ಬ್ರಾಮರಿ ಬಳಿ ರಸ್ತೆ ಬದಿಯಲ್ಲಿ ಪ್ರಯಾಣಿಕರನ್ನು  ಹತ್ತಿಸಿಕೊಳ್ಳಲು ಬಸ್‌ನ್ನು ನಿಲ್ಲಿಸಿದ್ದಾಗ ಅದೇ ಸಮಯಕ್ಕೆ ದೂಪದಕಟ್ಟೆ ಕಡೆಯಿಂದ ಬೆಳ್ಮಣ್ ಕಡೆಗೆ  ಕೆ ಎ 20 ವಿ 8800 ನೇ ನಂಬ್ರದ ಸ್ಕೂಟಿ ದ್ವಿ ಚಕ್ರ ವಾಹನವನ್ನು  ಸವಾರನು ನಿಂತಿದ್ದ ಬಸ್ಸಿನ ಹಿಂಭಾಗದ ಬಲ ಭಾಗಕ್ಕೆ ಢಿಕ್ಕಿ ಹೊಡೆದು ದ್ವಿ ಚಕ್ರ ವಾಹನ ಸಮೇತ ರಸ್ತೆಯ ಬಲ ಭಾಗಕ್ಕೆ ಬಿದ್ದಿದ್ದು ಅದೇ ಸಮಯಕ್ಕೆ ದೂಪದ ಕಟ್ಟೆ ಕಡೆಯಿಂದ ಬೆಳ್ಮಣ್ ಕಡೆಗೆ ಕೆ.ಎ 20 ಡಿ 424 ನೇ ನಂಬ್ರದ ಟೆಂಪೋ ಟ್ರಾವೆಲ್ ವಾಹನವನ್ನು ಅದರ ಚಾಲಕ ಗಿಲ್ಬರ್ಟ್ ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಯಲ್ಲಿ ಬಿದ್ದಿದ್ದ ದ್ವಿ ಚಕ್ರ ವಾಹನ ಸವಾರನ ಮೇಲೆ ಹಾದು ಹೋಗಿದ್ದು ಇದರ ಪರಿಣಾಮ ಸ್ಕೂಟರ್ ಸವಾರನ ಮುಖ ಕ್ಕೆ ಎಡ ಕೈ ಮೊಣ ಗಂಟೆಗೆ ಎಡ ಕಿವಿಗೆ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2015  ಕಲಂ 279.304(A) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಕಾಪು: ದಿನಾಂಕ 15-06-2015 ರಂಧು ಪಿರ್ಯಾದಿ ಶಂಶುದ್ದಿನ್ ಇವರು ಮಲ್ಲಾರು ಗ್ರಾಮದ ಪಕ್ಕೀರನಕಟ್ಟೆ ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಿ ವಾಪಾಸು ಬರುತ್ತಿರುವಾಗ ಆರೋಪಿತ 1) ಮುಬಿನ್ ತಂದೆ: ಅಬ್ದುಲ್ ಅಹದ್, 2) ಫೈಸಲ್ ತಂದೆ: ಮೊಹಮ್ಮದ್ ಹನೀಫ್, 3) ಮಿಸ್ಬಾ, 4) ಇಜಾಜ್ ಇವರುಗಳು ಮೋಟಾರ್ ಸೈಕಲ್‌‌ನಲ್ಲಿ ಬಂದು ಪಿರ್ಯಾದಿದಾರರನ್ನು ಅಡ್ಡಗಟ್ಟಿ ಆರೋಪಿ ಮುಬಿನ್ ಮತ್ತು ಮಿಸ್ಬಾ ಇವರು ಪಿರ್ಯಾದಿದಾರರನ್ನು ಗಟ್ಟಿಯಾಗಿ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ, ಆರೋಪಿ ಮುಬಿನ್‌ ಚೂರಿಯಿಂದ ಪಿರ್ಯಾದಿಯ ತಲೆಯ ಹಿಂಬದಿಗೆ ಗೀರಿ ಇನ್ನು ಮುಂದಕ್ಕೆ ನಮ್ಮ ವಿಷಯಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂಬುವುದಾಗಿ ಜೀವ ಬೆದರಿಕೆ ಹಾಕಿದ್ದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 124/2015 ಕಲಂ 323, 324, 341, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರು ಹೆಚ್‌ಡಿಎಫ್ ಸಿ  ಮ್ಯೂಚುವಲ್ ಫಂಡ್  ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು 2014 ರಲ್ಲಿ SANDS SHOPINGS  ಆನ್ ಲೈನ್ ಸಂಸ್ಥೆಯವರು ಕರೆ ಮಾಡಿ ತಮ್ಮ ಪ್ರಾಡಕ್ಟ್ ಖರೀದಿಸಿದರೆ ಅದರಲ್ಲಿ ಲಕ್ಕಿ ಇದ್ದಲ್ಲಿ ನಿಮಗೆ ಬಂಪರ್ ಬಹುಮಾನ ನೀಡಲಾಗುವುದು ಎಂದು ಹೇಳಿ ಮೊದಲಿಗೆ ಟಿವಿಗಾಗಿ ರೂ 17,000/ ವನ್ನು ಫಿರ್ಯಾದುದಾರರ ಖಾತೆಯಿಂದ ಆನ್ ಲೈನ್ ಮುಖಾಂತರ ಹಣ ಟ್ರಾನ್ಸ್ ಫರ್ ಮಾಡಿಸಿಕೊಂಡಿದ್ದು ನಂತರ ಫಿರ್ಯಾದಿದಾರರಿಗೆ ನೀವು ಲಕ್ಕಿ ವಿನ್ನರ್ ಆಗಿದ್ದು ಈ ಬಗ್ಗೆ ಸರ್ವಿಸ್ ಚಾರ್ಜ್ ಗಾಗಿ ಹಣ ಹಾಕಬೇಕೆಂದು ಪಿರ್ಯಾದಿದಾರರಿಂದ 2,01,977/-  ರೂ ಹಣವನ್ನು ಹಂತಹಂತವಾಗಿ ಪಾವತಿ ಮಾಡಿಸಿಕೊಂಡಿರುತ್ತಾರೆ. ಪಿರ್ಯಾದುದಾರರಿಗೆ ಪ್ರಾಡಕ್ಟ್ ಬರದೇ ಇದ್ದಾಗ ಹಣವನ್ನು ವಾಪಾಸು ನೀಡುವಂತೆ ಪಿರ್ಯಾದಿದಾರರು ವಿನಂತಿಸಿಕೊಂಡಾಗ ಕಪಾಡಿಯಾ ಎಂಬವರು ಕರೆಮಾಡಿ ಹಣವನ್ನು ರಿಫಂಡ್ ಮಾಡುವುದಕ್ಕೋಸ್ಕರ ಫಿರ್ಯಾದಿದಾರರ ಖಾತೆಯಲ್ಲಿ 50,000/ ಹಣ ಜಮಾ ಇರುವಂತೆ ತಿಳಿಸಿ ಪಿರ್ಯಾದಿದಾರರು ಜಮಾ ಮಾಡಿದ ಹಣವನ್ನು ಆರೋಪಿತರು ಅವರ ಖಾತೆಗೆ ಟ್ರಾನ್ಸ್ ಫರ್ ಮಾಡಿಸಿಕೊಂಡಿರುತ್ತಾರೆ. ನಂತರ IBTDS SERVICES ಎಂಬ ಸಂಸ್ಥೆಯಿಂದ ಆರೋಪಿತರು ಹಣ ರಿಫಂಡ್ ಗೋಸ್ಕರ ರೂ 24,850/ ಹಾಗೂ ರೂ 19,561/ ಚೆಕ್ ನ್ನು ಪಡೆದು ಅದನ್ನು ನಗದೀಕರಿಸಿಕೊಂಡಿದ್ದು ಆರೋಪಿತರು ಪಿರ್ಯಾದಿದಾರರಿಗೆ ಯಾವುದೇ ಪ್ರಾಡಕ್ಟ್ ನ್ನು  ನೀಡದೇ ಪಿರ್ಯಾದಿದಾರರ ಖಾತೆಯಿಂದ ನಗದೀಕರಿಸಿದ ಒಟ್ಟು 3,50,000/ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 149/2015 ಕಲಂ 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: