Sunday, June 14, 2015

Daily Crimes Reported as On 14/06/2015 at 07:00 Hrsಅಪಘಾತ ಪ್ರಕರಣ

  • ಉಡುಪಿ: ಪ್ರಕರಣದ ಸಾರಾಂಶವೇನೆಂದರೇ ಪಿರ್ಯಾದಿ ಸಂತೋಷ್ ಪೂಜಾರಿ ಇವರು ದಿನಾಂಕ;13/06/2015 ರಂದು ತಮ್ಮ ಬಾಬ್ತು ಕೆಎ-20 ಇಇ-2274 ನೇ ಮೋಟಾರ್ ಸೈಕಲಿನಲ್ಲಿ ಸಹಸವಾರರಾಗಿ ಕುಳಿತುಕೊಂಡು ಮಾರ್ಕೇಟ್ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 15;45 ಗಂಟೆಗೆ ಐಡಿಯಲ್ ಜಂಕ್ಷನ್‌ನಿಂದ ಬೀಡನಗುಡ್ಡೆ ಕಡೆಗೆ ಹೋಗುವ ರಸ್ತೆಯಲ್ಲಿರುವ ನಾಗಬನದ ಬಳಿ ತಲುಪುವಷ್ಟರಲ್ಲಿ ಎದುರಿಂದ ಕೆಎ-20 ಸಿ-5084 ನೇ ಆಟೋರಿಕ್ಷಾ ಚಾಲಕ ಶ್ರೀನಿವಾಸ್ ಎಂಬವರು ತನ್ನ ಆಟೋರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋಟಾರ್ ಸೈಕಲಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ಪ್ರಶಾಂತ್ ಮತ್ತು ಸಹಸವಾರರಾದ ಪಿರ್ಯಾದುದಾರರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಪ್ರಶಾಂತ್ ಶೆಟ್ಟಿ ರವರಿಗೆ ಬಲಭುಜ ಮತ್ತು ಬಲಕೈಗೆ ರಕ್ತಗಾಯವಾಗಿದ್ದು ಪಿರ್ಯಾದುದಾರರಿಗೆ ತರಚಿದ ಗಾಯಗಳಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/15 ಕಲಂ : 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬ್ರಹ್ಮಾವರ: ದಿನಾಂಕ: 13/06/2015 ರಂದು 13.30 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ಕ್ರೈಸ್ತ ಶಿಲುಬೆಯ ಎದುರು ರಾ.ಹೆ 66 ರಲ್ಲಿ ಆರೋಪಿ ಮುರಳಿ ಹೆಚ್.ಪಿ. ಕೆಎ-51-ಸಿ-1687 ಕಾರು ಚಾಲಕ ತನ್ನ ಬಾಬ್ತು ಕಾರು ನಂಬ್ರ ಕೆಎ-51-ಸಿ-1687 ನೇ ಯದನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕುಂದಾಪುರ ಕಡೆಯಿಂದ ಉಡುಪಿ  ಕಡೆಗೆ ಹೋಗುತ್ತಿದ್ದ  ಅನ್ವರ್ ಎಂಬವರ ಮೋಟಾರು ಸೈಕಲ್ ನಂಬ್ರ ಕೆಎ-20-ಇಬಿ-5633 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಸ್ವರೂಪದ ಗಾಯವಾಗಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/15 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಪಡುಬಿದ್ರಿ: ದಿನಾಂಕ 13.06.2015 ರಂದು 20:25 ಗಂಟೆಗೆ ಉಡುಪಿ ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಬಸ್ಸು ನಿಲ್ಡಾಣದ ಬಳಿ ರಾಹೆ 66 ರಲ್ಲಿ ಪಿರ್ಯಾದಿ ರಿಯಾಜ್ ತನ್ನ ಬಾಬ್ತು ದ್ವಿಚಕ್ರ ವಾಹನ ನಂಬ್ರ ಕೆಎ 19 ಇಕೆ- 4031 ರಲ್ಲಿ ಸ್ನೇಹಿತ ಅಬ್ದುಲ್ ಮತೀನ್ ರವರನ್ನು ಕುಳ್ಳಿರಿಸಿಕೊಂಡು ಪಡುಬಿದ್ರಿಯಿಂದ ಮುಲ್ಕಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಆರೋಪಿ ತನ್ನ ಬಾಬ್ತು ಟ್ಯಾಂಕರ್ ನಂಬ್ರ ಟಿಎನ್‌ 28-ಎಜೆ- 9338 ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನದ ಹಿಂಬದಿ ಡಿಕ್ಕಿ ಹೊಡೆದು ಅಪಘಾತವೆಸಗಿರುತ್ತಾರೆ. ಪರಿಣಾಮ ಬೈಕ್ ರಸ್ತೆಗೆ ಬಿದ್ದಿದ್ದು ಟ್ಯಾಂಕರ್‌ನ ಚಕ್ರ ಅದರ ಮೇಲೆ ಹರಿದುಹೋಗಿ ವಾಹನವು ಜಖಂಗೊಂಡಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/15 ಕಲಂ : 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ

  • ಮಲ್ಪೆ: ಫಿರ್ಯಾದಿ ಗೋಡ್ವಿನ್ ಎಸ್ ಅಮ್ಮನ್ನ ಇವರ ಕೊಡವೂರು ಗ್ರಾಮದ ವಡಭಾಂಡೇಶ್ವರ ರಸ್ತೆಯಲ್ಲಿರುವ ಅಮ್ಮಣ್ಣ ಪ್ರೋವಿಷನ್ ಸ್ಟೋರಿಗೆ ದಿನಾಂಕ 12/06/2015 ರಂದು ರಾತ್ರಿ 08:15 ಗಂಟೆಯಿಂದ ದಿನಾಂಕ 13/06/2015 ರ ಬೆಳಿಗ್ಗೆ 9:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಅಂಗಡಿಯ ಹಿಂಬದಿಯ ಬಾಗಿಲಿನ ಹಲಗೆಯನ್ನು ಒಡೆದು ಒಳ ಪ್ರವೇಶಿಸಿ ಅಂಗಡಿಯ ಒಳಗಿದ್ದ ಕಬ್ಬಿಣದ ಕಪಾಟನ್ನು ಜಖಂಗೊಳಿಸಿ ಅದರಲ್ಲಿದ್ದ ರೂ.24,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/2015 ಕಲಂ. 454, 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಶಿರ್ವಾ: ಪಿರ್ಯಾದಿ ಕೆ.ರಾಮ ಇವರ ಮಗ ಜಯಂತ 34 ವರ್ಷ ಈತನು ಶಿರ್ವಾ ಸಿಂಡಿಕೇಟ್  ಬ್ಯಾಂಕ್ ಹಿಂಬದಿ ಬಾಡಿಗೆ ಮನೆಯಲ್ಲಿ ವಾಸ್ಥವ್ಯವಿದ್ದು  ಆತನ ಹೆಂಡತಿ ಹೆರಿಗೆಗಾಗಿ  ತವರು ಮನೆಗೆ ಹೋಗಿದ್ದು  ಪಿರ್ಯಾದಿದಾರರಿಗೆ  ಸೊಸೆ  ಶ್ರೀಮತಿ ಪ್ರಪೂಲ್ಲಾ  ಇವರು ದೂರವಾಣಿ ಕರೆ ಮಾಡಿ  ದಿನಾಂಕ 06/06/2015 ರಂದು  ಜಯಂತ ಇತನ ಮೊಬೈಲ್ ಸ್ವೀಚ್ ಆಫ್ ಆಗಿದ್ದು , ಕರೆಗಳನ್ನು ಸ್ವೀಕರಿಸುತ್ತಿಲ್ಲ. ತನ್ನ ಮನೆಗೂ  ಬಂದಿಲ್ಲ,ಎಲ್ಲಿಗೆ ಹೋಗುತ್ತಾನೆಂದು   ಕೂಡ ಹೇಳಿರುವುದಿಲ್ಲ.  ಮನೆಗೆ  ಬಂದಿದ್ದಾನೆಯೇ ಎಂದು ಕೇಳಿದ್ದು,  ನಂತರ ಪಿರ್ಯಾದಿದಾರರಲ್ಲಿ  ಎಲ್ಲಾ ಕಡೆ ವಿಚಾರಿಸಿದ್ದಲ್ಲಿ  ಆತನ ಬಗ್ಗೆ  ಯಾವುದೇ ಮಾಹಿತಿ  ಸಿಕ್ಕಿರುವುದಿಲ್ಲ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/15 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: